ಒಟ್ಟು 21 ಕಡೆಗಳಲ್ಲಿ , 3 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಶರಣು ಗುರು ಬ್ರಹ್ಮಣ್ಯ | ಶರಣು ಶಿರಿ ಸುರಮಾನ್ಯಪರಿಹರಿಸು ಭವತಾಪ | ಬಿನ್ನವಿಪೆ ಮುನಿಪ ಪ ಪುರುಷೋತ್ಮ ಕರಜಾತ | ಕಣ್ವತಟದಲಿ ಖ್ಯಾತನರಹರಿಯ ಪದಕಮಲ | ಭಜಕಶೀಲಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪಪರಿಹರಿಸೊ ಮುನಿಮೌಳಿ | ನಾನು ಪದಧೂಳಿ 1 ಯೋನಿ ಅನೇಕದಲಿ | ಬಂದಿರುವೆ ನಾಬಳಲಿಮಾನ ನಿಧಿ ನೀಯನ್ನ | ಕಾಯೊ ದಯ ಪೂರ್ಣ |ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ 2 ವಿಕಳ ಮತಿಯನು ಹರಿಸು | ಅಕಳಂಕನೆಂದೆನಿಸುಸುಖತೀರ್ಥ ಮತ ಸುಧೆಯ | ಉಣುವ ಪರಿಯ |ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ 3 ಸುಕೃತ ಒಂದಿರಲಿ | ನಿನ್ನ ದಯವಿರಲಿ 4 ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವಸುಷ್ಠು ಹೃದ್ಗುಹದಲ್ಲಿ | ಕಾಣಿಪುದು ಅಲ್ಲಿ 5
--------------
ಗುರುಗೋವಿಂದವಿಠಲರು
ಶ್ರೀರಾಘವೇಂದ್ರ ಸ್ವಾಮಿಗಳು ಗುರುಗಳ ನೋಡಿರಿ ರಾಘವೇಂದ್ರ ಪ ಗುರುಗಳ ನೋಡಿ ಚರಣದಿ ಬಾಗಿ ಕರೆಕರೆ ನೀಗಿ ವರಸುಖ ಪಡೆಯಿರಿ ಅ.ಪ ಕಾಮಿತ ಫಲಗಳ ಇತ್ತು ಇತ್ತು ತಾಮಸ ಗುಣಗಳ ಕೆತ್ತಿ ಕೆತ್ತಿ ರಾಮನ ಭಕ್ತಿಯ ಬಿತ್ತಿ ಬಿತ್ತಿ ಪ್ರೇಮದಿ ಶಿಷ್ಯರ ಸಲಹುವ ನಮ್ಮ 1 ಅಂತೆ ಕಂತೇ ಸಂತೆ ಮಾತು ಸಂತರ ಬೆಲ್ಲ ಇವರಲಿಲ್ಲ ಎಂಥಾ ಭಕ್ತಿ ಅಂಥಾ ಫಲವು ಕುಂತೀ ಭೀಮನ ಪಂಥಾ ಪಿಡಿದು 2 ಇಲ್ಲ ಎಂಬಗೆ ಎಲ್ಲಾ ಇಲ್ಲಾ ನಲ್ಲ ಎಂಬಗೆ ಎಲ್ಲಾ ಉಂಟು ಕ್ಷುಲ್ಲ ಸಂಶಯ ಹಲ್ಲು ಮುರಿದು ಪುಲ್ಲ ನಾಭನ ಬಲ್ಲವರೊಡನೆ 3 ಕಲಿಯೆಂದೇಕೆ ಅಳುವಿರಿ ನೀವು ಒಲಿಯಲು ಗುರುವು ಸುಳಿಯುವ ಹರಿಯು ತುಳಿಯುತ ಕಲಿಯ ಬೆಳಸಿರಿ ಭಕ್ತಿ ಕಾಲ 4 ಕೃಷ್ಣ ವಿಠಲನ ಇಷ್ಟ ಗುರುಗಳು ತೃಷ್ಠರಾದೆಡೆ ಇಷ್ಟ ಕರಗತವು ಭಷ್ಟರಾಗದೆ ಶಿಷ್ಠರ ಸೇರುತ ಪುಷ್ಠಿಯ ಗೈಸುತ ಸುಷ್ಠು ಜ್ಞಾನವ 5
--------------
ಕೃಷ್ಣವಿಠಲದಾಸರು
ಶ್ರೀಹರಿ ಪ್ರಿಯ ವಿಠಲ | ಸಲಹ ಬೇಕಿವನಾ ಪ ಸ್ನೇಹ ಸದ್ಭಕ್ತರಲಿ | ಸಾಹಸದಿ ಕೊಡಿಸಿ ಅ.ಪ. ಪಾಪಾಟವಿಗೆ ಪವಿಯು | ಶ್ರೀಪತಿಯ ನಾಮವನುಲೇಪಿಸುವುದೋ ಸ್ವಾಮಿ | ಗೋಪಾಲ ಮೂರ್ತೇವ್ಯಾಪಕನು ನೀನಾಗಿ | ಪ್ರಾಪಕಾಭಿಷ್ಟಗಳಪಾವನಕೆ ಮನ ಮಾಡಿ | ಎರ್ಷಿಸೋ ಹರಿಯೇ 1 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೆಇಷ್ಟಮೂರುತಿ ದೇವ | ಸುಷ್ಠು ಭಜನೆಯ ನೀಡಿಹೃಷ್ಟನ್ನ ಮಾಡಿವನ | ಜಿಷ್ಣು ಸಖ ಹರಿಯೆ 2 ಪಂಚಭೇದ ಜ್ಞಾನ | ಸಂಚಿಂತನೆಯ ಕೊಟ್ಟುವಾಂಚಿತಾರ್ಥದನಾಗೊ | ಪಂಚ ಪಾಂಚಾತ್ಮಕಾಂಚನವು ಲೋಪ್ಠವು | ಸಮವೆಂಬ ಮತಿಯಿತ್ತುಅಂಚೆ ವಹ ಸದ್ವಂದ್ಯ | ಮಿಂಚಿ ನಂದದಿ ಪೊಳೆದು 3 ಭವ ಬಂಧದಲಿ ಸಿಲ್ಕಿ | ಬಲು ನೊಂದಿಹನು ಅಯ್ಯಭವರೋಗ ವೈದ್ಯನೇ | ಕೈ ಪಿಡಿದು ಕಾಯೋ ಅವನಿಯೊಳು ಶ್ರೀ ಹರಿಯೆ ಪ್ರಿಯನಾಗಿ ಮೆರೆಯಲಿಂ-ದಿವನ ಸ್ವಪದಿ ಪೇಳ್ದೆ | ಗುರು ಮೂರ್ತಿಯಾಗೀ 4 ಸುಪ್ತೀಶ ಪೇಳ್ದಪರಿ | ಇತ್ತಿಹೆನೊ ಅಂಕಿತವಆಪ್ತ ನೀನಿದ್ದವಗೆ | ದಾಸ್ಯ ಸದ್ಧರ್ಮಪ್ರಾಪ್ತಿ ಗೈಸುತ ಭವವ | ಉತ್ತರಿಸ ಬೇಕೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಹುಚ್ಚು ಹಿಡಿಯಿತು ಎನಗೆ | ಹುಚ್ಚು ಹಿಡಿಯಿತು ಪ ಸ್ವಚ್ಛ ಭಾಗವತವ ಕೇಳಿ | ಅಚ್ಯುತನ್ನ ಮಹಿಮೆ ಎಂಬಮೆಚ್ಯಮದ್ದು ಶಿರಕೆ ಏರಿ | ಹುಚ್ಚು ಹಿಡಿಯಿತು ಅ.ಪ. ಶ್ರವಣ ಸ್ತವನ ಸ್ಮರಣೆ ಸೇವೆ | ಅವನ ಅರ್ಚನೆ ವಂದನೆ ಸಖ್ಯಅವ ದಾಸ್ಯ ಆತ್ಮ ಅರ್ಪಣ | ನವವು ವಿಧದ ಭಕ್ತಿಗಳಿಪ 1 ಸಪ್ತ ದಿನದ ಕ್ಲುಪ್ತಿಯಿಂದ | ಸರ್ಪಶಯನ ಮಹಿಮೆ ಶ್ರವಣಶೃತಿ ಬಧಿರ ವಾಯ್ತು ಆತ್ಮ | ರಿಕ್ತ ವಿಷಯ ಶ್ರವಣಕೆಲ್ಲ 2 ಸ್ತವನ ಮಾಳ್ಪ ಶುಕರ ದೇಹ | ಭವಣೆ ಮರೆತು ಕೀರ್ತಿಸಿದರುಅವರ ಕಂಡು ಲೋಕವಾರ್ತೆ | ಸ್ತವನ ಗೈವರ ದೂಡುವಂಥ 3 ಹರಿಯ ಸ್ಮರಿಸಿ ಪ್ರಹಲ್ಲಾದ | ಹರಿಯ ಕಂಡು ಭವವ ಗೆದ್ದಸ್ಮರಿಸಿ ಸ್ಮರಿಸಿ ಅದನ ನಾನು | ನರರ ನಡುವೆ ಮೂಕನಾಗ್ದ 4 ನಿತ್ಯ ಮಾಳ್ಪ ಹರಿಯ ಸೇವೆಅರ್ತುಸಂತರ ಸೇವೆ ವ್ಯತಿ | ರಿಕ್ತಕೆಲ್ಲ ಪ್ರತಿಯ ಭಟಿಪ 5 ಅಂಬೆ ರಮಣನರ್ಚಿಸೀದ | ಕುಂಬಾರ ಭೀಮನ ಕೇಳಿ ನಾನುಅಂಬುಜಾಕ್ಷನರ್ಚನೆಗಲ್ಲದ | ತುಂಬಿದ್ವ್ಯೊಭವ ಚೆಲ್ಲುವಂಥ 6 ಕೃಷ್ಣ ವಂದನ ಅಕ್ರೂರ ಗೈದು | ಸುಷ್ಠು ಹರಿಯ ರೂಪ ಕಂಡಜಿಷ್ಣು ಸಖನ ನಮಿಸದವರ | ಭ್ರಷ್ರ್ರರೆಂದು ಬೈಯ್ಯುವಂಥ 7 ನಿತ್ಯ ನೆನೆಯದವರ | ಕ್ಷಣವು ಅವರ ಸಂಗಜರಿವ 8 ಪಾರ್ಥ ಸಖ್ಯತನದಿ ಪರಮ | ಅರ್ಥ ಪಡೆದುದನ್ನ ಕೇಳಿನಿತ್ಯ ಸಖನ ಮರೆತ ಜನರು | ವ್ಯರ್ಥರೆಂದು ಅರ್ಥಿಲಿ ನಗುವ9 ಭೃತ್ಯ ಬಲಿಯು ತನ್ನನಿತ್ತಸತ್ಯ ವಾರ್ತೆ ಕೇಳಿ ಕೇಳಿ | ಪ್ರವೃತ್ತಿ ಗೈದಿನ್ಯತ ನೆದಿ 10 ನಿಚ್ಚ ಗುರು ಗೋವಿಂದ ವಿಠಲ11
--------------
ಗುರುಗೋವಿಂದವಿಠಲರು