ಒಟ್ಟು 21 ಕಡೆಗಳಲ್ಲಿ , 6 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಕ್ಕಿತೆನಗೊಂದು ಸುವಸ್ತ ಮುಖ್ಯದಂತಸ್ಥ ಅಕ್ಕಿ ಮನಕ್ಕಾಯಿತು ಸ್ವಸ್ತ ದಕ್ಕಿ ಪ್ರಶಸ್ತ 1 ಕಟ್ಟ ಇಡುವದಲ್ಲ ಬಿಟ್ಟರೆ ಹೋಗುವದಲ್ಲ ಮುಟ್ಟಿದರೆ ಬಿಡುವುದಿಲ್ಲ ಗುಟ್ಟು ಕೇಳೆಲ್ಲ 2 ಮುಚ್ಚುಮರಿಲಿಹುದಲ್ಲ ಬಚ್ಚಿಟ್ಟು ಕೊಂಬಂಥದಲ್ಲ ನೆಚ್ಚಿದ ಮಹಿಮನೆ ಬಲ್ಲ ಆಶ್ಚರ್ಯವಲ್ಲ 3 ಭಾನುಕೋಟಿ ತೇಜನಾಗಿ ಘನದಯದಲೊದಗಿ ತಾನೆ ಸಿಕ್ಕಿತ್ಯೆನಗಾಗಿ ಸಾನುಕೂಲಾಗಿ4 ಮಿಹಿತದ ಅಗರ ಸ್ವಹಿತ ಸುಖಸಾಗರ ಮಹಿಪತಿಯ ಮನೋಹರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಯಂ ಭಾನು ಉದಯವಾದ ನೋಡಿ ದಯಕರುಣಾನಂದದ ಕೃಪೆಮಾಡಿ ಧ್ರುವ ರವಿಕೋಟಿತೇಜನೆ ಬಂದ ಮೂಡಿ ಭವಭ್ರಮದ ಕತ್ತಲ್ಹೋಯಿತೋಡಿ ದೇವದೇವೋತ್ತಮನ ಪ್ರಭೆ ಕೂಡಿ ದಿವಾರಾತ್ರಿಲ್ಲದಾಯಿತು ನೋಡಿ 1 ಜ್ಞಾನ ಗಮ್ಯವಾಗಿದ್ದ ಸುವಸ್ತ ಕಾಣಬಾವ್ಹಾಯಿತು ಮನಸ್ವಸ್ತ ಮನದಿಂದೆವೆ ಆಯಿತು ಮನಸ್ವಸ್ತ ಘನಮಯವೆ ತೋರಿತು ಸಮಸ್ತ 2 ತಾನೆ ತನ್ನಿಂದುದಯವಾದ ಪೂರ್ಣ ನಾನಾವೆಂಬುದ್ಹೋಯಿತನುಮಾನ ಆನೇಕಲಿದೋರಿತು ಇದೆ ಖೂನ ದೀನ ಮಹಿಪತಿ ಸ್ವಹಿತ ಸುಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹತ್ತಿಲಿಹÀ ವಸ್ತುನೋಡೊ ಮನವೆ ನಿತ್ಯ ನಿಜನಿರ್ಗುಣವ ಕೂಡೊ ಮನವೆ ಧ್ರುವ ಅತ್ತಲಿತ್ತಲಾಗದಿರು ಮನವೆ ಚಿತ್ತ ಚಂಚಲ ಮಾಡದಿರೆನ್ನ ಮನವೆ ಉತ್ತುಮ ಸುಪಥ ನೋಡು ಮನವೆ ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ 1 ಹೋಕಹೋಗದಂತೆ ಎನ್ನ ಮನವೆ ಏಕರಸವಾಗಿ ಕೂಡೊ ಎನ್ನ ಮನವೆ ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ 2 ಧನ್ಯವಿದು ರಾಜಯೋಗಮನವೆ ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ ಚೆನ್ನಾಗಿ ಚಿನ್ಮಯ ನೋಡು ಮನವೆ ಅನ್ಯಪಥವಿನ್ಯಾತಕ ನೋಡು ಮನವೆ 3 ಗರ್ವಗುಣ ಹಿಡಿಯದಿರು ಮನವೆ ನಿರ್ವಿಕಲ್ಪನ ತಿಳಿದು ನೋಡು ಮನವೆ ಪೂರ್ವಪುಣ್ಯಹಾದಿ ಇದು ಮನವೆ ಸರ್ವರೊಳು ವಸ್ತುಮಯ ಒಂದೆ ಮನವೆ 4 ದೃಷ್ಟಿಸಿ ಆತ್ಮನ ನೋಡು ಮನವೆ ಪುಷ್ಟವಾಗಿ ಘನದೋರುವದು ಮನವೆ ಭ್ರಷ್ಟವಾಗಿ ಬಾಳಬ್ಯಾಡ ಮನವೆ ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ 5 ಏರಿ ಆರುಚಕ್ರ ನೋಡು ಮನವೆ ಪರಮಾನಂದ ಸುಪಥ ಕೂಡೊ ಮನವೆ ಆರು ಅರಿಯದ ಹಾದಿ ಮನವೆ ತೋರಿಕೊಡುವ ಸದ್ಗುರು ಎನ್ನ ಮನವೆ 6 ಹರಿಭಕ್ತಿಯೊಳಗಿರು ಮನವೆ ಸಿರಿ ಸದ್ಗತಿ ಸುಖವ ಕೂಡೊ ಮನವೆ ಗುರುವಾಕ್ಯ ನಂಬಿ ನಡೆ ಮನವೆ ಪರಲೋಕಕ್ಕೆ ಸೋಪಾನವಿದು ಮನವೆ 7 ಪರದ್ರವ್ಯಗಲ್ಪದಿರು ಮನವೆ ಪರಸತಿಯ ನೋಡದಿರೆನ್ನ ಮನವೆ ಪರರ ನಿಂದ್ಯ ಮಾಡದಿರು ಮನವೆ ದಾರಿ ಹೋಗದಿರು ದುಷ್ಟರ ನೀ ಮನವೆ 8 ಸಜ್ಜನರ ಸಂಗ ಮಾಡೊ ಮನವೆ ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ ಭೆಜ್ಜರಿಕೆ ಹಿಡಿಯೊ ಎನ್ನ ಮನವೆ ದುರ್ಜನರ ಸಂಗ ಮಾಡಬ್ಯಾಡೊ ಮನವೆ 9 ಕಂಗಳ ತೆರೆದು ನೋಡು ಮನವೆ ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ ಹಿಂಗದಂತೆ ಕೂಡೊ ಬ್ಯಾಗೆ ಮನವೆ ಗಂಗೆಯೊಳು ಜಲಬೆರೆದಂತೆ ಮನವೆ 10 ಭೇದ ಬುದ್ಧಿಯ ಮಾಡಬ್ಯಾಡ ಮನವೆ ಸಾಧುಸಂತರ ಸುಬೋಧ ಕೇಳು ಮನವೆ ಭೇದಿಸಿ ತಿಳಿದುನೋಡು ಮನವೆ ಸದಮಲ ಬ್ರಹ್ಮ ಸೂಸುತಿದೆ ಮನವೆ 11 ಯುಕ್ತಿ ನಿನಗಿದು ನೋಡು ಮನವೆ ಭಕ್ತವತ್ಸಲ ಸ್ಮರಿಸು ಮನವೆ ಮುಕ್ತಿಯಿಂದಧಿಕಸುಖ ಮನವೆ ಭಕ್ತಿರಸದೊಳು ಮುಳಗ್ಯಾಡು ಮನವೆ 12 ಲೇಸು ಲೇಸು ಮಹಿಪತಿ ಸು ಮನವೆ ದಾಸನಾಗಿರುವ ವಾಸುದೇವನ ಮನವೆ ಭಾಸಿ ಪಾಲಿಪನ ಕೂಡೊ ಎನ್ನ ಮನವೆ ಭಾಸ್ಕರ ಮೂರ್ತಿಯ ನೋಡು ಮನವೆ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೋ ಜೋ ಜಾನಕಿ ಜೊ ಚಂದಿರ ಮುಖಿಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ 1ಆದಿಮಾಯಳೆ ವೇದವೇದ್ಯಳೆಆದಿತೇಯನುತೆ ಭೂಮಿಜಾತೆ 2ಮೃಗಮದಗಂಧಿನಿ ಮಾಧುರ್ಯಭಾಷಿಣಿಮಗಳೆ ಜಾನಕಿಯೆ ಕಂಬುಕಂಧರಿಯೇ 3ಕಂಜಲೋಚನಿ ಕಂಜಭವಜನನಿಕುಂಜರಗಮನಿ ಸಂಜೀವನಿ 4ವಾರಿಜನೇತ್ರೆ ವಾಸುವಸ್ತೋತ್ರೆಮಾರಜನನಿ ಲಕ್ಷ್ಮೀನಾರಾಯಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಂಚಮಿಯ ದಿನರಂಭೆs :ಏನಿದು ಇಂದಿನವಿಭವನಮ್ಮಶ್ರೀನಿವಾಸನ ಮಹಾತ್ಮವಮಾನಿನಿರನ್ನೆ ನೀ ಪೇಳೆ ಭಕ್ತಾ-ಧೀನದ ಚರಣದ ಲೀಲೆಭಾನುಉದಯದಲಿ ವೀಣಾದಿ ಸು-ಗಾನ ವಾದ್ಯ ನಾನಾವಿಧ ರಭಸದಿ 1ಎತ್ತಲು ನೋಡಿದಡತ್ತ ಜನ-ಮೊತ್ತವಿಲಾಸವಿದೆತ್ತಚಿತ್ತದಿ ನಲಿನಲಿದಾಡಿ ತೋಷ-ವೆತ್ತಿರುವನು ಒಟ್ಟುಗೂಡಿಸುತ್ತುಮುತ್ತು ಒತ್ತೊತ್ತಿಲಿಹರು ವಿ-ಪ್ರೋತ್ತಮ ಶ್ರೀಹರಿಭಕ್ತರ ಮಯವಿದು 2ಚಾಮರ ಛತ್ರ ಸಿಗುರಿಯು ಜನ-ಸ್ತೋಮಪತಾಕೆ ತೋರಣವುಹೇಮದ ಕಂಚುಕಿ ಈಟಿ ಗುಣ-ಧಾಮನ ಬಿರುದುಗಳ್ ಕೋಟಿಆ ಮಹಾಭೇರಿ ಪಟಹ ನಿಸ್ಸಾಳಕಸಾಮಗಾನ ಸಾಮ್ರಾಜ್ಯವೋಲಿಹುದು 3ಬಾಲರು ವೃದ್ಧ ಯೌವನರು\ಜನ-ಜಾಲವೆಲ್ಲರು ಕೂಡಿಹರುಲೋಲಸ್ರೀಮುಂದ್ರಾಂಕಿತದಿ ಬಹು ವಿ-ಶಾಲ ದ್ವಾದಶನಾಮ ಮುದದಿಆಲಯದೊಳಗಿಹ ಬಾಲಕಿಯರು ಸಹಸಾಲಂಕೃತ ಸಮ್ಮೇಳದಿ ನಲಿವರು 4ಒಂದು ಭಾಗದಿ ವೇದಘೋಷ ಮ-ತ್ತೊಂದು ಭಾಗದಿ ಜನಘೋಷಇಂದಿನ ದಿನದತಿಚೋದ್ಯ ಏ-ನೆಂದು ವರ್ಣಿಸುವದಸಾಧ್ಯಚಂದಿರಮುಖಿ ಯಾರೆಂದೆನಗುಸುರೆಲೆಮಂದರಧರಗೋವಿಂದನ ಮಹಿಮೆಯ5ಪೇಳಲೇನದಾ ಮೂರ್ಲೋಕದೊಳಗೀ ವಿ-ಶಾಲವ ನಾ ಕಾಣೆ ಪ.ಸೋಜಿಗಸೌಭಾಗ್ಯ ಸಂಪದಕಿದು ಬೀಜ ಕಾಣೆಲೆರಾಜೀವನಾಭನ ಪೂಜಾವಿನೋದದಿರಾಜವದನೆ ವನಭೋಜನದಿಂದಿನ 1ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು 2ಇಂದಿನ ದಿನದಂದವನೂತನವೆಂದು ನೀ ಪೇಳುವಿಚಂದಿರ ಮುಖಿ ಜನಸಂದಣಿಗಳು ಮಹಾಮಂದಿ ಓಲೈಸುವರಿಂದು ಮುಕುಂದನ 3ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆ ಪ.ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆಕಾಣುವ ಯೋಗಭೋಗ 1ಎನಗತಿ ಮನವು ನಿನಗತಿ ಛಲವುಜನುಮಾಂತರ ಪುಣ್ಯವೈಸೆ ನೀ 2ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾ ಪ.ಅನವರತದಿಂದ ಬರುವ ಪುರುಷನಲ್ಲಮೀನಕೇತನ ಶತರೂಪ ಕಾಣೆ 1ನೂತನ ಪುರುಷನಿವನ್ಯಾರೆಂದರಿಯೆನಮ್ಮಾಶಾತಕುಂಭದ ಮಂಟಪವೇರಿ ಬರುವನಮ್ಮಾ 2ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾತರತರ ರತ್ನವರದ ಬಾಯೊಳಿರುವದಮ್ಮಾ 3ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾಪರಮಪುರುಷನಂತೆ ತೋರುವನು ಅಮ್ಮಾ4ಬಾಲಾರ್ಕನಂತೆ ಮುಖ ಪ್ರಜ್ವಲಿಪುದುನೀಲಮಾಣಿಕ್ಯ ಕಾಂತಿಯ ಸೋಲಿಪುದು 5ಮೂರ್ಲೋಕದೊಳಗೆ ಸರಿಯುಪಮೆತೋರಲರಿಯೆಕಾಲಿಗೆರಗುವೆನು ಪೇಳಬೇಕು ಸಖಿಯೆ 6ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾಬೆರಳೊಳು ವಜ್ರದುಂಗುರವನಿಟ್ಟವನಮ್ಮಾ 7ವರರತ್ನಖಚಿತದಾಭರಣದಿಂದ ಮೆರೆವಚರಣಸರೋಜದೊಳು ರೇಖೆಯಿಂ ಶೋಭಿಸುವ8ವಲ್ಲಭೆಯರ ಸಹಿತುಲ್ಲಾಸದಿ ಬರುವಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ 9ಬಲ್ಲಿದಪುರುಷನಿವನೆಲ್ಲಿಂದ ಬಂದಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ 10ಊರ್ವಶಿ :ನೋಡುನಿತ್ಯಾನಂದಕರನಮೂಡಗಿರಿಯಿಂದೋಡಿ ಬಂದನ ನೋಡೆ ಪ.ಛಪ್ಪನ್ನೈವತ್ತಾರು ದೇಶಕಪ್ಪಕಾಣಿಕೆಗೊಂಬ ತೋಷಸರ್ಪಶೈಲ ರಾಜವಾಸಚಪ್ಪರ ಶ್ರೀ ಶ್ರೀನಿವಾಸ 1ತಿರುಗುತ್ತಿಪ್ಪಾ ತಿರುಮಲೇಶಶರಣ ರಾಮನ ಭಕ್ತಿಪಾಶದುರುಳಿನಲಿ ನಿಂದಿರ್ಪಶ್ರೀಶತರಿಸುವನುಕಾಣಿಕೆವಿಲಾಸ2ಪಟ್ಟದರಸನಾದ ದೇವಸೃಷ್ಟಿಯಾಳುವಜಾನುಭಾವದೃಷ್ಟಿಗೋಚರವಾಗಿ ಕಾಯ್ವಇಷ್ಟವೆಲ್ಲವ ಸಲಿಸಿ ಕೊಡುವ 3ವೃಂದ ನೆರಹಿ ವನಕೆಅಂದಣವೇರಿ ಮುಕುಂದನೊಲವಿನಲಿಕುಂದಣಮಂಟಪವೇರಿ ಮತ್ತೊಬ್ಬನುಸಂದರುಶನವಂ ನೀಡುತ ಯಿಬ್ಬರುಒಂದಾಗುತ್ತಾನಂದವ ಬೀರುತ್ತ 1ಅಕ್ಕ ನೀನೋಡುಬಹುಮಾನದಿಸಿಕ್ಕಿದಿ ಬಿರುದು ಪೊತ್ತಾತೆಕ್ಕೆಪಕ್ಕೆಯ ವಿಲಾಸ ಮನಸಿನೊಳುಉಕ್ಕುವದತಿ ತೋಷಇಕ್ಕೆಲದಲಿ ಬೀಸುವ ಚಾಮರಗಳ ವಕ್ಕಣಿಸುವಸ್ತುತಿಪಾಠಕ ಜನಗಳಮಿಕ್ಕಿ ನೊಡುವ ನೋಟಕೆ ಮನಸಿನೊಳುಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2ಛತ್ರ ಚಾಮರ ತೋರಣ ಪತಾಕೆಪವಿತ್ರ ನಿಶಾನಿಧಾರಣಾಸುತ್ರಾಮಾರ್ಚಿತ ಚರಣಭಕ್ತರನುಪವಿತ್ರಗೈಯುವ ಕಾರಣಮಿತ್ರಮಂಡಳವನು ಮೀರಿ ಪೊಳೆವುತಿಹರತ್ನಖಚಿತ ಮಂಟಪದಲಿ ಮಂಡಿಸಿಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವಕೀರ್ತಿಯ ಧರಿಸಿ ಜಗತ್ರಯಪಾವನ 3ವಾಲಗಶ್ರುತಿಭೇರಿಡಿಂಡಿಮನಿಸ್ಸಾಳ ಪಟಹಭೂರಿತಾಳ ಮೃದಂಗ ರವದಿಂದಜನಜಾಲಕೂಡಿರುವಮೇಳವಿಸುತ್ತನುಕೂಲಿಸಿ ಬಹು ಬಿರುದಾಳಿಗೆ ಸಂಭ್ರಮದೇಳಿಗೆಯಿಂದಲಿಕೋಲು ಪಿಡಿದು ಓಹೋಯೆಂಬಂಥ ವಿ-ಶಾಲ ಭಕ್ತರ ಮೇಲು ಸಂತೋಷದಿ 4ದೇಶದೇಶದ ಜನರು ನಾನಾ ವಿಧಭಾಷೆ ಪ್ರವರ್ತಕರುಆಶಾಪಾಶರು ಪಾತಕಮಾನಸ-ರೀ ಸಮಯದಿ ಶ್ರೀನಿವಾಸನೆ ಎಮ್ಮಯದೋಷಗಳೆಲ್ಲವ ನಾಸಿಸು ಯೆನುತಭಿ-ಲಾಷೆಯ ಜನಗಳ ಪೈಸರದಿಂದಲಿ 5ವೇದಶಾಸ್ತ್ರಪೌರಾಣಪ್ರಜÕರು ತರ್ಕವಾದಿಪಾಠಕ ಜಾಣಸಾಧು ಕುಶಲದಿ ವಿದ್ಯಾಪ್ರವೀಣವಿನೋದ ಸಿದ್ಧ-ಸಾಧ್ಯ ಸಾದರದಿಂದ ಸರಸಕವಿ ವಾಗೀಂ-ದ್ರಾದಿಗೀರ್ವಾಣಸಮುದಾಯದಿಂದ ಕೃ-ಪೋದಯ ತೋರುತ್ತಾದಿಮೂರುತಿ ಜಯ-ನಾದದಿ ಭಕ್ತರಮೋದಪಡಿಸುತ್ತಾ6ರಂಭೆ : ನಾರಿ ಕೇಳೆ ಶ್ರೀರಮಾಧವಸ್ವಾರಿ ಪೊರಟ ಕಾರಣ ಪೇಳೆ 1ಯಾವ ರಾಜ್ಯದಿ ಪ್ರಭುದೇವಸ್ವಾರಿಯಠೀವಿಯ ಕಾಣೆ ಅಂತರ್ಭಾವವೇನೆ 2ಭೂರಿದೇಶವ ಸಂತತಪ .ವೀರವೈಷ್ಣವ ಭಕ್ತರು ಸದ್ಭಕ್ತಿಯಸಾರದಿ ನಿಲಿಸಿದರುಮಾರಜನಕನಿಗೆ ಮನನಿಲ್ಲದೆ ಸಂ-ಚಾರಕೆ ತಾ ಮೈದೋರಲು ಬೇಕೆಂ-ಬೀ ರೀತಿಗೆ ತಾ ಪೂರ್ವಸ್ಥಾನ ವಿ-ಚಾರಕೆ ಬಂದಿಹ ಕಾರಣವೀಗಲೆ 1ರಾಜ ಬಂದನೆ ಅಮ್ಮಾ ಆಶ್ರಿತಸುರ-ಭೂಜಬಂದನೆ ಅಮ್ಮಾಓಜೆಯಿಂದಲಿ ಕಾಣಿಕೆಯನ್ನು ಒಪ್ಪಿಸಿರಾಜಕದಿವ್ಯಾರತಿಯನು ಎತ್ತುತರಾಜೀವನಾಭನೆ ರಕ್ಷಿಸೆನುತ್ತಲಿಸೋಜಿಗಪಟ್ಟೆಲ್ಲಾಜನವಿರ್ದುದು 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ