ಒಟ್ಟು 19 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ತುರುಕರು ಕರೆದರೆ ಉಣಬಹುದಣ್ಣ |ತುರುಕರು ಕರೆದರೆ ಉಣಬಹುದು .......... ಪ.ಕರ ಕರೆ ಚಂಚಲ ಮಾಡದಿರಣ್ಣ |ತುರುಕರು ಕರೆದರೆ ಉಣಬಹುದು ಅಪತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು |ತುರುಕರುವಿಂದ ಹೋಹದು ಎಂಜಲವು ||ತುರುಕರು ಕಂಡರೆಸರಕನೆ ಏಳಬೇಕು |ತುರುಕರುವಿನ ಮಂತ್ರ ಜಪಿಸಬೇಕಣ್ಣ.............. 1ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು |ತುರುಕರುವಿಂದ ನರಕ ದೂರಪ್ಪುದು ||ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು |ಗರತಿಯರೆಲ್ಲ ಮುತ್ತೈದೆಯರಣ್ಣ.......... 2ತುರುಕರುವಿನ ನೀರೆರಕೊಂಡ ನಮ್ಮ ದೇವ |ಉರವಕೊಂಡ ನೀರೆಲ್ಲ ಸನಕಾದಿಗೆ ||ಬೆರಕೆಯ ಮಾಡಿದ ಪುರಂದರವಿಠಲ |ಅರಿಕೆಯ ಮಾಡಿದ ಹರಿದಾಸರಿಗೆಲ್ಲ......... 3
--------------
ಪುರಂದರದಾಸರು
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ 3
--------------
ಪ್ರಸನ್ನವೆಂಕಟದಾಸರು