ಒಟ್ಟು 22 ಕಡೆಗಳಲ್ಲಿ , 17 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರಸುಖ ಸುನೀತಿಯಿಲ್ಲದ ಮಹ ಪಾತಕ ಹೊಲೆಯರಿಗೆ ಪ ಭೂತಳದಲಿ ಬಂದ ರೀತಿಯನರಿಯದೆ ಆತುರದಲಿ ಬಿದ್ದ ನೀತಿಗಡುಕರಿಗೆ ಅ.ಪ ಉತ್ತಮರ್ವಚನದ ಅರ್ಥವನರಿಯದೆ ಕತ್ತೆಯಂತೆ ಕೂಗಿ ಚಿತ್ತಕ್ಕೆ ಬಂದಂತೆ ವರ್ತಿಸಿ ಭವದಿ ಅನರ್ಥಕ್ಕೆ ಗುರಿಯಾಗಿ ಸತ್ಯಜನಕೆ ಕುಂದುತ್ತರಗಳನ್ನಿತ್ತು ಮೃತ್ಯು ಬಲೆಗೆ ಬೀಳ್ವ ಕತ್ತೆ ಮನುಜರಿಗೆ 1 ನಶಿಸಿ ಪೋಗೋ ಮಾಯ ವಿಷಯಲಂಪಟವೆಂಬ ಮುಸುಕಿನೊಳಗೆ ಸೊರಗಿ ನಿಶಿದಿವಯೆನ್ನದೆ ಪುಸಿಯ ಸಂಸಾರವೆಂಬ ವ್ಯಸನದೊಳಗೆ ಕೊರಗಿ ವಸುಧೆಸುಖಕೆ ಮೆಚ್ಚಿ ಮಸಣ ಬುದ್ಧಿಯಿಂದ ಪುಸಿಯ ಬಳಸಿ ಕಾಲನೊಶವಾಗುವವರಿಗೆ 2 ಶೋಧಿಸಿ ನಿಜಪದ ಸಾಧನೆಯೊಳಗಿರ್ದು ಸುಜನ ಸು ಬೋಧ ಪಡೆದು ಭವಬಾಧೆ ರಹಿತರಾಗಿ ಭೇದರಹಿತ ಮಹದಾದಿ ಶ್ರೀರಾಮನ ಪಾದ ನಂಬಿ ಮುಕ್ತಿ ಸಂಪಾದಿಸದವರಿಗೆ 3
--------------
ರಾಮದಾಸರು
ಲೋಕನೀತಿ ಮಾನವ ಭ್ರಾಂತಿಸುಖವ ಪ. ನಂಬಲಾಗದು ಮಣ್ಣಬೊಂಬೆಯಂದದ ದೇಹ ಡಂಭ ಮೋಹಗಳಿಂದ ಮದಿಸುತ ಹಂಬಲಕ್ಕೀಡಾಗುವಂತಿದ ಅ.ಪ. ನೀರಮೇಲಣಗುಳ್ಳೆ ತೋರಿಹಾರುವ ಬಗೆ ಮಾರನಾಟಿದೊಳಾಡುತ ನಲಿಯುತಲಿಕೆ ಸಾರಿಬರೆ ತನಗಪಮೃತ್ಯುಕಾಲವು ಮೀರಿದುಬ್ಬುಸವಾಂತು ಮಿಡುಹುತ ಬೋರಿಡುತ ಬೊಬ್ಬರಿಸಿ ತರಳರ ಸಾರಿಕೂಗುವ ಕಾಯಧಿರವನು 1 ನಾನು ನನ್ನದಿದೆಂದಭಿಮಾನದಿಂ ಮತಿಗೆಟ್ಟು ಜ್ಞಾನವಿಲ್ಲದೆ ಭುವಿಯೊಳ್ ದೀನನಾಗಿ ನಾನಾಪರಿಯಿಂ ಸೊರಗಿ ನರಳುತಿಹ ನೀ ನಿಜವೆಂದು ನಂಬದೆ ಜ್ಞಾನ ಲಾಭದಿ ಮನುಜನೆನ್ನಿಸೆ 2 ಕಾಮಕ್ರೋಧವ ಬಿಟ್ಟು ರಾಮನೊಳ್ ಮನವಿಟ್ಟು ತಾಮಸಬುದ್ಧಿಯನೀಡಾಡುತೆ ಮತ್ತೆ ಶಮದಮಾದಿಗಳನಭ್ಯಸಿಸುತೆ ಕ್ಷಮೆಯನಾಶ್ರಯಿಸುತೆ ಸುಖದುಃಖದೊಳ್ ಕಮಲನಯನ ಶೇಷಾದ್ರಿನಾಥನ | ವಿಮಲ ಪದದೊಳೈಕ್ಯನಾಗಲು ಅಮಭಕ್ತಿಯೆ ಮುಖ್ಯ ಸಾಧನ ನಮಗೆ ಈ ಭ್ರಾಂತಿ ಸಲ್ಲದು 3
--------------
ನಂಜನಗೂಡು ತಿರುಮಲಾಂಬಾ
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು
ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದಉರ್ವಿಯೊಳು ಜನಿಸಿದೆನೊ ಕೃಷ್ಣ ಪಕಾರುಣ್ಯನಿಧಿಯನ್ನ ಕಾಯಬೇಕಯ್ಯಹರಿವಾರಿಜನಾಭನೇ ಮುದ್ದುಕೃಷ್ಣ ಅ.ಪಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆಕಷ್ಟನಾದೆನು ಕೇಳೊ ಕೃಷ್ಣತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂಗೆಟ್ಟು ಸೊರಗಿದೆನಯ್ಯ ಕೃಷ್ಣಮುಟ್ಟಲಮ್ಮರು ಎನ್ನಸತಿಸುತರು ಬಾಂಧವರುಅಟ್ಟಿ ಎಳೆಯುತ್ತಿಹರೋ ಕೃಷ್ಣಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರುಮುಟ್ಟುವುದು ನಿನಗಯ್ಯ ಕೃಷ್ಣ 1ಕಾಶಿಯಾವಾಸವನು ಬಯಸಿ ಬಹುದಿನದಿಂದಆಸೆಯೊಳಗಿದ್ದೆನಯ್ಯ ಕೃಷ್ಣಗಾಸಿಯನು ಮಾಡದಲೆ ದೋಷವನು ಪರಿಹರಿಸೊಸಾಸಿರನಾಮದ ಕೃಷ್ಣಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯಪಾಶದಿಂದಲಿ ಬಿಗಿದರೇ ಕೃಷ್ಣಕಂಸಮರ್ದನನೆ ನೀ ಕಾಯಬೇಕಯ್ಯಹರಿವಾಸುದೇವನೆ ಮುದ್ದು ಕೃಷ್ಣ 2ಲೋಕದೊಳಗೆನ್ನನು ಪೋಲ್ಪ ಪಾಪಿಗಳನ್ನುನೀ ಕಂಡು ಬಲ್ಲೆಯಾ ಕೃಷ್ಣಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನೆ ಮಾಡಯ್ಯ ಕೃಷ್ಣರಾಕೇಂದುಮುಖಿ ದ್ರೌಪದಿಯಮಾನವಕಾಯ್ದೆಆಕೆಗಕ್ಷಯವಿತ್ತೆ ಕೃಷ್ಣ ಪಿನಾಕಿಸಖಪುರಂದರವಿಠಲನೆ ಉಡುಪಿಯ ವಾಸಸಾಕಿ ಸಲಹೈ ಎನ್ನ ಕೃಷ್ಣ
--------------
ಪುರಂದರದಾಸರು
ಮನವೆ ಮಾಧವನ ಮರೆಯದಿರೆಂದೆ ದಣುವಾಯಿತು ಹಿಂದೆಕ್ಷಣವೊಂದು ಬಿಡದಿರು ಕೃಷ್ಣನ ಮುಂದೆ ಪ.ಘನವಿಷಯಂಗಳ ನೆನವಿಲಿ ಪುನ:ಪುನ:ತನುವ ವಹಿಸಿಭವವನವನ ಚರಿಸದೆಅ.ಪ.ಹರಿವಾರ್ತೆಯನು ಕೇಳು ಕೇಳಿದ್ದೆ ಕೇಳು ಅರಿಅರುವರನಾಳುಅರಿವಿಂದ ಗರುವದ ಮೂಲವ ಕೀಳುಹೆರವರ ಹರಟೆಗೆ ಪರವಶನಾಗದೆಕರಿವರವರದನ ವರವನೆ ಬಯಸು 1ಹರಿಗುರುವಿಗೆರಗು ಅರಿತರಿತೆರಗು ತಪವೆರಡಲಿ ಸೊರಗುಸೊರಗಿದವರ ಕಂಡು ಕರಗು ಮರುಗುತಿರುಗ್ಯೊಡಲುರಿಗೆ ಮುಳ್ಳ್ಹೊರೆಗೆ ಸ್ಮರಾಸ್ತ್ತ್ರಕೆಗುರಿಯಾಗದೆ ಹರಿಸೆರಗ ಬಿಡದಿರು 2ಹರಿವಿಗ್ರಹನೋಡುನೋಡಿದ್ದೆನೋಡುಮಮಕಾರವೀಡಾಡುಸ್ಥಿರವೊಂದನೆ ಬೇಡಸ್ಥಿರವ ಬಿಸಾಡುಸಿರಿವಂತರಸಿರಿಪರವಧುಗಳ ಸಿಂಗರವೆಣಿಸದೆ ಸಿರಿವರನ್ನೆನೋಡು3ಹರಿಪ್ರಸಾದವನುಣ್ಣು ನೆನೆನೆನೆದುಣ್ಣು ಶ್ರೀಹರಿ ಪ್ರೀತ್ಯೆನ್ನುಹರಿಪ್ರೇರಕ ನೇಮಕ ಸಾಕ್ಷಿಕನೆನ್ನುಹರಿಪ್ರಿಯವಲ್ಲದನರುಪಿತ ಪರಿಪರಿಚರುಪವ ಚರಿಸದೆ ಹರಿಯಚರಿಸು4ಹರಿಯಂಘ್ರಿ ಪರಾಗವ ಗ್ರ್ರಹಿಸಾಘ್ರಾಣಿಸು ಹರಿಯವರಿಗೆ ಉಣಿಸುಹರಿಭಕ್ತಿ ಜ್ಞಾನ ವೈರಾಗ್ಯವ ಗಳಿಸುಹರಿಪ್ರಿಯ ಪ್ರಭು ಮಧ್ವಾಚಾರ್ಯರ ಪ್ರಿಯ ಮೇಲ್ಗಿರಿ ಪ್ರಸನ್ವೆಂಕಟ ದೊರೆಯನೆ ನಂಬು 5
--------------
ಪ್ರಸನ್ನವೆಂಕಟದಾಸರು