ಒಟ್ಟು 23 ಕಡೆಗಳಲ್ಲಿ , 11 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಧ್ರುವ ಹತ್ತಿಲಿದೆ ತಾ ಸರ್ವಕಾಲ ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ ನೆತ್ತಿಯೊಳಗದೆ ನಿಶ್ಚಲ ಉತ್ತಮೋತ್ತವಾದ ಸದ್ವಸ್ತು ಅನುಕೂಲ 1 ಅತ್ತಿತ್ತಲೆ ನೋಡಲಾಗದು ತುಂಬಿ ತುಳುಕುವದು ಸುತ್ತೆ ಸೂಸ್ಯಾಡುತಲಿಹುದು ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು2 ಸಾರವೆ ಅದೆ ಸತ್ಯನೋಡಿ ಮಿಥ್ಯ ಭ್ರಾಂತನೆ ಈಡಾಡಿ ಗುರುಕೃಪೆಯಿಂದ ನಿಜಗೂಡಿ ತರಳ ಮಹಿಪತಿ ಹರುಷಗೈದ ಬೆರೆದಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡಿ ಶ್ರೀ ವಾಸುದೇವನ ದ್ರುವ ಆವಾಗ ನೋಡಿ ಚರಣ ಸೇವಿಸಿ ನಿಧಾನ 1 ಕಣ್ಣಮುಂದೆ ಕಟ್ಯಾನೆ ಭಿನ್ನವಿಲ್ಲದೆ ತುಂಬ್ಯಾನೆ ಸಣ್ಣ ದೊಡ್ಡರೊಳಗ್ಹಾನೆ ಕಾಣಿಸುತಲ್ಹ್ಯಾನೆ 2 ಚಿತ್ತಮನೊಂದು ಮಾಡಿ ಹತ್ತಿಲಿ ಸಾಭ್ಯಸ್ತ ನೋಡಿ ನಿತ್ಯ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ ಹಣ್ಣು ಕೊಳ್ಳಿರಯ್ಯಾನ್ನಂತ ಗುಣಮಹಿಮೆಯುಳ್ಳ ಧ್ರುವ ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಾಪಾಟಿಯಿಂದ ಕಣ್ದೆರದು ಕೊಂಡವರು ಧನ್ಯ ಧನ್ಯರೊ 1 ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ ಚೆನ್ನಾಗಿ ಉನ್ಮನವಾಗಿ ಹಣ್ಣ 2 ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ ಸಣ್ಣ ದೊಡ್ಡರೊಳಗಿಹ್ಯ ಹಣ್ಣ 3 ಉತ್ತುಮರುದ್ದೇಶವಾಗಿ ಮತ್ತೆ ಹತ್ತುಭಾರೆ ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು 4 ಬಿತ್ತಿಬೆಳೆದ ಫಲವಲ್ಲ ಹೊತ್ತುಮಾರುವದಲ್ಲ ಚಿತ್ತದೊಳಗ್ಹತ್ತಿಲಿಹ ಹಣ್ಣು 5 ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ 6 ಹಣ್ಣು ಕೊಂಡು ಮಹಿಪತಿಯ ಪುಣ್ಯ ಪೂರ್ವಾಜಿತ ತಾನೆಧನ್ಯ ಧನ್ಯವಾದ ಗುರುಕೃಪೆಯಿಂದ ಕಾಣಿರೋ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹತ್ತಿಲಿಹÀ ವಸ್ತುನೋಡೊ ಮನವೆ ನಿತ್ಯ ನಿಜನಿರ್ಗುಣವ ಕೂಡೊ ಮನವೆ ಧ್ರುವ ಅತ್ತಲಿತ್ತಲಾಗದಿರು ಮನವೆ ಚಿತ್ತ ಚಂಚಲ ಮಾಡದಿರೆನ್ನ ಮನವೆ ಉತ್ತುಮ ಸುಪಥ ನೋಡು ಮನವೆ ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ 1 ಹೋಕಹೋಗದಂತೆ ಎನ್ನ ಮನವೆ ಏಕರಸವಾಗಿ ಕೂಡೊ ಎನ್ನ ಮನವೆ ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ 2 ಧನ್ಯವಿದು ರಾಜಯೋಗಮನವೆ ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ ಚೆನ್ನಾಗಿ ಚಿನ್ಮಯ ನೋಡು ಮನವೆ ಅನ್ಯಪಥವಿನ್ಯಾತಕ ನೋಡು ಮನವೆ 3 ಗರ್ವಗುಣ ಹಿಡಿಯದಿರು ಮನವೆ ನಿರ್ವಿಕಲ್ಪನ ತಿಳಿದು ನೋಡು ಮನವೆ ಪೂರ್ವಪುಣ್ಯಹಾದಿ ಇದು ಮನವೆ ಸರ್ವರೊಳು ವಸ್ತುಮಯ ಒಂದೆ ಮನವೆ 4 ದೃಷ್ಟಿಸಿ ಆತ್ಮನ ನೋಡು ಮನವೆ ಪುಷ್ಟವಾಗಿ ಘನದೋರುವದು ಮನವೆ ಭ್ರಷ್ಟವಾಗಿ ಬಾಳಬ್ಯಾಡ ಮನವೆ ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ 5 ಏರಿ ಆರುಚಕ್ರ ನೋಡು ಮನವೆ ಪರಮಾನಂದ ಸುಪಥ ಕೂಡೊ ಮನವೆ ಆರು ಅರಿಯದ ಹಾದಿ ಮನವೆ ತೋರಿಕೊಡುವ ಸದ್ಗುರು ಎನ್ನ ಮನವೆ 6 ಹರಿಭಕ್ತಿಯೊಳಗಿರು ಮನವೆ ಸಿರಿ ಸದ್ಗತಿ ಸುಖವ ಕೂಡೊ ಮನವೆ ಗುರುವಾಕ್ಯ ನಂಬಿ ನಡೆ ಮನವೆ ಪರಲೋಕಕ್ಕೆ ಸೋಪಾನವಿದು ಮನವೆ 7 ಪರದ್ರವ್ಯಗಲ್ಪದಿರು ಮನವೆ ಪರಸತಿಯ ನೋಡದಿರೆನ್ನ ಮನವೆ ಪರರ ನಿಂದ್ಯ ಮಾಡದಿರು ಮನವೆ ದಾರಿ ಹೋಗದಿರು ದುಷ್ಟರ ನೀ ಮನವೆ 8 ಸಜ್ಜನರ ಸಂಗ ಮಾಡೊ ಮನವೆ ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ ಭೆಜ್ಜರಿಕೆ ಹಿಡಿಯೊ ಎನ್ನ ಮನವೆ ದುರ್ಜನರ ಸಂಗ ಮಾಡಬ್ಯಾಡೊ ಮನವೆ 9 ಕಂಗಳ ತೆರೆದು ನೋಡು ಮನವೆ ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ ಹಿಂಗದಂತೆ ಕೂಡೊ ಬ್ಯಾಗೆ ಮನವೆ ಗಂಗೆಯೊಳು ಜಲಬೆರೆದಂತೆ ಮನವೆ 10 ಭೇದ ಬುದ್ಧಿಯ ಮಾಡಬ್ಯಾಡ ಮನವೆ ಸಾಧುಸಂತರ ಸುಬೋಧ ಕೇಳು ಮನವೆ ಭೇದಿಸಿ ತಿಳಿದುನೋಡು ಮನವೆ ಸದಮಲ ಬ್ರಹ್ಮ ಸೂಸುತಿದೆ ಮನವೆ 11 ಯುಕ್ತಿ ನಿನಗಿದು ನೋಡು ಮನವೆ ಭಕ್ತವತ್ಸಲ ಸ್ಮರಿಸು ಮನವೆ ಮುಕ್ತಿಯಿಂದಧಿಕಸುಖ ಮನವೆ ಭಕ್ತಿರಸದೊಳು ಮುಳಗ್ಯಾಡು ಮನವೆ 12 ಲೇಸು ಲೇಸು ಮಹಿಪತಿ ಸು ಮನವೆ ದಾಸನಾಗಿರುವ ವಾಸುದೇವನ ಮನವೆ ಭಾಸಿ ಪಾಲಿಪನ ಕೂಡೊ ಎನ್ನ ಮನವೆ ಭಾಸ್ಕರ ಮೂರ್ತಿಯ ನೋಡು ಮನವೆ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂಥ ಬಾಲಕೃಷ್ಣ ಗೋಪೇರಂತಃಚೋರಾನಂತನೆಕಂತುಪಿತ ಕೋಟಿ ಕಾಂತಿಯಲ್ಲಿ ಭ್ರಾಂತ ಮಾಡಿದನಿವ ಪ.ಬಾಲನಾದರೊಳಿತು ಒಳ್ಳೆ ಬಾಲೆಯರಮೊಳೆಮೊಲೆಗಾಲದ ಹಣ್ಣೆಂದು ನಖದಲಿ ಸೀಳಿ ನೋಡುವರೆಹೇಳಲೇನೆಂತೆನ್ನ ನಳಿತೋಳಲಪ್ಪಿ ತೊಂಡೆಹಣ್ಣಿಗ್ಹೋಲುವದೆಂದಧರನುಂಡ ತಾಳಬಹುದೇನಮ್ಮ 1ನಿಚ್ಚಟಮೈಯೊಳು ನಾವುನಿಚ್ಚಮೈಯ ತೊಳೆಯುವಾಗಬಚ್ಚಲೊಳು ಬಂದು ಕಣ್ಣಮುಚ್ಚಿ ಅಟ್ಟಹಾಸದಿಸಚ್ಚಿದಾನಂದಗೋಪಾಲ ವಚ್ಚೆರೆಗಂಗಳೆಯರಹುಚ್ಚುಮಾಡಿ ಹೋದನಿವನ ನೆಚ್ಚಬಹುದೇನಮ್ಮ 2ಹತ್ತಿಲಿದ್ದ ಸುಪ್ತ್ತಪುರುಷನ್ನೊತ್ತಿ ರತಿಕಳೆದೋರಿಚಿತ್ತ ಸೂರೆಗೊಂಬುದಾವ ಕೃತ್ಯವಮ್ಮ ರಂಗಗೆಸುತ್ತಿನವರರಿಯರೆಂದು ಚಿತ್ತವಾಯಿತಲ್ಲದೆಅತ್ತೆ ಮಾವ ಕಂಡರೆಮ್ಮ ತೊತ್ತು ಮಾಡಿ ಬಡಿವರೆ 3ಹಟನೆಂದು ಬಾಯೊಳು ಬಾಯಿಟ್ಟು ಮುದ್ದನಿಡಲುಬಟ್ಟಕುಚವಿಡಿದೆಮ್ಮ ರಟ್ಟು ಮಾಡಬಹುದೆದಿಟ್ಟ ಜಾರನಿಗೆ ಕೈಯ ಕಟ್ಟುವೆವೆಂದರೆ ಚೆಲ್ವಬಟ್ಟಗಲ್ಲ ಕಚ್ಚಿ ಕ್ಷತವಿಟ್ಟೋಡಿದ ನಮ್ಮಯ್ಯ 4ಚಿನ್ನನಾದರೇನು ಚೊಕ್ಕ ಚಿನ್ನದಂಥ ಗುಣವುಳ್ಳಚೆನ್ನಿಗನ ರೂಪಕೊಲಿದ ಕನ್ಯೆಯರು ಪೂರ್ವದಪುಣ್ಯವಂತರಲ್ಲದುಳಿದಿನ್ನಾರಿಗೆಲ್ಲಿ ಎಂದೂ ಪ್ರಸನ್ವೆಂಕಟೇಶ ಸಿಕ್ಕ ಇನ್ನು ಸುಖ ದಕ್ಕೀತೆ 5
--------------
ಪ್ರಸನ್ನವೆಂಕಟದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
--------------
ಪ್ರಾಣೇಶದಾಸರು