ಒಟ್ಟು 37 ಕಡೆಗಳಲ್ಲಿ , 1 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ 1 ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ2 ನೀ ಕೈಬಿಡಬ್ಯಾಡೋ ಶ್ರೀ ಹನುಮೇಶವಿಠಲನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ 3
--------------
ಹನುಮೇಶವಿಠಲ
ನೋಡಿ ಧನ್ಯನಾದೆನಾ ಗಜಾನನಾ ಪುನೀತನಾ ಪಾಡಿ ಭಜನೆ ಮಾಡಿ ಇಡುವೆ ಅಡಿಗಳಲ್ಲಿ ಶಿರವಾ ಪ ಭಾರತಾರ್ಥ ಬರೆದ ದೇವ ಮಿತ್ರನಾ ಸುಪುತ್ರನಾ ಮಾರನಾಸ್ತ್ರ ಗೆಲಿದ ನಿಟಿಲನೇತ್ರನಾ ವಿರಕ್ತನ 1 ಸಕಲ ಶಾಸ್ತ್ರ ತಿಳಿಸೋ ಏಕದಂತನೇ ಬಲವಂತನ ಮುಕುತಿ ಮಾರ್ಗವ ತೋರೋ ವಕ್ರತುಂಡ ವಿಘ್ನದಂತನೇ 2 ಜ್ಞಾನವಿತ್ತು ನುಡಿದು ನುಡಿಸೋ ನೀನೆ ನಿಂದು ವದನದಿ ಮನವಾ ಹನುಮೇಶವಿಠಲನೊಳು ನಿಲಿಸೋ ಬೇಗದಿ 3
--------------
ಹನುಮೇಶವಿಠಲ
ಪರಮ ದಯಾಕರನೇ ಗೌರೀಸುತನೇ ಪರಿಪರಿಯಿಂದಲಿ ಪಾಲಿಸು ಯೆನ್ನನು ಪ ಸಿದ್ಧಿವಿನಾಯಕ ವಿದ್ಯಾಪ್ರದಾಯಕ ಸದ್ಬುದ್ಧಿಯ ಕೊಡು ಮೋದಕಪ್ರಿಯನೆ1 ಮೂಷಕವಾಹನ ದೋಷರಹಿತನೇ ಅಸುರನಾಶ ಸರ್ಪಾಕಟಿಸೂತ್ರನೇ 2 ಜಾನಕೀರಮಣ ಶ್ರೀ ಹನುಮೇಶವಿಠಲನ ಅನುದಿನ 3
--------------
ಹನುಮೇಶವಿಠಲ
ಪಾಲಿಸು ಶ್ರೀನಿವಾಸ ಪಾಲಿಸೋ ಪ ಪಾಲಿಸೋ ಯದುಕುಲ ಬಾಲಾ ಗಾನ- ಲೋಲನೆ ಯಾಕಿಂಥ ಜ್ವಾಲಾ ಜನ್ಮ ಬಲ್ಲೇನಾ ಸಂಸಾರಶೂಲಾ ನಿನ್ನ ಚಾಲನದಿಂದಾದವೆಲ್ಲಾ ಪದ್ಯ ಮಾಲೆಹಾಕುವೆ ಸಿರಿಲೋಲಾ ಆಹಾ ಬಾಲನ ಪಡೆದು ಪಾಲಿಸಲಾರೆನೆಂದರೆ ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ 1 ನಾನು ಮಾಡುವುದೆಂಬುದಿಲ್ಲಾ ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ ಅನುಗಾಲ ಕಷ್ಟವು ಸಲ್ಲಾ ಎನಗೆ ಜನುಮಾದಿ ಭಯವು ಬಿಟ್ಟಿಲ್ಲ ನೀನು ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ- ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ 2 ನಿತ್ಯ ಸಂಸಾರಿಯಾದೆನಗೆ ಮತ್ತೆ ಮೃತ್ಯು ಬೆನ್ಹತ್ತಿರುವವಗೆ ಮಾಡೋ ಕರ್ಮ ಬದ್ಧ ಎನಗೆ ನೀ- ಚತ್ವದಿದುಪಜೀವಿಸುವವಗೆ ನಾನು ನಿತ್ಯನೆಂಬುವ ದುರಾತ್ಮನಿಗೆ ಆಹಾ ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ- ಸತ್ವನಿತ್ತು ಸುಶಕ್ತನಮಾಡು ನೀ 3 ನಿನ್ನ ಆಧೀನವೊ ಎಲ್ಲಾ ನಾನು ನಿನ್ನ ದಾಸನು ಶಿರಿನಲ್ಲಾ ಅನು- ದಿನ ಮಾಡುವ ಕಾರ್ಯವೆಲ್ಲ ನೀನು ಚಲನೆದಂದದಿ ಮಾಡ್ವೆನಲ್ಲಾ ಯೆಂನೊ- ಳಾವ ತಪ್ಪಿತವೇನೋ ಇಲ್ಲಾ ನಿನ್ನ ಸಂಕಲ್ಪದಂತಾಗೋದೆಲ್ಲಾ ಆಹಾ ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ4
--------------
ಹನುಮೇಶವಿಠಲ
ಪಾಲಿಸೆನ್ನ ಪಾವನ ಮೂರ್ತಿಯೇ ಪ ಸತ್ಯಜ್ಞಾನಾನಂದತೀರ್ಥ ನಿನ್ನಯ ಉತ್ತಮ ಹಸ್ತವನಿಟ್ಟು ಅಭಯಾ ಭಕ್ತಗೆ ಅಂಕಿತವಿತ್ತು ಕಾಯೋ ಕರುಣಾನಿಧಿಯೇ 1 ಆನಂದತೀರ್ಥರ ಗ್ರಂಥಶ್ರವಣ ನೀನೆ ಮಾಡಿಸೆನ್ನೊಳಿಟ್ಟು ಕರುಣಾ ಮಾನಾಭಿಮಾನವು ನಿನ್ನ ಈ ದಾಸನಾ 2 ತಡವ್ಯಾಕೆ ತ್ವರಾ ಪಡೆಯೋ ಹನುಮೇಶವಿಠಲ ಪ್ರಿಯ ಕುವರಾ 3
--------------
ಹನುಮೇಶವಿಠಲ
ಪಾವನ ಮಹಿಮನೇ ದೇವಾಧಿದೇವನೇ ಪ ವರಲಕುಮಿ ಕರಕಮಲಪೂಜಿತ ನಮಿಪೆ ನೀರಜಾಕ್ಷ ಮಂಗಳವನು ಕೊಡು ದೇವಾ ಅ.ಪ. ಸೃಷ್ಟಿಸ್ಥಿತಿ ಕಾರಣಕರ್ತಾ ಮುಕ್ತಿಪ್ರದ ಹನುಮೇಶವಿಠಲವರ 1
--------------
ಹನುಮೇಶವಿಠಲ
ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ ಹಗಲು ಇರಳು ಎಡೆಬಿಡದಲೆ ಪೊಗಳುತ ತವ ನಾಮ ಮಹಿಮೆಯ ಜಗದೀಶನೆ ನಿನ್ನ ಚರಣ ಯುಗಳಲಿ ಬಹು ಭಕ್ತಿ ಮನ ಬಗಿ ಬಗಿಯಲಿ ನಲಿದಾಡುವ 1 ನಿತ್ಯನೆ ಸರ್ವೋತ್ತಮನೇ ಮುಕ್ತಿಪ್ರದನೇ ಪರಮಾತ್ಮನೇ ಉತ್ತಮ ವೃತ್ತಿಯಾನಿತ್ತು ನೇತ್ರದಿ ತವ ನೋಡುತ ವರ ಸ್ತೋತ್ರ ದಿನಾ ಪಾಡುತಿರುವೆ 2 ಎನ್ನಪರಾಧಗಳನ್ನು ಮನ್ನಿಸಿ ಸಲಹಯ್ಯಾ ಜೀಯಾ ಹನುಮೇಶವಿಠಲರಾಯಾ ನಿನ್ನ ಸ್ಮರಣೆಯಲ್ಲಿ ಕಾಲ ವನ್ನು ಕಳೆಯುತಿರುವ ದಿವ್ಯ 3
--------------
ಹನುಮೇಶವಿಠಲ
ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ ಶೋಣಿತ ಪುರಧೀಶÀಗೆ ಮಂಗಳ ಗುರುವರಗೆ ಪ ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ 1 ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ 2 ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ 3 ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ 4 ವರಧೀರ ಹನುಮೇಶವಿಠಲನಾ ನಿಜದಾಸಾ ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ 5
--------------
ಹನುಮೇಶವಿಠಲ
ಮಧ್ವೇಶ ವಿಠಲ ಪ ತವ ದಾಸೋಹಂ ಕೃಪಾಂಗರಂಗ ತವ ದಾಸೋಹಂ 1 ಅಗಣಿತ ತವದಾಸೋಹಂ ಜಗತ್ಪಾಲ ತವದಾಸೋಹಂ 2 ತವ ದಾಸೋಹಂ ಸಿರಿ ಮುಕುಂದಮೂರ್ತಿ ತವ ದಾಸೋಹಂ 3 ಅನ್ನಮಯನೆ ಆನಂದಮಯನೇ ವಿಜ್ಞಾನಮಯನೇ ತವದಾಸೋಹಂ ಮನೋಮಯನೇ ಮನ್ಮಥ ಜನಕನೆ ಪ್ರಾಣಮಯನೆ ಶ್ರೀ - ವಾಜ್ಞಯನೇ ತವ ದಾಸೋಹಂ4 ಶ್ರೀಶನೇ ಸರ್ವಮಹೀಶನೇ ವರ ಹನುಮೇಶವಿಠಲ ತವದಾಸೋಹಂ ಲಕುಮಿ ಉಲ್ಲಾಸನೇ ತವ ದಾಸೋಹಂ 5
--------------
ಹನುಮೇಶವಿಠಲ
ಮರತ್ಯಾಕೊ ಹರಿಯೆ ಮರಗುವೆನಾ ಕರುಣ ಬಾರದೆ ಪ ಸಿರಿಗೆ ಭ್ರಮಿಸಿ ಸರಸ ಸುಖದಿ ಮರೆತು ಇರುವೆಯಾ ಬರುವ ಮುಡುಪಿನ್ಹಣವನೆಣಿಸಿ ದಣಿದು ಮರತಿಯಾ 1 ತ್ರಾಣ ಕಳದಿ ಹಣವ ಸೆಳದಿ ಮನವ ದಣಿಸಿದಿ ಕಣ್ಣೀರಲಿ ಕೈ ತೊಳೆಸಿದಿ ಗುಣ ಗಣ ಮಣಿಯೇ2 ನಿನಗೆ ಆಟ ಎನಗೆ ಹರಿಯೇ ಪ್ರಾಣ ಸಂಕಟಾ ಅನುಭವಿಸಲಾರೆನಕಟಾ ಪಾಹಿ ವೆಂಕಟಾ 3 ಹರಿಯೆ ನೀನು ಗಿರಿಯೊಳು ನಿಂತಿರುವದ್ಯಾತಕೊ ಸ್ಮರಿಸುವವರ ಪೊರೆವುದಕೊ ಧನ ಸೆಳೆವುದಕೊ 4 ಇಟ್ಟರಿಡು ನೀ ಘಟ್ಟಿ ಭಕುತಿ ಕೊಟ್ಟ ನಿನ್ನೋಳು ಧಿಟ್ಟ ಶ್ರೀ ಹನುಮೇಶವಿಠಲ ಥಟ್ಟನೇ ದಯದಿ 5
--------------
ಹನುಮೇಶವಿಠಲ
ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ ಎಲ್ಲಿ ನೋಡಿದರಲ್ಲಿ ಇರುವಾತಾ ಎಲ್ಲರನು ಪೊರೆವಾತಾ ಬಲ್ಲಿದನು ಬಲಿಯ ತುಳದಾತಾ ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ 1 ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ ಉಬ್ಬಸವ ಬಡುವಾಗ ಸಲಹಿದವರ್ಯಾರೋ ಅಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ 2 ವರದ ಹನುಮೇಶವಿಠಲನ ಚರಣವ ನಂಬು ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ ಕರಿರಾಜ ಕರಿಯಲಾಕ್ಷಣಕೆ ಅವಸರದಲಿ ಗರುಡವಾಹನ ಕೃಷ್ಣ ಬರಲಿಲ್ಲವೇನೋ 3
--------------
ಹನುಮೇಶವಿಠಲ
ಮುಗಿವೇನು ಕೈಯ್ಯಾ ಶಾಂತೇಶರಾಯಾ ರಘುರಾಮಾ ಪ್ರೀಯಾ ಪಾಲಿಸೆನ್ನ ಜೀಯಾ ಪ ಶರಧಿಯ ದಾಟಿ ಮುದ್ರೆಯನು ಕೊಟ್ಟೀ ದುರುಳರ ಮೆಟ್ಟಿ ಪುರಲಂಕೆ ಸುಟ್ಟೀ 1 ಭಂಡಿ ಅನ್ನವನುಂಡೂ ದೈತ್ಯನ ಚಂಡಾಪರಿ ಹಿಡಿಂಬನನು ಮುರಿದಿ 2 ದುಷ್ಟಮತವನು ಸುಟ್ಟೀ ಜ್ಞಾನತೀರ್ಥ ಧಿಟ್ಟ ಶ್ರೀ ಹನುಮೇಶವಿಠಲನ ದೂತಾ 3
--------------
ಹನುಮೇಶವಿಠಲ
ಯಾಕೆ ಪುಟ್ಟಿಸಿದ್ಯೊ ಭೂಲೋಕದೊಳು ಎನ್ನಂಥ ಪಾಪಿಷ್ಠರ ಕಾಣೆನೋ ಕೃಷ್ಣಾ ಪ ಪಾತಗಳ ತರಿದು ಕೃಷ್ಣಾ ಅ.ಪ. ಬೆಳಸಿದದಕೆ ಕೃಷ್ಣಾ ಕಲಿಸಿದಕೆÉ ಕೃಷ್ಣಾ ಧನ ತರುವ ಕಾಲದಲಿ ವನಿತೆ ಸುತರಿಗೆ ಮೆಚ್ಚಿ ಜನನಿ ಜನಕರ ಬಿಟ್ಟೆನೋ ಕೃಷ್ಣಾ 1 ಮಾಡಿದ ಕೃಷ್ಣಾ ಬಾಳಿದೆ ಕೃಷ್ಣಾ ಬುದ್ಧಿ ಹೋಯಿತು ಎನಗೆ ಕದ್ದುಂಡು ಕಾಯವನು ಉದ್ದಾಗಿ ಬೆಳೆಸಿ ಮೆರೆದೆ ಕೃಷ್ಣಾ 2 ಕಡೆಯಾದೆನೋ ಕೃಷ್ಣಾ ಮಾಡಿದೆ ಕೃಷ್ಣಾ ಗಣನೆ ಇಲ್ಲದೆ ಪರರ ಹಣವನ್ನು ಅಪಹರಿಸಿ ಬಣಗ ಲೆಕ್ಕಸನಾದೆನೋ ಕೃಷ್ಣಾ 3 ಮಾಡಿಸಿದೆನೋ ಕೃಷ್ಣಾ ಸೃಷ್ಟೀಶನವತರಿಸಿದುತ್ಕøಷ್ಟ ದಿವಸಲಿ ಬಿಟ್ಟಿಬೇಸರ ಮಾಡಿದೆ ಕೃಷ್ಣಾ ಇಷ್ಟು ದಿನಗಳು ದುಷ್ಟಕೃತಿಯಲಿ ಮನಸ್ಹಾಕಿ ಪುಟ್ಟಿಸಿದ ನಿನ್ನ ಮರೆತೆ ಕೃಷ್ಣಾ 4 ನೀ ಪಾಲಿಸುವುದು ಕೃಷ್ಣಾ ತೋರಿಸುವುದು ಕೃಷ್ಣಾ ಬಂಧು ಬಳಗವು ನೀನೆ ಮುಂದಿನಾ ಗತಿ ನೀನೆ ತಂದೆ ಹನುಮೇಶವಿಠಲರಾ ಕೃಷ್ಣಾ 5
--------------
ಹನುಮೇಶವಿಠಲ
ಯಾಕೆ ಬಳಲಿಸುವಿ ಗುರುರಾಯಾ ಇನ್ನು ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ ಭಕ್ತ ಕೇಳಿದರೆ ಕೊಡವಲ್ಲಿ ಉಪ- ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ ಶಕ್ತಿ ನಿನಗಿಹುದೋ ಕರದಲ್ಲಿ ವಿ- ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1 ತ್ರಾಹಿ ತ್ರಾಹಿ ಗುರುರಾಯಾ ಈಗ ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2 ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
--------------
ಹನುಮೇಶವಿಠಲ
ರಾಮಾ ರಾಮಾ ಸೀತಾರಾಮಾ ರಘು ಕುಲೋತ್ತಮಾ ಶ್ರೀರಾಮಾ ಪ ರಾವಣಾರಿಯಾದ ರಾಮಾ ಮಾಯ ರಕ್ಕಸಗೊಲಿದ ರಾಮಾ ವಾಯುತನಯಗೊಲಿದ ರಾಮಾ ಕೋದಂಡರಾಮಾ ಶ್ರೀರಾಮಾ 1 ಜಾಮಾತ ರಾಮ ಜಾನಕಿ ವಲ್ಲಭ ಶ್ರೀರಾಮಾ ಕ್ಷೋಣಿಗಭಿಮಾನಿ ರಾಮಾ ಕೌಸಲ್ಯಾರಾಮ ಶ್ರೀರಾಮಾ 2 ಇನಕುಲೋತ್ಪನ್ನ ರಾಮಾ ದಿನಕರ ಸತತೇಜ ರಾಮಾ ಹನುಮೇಶವಿಠಲ ರಾಮಾ ಪುನೀತರಾಮಾ ಶ್ರೀರಾಮಾ 3
--------------
ಹನುಮೇಶವಿಠಲ