ಒಟ್ಟು 24 ಕಡೆಗಳಲ್ಲಿ , 15 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುರವೈರಿಯೇ ಮೊರೆ ಹೊಕ್ಕೆ ನಿನ್ನಕರಿಯ ಕಾಯ್ದಹಲೈಯ | ವರದನೆಂದರಿತು ಪ ಸರಸಿ ಜಾಂಡದೋಳು | ಅರಸಿ ಅನ್ಯ ಕಾಣೆಕರುಣಿ ಕಂಜನಯನ | ಪರಿಪೋಷಿಸೆನ್ನ ಅ.ಪ. ಭಕ್ತಾಭೀಷ್ಟದಾ | ಮುಕ್ತಿದಾಯಕಾಶಕ್ತನಾಗಿ ಇರಲು | ವ್ಯಕ್ತನಾಗದಿರೆ |ಸೂಕ್ತವೇನೊ ನಿನಗೆ | ಯುಕ್ತಿ ಪೂರ್ಣ ಪುರುಷಸೂಕ್ತ ಮೇಯ ನೀನು | ವ್ಯಕ್ತನಾಗೊ ಮನದಿ 1 ಕಣ್ಣು ಬಿಟ್ಟು ಗಿರಿಯ | ಬೆನ್ನಿಲ್ಹೊತ್ತರೇನುಮಣ್ಣ ಹಲ್ಲಿಲಗಿದು | ಚಿಣ್ಣನನ್ನೆ ಪೊರೆದುಸಣ್ಣ ವಟುವೆ ಪಿಡಿದೆ | ಚೆನ್ನ ಪರಶುವನ್ನಘನ್ನ ಧನುವ ಮುರಿದ | ಕನ್ಯೆ ಸೀತೆ ಪತಿಯ 2 ಗೊಲ್ಲರೋಳು ಪುಟ್ಟಿ | ಮಲ್ಲರನು ಕುಟ್ಟಿಚೆಲ್ವ ಕನ್ಯೆ ಕೂಡಿ | ಕೊಲ್ಲಿಸಿ ತ್ರಿಪುರರಚೆಲ್ವ ಹಯವನೇರಿ | ಕೈಲಿ ಖಡ್ಗ ಪಿಡಿದುಚೆಲ್ವ ಕಲ್ಕಿ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಲಾಲಿ ಆಡಿದ ರಂಗ ಲಾಲಿ ಆಡಿದ ಪ. ಬಾಲೆ ರುಕ್ಮಿಣಿ ದೇವೇರೊಡನೆ ಮೂರು ಲೋಕನಾಳ್ವ ದೊರೆಯುಅ.ಪ. ಸಾಧು ಮಚ್ಚಕಚ್ಚಪರೂಪನಾಗಿ ಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ 1 ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ2 ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ 3 ಪುಟ್ಟಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿಅಷ್ಟಮಂಗಳವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ 4 ಸುರರು ಲಕುಮಿಯೊಡನೆ ನಗುತ ಕೃಷ್ಣ 5 ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ 6 ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದುಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ 7 ಒಂದು ಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು 8 ಅಂಬರವ ತೊರೆದು ದಿಗಂಬರÀ ವೇಷವನ್ನೆ ಧರಿಸಿಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ9 ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ 10
--------------
ವಾದಿರಾಜ
ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ ನೀರೊಳಗೆ ಮನೆಯು ಮಾಡಿಓಡ್ಯಾಡೀ | ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ 1 ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ ಮಡದಿಗೋಸ್ಕರ ದಶಶಿರನ ಶಿರವತರಿದೂ ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ 2 ಹಯವನೇರಿದ ಹರಿಯು ಬಹುಜನರ ಪೊರೆಯೇ ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ ಪರಮ ಪುರುಷ ಸದ್ಭಕ್ತರ ಸಿರಿಯೇ ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ. ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1 ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2 ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3 ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4 ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5 ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6 ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7 ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|
--------------
ಗುರುಗೋವಿಂದವಿಠಲರು
ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ ಬನ್ನ ಪ. ವೈನತೇಯನ ವರೂಥ ನಾನಾ ಹಾರ ಪದಕದಿ ಮೆರೆವ ಸುಂದರ ಕಾಮಪೂರ್ಣ ಮುಖಾರವಿಂದನ ನೀ ಮನದಿ ತೋರುತ್ತ ಪೊರೆಯೊ ಅ.ಪ. ಶೇಷಪರ್ವತವಾಸ | ಭಕ್ತರನು ಸಲಹೋ ಈ ಕ್ಷಿತಿತ್ರಯಕೀಶ ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ ದೋಷದೂರನೆ ಎನ್ನ ಅವಗುಣ ದೋಷಗಳನೆಣಿಸದಲೆ ಸಲಹೊ ಶೇಷವರ ಪರ್ಯಂಕಶಯನ ವಿ- ಭೀಷಣ ಪ್ರಿಯ ಭೀಷ್ಮವರದ1 ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ ಜಾಗು ಮಾಡದೆ ಸೂರ್ಯಮಂಡಲ ಬೇಗ ಬಿಗಿದಿಹ ಸಪ್ತ ಹಯಗಳ ಬಾಗಿ ಭಜಿಸಲು ಭಕ್ತವರ್ಗವು ನೀ ಜಗದಿ ಮೆರೆಯುತ್ತ ಪೊರೆದೆ 2 ವಿೂನನಾಗಿ ಮತ್ತೆ ವೇದವನೆ | ತಂದು ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ ನಾನೆ ಜಗಕೆಂಬ ದಾನವನ ಕೊಂದು ದಾನ ಬೇಡಿ ಭೂಮಿ ಅಳೆದು ಮಾನಿನಿ ಶಿರ ತರಿದು ಸೀತಾ ಮಾನಿನಿಗೆ ಅಂಬುಧಿಯ ಬಿಗಿದೆ 3 ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ ಮಾನವ ಬಿಟ್ಟು ನಿಂದೆ ಏನ ಹೇಳಲಿ ಹಯವನೇರಿ ದಾನವರ ಸಂಹರಿಸಿ ಮೆರೆದೆ ನಾನಾ ರೂಪ ನಾಟಕಧರ ನೀನೀ ಪರ್ವತದಲಿ ನಿಂದಿಹೆ 4 ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು ಮೋಹಗೊಳಿಸುವ ನೀನೆ ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ ಈ ಹದನ ಎನಗಿನ್ನು ತಿಳಿಯದೊ ಮೋಹ ಹರಿಸಿ ಸುಜ್ಞಾನ ನೀಡೊ ಸ್ನೇಹ ಗೋಪಾಲಕೃಷ್ಣವಿಠ್ಠಲ ಶ್ರೀ ಹರಿಯೆ ಹೃದಯದಲಿ ನಿಲಿಸೊ 5
--------------
ಅಂಬಾಬಾಯಿ
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |ಅಂಬುಜನಾಭ ದಯದಿಂದೆನ್ನ ಮನೆಗೆ ಪಜಲಚರಜಲವಾಸ ಧರಣೀಧರ ಮೃಗರೂಪ |ನೆಲನಳೆದೀರಡಿ ಮಾಡಿ ಬಂದ ||ಕುಲನಾಶಿ ವನವಾಸಿ ನವನೀತಚೋರನಿವ |ಲಲನೆಯರ ವ್ರತಭಂಗ ವಾಹನತುರಂಗ 1ಕಣ್ಣ ಬಿಡುವನು ಮುಖ ತಗ್ಗಿಸಿ ನೆಲವಗಿದು |ಅಣಕಿಸುವ ಬಾಯ್ದೆರೆದು ಬಾಲತನದಿ ||ಪ್ರಾಣಘಾತಕನುಣಲೊಲ್ಲ ಬೆಣ್ಣಿಯ ಮೆಲುವ |ಮಾನವ ಬಿಟ್ಟು ಕುದುರೆಯನೇರಿ ಮೆರೆವ2ನೀರ ಪೊಕ್ಕನು ಗಿರಿಯ ನೆಗಹಿ ಧಾರಿಣಿ ತಂದ |ನರಮೃಗ ಬಲಿಬಂಧ ಕೊರಳಗೊಯ್ಕ ||ಶರಮುರಿದೊರಳೆಳೆದು ಬತ್ತಲೆ ಹಯವನೇರಿ |ಪುರಂದರವಿಠಲ ನಮ್ಮ ಮನೆಗೆ ಹರುಷದಲಿ 3
--------------
ಪುರಂದರದಾಸರು
ಇಂದುಮಂಗಳಇಂದುಮಂಗಳಇಂದಿರೆಅರಸಗೆಇಂದುಕುಲಕೆಇಂದುದ್ರುಹಿಣಇಂದುಧರೇಶಗೆಪ.ನೀರಹೊಕ್ಕು ನೀರ ಕಡೆದು ನೀರ ಕದಡಿ ಖಳನ ಕೆನ್ನೀರ ತೆಗೆದು ಬಲಿಯ ಪಾತ್ರೆ ನೀರನ್ಹೆಚ್ಚಿಸಿನೀರ ಸೆಳೆದು ನೀರಕಟ್ಟಿ ನೀರೇರೊಳಿದ್ದು ಮೂರುಪೊಳಲನೀರೇರ್ಗೊಲಿದು ನೀಲಹಯವನೇರಿ ಮೆರೆವಗೆ 1ಧರೆಯನಾವೆ ನೆಗಹಿ ಧರಾಧರರ ಒರೆಸಿ ಧರೆಯನಪ್ಪಿಧರಿಸಿ ಶಿಶುವಾಧರೆಯನಳೆದ ಧರೆಯ ಭಾರವನಿಳುಹಿದಧರೆಯ ಮಗಳನಾಳ್ದು ಕೊಂದು ಧರೆಯಮಗನ ಮತ್ತೆ ಬೋಧರನ್ನ ಮೋಹಿಪ ವರಣೋದ್ಧರಣ ಮಾಳ್ಪಗೆ 2ಇನಜಗೊಲಿದು ಇನಗೆ ಪೊರೆದು ಇನಿಯಳೆತ್ತಿ ಇನನ ಕಂಪಿಸಿಇನಗೆ ಮೀರಿ ಬೆಳೆದುಸೋಮಇನಜರನ್ನುಜರಿದುತಾಇನಕುಲಜನಾಗಿ ತಾ ಇನಿಯರಾಳಿದ ಇನಿತು ಲಜ್ಜೆಯಿಲ್ಲದಕಲಿಯನ್ನು ಸದೆದÀ ಪ್ರಸನ್ನವೆಂಕಟ ಇನಗತಾತ್ಮಗೆ 3
--------------
ಪ್ರಸನ್ನವೆಂಕಟದಾಸರು
ಏನೊ ರಂಗ ನಿನ್ನ ವನಿತೆಯೊಳಪರಾಧಧ್ಯಾನಿಸಲು ದೊರಕೊಂಬುದೆನೀನಗಲಬೇಡ ತರಳೆಗಭಯವ ಕೊಟ್ಟುಮೌನದಲಿ ನಡೆಯೊ ಮನೆಗೆ ಬೇಗ ಪ.ಸ್ಮರನ ದಾಳಿಗೆ ಕಂದಿ ಕುಂದಿ ಬಳ್ಕಡಿಯಿಡುತವಿರಹಾಗ್ನಿಗನ್ನತೊರೆದು ಸ್ಮರಿಸುವಳುನಿರುತ ನಿನ್ನಯ ಗುಣಾವಳಿಗಳನುಕರಿಸೋತರಳೆಯ ಕೂಡೊ ಕೋಪ ಬೇಡೊ ನೋಡೊ 1ಪರಮಪುರುಷ ನೀ ಅವಳ ಜರಿದ ಕಾರಣಸೋಮಕಿರಣ ವಿಷಸಮ ಝಳದಪರಿತೋರಿ ಬಳಲುವಳು ಸಖಿಭೃಂಗ ಕಳಕಕೆತರಳೆ ಕೂಡೊ ಕೋಪ ಬೇಡೊ ನೋಡೊ 2ನಲ್ಲ ನಿನ್ನ ಸಂಗ ಬಯಕೆಗೆ ಕಣ್ಣ ತೇಲಿಸುವಳಲ್ಲೊ ತೊದಲ್ಲು ನುಡಿವಳಲ್ಲೊಮೆಲ್ಲನೆದೆ ನೋಡಿ ಸುಯಿಗರೆವಳು ಖಗಾಂಕಜನಬಿಲ್ಲಿಗೆಬಲಿಕೊಡಲಿ ಬಾರೊ ತೋರೊ3ಪಯನಿಧಿ ಒಡೆಯನ್ಯಾಕೆ ಬಾರನೆಂದವಳು ತನ್ನಯ ಸುದತಿಯರ ಬೈವಳುನಯನಧsರವಿರಸಿ ಕಂಬನಿದುಂಬುವಳು ಗಡಪ್ರಿಯಳರಸೆಜಾರವಿರಸಹರಿಸೊ4ನಿನ್ನ ನಂಬಿದಳಿಗಿಂತಾಗುತಿರೆ ಸುಮ್ಮನಿಹೆಎನ್ನ ಹೇಯ ಬಾರದೆನಲುಉನ್ನತ ಹಯವನೇರಿ ಬಂದವಳ ನೆರೆದ ಪ್ರಸನ್ನ ವೆಂಕಟನಾಯಕರಸಿಕ5
--------------
ಪ್ರಸನ್ನವೆಂಕಟದಾಸರು
ಔತುಕೊಂಡಿ ಯಾಕೊ ನರಹರಿಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆÀ ದೇವ6ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ