ಒಟ್ಟು 19 ಕಡೆಗಳಲ್ಲಿ , 4 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸವಿಸವಿದುಣಬೇಕು ಸುವಿದ್ಯಸಾರದೂಟ ಧ್ರುವ ಊಟಕೆ ಬ್ಯಾಸರಿಕಿಲ್ಲ ನೋಟದ ಸವಿಸಾರಾಯದ ಬೆಲ್ಲ ಕೋಟಿಗೊಬ್ಬವನೆ ಬಲ್ಲ ನೀಟಾಗಿದೆಲ್ಲ 1 ಮಂಡಲದೊಳು ಸವಿಸುಖದಾನಂದ ಕೊಂಡಾಡಲಿಕ್ಕಿದೆ ಬಂದ ಖಂಡಿತ ಭವಬಂಧ 2 ಸಾರಸ ನಿತ್ಯ ಮಹಿಪತಿಗೆ ಬಲು ಉಲ್ಲಾಸ ಹತ್ತಿಲ್ಯದೆ ಬ್ರಹ್ಮರಸ ವಸ್ತುವದೆ ವಿಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸವಿಸುಖ ಕಂಡೆ ಸುವಿದ್ಯ ಬ್ರಹ್ಮರಸವ ಧ್ರುವ ಅಧ್ಯಾತ್ಮಾನಂದದೂಟ ಸಿದ್ಧಾಂತನುಭವದಿಂದ ಬದ್ಧವಾಗಿ ಸೇವಸಿದ ಇದು ಏಕಾಗ್ರ 1 ಉಂಡು ಹರುಷವಾಯಿತು ಮಂಡಲದೊಳಗಿಂದು ಕಂಡು ಆನಂದ ಸುಖವ ಪಿಂಡಾಂಡದೊಳು 2 ಸುರಸ ಸಾರಾಯದೂಟ ಪರಿಪರಿ ಸವಿದಿನ್ನುಹರುಷವಾಯಿತು ಎನಗೆ ತರಳ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೂರ್ಯಾಡುವ ಬನ್ನಿ ಹರಿಯ ನಾಮಾಮೃತವ ಪೂರ್ಣ ಧ್ರುವ ಸುರಿ ಸುರಿದು ಸಾರಾಯ ತರುತರುವಾಯ ಸೇವಿಸಿ ಥರಥರಲಿಡುವ ಬನ್ನಿ ಸುವಾಡವ ಕೊಂಡು 1 ಸಾರ್ಥಕ ಮಾಡುವದಿದೆ ಗುರ್ತಕ ಬಂದಿಹ ಜನಮ ತಾ ಕರ್ತು ಸದ್ಗುರು ಮಹಿಮೆ ಪ್ರಾರ್ಥಿಸಿ ಪರಿಪೂರ್ಣ 2 ಸವಿಸವಿ ಮಾಡಿಕೊಂಡು ಸೇವಿಸಿ ಮಹಿಪತಿ ನೋಡಿ ಪಾದ ನಿಜಗೂಡಿ ಭವಪಾಶೀಡ್ಯಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುದಯವೆ ತಾ ನಿಜ ನೇಮ Pರಿಗಿದೇವೆ ಹಿತಗುಜ ಸಮಸ್ತ ಜನರಿಗಿದೆ ಸುಬೀಜ ಪ್ರೇಮವಿಟ್ಟವರಿಗ್ಹೊಳೆವದು ಸಹಜ 1 ಗುರು ಉಪಾಸನೆ ಎಲ್ಲಕೆ ಮೇಲು ಸುರಜನರಿಗಿದೊಂದೇ ಕೀಲು ಅರಿತವರಿಗೆ ಮುಕ್ತಿ ಬಾಗಿಲು ತ್ಯರ ತಿಳಿಯದವರಿಗಿದೇ ಸೋಲು 2 ನಂಬಿ ನಡೆಯಬೇಕು ಸದ್ಗುರುಪಾದ ಇಂದುದೋರಿಕೊಡುವದು ಸುಬೋಧ ಗುಂಭಗುರುತಾಗಿದೋರುದು ಸ್ವಾದ ಹಂಬಲಿಸಿಕೊಳಬೇಕು ಸುಪ್ರಸಾದ 3 ಗುರುಮಾರ್ಗವೆಂಬುದೆ ಸಾಕ್ಷಾತ್ಕಾರ ಸೂರೆಗೊಂಡು ಮ್ಯಾಲೆ ಸುಖಸಾಗರ ಮರುಳ ಬಲ್ಲವೇನಿದರ ವಿಚಾರ ಶರಣಜನರಿಗಿದೇ ಸಹಕಾರ 4 ಗುರುಕೃಪೆಯಾದವಗೆ ಪ್ರಾಂಜಳ ಸಾರಾಯ ಕೊಂಬುವನೆ ತಾ ವಿರಳ ಅರಿಯೋ ಮಹಿಪತಿ ನಿನ್ನೊಳು ಸಕಳ ಹರುಷವಾಗೆದಿಂತು ಈ ಸುಖಕಲ್ಲೋಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು