ಒಟ್ಟು 20 ಕಡೆಗಳಲ್ಲಿ , 8 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.ದಯಾಸಾಗರೆ ದಾರಿದ್ರ್ಯದುಃಖ ಭವ-ಭಯನಾಶಿನಿ ಮಣಿಮಯಕೃತಭೂಷಿಣಿ ಅ.ಪ.ಗಜವದನನ ಮಾತೆ ಸುಜನ-ವ್ರಜಸತ್ಫಲದಾತೆಕುಜನಭಂಜನಿ ನಿರಂಜನಿ ಶೈಲಾ-ತ್ಮಜೆ ಮಹೋಜೆ ನೀರಜದಳಲೋಚನಿ 1ಇಂದ್ರಾದ್ಯಮರನುತೆ ಪೂರ್ಣಾನಂದೆ ನಂದಜಾತೆಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-ಗೇಂದ್ರವಾಹಿನಿ ಮದಾಂಧರಿಪು ಮಥನಿ 2ಅಂಗಜಶತರೂಪೆ ಸದಯಾ-ಪಾಂಗೆ ಸುಪ್ರತಾಪೆಗಂಗಾಧರವಾಮಾಂಗಶೋಭೆ ಸಾ-ರಂಗನೇತ್ರೆ ಶ್ರೀರಂಗಸಹೋದರಿ 3ದಾಸಜನರ ಪೋಷೆ ರವಿಸಂ-ಕಾಶೆ ತ್ರಿಜಗದೀಶೆವಾಸುದೇವನ ಸ್ಮರಣಾಸಕ್ತಿಯ ಕೊಡುಭಾಸುರಜ್ಞಾನಪ್ರಕಾಶವಿಲಾಸಿನಿ 4ಸೌಖ್ಯವು ಭಕ್ತರ್ಗೆ ಸಲಿಸಲುಸೌಖ್ಯವು ನೀ ಭರ್ಗೆಲಕ್ಕುಮಿನಾರಾಯಣನ ಭಗಿನಿ ನಿ-ರ್ದುಃಖಪ್ರದಕಟಿಲಾಖ್ಯಪುರೇಶ್ವರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ