ಒಟ್ಟು 21 ಕಡೆಗಳಲ್ಲಿ , 15 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದರ ಧರನೆಂಬೊ ಕೋಲಸುಂದರಾಂಗನೆಂಬೊ ಯಾದವೇಂದ್ರಚಂದ್ರನೆಂಬೊ ಕೋಲ ಪಿಡಿದು ನಿಂತಾರು ಪ. ಹದಿನಾರು ಸಾವಿರ ಮಂದಿಮುದದಿಂದ ಹೆಜ್ಜೆಯನಿಕ್ಕುತ ಚದುರೆಯರು ಕೋಲಾಟಕ್ಕಾಗಿಒದಗಿ ನಿಂತಾರು1 ನೂರು ಮಂದಿ ನಾರಿಯರೆಲ್ಲಹಾರಭಾರ ಅಲಿಯುತಲೆಮುರಾರಿಯ ಮುಂದೆಲ್ಲಸಾಲು ಸಾಲಿಲೆನಿಂತರು 2 ನೀಲ ವರ್ಣನ ಮಡದಿಯರೆಲ್ಲಮೇಲಾದ ಕೋಲಾಟಕ್ಕಾಗಿಬಾಲೆಯರು ಬಂದೆಲ್ಲಸಾಲಾಗಿ ನಿಂತರು3 ಚಕ್ರಧರನ ಮಡದಿಯರೆಲ್ಲಚಕ್ಕನೆ ಕೋಲಾಟಕ್ಕಾಗಿನಕ್ಕು ಮುಗುಳನಗೆಯಸಖ್ಯದಲೆ ನಿಂತರು 4 ಪ್ರೇಮದಿಂದ ನಾರಿಯರೆಲ್ಲಭಾವೆ ರುಕ್ಮಿಣಿಗೆ ಎರಗಿಶ್ರೀಮಂತ ಧೀಮಂತ ನಮ್ಮಸ್ವಾಮಿ ಗೆಲಿಸೆಂದು 5 ಅಂಗನೆಯರು ರಾಮೇಶನ ಮಂಗಳ ಮಹಿಮೆಯಬೆಳದಿಂಗಳ ತುಂಬಿದರುಮೋಹನಾಂಗ ಚಂದ್ರಗೆ 6
--------------
ಗಲಗಲಿಅವ್ವನವರು
ಮುದವ ಬೀರುವುದೊ | ಬದರಿಯ ನಿಲಯನೇ ಪ ಮುದವ ಬೀರುವುದು | ಬದರಿಯ ನಿಲಯ ಶ್ರೀವಿಧಿ ವಿಬುಧಾದ್ಯರ | ಮುದಕೆ ಕಾರಣನೇ ಅ.ಪ. ಪಾದ ಉರ | ಮಂದೀರದಲಿ ಧರಸುಂದರಾಂಗನೆ | ಗೋವಿಂದ 1 ಇಂದ್ರ ನಿನ್ನಯ ತಪ | ಕುಂದೀಸೆ ಅಪ್ಸರವೃಂದಾ ಕಳುಹೆ | ಗೋವಿಂದ ||ಚೆಂದಾದುಡಿಗೆ ಉಟ್ಟ | ಅಂದಾಭರಣ ತೊಟ್ಟಮಂದಾಗಮನೆರೆಲ್ಲ | ಗೋವಿಂದ || ಅಂದಿಗೆ ಕಾಲ್ಗೆಜ್ಜೆ ದಂಧಣಿರೆನ್ನ ಕುಣಿದುನೊಂದು ಶ್ರಮಗಳಿಂದ | ಗೋವಿಂದ ||ಕಂದರ್ಪ ಪಿತ ತನ್ನ | ಸುಂದರೂರುವಿನಿಂದಸುಂದರಿಯನ್ನೆ ಕೊಟ್ಟ | ಗೋವಿಂದ 2 ಮಂದಗಮನೆರೆಲ್ಲ | ಸುಂದರಿಯನ್ನೆ ಕೊಂಡುಇಂದ್ರಂಗೆ ಇತ್ತರು | ಗೋವಿಂದ ||ಎಂದೆಂದು ಕಾಣದ | ಸುಂದರಾಕೃತಿ ಕಂಡು ಕಂದೀತು ಇಂದ್ರ ಮುಖ | ಗೋವಿಂದ ||ವೃಂದಾರಕೇಂದ್ರನು | ಅಂದು ಪರಾಶರಜಗೊಂದಿಸಿ ಕ್ಷಮೆಯನು | ಬೇಡಿದ ||ಇಂದ್ರಾವರಜ ಗುರು | ಗೋವಿಂದ ವಿಠಲನದ್ವಂದ್ವ ಪಾದಂಗಳ್ಗೆ | ಶರಣೆಂದ 3
--------------
ಗುರುಗೋವಿಂದವಿಠಲರು
ಯಂತ್ರೋದ್ಧಾರಕ ಪ್ರಾಣರಾಯ ಎನ್ನ ಚಿಂತೆ ಹರಿಸೋ ಪ. ಅಂತರಂಗದಿ ಹರಿಯ ಧ್ಯಾನವ ಮಾಡಿಸೋ ಅ.ಪ. ನಿನ್ನ ನೋಡಿ ಧನ್ಯಳಾದೆನೊ ಹೊನ್ನು ಹನುಮನೆ ಎನ್ನ ಪಾಪ ಹರಿಸಿ ಕಾಯೊ ಘನ್ನ ಹನುಮನೆ 1 ಒಂದು ಅರಿಯದ ಮಂದಮತಿಯಳ ಬಂದು ಕಾಯೋ ಬಂಧನವ ಬಿಡಿಸಿ ಕಾಯೋ ಸುಂದರಾಂಗನೆ 2 ತುಂಗಾತೀರದಿ ನಿಂತಿರುವಿ ಮಂಗಳಾಂಗನೆ ಮಂಗಳ ರಾಮನ ಧ್ಯಾನವ ಮಾಡಿಸು ಎನಗೆ 3 ಹಂಪಿಯಲಿ ನಿಂತಿರುವಿ ಸೊಂಪಿನಿಂದಲಿ ಸಂಪಿಗೆ ನೆರಳಲಿ ನೋಡಿದಿ ರಾಮರ ಧ್ಯಾನ ಮಾಡುತ 4 ರಾಮ ದೂತನೆ ಎನ್ನ ಮೊರೆಯ ಲಾಲಿಸಿ ಪಾದ ಬೇಗ ತೋರಿಸೊ 5
--------------
ಸರಸಾಬಾಯಿ
ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ ರಕ್ಷಿಸೀಕ್ಷಣ ಲಕ್ಷ್ಮೀರಮಣ ಈಕ್ಷಿಸೀಗಲೆ ರಕ್ಷಿಸೆಮ್ಮನು ಕುಕ್ಷಿಯೊಳು ಜಗ ರಕ್ಷಿಸುವ ಹರಿ ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ ಇಂದಿರೆರಮಣ ಗಜೇಂದ್ರವರದ ಹರಿ ಮಂದಹಾಸದಿ ಭಕ್ತವೃಂದವ ಪಾಲಿಪ ನಂದಕಂದನೆ ಬಂದು ರಕ್ಷಿಸು ಇಂದಿರಾ ಭೂದೇವಿ ರಮಣನೆ ಸುಂದರಾಂಗನೆ ಸುಮನ ಸರ ಹೃ- ನ್ಮಂದಿರದಿ ಶೋಭಿಸುವ ದೇವ 1 ನಂದನಕಂದ ಮುಕುಂದ ಹರೇ ಕೃಷ್ಣ ಕಂದರ್ಪ ಜನಕನೆ ಕರುಣಾನಿಧೆ ಹರಿ ಮದನ ಜನಕÀ ಸುಂದರಾಂಗ ಶ್ರೀಸುಮನಸರ ಪ್ರಿಯ ಬಂಧಮೋಚಕ ಭವವಿದೂರನೆ ಸಿಂಧುಶಯನ ಸರ್ವೇಶ ಶ್ರೀಹರಿ 2 ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ- ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ 3
--------------
ನಿಡಗುರುಕಿ ಜೀವೂಬಾಯಿ
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ