ಒಟ್ಟು 34 ಕಡೆಗಳಲ್ಲಿ , 22 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ 1 ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ2 ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ3 ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ 4
--------------
ಶಾಮಶರ್ಮರು
ಪಾದ | ಸೋಕಿದ ಕೊನೆಧೂಳಿ ಪ ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ | ಬೇಕಾದ ಪದವಿಯ ಕೊಡುವನು ಶ್ರೀ ಹರಿ ಅ.ಪ ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ | ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ || ಅದ್ವೈತಮತÀ ತಮನಿಧಿ ನಿಶಿಕುಠಾರ | ವಿದ್ಯಾರಣ್ಯವ ಗರುವಕೆ ಪರಿಹಾರ 1 ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ | ವಿಸ್ತರಿಸಿ ಇರಲು ಬೇಗದಲಿ || ಚಿತ್ರವಲ್ಲಭನÀ ಸೇವೆಯ ಮಾಡಿ ಟೀಕಂಗಳ || ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ 2 ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ | ಬಿಂದು ಮಾತ್ರದಿ ನೆನೆಯೆ || ಮಂದ ಮತಿಯಾದರೂ ಅಜ್ಞಾನನಾಶವು | ಸುಂದೇಹÀವಿಲ್ಲವು ಅವಾವ ಕಾಲಕ್ಕೆ 3 ಜ ಎಂದು ಪೊಗಳಲು ಜಯಶೀಲನಾಗುವ | ಯ ಎನ್ನೆ ಯುಮರಾಯನಂಜುವನು || ತೀ ಎಂದು ಪೊಗಳಲು ತೀವ್ರ ಪದವಿ ಉಂಟು | ರ್ಥ ಎಂದು ಪೊಗಳಲು ತಾಪತ್ರಯುಪಶಮನ 4 ಯೋಗಿ ಅಕ್ಷೋಭ್ಯತೀರ್ಥರ ಕರಕಮಲಸಂಜಾತ | ಭಾಗವತರ ಸುಪ್ರೇಮ || ಕಾಗಿಣಿ ತೀರದ ಮಳಖೇಡ ನಿವಾಸಾ | ಶ್ರೀ ಗುರು ವಿಜಯವಿಠ್ಠಲ ಸೇವಕ ಭಕ್ತಾ 5
--------------
ವಿಜಯದಾಸ
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಬಾರೈ ಪ್ರಭುವೆ ಬಾರೈ ಪ್ರಭುವೆ ಪ ತೋರೈ ಹರಿಪಾದವ ಗುರುವೆ ಕಮಲ ನಂಬಿದೆ ಭವ ಬಂಧನ ಹರಿಸಿ ಕರುಣದಿ ಜವನ ಭವನ ಬಿಡಿಸೋ ದೀನ ದಿವಿಜ ತರುವೆ1 ಹರಿಕಥಾ ಸುಧಾ ಸಾರ ವರ ರಹಸ್ಯವ ಪೊರೆ ಕರುಣದಿಂದಲರುಹಿಸದಾ ಪೊರೆಯೋ ವಿಭುವೆ 2 ಸುಂದರ ಸುಪ್ರೇಮ ಪಾತ್ರ ಕಂದನನುದಾಶಿಸುವದು ತಂದೆಗೆ ಥರವೆ 3
--------------
ಶಾಮಸುಂದರ ವಿಠಲ
ಭಕ್ತ ಮಂದಾರಿಣಿ ಭವಭಯನಿವಾರಿಣಿ ಭಕ್ತಿಮುಕ್ತಿ ಪ್ರದಾಯಿನಿ ತ್ರಿಭುವನೈಕ ಜನನಿ ಪ. ಭುವನತ್ರಯಮೋಹಿನಿ ಭಾನುಕೋಟಿಪ್ರಕಾಶಿನಿ ಭೂರಿಭೂಭುಜ ಸೌಭಾಗ್ಯದಾಯಿನಿ ಪಾಹಿಮಾಂ ಜನನಿ ಅ.ಪ. ಸಾಮಜಾಧಿಪಗಾಮಿನಿ ಕಾಮಿತಾರ್ಥಪ್ರದಾಯಿನಿ ರಾಮಣೀಯ ಸ್ವರೂಪಿಣಿ ಕಾಮಜನನಿ ಕಲುಷವಿಭಂಜಿನಿ 1 ಕನಕವಸನೆ ಕವಿಮನೊಲ್ಲಾಸಿನಿ ಸುಮನಸವರ ಪರಿತೋಷಿಣಿ ಕೋಮಲತರ ಕೋಕಿಲ ಮೃದುಭಾಷಿಣಿ 2 ಕಮಲ ಬಾಂಧವ ವಂಶ ಸಂಭವ ರಾಮಚಂದ್ರ ಸುಪ್ರೇಮಾಕಾಂಕ್ಷಿಣಿ 3 ವನಜ ಸಂಭವ ಸನ್ನುತೆ ಕನಕಭೂಷಣ ಭೂಷಿತೆ ಅನಿಲನಂದನ ಸೇವಿತೇ ಘನಕರುಣಾರಸಾನ್ವಿತೇ 4 ಅನಘ ಸದ್ಗುಣಭೂಷಿತೆ ಅನಿಮಿಷಾಧಿಪ ಪೂಜಿತೆ ಜನಕ ಭೂಪತಿ ಪೋಷಿತೇ ಘನಶೇಷಾದ್ರೀಶ ದಯಿತೆ5
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ರಘುರಾಮಗೆ ಜಯಮಂಗಳಂ ಗುಣಧಾಮಗೆ ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ. ರಾಮಗೆ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೆ ಕಾಮಿತಾರ್ಥಪ್ರದಾತಗೆ ವರರಾಮಣೀಯಕ ರೂಪಗೆ 1 ಶ್ರೀಶಗೆ ಜಗದೀಶಗೆ ಭಯನಾಶಗೆ ಸರ್ವೇಶಗೆ ದಾಸಜನಮನೋಲ್ಲಾಸ ಲಕ್ಷ್ಮೀಶಕೇಶವ ಮೂರ್ತಿಗೆ 2 ಮಾರುತಾತ್ಮಜಪÀರಿಸೇವ್ಯಗೆ ನತಪಾರಿಜಾತ ಸಮಾನಗೆ ವಾರಿಜಾಯತನೇತ್ರ ಶ್ರೀಶೇಷಶೈಲ ನಿವಾಸಗೆ 3
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ರಘುರಾಮಗೇ ಜಯಮಂಗಳಂ ಗುಣಧಾಮಗೆ ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ. ರಾಮಗೇ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೇ ಕಾಮಿತಾರ್ಥಪ್ರದಾತಗೆ ವರ ರಮಣೀಯಕರೂಪಗೆ 1 ಶ್ರೀಶಗೆ ಜಗಧೀಶಗೆ ಭಯನಾಶಗೇ ಸರ್ವೇಶಗೆ ರಾಸಮನೋಲ್ಲಾಸ ಲಕ್ಷ್ಮೀಶ ಕೇಶವಮೂರ್ತಿಗೆ 2 ಮಾರುತಾತ್ಮಜ ಸೇವೆಗೇ ನತಪಾರಿಜಾತ ಸಮಾನಗೆ ವಾರಿಜಾಯತನೇತ್ರಗೇ ಶ್ರೀ ಶೇಷಶೈಲನಿವಾಸಗೆ 3
--------------
ನಂಜನಗೂಡು ತಿರುಮಲಾಂಬಾ
ಯಕ್ಷಿಣೀ ಸರ್ವಲಕ್ಷ್ಮಿಣೀ ರಕ್ಷಿಸು ಮಗನ ಅಪೇಕ್ಷವ ಪೂರೈಸಿ ಪ ಕಂಟಕ ಸಕಲಪೂರ್ಣ ಕರುಣವಿಟ್ಟು ಮಾಡು ಸಫಲ ತ್ರಾಣಿ ಕರುಣದಿ ಬಡತನವಖಿಲ ಜಾಣೆ ಪರಿಹರಿಸಿ ಕೊಡು ಎನಗೆ ಸುಫಲನ ಆಹ ಮೊರೆಯಿಟ್ಟು ಬೇಡುವೆ ಪರಮಪಾವನೆ ಎನ್ನ ಇರವ ತೀರಿಸು ತಾಯಿ ಸರುವ ಸಿದ್ಧಾಂತಳೆ 1 ಮನುಮುನಿಗಳಿಗಾದಿ ಒಲುಮೆ ನೀನು ಘನ ಸಿದ್ಧಿನಿತ್ತು ಸದ್ಧರ್ಮಿ ಜಾಣ ರೆನಿಸಿದಿ ದಯದಿ ಸುಪ್ರೇಮಿ ಮಾಣ ದನುಪಮಮತಿ ನಿಜಮಹಿಮೆ ಆಹ ವನರುಹ ಬ್ರಹ್ಮಾಂಡ ಘನ ಘನ ಎನುವಂಥ ಅನುಪಮಪದದೆನ್ನ ಕನಿಕರದಿಂ ಕಾಯೆ 2 ಸರುವ ಸಿಧ್ದಿಯ ನೀಡಿ ಕರುಣಿ ಎನ್ನ ಸರುವ ಶುದ್ಧವೆನಿಸೆ ಜನನೀ ಪೂರ್ಣೆ ಸರ್ವಜ್ಞೆ ಪಾಲಿಸೆ ನಿಪುಣೆ ವಾಣಿ ಸರ್ವಮಂಗಲಿ ಸುಪ್ರವೀಣೆ ಆಹ ಸರ್ವಶಕ್ತ ಜಗದಾರ್ಯ ಶ್ರೀರಾಮನ ಭಾರ್ಯೆ ಸಕಲ ಐಶ್ಚರ್ಯದಿಂ ಪೊರೆಯೆನ್ನ 3
--------------
ರಾಮದಾಸರು
ಯಾತಕಿದೆಲೋ ಪ್ರಾಣಿ ಪ್ರೇಮದ | ರೀತಿಲ್ಲದ ಭಜನೀ ಪ ಪ್ರೇಮವಿಲ್ಲದ ಸ್ನಾನ ಸಂಧ್ಯಾನಾ | ಪ್ರೇಮವಿಲ್ಲದ ಜಪವೃತ ಅನುಷ್ಠಾನಾ 1 ಪ್ರೇಮವಿಲ್ಲದ ಶೃತಿ ಶಾಸ್ತ್ರಜ್ಞಾನಾ | ಪ್ರೇಮವಿಲ್ಲದ ಕವಿತ್ವದ ತ್ರಾಣಾ 2 ಬೆರೆತರೆ ಹರಿಭಕುತಿಗೆ ಸುಪ್ರೇಮಾ | ಗುರುಮಹಿಪತಿ ಪ್ರಭು ವಲಿವನು ನೇಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಕ್ಷಿಸು ಕಮಲಾಕ್ಷ ಶ್ರೀ ವಕ್ಷ ಪ ರಕ್ಷಾ ಶಿಕ್ಷಾಶ್ರಿತಜನ ಸಂರಕ್ಷ ಅಕ್ಷಯ ಸುರಪಕ್ಷ ಅಧ್ಯಕ್ಷ ಅ.ಪ. ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಸಿಕ್ಕಿ ಪೇಚಾಡುತಲಿರೆ ತೋರದು ಯೋಚನೆ ಶ್ರೀ ಚರಣಕೆ ಶಿರಬಾಗುವೆ ಶ್ರೀಕರ ಸೂಚಿಸಿ ಘನ ಭಕ್ತಿ ವಿರಕ್ತಿ 1 ಆರ್ತ ಬಾಂಧವನೆಂದು ಕೀರ್ತಿ ಪೊತ್ತವನೆಂದು ಅರ್ತಿಯಿಂದಲಿ ಬಂದೆ ಸುತ್ತುತೆ ತಂದೆ ಕೀರ್ತಿಯ ಉಳುಹಿಕೊ ಕೀರ್ತಿಯ ತಂದುಕೊ ಭಕ್ತವತ್ಸಲ ಸ್ವಾಮಿ ಸುಪ್ರೇಮಿ 2 ಜನನಿ ಜನಕರು ಅನುಜಾ ತನುಜರು ಅನುವಾಗಿದ್ದರೆ ಎಲ್ಲ ನಮ್ಮವರೆ ಅನುವು ತಪ್ಪಿದರಾರು ಕಣ್ಣಲಿ ನೋಡರು ಅನಿಮಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ರಾಮಭಜೇ ತೇ ಪದಯುಗಳಂ ಸೀತಾ ಪ ರಾಮಭಜೇ ತೇ ಪದಯುಗಳಂ ರಾಮ ಸುಂದರ ಘನಶ್ಯಾಮ ರಘೂದ್ವಹ ಅ.ಪ ದಶರಥ ಹೃದಯಾನಂದಕರಂ ತ್ರಿ ದಶಗಣ ಚಿತ್ತಾಮೋದಕರಂ 1 ಪೂರಿತ ಕೌಶಿಕಜನಂ ಸಂ ತಾರಿತ ಗೌತಮ ಲಲನಾಂ 2 ಖಂಡಿತ ಶಂಕರಚಾಪಂ ಪರಿ- ದಂಡಿತ ಭಾರ್ಗವ ಕೋಪಂ 3 ಸ್ವೀಕೃತ ಜಾನಕೀಹೃದಯಂ ದೂ ರೀಕೃತ ಪಾತಕನಿಚಯಂ 4 ಪಾಲಿತ ಮಾತಾಪಿತೃ ವಚನಂ ಸಂ ಲಾಲಿತ ಮುನಿಜನ ಸ್ತುತಿರಚನಂ 5 ಭರತ ಸಮರ್ಪಿತ ನಿಜರಾಜ್ಯಂ ಮುನಿ ವರಭಾರದ್ವಾಜಾರ್ಪಿತ ಭೋಜ್ಯಂ 6 ದಂಡಕಾರಣ್ಯಂ ಪಾವನಚರಣಂ ಉ- ದ್ದಂಡ ವಿರಾಧಾ ಪಾತಕಹರಣಂ 7 ಕುಂಭಜಾರ್ಪಿತ ಶರಕೋದಂಡ ಸಂ ರಂಭ ನಿರ್ಜಿತ ರಾಕ್ಷಸದಂಡಂ 8 ಪಂಚವಟೀತಟ ಕೃತವಾಸಂ ದೃ ಗಂಚಲ ಧೃತಗಜದುಲ್ಲಾಸಂ 9 ಶೂರ್ಪನಖೀ ವಚನಾಲೋಲಂ ಸಹ ಜಾರ್ಪಿತ ವಿವಿಧಾಯುಧ ಜಾಲಂ 10 ರೂಪನಿರ್ಜಿತ ಸುಮಬಾಣಾಂಗಂ ವಿ ರೂಪಿತ ದುಷ್ಟ ಶೂರ್ಪನಖಾಂಗಂ 11 ಖರತರ ಖರದೂಷಣಕಾಲಂ ಸುರ ನರವರ ಮುನಿಗಣ ಪರಿಪಾಲಂ 12 ಮಾಯಾಮೃಗಾರ್ಪಿತ ಬಾಣವರಂ ಜ- ಟಾಯು ಸಂಪಾದಿತ ಲೋಕವರಂ13 ರಾವಣಹೃತ ನಿಜಪತ್ನೀಕಂ ಲೋ- ಕಾವನಗತ ಕೋಪೋದ್ರೇಕಂ14 ಸಾಧಿತ ಶಬರೀ ಮೋಕ್ಷಕರಂ ಕ- ಬಂಧ ಬಂಧನ ಮೋಚನ ಚತುರಂ 15 ವಾತ ತನೂಭವ ಕೃತಸ್ತೋತ್ರಂ ಪಂ ಪಾತಟ ನಿರ್ಮಿತ ಸುಕ್ಷೇತ್ರಂ 16 ಶಿಕ್ಷಿತ ಸಂಕ್ರಂದನ ತನುಜಂ ಸಂ- ರಕ್ಷಿತ ಚಂಡಕಿರಣ ತನುಜಂ 17 ಸೀತಾಲೋಕನ ಕೃತಕಾಮಂ ನಿಜ ದೂತಾಮೋದನ ಸುಪ್ರೇಮಂ 18 ನಿಜಕರ ಭೂಷಣ ದಾತಾರಂ ಧುರ ವಿಜಯ ವನಾಲಯ ಪರಿವಾರಂ 19 ಧೂತಾಹೃತ ಶುಭದೃಷ್ಟಾಂತಂ ವಿ- ಜ್ಞಾತ ನಿಜಸ್ತ್ರೀ ವೃತ್ತಾಂತಂ 20 ಭೀಷಣ ಜಲನಿಧಿ ಬಂಧಕರಂ ವಿ ಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲಧಿಂ ಸಂ- ತೋಷಿತ ದೈವತಪರಿಧಿಂ 22 ಸೀತಾ ಸಮಾಶ್ರಿತ ವಾಮಾಂಕಂ ಪರಿ- ಪಾತಕ ನಿಜನಾಮಾಂಕಂ 23 ಸ್ವೀಕೃತ ಸಾಕೇತಾವಾಸಂ ಅಂ- ಗೀಕೃತ ಮಾನುಷವಿಲಾಸಂ 24 ವರವ್ಯಾಘ್ರ ಪ್ರಭೂಧರ ಕಲ್ಪತರುಂ ಶ್ರೀ ವರದವಿಠಲಮತಿಶಯ ರುಚಿರಂ 25
--------------
ವೆಂಕಟವರದಾರ್ಯರು
ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ. ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ ರಮಣನೆ ನುಡಿ ನುಡಿ1 ಇನಕುಲಮಂಡನ ವನರುಹಲೋಚನ ಜನಕಜಾ ಸುಪ್ರೇಮನೆ ಚಿನ್ಮಯರೂಪನೆ ಮನುಮುನಿ ಸೇವ್ಯನೆ 2 ಸುರನರ ಪೂಜಿತ ಸರಸಿಜ ಭವಪಿತ ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ ವರಶೇಷಗಿರಿದೊರೆ 3
--------------
ನಂಜನಗೂಡು ತಿರುಮಲಾಂಬಾ
ಲಾಲಿಮನುಕುಲತಿಲಕ ಮದನಾರಿವಿನುತ ಲಾಲಿಜನಕಜಾಮಾತ ಜಾನಕೀ ಸಮೇತ ಪ. ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ ಕೌಶಿಕಕ್ರತುಪಾಲ ಕರುಣಾಲವಾಲ ಪೋಷಿತಾಮರಜಾಲ ಬಾಲೇಂದು ನಿಭಫಾಲ ದಶಕಂಠಮುಖಕಾಲ ಜಾನಕೀಲೋಲ 1 ನಾಕೇಶನುತಚರಣ ನಕ್ತಂಚರಶಮನ ಶ್ರೀಕಾಮಿನೀಸದನ ರಾಜೀವನಯನ ಲೋಕನಾಯಕ ಸರ್ವ ಲೋಕಪಾಲಕ ದಿವ್ಯ ಸಾಕೇತಪುರನಿಲಯ ಸನಕಾದಿಗೇಯ 2 ಈಶಸನ್ನುತ ನಾಮ ನೀಲಮೇಘಶ್ಯಾಮ ಶೇಷಾದ್ರಿಶಿಖರಧಾಮ ಶ್ರೀರಾಮನಾಮ ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ ಕೋಸಲಾಧಿಪರಾಮ ಪರಿಪೂರ್ಣಕಾಮ 3
--------------
ನಂಜನಗೂಡು ತಿರುಮಲಾಂಬಾ
ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ
ಶ್ರೀ ಸತ್ಯಪರಾಯಣರು ನೋಡು ಮನವೆ ಸತ್ಯಪರಾಯಣರ ಪದಗಳ ಬೇಡು ಬೇಡು ಬೇಡಿದಿಷ್ಟವೀವ ಯತಿಗಳ ಪ ಮಾರುತಿಯ ಬಲದಿ ದಕ್ಷಿಣ ದೇಶವ ಜೈಸಿದಾ ಸಾರಸಚ್ಛಾಸ್ತ್ರವನ್ನು ಸ್ಥಿರವಗೊಳಿಸಿದಾ ನಾರಾಯಣನ ಜಗತ್ಕಾರಣನೆನಿಸಿದಾ ಧೀರ ಸತ್ಯಸಂತುಷ್ಟ ಕುವರನೆನಿಸಿದಾ 1 ಭೀಮಸೇನ ಸನ್ಮತ ಸರಿಯಾಗಿ ನಡಿಸಿದಾ ಪ್ರೇಮದಿಂದ ರಘುಜಿಗೆ ವನಮಾಲೆ ಮುಡಿಸಿದಾ ತಾಮಸ ಮತದವರ ಮತವ ಮುರಿದು ಹಾಕಿದಾ ರಾಮನ್ನಾಮ ನುಡಿಸಿ ನುಡಿಸಿ ಹರುಷಬಡಿಸಿದಾ2 ವರ ಕದರುಂಡಲಗೀಶನ್ನೊಡೆಯ ರಾಮನ್ನ ನಿರುಪಮಾನಂದ ತೀರ್ಥ ಸುಪ್ರೇಮನ್ನ ಕರುಣದಿಂದ ಶಿಷ್ಯನಾಗಿ ಸಂದೋಹಪಾಲನ್ನ ಸ್ಮರನ ಜನಕಾ ಪಾಂಡುರಂಗನ ಸ್ಮರಿಪ ಲೋಲನ್ನ 3
--------------
ಕದರುಂಡಲಗೀಶರು