ಒಟ್ಟು 25 ಕಡೆಗಳಲ್ಲಿ , 18 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗನಾಥನ್ನ ಈ ಕಂಗಳಿಂದಲಿ ಕಂಡು ಹಿಂಡು ಪ. ಮಂಗಳಾತ್ಮಕ ದೇವ ಮಮ ಸ್ವಾಮಿ ಸಲಹೆಂದು ಅಂಘ್ರಿಗಳಿಗೆರಗಿ ನುತಿಪೇ ಸ್ತುತಿಪೇ ಅ. ಮಾಂಡವ್ಯರಿಗೆ ವಲಿದು ಶ್ರೀನಿಕೇತನ ದೇವ ಗಂಡಕೀಶಿಲೆ ರೂಪದಲ್ಲಿ ಅಂಡಜವಾಹನನು ಉದ್ಭವಿಸಿ ಸ್ವರ್ಣಾದ್ರಿ ಎಂಬ ಸುಕ್ಷೇತ್ರದಲ್ಲೀ ಹಿಂಡುಭಕ್ತರ ಸೇವೆ ಕೈಯಕೊಳುತ ಬದಿಯಲ್ಲಿ ನಿಂದು ವಿಗ್ರಹ ರೂಪದಲ್ಲೀ ಕಂಡು ಪುಳಕಾಂಕಿತದಿ ಕರುಣ ಮೂರ್ತಿಯ ನುತಿಸಿ ಕೊಂಡಾಡಿ ದಣಿದೆ ನಿಂದೂ ಇಂದೂ 1 ಶಂಖಚಕ್ರಾಂಕಿತದ ಚತುರ್ಭಜವು ಶ್ರೀವತ್ಸ ಪಂಕಜಾಕ್ಷಿಯರುಭಯದಿ ಶಂಕೆಯಿಲ್ಲದ ಭಕ್ತರಿಗೆ ವಲಿವ ಸೌಂದರ್ಯಾ ಲಂಕಾರ ಉಡಿಗೆ ಮುದದಿ ಪಂಕಜಾಸನ ಮುಖ್ಯದಿವಿಜಗಣ ಸೇವಿತನು ಕಿಂಕರರಿಗೊಲಿವ ದಯದೀ ವಂಖಿ ಬಾಪುರಿ ತೋಳು ಕಡಗ ಕಾಲ್ಗೆಜ್ಜೆಗಳು ಕಂಕಣ ಕಿರೀಟ ನಿಟ್ಟಾ ದಿಟ್ಟಾ 2 ಆಗಮವ ಅಜಗಿತ್ತು ಸುರರಿಗಮೃತವಿತ್ತು ಭೂದೇವಿ ಭಯ ಬಿಡಿಸಿದಾ ಬೇಗ ಕಂಬದಿ ಬಂದು ಮಗುವ ರಕ್ಷಿಸಿ ಬಲಿಯ ಯಾಗದಲ್ಲಿ ಭೂ ಬೇಡಿದಾ ನೀಗಿ ಕ್ಷತ್ರಿಯ ಕುಲ ದಶಶಿರಿನ ಸಂಹರಿಸಿ ಮಾಗಧನ ಬಲವ ಮುರಿದಾ ಅಂಬರ ಕಲ್ಕಿ ಗೋಪಾಲಕೃಷ್ಣವಿಠಲಾ ಮಾಗಡಿ ತಿರುಮಲೇಶಾ ಶ್ರೀಶಾ 3
--------------
ಅಂಬಾಬಾಯಿ
ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ ಭೋಗಿಶಯನಪ್ರಿಯಗೆ ಶುಭಮಂಗಳ ಪ. ಆನಂದರತ್ನರು ಜ್ಞಾನಪ್ರಕಾಶ ಎಂದು ನಾನಾ ವಿಧದಿ ಬಿರುದು ಪೊತ್ತವಗೆ ಶ್ರೀನಿವಾಸನನು ಧ್ಯಾನವ ಮಾಳ್ಪಂಥ ಜ್ಞಾನಪೂರ್ಣರಾದ ಗುರುಗಳಿಗೆ 1 ಪರಮಪ್ರಿಯರು ಪರಿಮಳರೆಂದೆನಿಸುತ ಪರಿ ನಾಮವ ಧರಿಸಿಹಗೆ ನರಸಿಂಹನನು ಹೃತ್ಸರಸಿಜದಲಿ ಕಂಡು ಹರುಷವ ಪಡುವಂಥ ಗುರುಗಳಿಗೆ 2 ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ ಚಂದದಿಂದ ಗುರುಗಳಿಂ ಪಡೆದವಗೆ ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ ಬಂಧನವ ಬಿಡಿಸುವ ಗುರುಗಳಿಗೆ 3 ಚಂದ್ರನ ತೆರದಿ ಪರಮಾರ್ಥ ಚಂದ್ರೋದಯವ ನಿರ್ಮಿಸುವರಿಗೆ ಚಂದದಿಂದ ಪರತತ್ವ ಪೇಳುವ ಸುಂದರ ಮೂರುತಿ ಗುರುಗಳಿಗೆ 4 ಅಪಾರ ಕರುಣಾಜಲಧಿ ಎಂದೆನಿಪರಿಗೆ ಶ್ರೀಪತಿ ಪಾದವ ತೋರ್ವಂಗೆ ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತುಕಾಪಾಡುವಂಥ ಶ್ರೀ ಗುರುಗಳಿಗೆ 5
--------------
ಅಂಬಾಬಾಯಿ
ಶ್ರೀ ಹಯಗ್ರೀವ ವಿಠಲ | ಮೋಹ ಕಳೆದಿವನಾ ಪ ಸಾಹಸಿಗಗಾಭೀಷ್ಟ | ದೋಹನನು ಆಗೋ ಅ.ಪ. ಮಾಣವಕ ಭಕ್ತಿಯಲಿ | ಮಾನ್ಯರನು ಸೇವಿಸುವಜ್ಞಾನವಂತನ ಮಾಡಿ | ಪ್ರಾಜ್ಞನೆಂದೆನಿಸೋ ಜ್ಞಾನ ನಿಧಿ ನಿನ್ನೊಲಿಮೆ | ಕಾಣದಲೆ ಪರಿತಪಿಸಿಜ್ಞಾನದಂಕುರಕಾಗಿ | ಬಿನೈಸುತಿಹೆನೋ 1 ಸುಜನ ಸಂಗದಿ ಹರಿಯ | ಭಜನೆಯೊದಗಲಿ ಇವಗೆಋಜು ವಾದಿರಾಜರಲಿ | ನಿಜ ಭಕ್ತಿ ಬರಲೀಗಜ ವರದನಂಘ್ರಿಗಳ | ನಿಜ ಮನದಿ ಕಾಂಬಂಥಯಜನ ಭಜನೆಗಳೊದಗಿ | ಪ್ರಜೆಗಳಲಿ ಮೆರೆಸೋ 2 ಭೃತ್ಯ ವತ್ಸಲನೇ 3 ನಾನು ನನ್ನದು ಎಂಬ | ಹೀನ ಭಾವವ ಕಳೆದುಏನೇನು ತಾ ಮಾಳ್ಪ | ಮಾನಸಾದಿಗಳಾಪ್ರಾಣಾಂತರಾತ್ಮಕಗೆ | ದಾನ ಮಾಳ್ಪಂತೆಸಗಿಜ್ಞಾನಾಯು ರೂಪಕನ | ಮಾನ್ಯಮತ ತಿಳಿಸೋ 4 ಕೈವಲ್ಯ ಪ್ರದನೇತಾವಕನ ಸಲಹೆಂಬ | ಆವ ಭಿನ್ನಪ ಸಲಿಸೆಓವಿ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಯೆಯ ಮಹಾ ಸರೋವರದೊಳಗೆ ಕಡೆಹಾಯ್ವರೊಬ್ಬರನು ಕಾಣೆಪಹರಿತಾ ಮುಳುಗಿದ ಹರ ತಾ ಮುಳುಗಿದಹಂಸವಾಹನನು ಮುಳುಗಿದನುಸುರಪತಿಮುಳುಗಿದಶಿಖಿತಾ ಮುಳುಗಿದಸುರಾಸುರರು ತಾ ಮುಳುಗಿದರು1ಸೂರ್ಯನು ಸುಧಾಂಶುಮುಳುಗಿದ ನವಗ್ರಹರೆಲ್ಲ ಮುಳುಗಿದರುಶೂರನು ಮುಳುಗಿದ ಶುಂಠನು ಮುಳುಗಿದ ಸ-ಚರಾಚರರೆಲ್ಲ ಮುಳುಗಿದರು2ಭಾಗ್ಯನು ಮುಳುಗಿದ ಬಡವನು ಮುಳುಗಿದಬಹುದರಿದ್ರನೂ ಮುಳುಗಿದನುಯೋಗ್ಯರು ಚಿದಾನಂದ ಭಕ್ತರುತಾವು ಕಂಡು ಮಾತ್ರ ಮುಳಗಲಿಲ್ಲ3
--------------
ಚಿದಾನಂದ ಅವಧೂತರು
ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮಕನೆಂದೆಂಬೆವೀಣಾಸ್ವರ ಕೇಳಲು ದುರ್ಗುಣವುಡಗಿ ಪೋಗುವುವು ಎಂದೆಂಬೆಪನಾದಬ್ರಹ್ಮವನಾಲಿಸುತಿಹನನು ನರನಲ್ಲವು ನಾನೆಂಬೆನಾದಬ್ರಹ್ಮವನಾಲಿಸುತಿರಲಿಕೆ ನಾನಾಗುಣವು ಲಯವೆಂಬೆ1ಘಂಟಾ ಸ್ವರವನು ಕೇಳುತ ಸುಖವನು ಅನುಭವಿಸುವನ ಗುರುವೆಂಬೆಘಂಟಾಘೋಷದಿಜನನ ಮರಣವು ಮುಳುಗಿಹವು ಎಂದೆಂಬೆ2ಭೇರಿನಾದವ ಕೇಳುತಲಿರುವನ ಭಾಗ್ಯವಂತನು ಎಂಬೆಧೀರ ಚಿದಾನಂದ ಸದ್ಗುರುನಾದದಿ ಲಯವಿಹನು ಎಂದೆಂಬೆ3
--------------
ಚಿದಾನಂದ ಅವಧೂತರು
ಶ್ರೀ ತಿರುವಳ್ಳೂರ್ ಶ್ರೀ ವೀರರಾಘವ ಸ್ತೋತ್ರ51ವೀರರಾಘವ ಸ್ವಾಮಿಸಿರಿಕನಕವಲ್ಲೀಶಶರಣಾದೆಪೊರೆಎನ್ನ ಕರುಣಾ ಸಮುದ್ರಪಮರುತಾದಿ ಸುರಸೇವ್ಯ ಉರುಗುಣಾರ್ಣವ ದೋಷದೂರ ಸ್ರಷ್ಟಾಪಾತ ಪರಮೈಕ ಈಶ ಅ ಪಜಗಜ್ಜನ್ಮಾದ್ಯಷ್ಟಕ ಸುಕತೇ ನೀನೇವೆನಿಗಮೈಕವೇದ್ಯನೇ ಏಕಾತ್ಮ ಭೂಮನ್ಗೋಗಣಗಳೆಲ್ಲವೂ ಪೊಗುಳುತಿವೆ ನಿನ್ನನ್ನೇಏಕ ವಿಧದಲ್ಲಿ ಇದಕೆ ಸಂದೇಹವಿಲ್ಲ 1ನಿವ್ರ್ಯಾಜ ಭಕ್ತನ ಆತಿಥ್ಯವನು ಸ್ವೀಕರಿಸಿಸತ್ಯವಾಗಿ ವರವ ಈವಿ ಭಕ್ತರಿಗೆ ಎಂದಿಸತ್ಯಲೋಕಾಧಿಪ ಪದಾರ್ಹನನುಯಾಯಿಗಳಭೃತ್ಯನಾದೆನ್ನಪೊರೆಉದ್ಯಾಕರ್Àತೇಜ2ನೀನಾಗಿಯೇ ನೀನು ನಿನ್ನ ಸ್ಥಳಕೆ ಕರೆನಿನ್ನದರುಶನವಿತ್ತಿ ನಿನಗೇವೆ ನಾ ಶರಣುಮನೋವಾಕ್ ಕಾಯದ ಎನ್ನ ಸರ್ವಕರ್ಮಗಳೊಪ್ಪಿಘನದಯವ ಬೀರೊ ' ಪ್ರಸನ್ನ ಶ್ರೀನಿವಾಸ&ಡಿsquo;3
--------------
ಪ್ರಸನ್ನ ಶ್ರೀನಿವಾಸದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ