ಒಟ್ಟು 19 ಕಡೆಗಳಲ್ಲಿ , 12 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ | ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ | ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ | ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ ಶರಧಿಸುತವನೇ | ಸರಸಿಜಸದನೆ | ಸುರಚಿರದವರಾನೆ | ಕರಿಸರ್ಪವೇಣೆ | ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ | ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ | ರವಿನಮಿತೆ | ಪ್ರಖ್ಯಾತೆ | ದಾತೆ 1 ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ | ಸುಜನ ಸೇವೆ | ಮಲಿನರ ಭಾವೆ | ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ | ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ | ಬಹುಶಾಂತೆ | ದಯವಂತೆ ಕಾಂತೆ 2 ಕರವೀರ ಪುರಧೀಶೆ | ಶರಣರುಲ್ಹಾಸೆ | ಸುರಮುನಿಜನತೋಷೆ | ಶಿರಸ್ವಪ್ರಕಾಶೆ | ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ | ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ | ಅವಿನಾಶೆ | ಈಶೆ 3 ಅಂಕಿತ-ಗುರುಕೃಷ್ಣಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಹರಿ ಸಂಕೀರ್ತನೆ ಪತಿತ ಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ಪ ಸತಿಪತಿ ನುತ ಸಾರ್ವಭೌಮ ಸು ವೃತಾ ಚರಣ ಘನ ರಾಜಿತ ಸುಂದರ ಅ.ಪ ಧೀರನಮೋ ಸುವಿಚಾರ ನಮೋ ಯದುವೀರ ನಮೋ ರಜದೂರ ನಮೊ ಮಾರನಮೋ ಗಂಭೀರ ನಮೊ ಭವಹಾರ ನಮೋ ದಧಿ ಚೋರ ನಮೊ 1 ಜನನ ಮರಣ ಜರ ರಹಿತ ನಮೋ ಪಾವನ ಪದ ಪಂಕೇರುಹ ನಯನ ನಮೋ ಮನ ವಚನಕೆ ಸಿಗದ ನಿಮಿಷ ಪತಿ ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2 ಶೌರಿ ಶುಭ ನಾಮ ಭಕ್ತ ಜನ ಹಿತಕಾರಿ ಸುತ್ರಾಮ ಅನುಜ ನಿ ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3 ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ ಅಭಿಮನ್ಯುನ ಮಾವಾ ಇನ್ನೆನೆನ್ನದೆ ನಿನ್ನಿಂ ಲಭಿಸಿದ ನುಣ್ಣುವ ಯನ್ನನು ಮನ್ನಿಸದಿರುವರೆ 4 ಹಿರಿಯರ ದಯವಿರುವುದು ಸರೆ ನೀ ಪೊರೆವಿ ಬಿಡದೆ ಯಂಬೋದು ಖರೆ ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ ತೆರ ಚರಿಪುದು ಧರವೆ 5 ದಾಸರ ಪೊರೆಯಲು ದಾಶರಥೇ ಅಮಿತ ಮತೆ ಶ್ರೀಶಾನಿಮಿತ್ಯ ಬಂಧುಯೆನಿಸಿ ಉದಾಸಿಸೆ ಆಗಮ ರಾಶಿಗೆ ಶೋಭವೆ 6 ಘಾಸಿಗೊಳಿಸುವರೆ ಸೈಸೈಸೈ ನೀ ನೀಶನಾದದಕೆ ಫಲವೇನೈ ಪೋಷಕ ನೀನೆಂದಾಸಿಸಿದವರನು ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7 ಧೃವನ ಪೊರೆದ ಬಲುವೇನಾಯ್ತೈ ಉದ್ಧವಗೆ ವಲಿದ ದಯ ಏಲ್ಹೊಯತೈ ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ ಪವನಪಸವಿದ ಸತತ ಸುಖ 8 ಘನ್ನ ಕರುಣಿ ನೀ ನಹುದೇನೊ ಆಪನ್ನ ರಾಪ್ತ ನೀ ನಿಜವೇನೋ ಸೊನ್ನೊಡಲಾಂಡಗ ನೀನಾದರೆ ಗತ ಮನ್ಯುನಾಗಿ ಜವ ನಿನ್ನನೆ ತೋರಿಸು 9 ತಂದಿನ ಪಾಲಿಸಿ ಮಗನನ್ನು ಬೇಕೆಂದು ಕೊಂದ ಕೃಷ್ಣನೆ ನೀನು ತಂದು ತೋರೊತವ ಸುಂದರ ಪದಯುಗ10 ಕಂದುಗೊರಳನುತ ಪೊರೆಯೆಂದು ಬಲು ವಂದಿಸಿದರು ತ್ವರ ನೀ ಬಂದು ಕಂದನ ಕರದ್ಯಾಕೆಂದು ಕೇಳ್ದದಕೆ ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11 ಬಲು ಮಂದಿನ ಸಲಹಿದಿ ನೀನು ಅವರೊಳಗೆ ಓರ್ವನಾನಲ್ಲೇನೊ ನೆಲೆಗಾಣದೆ ತವ ಜಲಜ ಪಾದ ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12 ಬೇಡಿಕೊಂಬುವದೊಂದೆ ಬಲ್ಲೆ ಅದುಕೂಡಾ ತಿಳಿದು ನೋಡಲು ಸುಳ್ಳೆ ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ ರೂಢಿಪತಿ ನೀನಾಡಿದ ನಾಡುವೆ 13 ನಾಗಶಯನ ನೀ ಬದುಕಿರಲು ಎನಗಾಗ ಬೇಕೆ ಕಲಬಾಧೆಗಳು ಸಾಗರಾಂಬರಪ ಸುತನಿಗೆ ಪುರ ಜನ ಬಾಗದೆ ಅಣಕಿಸಿಧಾಂಗಲ್ಲವೆ ಇದು 14 ಕರೆದರೆ ಬರುವೆನು ನಿನ್ನಡಿಗೆ ಧಿ ಕ್ಕರಿಸಲು ಮರುಗುವೆ ಮನದಾಗೆ ನಿರ್ವಿಣ್ಯನು ಪರತಂತ್ರನು ನಾನಿ ನ್ನೆರಳಲ್ಲವೆ ಮದ್ಗುರುವರ ವರದಾ 15 ಕಲ್ಲಿನ ರೂಪದಿ ಪೂಜಿಯನು ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16 ಕಣ್ಣಲಿ ತವದರ್ಶನ ಅಮೃತ ಭವ ತ್ರಾತಾ ಘನ ಕರುಣಿ ಬಾರೆನೆ ಬರುವೆನು ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17 ಭಿಡೆಯ ಬಾರದೆ ಬಲು ಘನ್ನಾ ನಾನುಡಿಯು ವಡ್ಡಿ ಬೇಡಿದರನ್ನ ಕೊಡಗೈಯವನಿಗೆ ಲೋಭವು ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18 ನ್ಯಾಯಕೆ ಅಧಿಪ ನೀನೆ ಜೀಯಾ ಅನ್ಯಾಯಕೆ ಪೇಳುವರಾರೈಯ್ಯ ಮಾಯವೆಂಬೊ ಘನ ಘಾಯವುಎನ್ನನು ನೋಯಿಸುತಿದೆ ಜವಮಾಯಿ ಸುಭೀಷಿಜನೆ 19 ವರುಣಗೆ ವಾರಿಯು ನೀನಯ್ಯ ದಿನ ಕರನಿಗೆ ಮಿತ್ರನು ನೀನಯ್ಯ ಸುರಪಗೆ ಇಂದ್ರನು ಉರಗಕೆ ಶೇಷನು ಸರ್ವವು ನೀನೆಂದರಿತೆನು ಕರುಣಿಸು 20 ಹನುಮಗೆ ಪ್ರಾಣ ಮೂರೊಂದು ಆನನನಿಗೆ ವೇಧನು ನೀನಂದು ಮನಸಿಗೆ ನೀ ಮನ ಜೀವಕೆ ಜೀವನ ಎನುತ ಅರಿದು ನಮೊ ಎನ್ನುವೆ ಕರಮುಗಿದು 21 ಮೂಗಣ್ಣಗೆ ರುದ್ರನು ನೀನೆಧರೆ ಆಗಸ ಸಾಗರ ಧಾರಕನೆ ಶ್ರೀ ಗುರು ರಘುಪತಿ ರಾಗ ಪಾತ್ರ ಭವ ನೀಗದೆ ಬಿಡುವರೆ 22 ಪದುಮನಾಭ ನಿನ್ನನು ಕುರಿತು ನಾ ನೊದರುವ ನುಡಿಗಳು ಚಿತ್ರವತು ವಿಧಿಪತ್ರವನಾಂತು ನಿನ್ನ ಪಾದ ವದಗಿಸದಲೆ ಬರೆ ಪದವೆನಿಸಿದವೆ 23 ಸ್ತವನಕೆ ವಲಿಯದೆ ಇರೆ ನಮನ ಗೈಯುವೆ ಇಕೊ ನೋಡೆ ದಾಸ್ಯತನಾ ಅವನಿಪ ಸರ್ವಕೆ ವಲಿಯದೆ ಇರೆ ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24 ಚೋರನೆ ನೀ ನಡಗಿದೆಯಾಕೆ ಸ್ಮøತಿ ದೂರನೆ ಎನ್ನನು ಮರಿವದೇಕೆ ಆರು ನಿನಗೆ ವೈಯಾರವು ಈ ಪರಿ ಕಾರುಣ್ಯದಿ ಕಲಿಸಿದರೋ ಕರಿವರದಾ 25 ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ ಜರದರೆ ನಮಗಿನ್ನೇನು ಗತಿ ಪರಿಪರಿ ವರಲು ವರಲಿ ದಯಮಾಡದೆ ಇರವದು ನಿನ್ನಗೆ ಮರಿಯಾದಿಯೆ ಹರಿ 26 ರೂಪ ತೋರಲೆನ್ನುವಿಯಾ ಆಹದೆ ಪೇಳಲೊ ಹೇ ವಿಗತಾಗಭಯ ಪಾಪಬಾರದೆ ಈ ಪರಿಯನ್ನನು ನೀ ಪಿಡಿಸೆ ಗತತಾಪ ಶ್ರೀಪ ಹರಿ 27 ಸುರತನು ಸಾಕದೆ ಬಿಟ್ಟವಗೆ ತನ್ನ ಸತಿಯಳ ಖತಿಯೊಳಗಿಟ್ಟವಗೆ ಕ್ಷಿತಿಯರು ಏನೆನ್ನುವರು ಮನದೊಳಗೆ ಪತಿ ಯೋಚಿಸಿ ಹಿತಗೈಯನ್ನೊಳು 28 ಶಿರಿಗೋವಿಂದ ವಿಠಲ ಪಾಹಿ ಗುರುವರ ರಘುಪತಿನುತ ಪದ ಪಾಹಿ ಬರೆ ಮಾತಲ್ಲವೊ ತ್ವರ ತವ ಪಾದ ಸಿರಿ ಸುರರಾಣೆ 29
--------------
ಅಸ್ಕಿಹಾಳ ಗೋವಿಂದ
ಏನಯ್ಯ ನಿನ್ನ ಸಂಗದಪರಿ - |ಮಾನಿನಿಯ ಮರುಳು ಮಾಡಿ ನೋಡಿದವಗೆ ಪಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |ಕರವ ಗಲ್ಲದೊಳಿಟ್ಟು ಕಡುಸುಯ್ವಳು ||ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |ಹಂಬಲಿಸುವಳು ಕಂಡ ಕಾಂತೆಯರೊಳು ||ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |ಘನತಾಪದಿಂದ ಗೋಚರವಾಗಿದೆ ||`ಅನುತಾಪದಿಂದ ಸಲೆ ಬಳಲಿದ ಮಾನಿನಿಯ |ವನಜಾಕ್ಷಪುರಂದರ ವಿಠಲ ಬಂದು ಸಂತಯಿಸೊ3
--------------
ಪುರಂದರದಾಸರು
ಮೂರ್ಖರಾದರು ಇವರು ಲೋಕದೊಳಗೆಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖಗಂಟನೊಬ್ಬನ ಕೈಯಲಿಡುವವನೆ ಮೂರ್ಖನಂಟರಿಗೆ ಸಾಲವನು ಕೊಡುವಾತ ಮೂರ್ಖ - ಜಗಕಂಟಕನಾದವನು ಕಡು ಮೂರ್ಖನಯ್ಯಾ 1ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖಸರ್ಪನಲಿ ಗಾರುಡವ ನಡಸುವನೆ ಮೂರ್ಖಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖಅಪ್ಪ ರಂಗಯ್ಯನನು ನೆನೆಯದವ ಮೂರ್ಖ 2ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ 3ಪಡೆದ ಮಗಳನುಮಾರಿ ಒಡಲಹೊರೆವವ ಮೂರ್ಖಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖಬಡತನವು ಬಂದರೆ ಬಯಸಿಕೊಂಬವ ಮೂರ್ಖದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ 4ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖಹೇಮವನು ಗಳಿಸಿ ಉಣದಿದ್ದವನೆ ಮೂರ್ಖನೇಮದಲಿ ಹಿರಿಯರನು ನೋಡದವ ಮೂರ್ಖ ದುರ್ನಾಮವನು ಕೊಂಬಾತ ಕಡು ಮೂರ್ಖನಯ್ಯ 5ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖಭೂಸೂರರಿಗನ್ನವನು ಕೊಡದವನೆ ಮೂರ್ಖಶೇಷಪತಿ ಕೃಷ್ಣನ ನೆನೆಯದವ ಮೂರ್ಖಹರಿದಾಸನಾಗಿರದವನು ಕಡು ಮೂರ್ಖನಯ್ಯ 6ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖಕೊಂಡೆಯವ ಪೇಳಿ ತಿರುಗುವವ ಮೂರ್ಖಪುಂಡರೀಕಾಕ್ಷ ಶ್ರೀ ಪುರಂದರವಿಠಲನಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ 7
--------------
ಪುರಂದರದಾಸರು