ಒಟ್ಟು 21 ಕಡೆಗಳಲ್ಲಿ , 1 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಬಳಲಿಸುವಿ ಗುರುರಾಯಾ ಇನ್ನು ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ ಭಕ್ತ ಕೇಳಿದರೆ ಕೊಡವಲ್ಲಿ ಉಪ- ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ ಶಕ್ತಿ ನಿನಗಿಹುದೋ ಕರದಲ್ಲಿ ವಿ- ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1 ತ್ರಾಹಿ ತ್ರಾಹಿ ಗುರುರಾಯಾ ಈಗ ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2 ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
--------------
ಹನುಮೇಶವಿಠಲ
ವಂದಿಪೆ ಯತಿವರೇಂದ್ರ ತವ ಪಾದದ್ವಂದ್ವಕ್ಕಾನಂದಾ ದಿನಾ ಬಂದ ಕಂದನಾ ಪಾಲಿಸೆಂದೆ ಪ ಸಿಲ್ಕಿರುವೆನಾ ಶರಣು ಬಂದೆನಾ 1 ಮೂಢ ಸೇವಕನಾ ಬಿಡಿಸೊ ವ್ಯಸನಾ 2 ಶ್ರೀಶನಾದ ಹನುಮೇಶವಿಠಲನ್ನಾ ದಾಸ ಉದಾಸೀನದಲ್ಲೆ ಎನ್ನಾ ಪೋಷಿಸೊ ನೀ ಮನದಾಸೆ ಪೂರೈಸಿನ್ನು ಕರುಣಾಜ್ಞಾನಪೂರ್ಣ 3
--------------
ಹನುಮೇಶವಿಠಲ
ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ 1 ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ 2 ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ ಶ್ರೀಶ ಶ್ರೀ ಹನುಮೇಶವಿಠಲನ ದಾಸನೇ ಅನುದಿನಾ 3
--------------
ಹನುಮೇಶವಿಠಲ
ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ ಶರಣ ರಕ್ಷಕನೆಂಬೊ ಬಿರುದುಳ್ಳ ದೊರೆಯೇ ಪ ಘನಮಹಿಮನೇ ನಿನ್ನ ಪಾವನ ಚರಣಕಮಲ ಎಂಬೋ ಮನವ ಆಕರ್ಷಿಸುವ ಪಂಜರದಲಿ ವನಜನಾಭನೆ ಎನ್ನ ಮನವೆಂಬ ರಾಜಹಂಸ ನನ್ನ ಲೋಲ್ಯಾಡಿಸೋ ಅನುದಿನದಲಿ 1 ಇಂದಿನ ದಿನವೇ ಸ್ಮøತಿಯಿಂದ ಇರುವಾಗ ಮು- ಕುಂದ ತವ ಸ್ಮರಿಸುವೆÉ ಕೊಡು ಮೋಕ್ಷವಾ ಮುಂದೆ ಅಂತ್ಯದಲಿ ಕಫ ಪಿತ್ತ ಶೀತಾದಿ ಕಂಠ ಗುಂದಿ ವಿಸ್ಮøತಿಯಾಗಿ ಸ್ಮರಣವಹುದೈಯ್ಯಾ 2 ಶ್ರೀಶ ಹನುಮೇಶವಿಠಲನೇ ನಿನ್ನಾಧೀನ ದಾಸನ ಮನದಪೇಕ್ಷವ ಪೂರಿಸೋ ಕೇಶವನೆ ಶಾಸಕನೆಂದು ಆಶಿಸಿ ಬಂದೆ ಬೇಸರ ಮಾಡದಲೆ ಪೋಷಿಸೈ ಸ್ವಾಮಿ 3
--------------
ಹನುಮೇಶವಿಠಲ
ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನು ನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು 1 ಕಷ್ಟಬಟ್ಟ ದಿವ್ಯ ಶ್ರೇಷ್ಠಮಾರ್ಗವು ಸಿಕ್ಕಿತಿನ್ನೇನಿನ್ನೇನು ಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು 2 ಹನುಮೇಶವಿಠಲನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನು ದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು 3
--------------
ಹನುಮೇಶವಿಠಲ
ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ಪ ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ ತಿಳಿದ್ಹಾಗೆ ನಡೆವಳ ಅ.ಪ. ಉದಯದಲೆದ್ದತಿ ಸಜಮಲಳಾಗಿ ತಾ ಮುದದಿ ಪತಿಗೆ ನಮಿಸದವಳಿಗೆ ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ ಮಾಧವನ ಭಕ್ತಿಲಿ ಸ್ತುತಿಸದವಳಿಗೆ ಪದುಮನಾಭನೇ ಸರ್ವಪರನೆಂದು ಅರಿಯದೆ ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1 ಹರಿದಿನದಲಿ ಉಂಡು ಹರಿಯನ್ನದಲೇ ಊರ ತಿರುಗಿ ಹೊತ್ತು ಕಳೆವಳಿಗೆ ಸರಸದಿ ನರಹರಿ ನಾಮ ಸಂಕೀರ್ತನೇ ಇರುಳು ಜ್ಯಾಗರ ಮಾಡದವಳಿಗೆ ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ ಪತಿ ಹೊರಗ್ಹಾಕ್ವಳ 3 ಗುರು ಹಿರಿಯರ ಅತ್ತೆಮಾವರ ಜರಿದು ತಾ ಹಿರಿಯಳು ಮನಿಗೆ ನಾನೆನುತಿರ್ಪಳು ಪರರ ನಿಂದಿಸಿ ಭೂಸುರರು ಬಂದರೆ ಅನ್ನ ದೊರಕದೆನುತ ಹೇಳಿ ಕಳಹುವಳ ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3 ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ ಪತಿಯ ಸೇವೆ ಮಾಡದಿರುವಳಿಗೆ ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ ಪತಿ ನೋಡ್ವಳಿಗೆ ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4 ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ ಐವರ ಕೂಡ ಧಾರೆಯರೆಸಿಕೊಂಡಾ ಪರಮ ಪಾವನಳಾದ ಭಾರತೀ ದೇವೇರ ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5 ವನವಾಸದಲಿ ಪಾಂಡು ತನಯರ ಕೂಡ ತಾ ಧನ ಸುಖ ಬೇಡದೆÀ ಪೋದವಳು ಘನ ಹಸಿವುತೃಷೆಯಿಂದ ಅನ್ನ ಬೇಡಿದ ದುರ್ವಾಸಾದಿಗಳನು ಆದರಿಸಿದವಳಾ ಆಜನನಿ ದೃಪವ ನಂದನಿಯ ಕೃತ್ಯಗಳನ್ನು ನೆನೆದು ತನ್ನಯ ಮನವನ್ನು ತೊಳೆಯದವಳು 6 ಮರುತಂತರ್ಗತ ಸ್ವಾಮಿ ಸಲಹೆನ್ನದೇ ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ ಕರ್ಮ ಮಾಡ್ವಳಿಗೆ ಪರಮ ಪಾವನನಾದ ಹನುಮೇಶವಿಠಲನ ನೆರೆ ನಂಬದಲೇ ದೇಹ ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7
--------------
ಹನುಮೇಶವಿಠಲ