ಒಟ್ಟು 19 ಕಡೆಗಳಲ್ಲಿ , 15 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಂ ಮಹದಾನಂದಂಹರಿಯ ಭಜನ ಬ್ರಹ್ಮಾನಂದಂ ಪಸತ್ಯ ನುಡಿಯುವುದೆ ಆನಂದಂ ತನ್ನಗುರ್ತ ತಿಳಿಯುವುದೆ ಆನಂದಂನಿತ್ಯನಿರ್ಮಲನ ಸತ್ಯ ಗುಣಂಗಳನುಭಕ್ತಿಯಿಂ ಭಜಿಸೆ ನಿತ್ಯಾನಂದಂಸತ್ಯ ಸತ್ಯ ಸರ್ವೋತ್ತಮ ಹರಿಯೆಂದುಅರ್ತಿಯಿಂ ಭಜಿಸೆ ಅತ್ಯಾನಂದಂ 1ಆಶ ನೀಗುವುದೆ ಆನಂದಂಭವಪಾಶಗೆಲಿಯುವುದೆ ಆನಂದಂಶ್ರೀಶ ಕೇಶವನ ಸಾಸಿರ ನಾಮದಧ್ಯಾಸದಿರುವುದೆ ಲೇಸಾನಂದಂದೋಷದೂರ ಭವಪಾಶಹರನ ಅನುಮೇಷ ಪÀಠಿಸೆ ಸ್ಥಿರದಾನಂದಂ 2ಹಮ್ಮನಳಿವುದೇ ಆನಂದಂ ತಾಸುಮ್ಮನಿರುವುದೆ ಆನಂದಂಕರ್ಮರಹಿತನಾಗಿ ಬ್ರಹ್ಮಪಿತನಪಾದಒಮ್ಮನದೊಳಗಸಮಾನಂದಂಧರ್ಮವಿಡಿದು ಪರಬ್ರಹ್ಮ ಶ್ರೀರಾಮನಮರ್ಮ ತಿಳಿಯೆ ನಿರ್ಮಲಾನಂದಂ 3
--------------
ರಾಮದಾಸರು
ಮನಸು ನಿನ್ನ ಮೇಲೆ ಬಹಳ-ಕಾಲ |ಅನುಕೂಲಿಸದೊ ಗೋಪಾಲ ಪನಿನ ಕೂಡೆ ಈಗ ಕೂಡುವೆನೆಂದರೆ ಮನೆ-|ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪಗಂಡನೆಂಬವನು ಉದ್ದಂಡ-ಎನ್ನ |ಕಂಡರೆ ಸೇರನುಭಾವಪ್ರಚಂಡ ||ಭಂಡೆ ಅತ್ತೆಯು ಲಂಡೆಅತ್ತಿಗೆಕೇಳೊ |ಕಂಡರಿಬ್ಬರನು ದಂಡಿಸುವರೊ ರಂಗ 1ನೆರೆಹೊರೆಯವರೆನ್ನನೆಲ್ಲ-ಮೈಯ |ನೆರಳ ಕಂಡರೆ ಸೇರರಲ್ಲ ||ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |ಮರೆಮಾತನಾಡಲು ವೇಳೆ ಕೂಡದೊ ರಂಗ 2ಮದುವೆ ಮಾಡುವರೊ ಮನೆಯೊಳು-ನಾಳೆ |ಅದರ ಸಂದಣಿಯ ಹೊಂಚಿನೊಳು ||ಮುದದಿಂದ ಕೂಡುವೆನಾವ ಪರಿಯೊಳು |ಮದನತಂತ್ರದಿಂದ ಪುರಂದರವಿಠಲ3
--------------
ಪುರಂದರದಾಸರು
ವಾಸುದೇವ ನಿನ್ನವರ್ಮ ಕರ್ಮಂಗಳದೇಶ ದೇಶದೊಳು ಹೇಳಲೆ ? ಪಬೇಸರಿಯದೆ ಎನ್ನ ಹೃದಯ ಕಮಲದಲ್ಲಿವಾಸವಾಗಿ ಸುಮ್ಮನಿರುವೆಯೊ ? ಅ.ಪಮತ್ಸರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳತಿದ್ದಿದ್ದು ಹೇಳಲೆ ?ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆ ಮೆಚ್ಚಿಕೊಟ್ಟದ್ದು ನಾ ಹೇಳಲೆ 1ಕಡಗೋಲು ಮಂಡೆಯಂದದಿ ಕೈಕಾಲು ಮುದುಡಿಕೊಂಡದ್ದು ನಾ ಹೇಳಲೆ ?ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ ಸುದ್ದಿ ಹೇಳಲೆ 2ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದಸುದ್ದಿ ಹೇಳಲೆ ?ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ ನಾನು ಹೇಳಲೆ 3ಕಂದನ ಮಾತಿಗೆ ಕಡುಕೋಪದಿಂ ಬಂದು ಕಂಬವನೊಡೆದದ್ದು ಹೇಳಲೆ ?ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆಧರಿಸಿದ್ದು ಹೇಳಲೆ 4ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯ ಬೇಡಿದುದನು ಹೇಳಲೆ ?ಲೀಲೆಯಿಂದಲಿ ಧರೆಯಈರಡಿ ಮಾಡಿದ ಜಾಲತನ್ವನುನಾನು ಹೇಳಲೆ5ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯ ಪಿಡಿದದ್ದು ಹೇಳಲೆ ?ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡ ದೋಷತನವ ನಾನು ಹೇಳಲೆ 6ತಾಯ ಮಾತನೆಕೇಳಿ ತಮ್ಮನ ಒಡಗೂಡಿಅಡವಿಯೊಳಿದ್ದುದು ಹೇಳಲೆ ?ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ ನೆರೆದದ್ದು ಹೇಳಲೆ ? 7ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ(ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ) ದುರುಳತನದ ಸುದ್ದಿ ಹೇಳಲೆ 8.............................................................................................................................................................................. 9ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವ ಪಿಡಿದದ್ದು ಹೇಳಲೆ ?ಆಯತದಿಂದ ಕಲಿಯಲಿದ್ದು ಮನುಜರ ಮಾಯವ ತೋರಿದ್ದು ಹೇಳಲೆ 10ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರಿವಾಗಿನಿಂತದ್ದು ಹೇಳಲೆ ?ಕರುಣದಿಂ ಭಕುತರ ಪುರಂದರವಿಠಲನೆಂದು ನಾ ಹೇಳಲೆ 11 *
--------------
ಪುರಂದರದಾಸರು
ಸಾಧು ಸಾಧುಗಳೆಂದು ಎಂಬರೆ ನಿಮ್ಮನುಸಾಧುಗಳೇ ನೀವು ಸಾಧುಗಳೇಸಾಧುಗಳಾದರೆ ವಂದಿಸೆ ಎಲ್ಲರುಸಾಧುಗಳೇ ನೀವು ಸಾಧುಗಳೇಪನೀಚನು ಮೇಲಕೆ ಹೊಲಸನೆಸದರೂಚಲಿತನಾಗದವ ಸಾಧುಇನ್ನು ಕೃತಾರ್ಥನು ಪಾವನನಾದೆನುಎನ್ನುತಲಿರುವನೆ ಸಾಧು1ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿನೋಡೆತಳ್ಳಿಹೋಗದಿಹನೆ ಸಾಧುರಾಯ ಸದ್ಗುರು ಲೀಲೆಯಿದೆನ್ನುತಶಾಂತನಾಗಿರೆ ಸಾಧು2ತನ್ನ ಸತಿಯಳು ತನ್ನಯ ಮುಂದೆ ರಮಿಸಲುತಯಾರಾಗಿಹನವ ಸಾಧುಇನ್ನು ನಾ ಪುರುಷಲ್ಲಸ್ತ್ರೀಯು ತಾನಲ್ಲೆಂದುಸುಮ್ಮನಿರುವನೆ ಸಾಧು3ದೇಹವ ಕೊಯಿದು ಕೊಡೆಂದೆನೆದೇಹವ ಕೊಯ್ದಿಕ್ಕುವನೆ ಸಾಧುಮಹಾ ಸದ್ಗುರುನಾಥನು ದೃಢವನೋಡುವೆನೆಂದು ಮನಮಿಸುಕದಿಹನೆ ಸಾಧು4ಎತ್ತೆತ್ತ ಏಕೋ ದೇವನು ಆಗಿನೋಡುವನು ಸಾಧುಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆಸತ್ಯದಿಂದಿರುತಿಹ ಸಾಧು5
--------------
ಚಿದಾನಂದ ಅವಧೂತರು