ಒಟ್ಟು 64 ಕಡೆಗಳಲ್ಲಿ , 6 ದಾಸರು , 62 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ರಾಘವೇಂದ್ರ ತವ ಚರಣ ದರುಶನಕೆ ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ ಪ ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ ಅನುಕೂಲವಿಲ್ಲವೊ ಎನ್ನ ಮನೆಯೊಳಗೆ ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ ಎನ ಮೇಲೆ ದೋಷವೇನಿರುವದಿದರೊಳಗೆ 1 ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ2 ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ ಛಂದದಿಂದಲಿ ಪರಿವಾರ ಸಹಿತಾ ತಂದೆ ಹನುಮೇಶ ವಿಠಲನ ಕಂದನೆ ನಿನ್ನ ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ 3
--------------
ಹನುಮೇಶವಿಠಲ
ಗುರು ಸತ್ಯಜ್ಞಾನರ ಚರಣ ದರುಶನದಿ ನೂರಾರು ಜನ್ಮ ಪಾವನವಾಯಿತು ಮುದದಿ ಪ ಗುರುಗಳುಪದೇಶದಿಂ ಪರಮ ಪಾವನನಾದೆ ನರಹರಿಯ ಭಜಿಸುವ ಅಧಿಕಾರಿಯಾದೆ ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ ನಿರುತದಲಿ ಮಾಡುವುದಕರ್ಹನಾದೆ 1 ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ ಗುರುಗಳುಪದೇಶವಿಲ್ಲದ ಜ್ಞಾನವು ಗುರುಗಳುಪದೇಶವಿಲ್ಲದ ಕರ್ಮಕವನಗಳು ಉರಗವಾಸದಂತೆ ಕಾಣಯ್ಯ 2 ಅಂಕಿತವಿಲ್ಲದಾ ಪದ್ಯಗಳು ಶೋಭಿಸವು ಅಂಕಿತವು ಇಲ್ಲದಿರಬಾರದೆನುತಾ ಪಂಕಜನಾಭ ಹನುಮೇಶ ವಿಠಲನೆಂಬೊ ಅಂಕಿತವನಿತ್ತಾ ಗುರುವು ಮಾಡಿ ಮಮತಾ 3
--------------
ಹನುಮೇಶವಿಠಲ
ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು ವರ ಮಂತ್ರಾಲಯದೊಳಿರುವುದುಚಿತವೇನೋ ಪ ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ ದಡದಿನಿಂತೆನ್ನ ಕೈ ಬಿಡುವುದುಚಿತವೇನೋ 1 ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ 2 ಒಡೆಯ ಶ್ರೀ ಹನುಮೇಶವಿಠಲನ ದಾಸನೇ ಬಡವನಿರುವೆನೆಂದು ನೋಡದಿರುವರೇನೊ 3
--------------
ಹನುಮೇಶವಿಠಲ
ಜಗತ್ಪಾಲಾ ಸದ್ಗುಣಶೀಲಾ ರಮಾಲೋಲಾ ಪ ನಿತ್ಯ ವಿಮಲಾ ಬಹುಗುಣ ಶೀಲಾ ಪಾಹಿ ಕೃಪಾಲಾ1 ನಿತ್ಯಾನಂದಾ ದೇವಕಿಕಂದಾ ಕಂಸನ ಕೊಂದಾ ಬಾಲ ಗೋವಿಂದ ನೀ ದಯದಿಂದಾ ಪಾಹಿ ಮುಕುಂದಾ 2 ಅಮರಾಧೀಶಾ ಅಸುರನಾಶಾ ಪರಮ ಪ್ರಕಾಶಾ ಗೋಕುಲವಾಸಾ ಭಕ್ತಪೋಷಾ ಶ್ರೀಹನುಮೇಶವಿಠಲ 3
--------------
ಹನುಮೇಶವಿಠಲ
ಜಗದಾಭಿರಾಮನಿಗೆ ಮಿಗಿಲಾರು ಲೋಕದೊಳಗೆ ಪ ವರ ವಾಲ್ಮೀಕಿ ಮುನಿಯು ಮುರನೆಂದು ಸ್ಮರಿಸಿದದಕೆ ಕರುಣಾಳು ನೀನಾವದಕೆ ತ್ವರ ಕೃಪೆಯ ಮಾಡಿದದಕೆ 1 ಪರಮಾಂಜನೆಯ ಸುತಗೆ ಸ್ಥಿರ ಪದವಿಯ ನಿತ್ತದದಕೆ ಧರಣೀಶ ತವ ಚರಣಕೆ ಶಿರಬಾಗಿ ಬೀಳ್ವದದಕೆ 2 ಪಾದ ಸೋಕಿಂದದಕೆ ಘನ ಶಿಲೆ ವನಿತೆಯಾದದಕೆ ಹನುಮೇಶವಿಠಲನೆಂಬೋದಕೆ ಅನುಮಾನಬಾರದದಕೆ 3
--------------
ಹನುಮೇಶವಿಠಲ
ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ ಪ್ರಾಣೇಶಗೆ ಮಂಗಳಂ ಪ ಬೆಟ್ಟ ಪುಚ್ಛದಿ ತಂದಿಟ್ಟು ಸಂಜೀವನ ಕೊಟ್ಟ ಶ್ರೀ ರಾಮನ ಭಕ್ತನಿಗೆ ಮಂಗಳಂ 1 ಸಿಟ್ಟಿಲಿ ದುಶ್ಶಾಸನನ ಹೊಟ್ಟೆ ಬಿಗಿದು ಇಷ್ಟ ಪೂರೈಸಿದ ಕೃಷ್ಣನ ದಾಸಗೆ ಮಂಗಳಂ 2 ಹನುಮೇಶ ವಿಠಲನ ಪ್ರೀತಿಪಾತ್ರನೆಂದೆನಿಸಿದ ಮುನಿವರ ಗುರು ಮಧ್ವರಾಯಗೆ ಮಂಗಳಂ 3
--------------
ಹನುಮೇಶವಿಠಲ
ದೃಢತರದ ಭಕುತಿಯಾ ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು ಪರಮ ಪಾವನ ಸತ್ಯಜ್ಞಾನ ಶ್ರೀ ಗುರುವರನೇ ತವ ಚರಣಕೆರಗುವೆ ಪ ಕರ್ಮಗಳೊಂದು ನಾನರಿಯೇ ನಿನ್ನಯ ಪಾಲಿಗೆ ಇಂದು ಚರಣಗಳ ದ್ವಂದ್ವಕೆ ಮಾಡದಲೆ ಸಲಹೋ ಆನಂದತೀರ್ಥರ ಪೀಠಪೂಜನೇ 1 ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು ಜ್ಞಾನದ ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ 2 ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು ಹನುಮೇಶವಿಠಲನ ಸ್ಮರಣೆ ಎಂಬುವುದನ್ನು ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು ಜ್ಞಾನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ 3
--------------
ಹನುಮೇಶವಿಠಲ
ದೇವತಾ ಸ್ತುತಿ ಕಂತುಪಿತನ ಸತಿಯಳೆ ನೀ ಸಂತೈಸನುದಿನಾ ಪ ಸ್ತುತಿಸುವಳೆ ಅ.ಪ. ನಾಶರಹಿತ ಶ್ರೀ ಹನುಮೇಶ ವಿಠಲನನುದಿನಾ ಸೋಸಿಲಿ ನೂತನ ಗುಣಗಳ ಬೇಸರಿಯದೆ ಸ್ತುತಿಸಿದ ಸಂ- ತೋಷ ಪಡುವ ವರಲಕುಮಿಯೇ 1
--------------
ಹನುಮೇಶವಿಠಲ
ನಂಬಲು ಕೆಟ್ಟವರು ಆರು ಜಗದೊಳು ಪ ಹರಿ ನೀನೆ ಗತಿ ಎಂದು ಅರಿತ ಪ್ರಲ್ಹಾದನ ದುರಿತವ ಭರದಲಿ ತರಿದ ಶ್ರೀಹರಿಯನು 1 ಕುರು ಸಭೆಯೊಳು ನರಹರಿಯನು ಸ್ಮರಿಸಿದ ತರುಣಿಯೊಳು ಕರುಣಿಸಿ ಪೊರೆದ ಶ್ರೀಧರನನ್ನು 2 ಅನುದಿನದಲಿ ನಮ್ಮ ಹನುಮೇಶ ವಿಠಲನ ನೆನೆದ್ವಾಲ್ಮೀಕನ ವಿಮೋಚನೆ ಮಾಡ್ದ ಶ್ರೀರಾಮನ 3
--------------
ಹನುಮೇಶವಿಠಲ
ನರಹರಿಯ ಗುಣ ಕೊಂಡಾಡುವುದೇ ಲೇಸು ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ ಒಳ್ಳೆಯವನೆನಿಸುವ ಬಡತನವೇ ಲೇಸು ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1 ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ ಸಾಲಿಲ್ಲದ ಮನೆಯಲ್ಲಿಹುದೇ ಲೇಸು ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ ಲೋಲನಾ ಪಾದದಲ್ಲಿರುವುದೇ ಲೇಸು 2 ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ ತನ್ನವಳ ಕೂಡ ಬಡಿದಾಡುವುದೇ ಲೇಸು ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3 ತಾನು ಮಾಡಿದೆನೆಂಬುದಕಿಂತ ಹರಿಯ ಆಧೀನವೆಂದರಿಯುವುದು ಪರಮ ಲೇಸು ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ ಜ್ಞಾನಿಯಾದವನ ಸಲಹುವುದೇ ಲೇಸು 4 ದುಷ್ಟ ಮನುಜನು ಮಾಡುವ ಕೃಪೆಗಿಂತಲೂ ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ ವಿಠಲನ ಧ್ಯಾನದ ಸುಖವೇ ಲೇಸು 5
--------------
ಹನುಮೇಶವಿಠಲ
ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ ನರರಿಗೆ ಸ್ವತಂತ್ರ ಪ ಗಳಿಸಿದ ಧನವು ನಳಿನಾಕ್ಷೀಯರಿಗೀವ ಸೆಳೆದು ವಯ್ಯುವಾಗುಳೀವರಿಲ್ಲವೋ 1 ನಾನು ನನ್ನದೆಂಬುವ ಈ ದೇಹವು ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ 2 ಜೀವವು ಕಾಯವ ತ್ಯಜಿಸಿ ಪೋಗುವಾ ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ 3 ಮಾಡಿದ ಧರ್ಮಾಕರ್ಮವೆಜೀವನ ಕೂಡ ಮಂತ್ರ ಸಂಗಡ ಬಾಹುದು 4 ದೋಷ ರಹಿತ ಹನುಮೇಶವಿಠಲನೇ ಈಶನೆಂದು ನಿಜ ದಾಸನಾಗೋ ಸ್ವತಂತ್ರ 5
--------------
ಹನುಮೇಶವಿಠಲ
ನಾರಾಯಣನಾಮ ಭಜಿಸೋ ನಿರುತದಲಿ ನರನೇ ಪ ಮಾಯದ ಸಂಸಾರದಿ ಪಾರಾಗೋ ಉಪಾಯವಿದು ಸಸಾರ ಕಾಯಜನೈಯನ ಭಜಿಸೋ ಶ್ರೀ ಗುರುವಾಯು ದೇವರ ದ್ವಾರಾ 1 ಧ್ಯಾನ ಕೃತಯುಗದಿ ಯಜ್ಞವು ತ್ರೈತದಿ ಅರ್ಚನೆ ದ್ವಾಪರದಿ ಗಾನದಿ ಕಲಿಯಲಿ ಪಾಡಲು ಕೇಶವ ತಾನೇ ವಲಿವ ತ್ವರದಿ 2 ಅನಲ ಪಕ್ವಗೈಸಿದ ಅನ್ನವನಸ್ಕೊಳ್ಳೊಮಿಸುವಂತೆ ಹನುಮೇಶವಿಠಲ ಕೊಟ್ಟಾತನು ಅರ್ಪಿಸು ಅದರಂತೆ 3
--------------
ಹನುಮೇಶವಿಠಲ
ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ಪ ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ ಅನುಗಾಲವೂ ಕಾಯೋ ಅನುಪಮ ಚಿಂತನ 1 ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2 ಕದರೂರು ಹನುಮೇಶ ಹಸನ್ಮುಖವಿಠಲನ ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3
--------------
ಮಹಾನಿಥಿವಿಠಲ
ನೀ ಕರುಣಿಸದಿರೆ ಸಾಕುವರ್ಯಾರು ದಯಾಕರ ಮೂರುತಿ ರಾಘವೇಂದ್ರ ಪ ಪಾರು ಮಾಡೊ ಸಂಸಾರಭವದಿ ಅ- ಪಾರ ಮಹಿಮ ಗುರು ರಾಘವೇಂದ್ರಾ ದೂರ ನೋಡಿದರೆ ಬಿಡಿಸೋ ತವ ಚರ- ಣಾರವಿಂದಕೆ ಕೊರಳನು ಕಟ್ಟಿಸೊ 1 ಒಡವೆ ವಸ್ತುಗಳ ಮಡದಿ ಮಕ್ಕಳ ಕೊಡು ಎನುತಲಿ ಬೇಡುವುದಿಲ್ಲ ಒಡೆÉಯನೆ ನಿನ್ನಯ ಅಡಿಗಳಲಿ ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ 2 ನರರ ಸೇವೆಯಾ ಬಿಡಿಸೋ ಹರಿವಾಯುಗಳ ಸೇವೆಯಾ ಹಿಡಿಸೊ ವರದ ಹನುಮೇಶವಿಠಲನಾ ಸರ್ವೋತ್ತಮನೆಂದು ಕರೆದವನೆ 3
--------------
ಹನುಮೇಶವಿಠಲ