ಒಟ್ಟು 18 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ಬಾರ ಕುರಂಗನಯನೆ ಮಂಗಳಾಂಗನ ಕರೆದುತಾರೆ ಪ ಅಂಗ ಸಂಗ ಸುಖವನಿತ್ತು ತಂಗೀ ಮನವ ಸೆಳೆದುಕೊಂಡ ಅ.ಪ ಸಂಚಿನಿಂದ ಒಳಗೆಬಂದು ಮಂಚಕೆನ್ನ ಗಂಡನ ಕಟ್ಟಿ ಮಿಂಚಿನಂತೆ ತೋರಿಪೋದ 1 ಕಂಚುಕದೊಳಿರುವ ಪಣ್ಗಳ ವಂಚಿಸದೆ ಕೊಡುಯೆಂದೆಂಬ ಸಂಚಿತಾರ್ಥದ ಪುಣ್ಯವೆಂದು ವಿರಿಂಚಿಪಿತನು ರೋಜಪಿಡಿದ 2 ಉಲ್ಲಸದೊಳಗಾಲಿಂಗಿಸುತ ಫುಲ್ಲಲೋಚನ ಪರವಶಗೈದ 3 ಮುನಿದುನಾನು ನಿಂದಿರಲು ಕನಿಕರದಿಂದ ಕುಣಿದು ಹಾಡಿ ಮನವನುಬ್ಬಿಸಿ ತನುವಮರೆಯಿಸಿ ಇವನತೆರದೊಳೆನ್ನನಾಳ್ದ 4 ಮೊಸರ ಕಡೆದು ಬೆಣ್ಣೆತೆಗೆಯೆ ಮೆಲ್ಲನೆ ಬೆನ್ನಹಿಂದೆ ಬಂದು ಅಸಮರೂಪ ತೋರುತಾಗ ಒಸೆಯುತದನು ಕದ್ದು ಮೆದ್ದ 5 ಹೋರಿಯೆನ್ನೊಡೆ ದಾರಿಬಿಡದೆ ಓರಿಗೆಯರ ಕಂಡು ಜಾರಿದ 6 ಕೊಳಲನೂದಿ ಒಳಗೆ ಬಂದು ಲಲನೆಯೇಳೆ ಎಂದವನ 7 ನೀರಮುಳಗಿ ಭಾರಹೊತ್ತು ಕೋರೆ ಮಸೆದ ನಾರಸಿಂಹ ಬುದ್ಧ ಕಲ್ಕಿ 8 ಪಕ್ಷಿವಾಹನ ಹೆಜ್ಜಾಜಿ ಯಧ್ಯಕ್ಷ ಚನ್ನಕೇಶವದೊರೆಯೆ ರಕ್ಷಿಸೆಂದು ನಂಬಿದವರ ಪಕ್ಷನಾಗಿ ಪಾಲನೆಗೈವ 9
--------------
ಶಾಮಶರ್ಮರು
ಶ್ರೀದ ವಿಠಲ ಸರ್ವಾಂತರಾತ್ಮಾ ನೀ ದಯದಿ ಒಲಿದು ನಿತ್ಯದಲಿ ಕಾಪಾಡುವುದು ಪ ಚಿಕ್ಕ ತನದಲಿ ತಂದೆತಾಯಿಗಳು ಒಲಿದು ಪೆಸ ರಿಕ್ಕಿ ಕರೆದರು ನಿನ್ನ ದಾಸನೆಂದೂ ಮಕ್ಕಳನು ತಾಯ್ಸಲಹುವ ತೆರದಿ ಸಂತೈಸು 1 ಶುಕನಯ್ಯ ನಿನ್ನ ಪದಭಕುತಿ ತ್ವತ್ಕಥಾಶಾಸ್ತ್ರ ಯುಕುತಿವಂತರ ಸಂಗಸುಖವನಿತ್ತು ವಕಿತನಯ ನಿನ್ನವರ ಮುಖದಿಂದ ಪ್ರತಿದಿನದಿ 2 ಮಾತರಿಶ್ವಪ್ರಿಯ ಸುರೇತರಾಂತಕನೆ ಪುರು ಹೂತನಂದನಸಖ ನಿರಾತಂಕದಿ ನೀ ತೋರು ಮನದಿ ಸಂಪ್ರೀತಿಯಿಂದಲಿ ಒಲಿದು ಹೋತಾಹ್ವಗುರು ಜಗನ್ನಾಥ ವಿಠಲ ಬಂಧು 3
--------------
ಜಗನ್ನಾಥದಾಸರು
ಶ್ರೀಹರಿಯ ಮಂಗಳ ಪದಗಳು ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ಪ ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರ ಪಾರ್ಥಸಾರಥಿ ಹರಿಗೆ ಅ.ಪ. ನೀರೊಳು ಪೊಕ್ಕವಗೆ ಕಡಲೊಳು ಭಾರವ ಪೊತ್ತವಗೆಮೂರು ಪಾದದಿ ಸರ್ವಧಾರುಣಿ ಅಳೆಯುತಧೀರ ಬಲಿಯ ಮನೆ ದ್ವಾರ ಕಾಯ್ದವಗೆ 1 ಕ್ಷತ್ರಿಯರ ಗೆಲಿದವಗೆ ಗಾರ್ಜಿತ ಸತ್ರವ ಕಾಯ್ದವಗೆಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದಬತ್ತಲೆ ಕುದುರಿಯ ಹತ್ತಿ ಮೆರೆದವಗೆ 2 ಸೃಷ್ಟಿಯು ಇಲ್ಲದವಗೆ ಜಗವನು ಸೃಷ್ಟಿ ಪಾಲಿಪಗೆಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ 3 ನಂದಗೋಕುಲದಲ್ಲೆ ಬೆಳೆಯುವ ಮಂದಜಾಕ್ಷಿಯರಲ್ಲೆಒಂದೊಂದು ಆಟಗಳಾಡಿ ಸುಖವನಿತ್ತನಂದ ಬಾಲಕನಾದ ಇಂದಿರೇಶನಿಗೆ4
--------------
ಇಂದಿರೇಶರು