ಒಟ್ಟು 17 ಕಡೆಗಳಲ್ಲಿ , 2 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಣ ಪ ಜಗದಿ ಧರ್ಮಾ ಧರ್ಮವೆಂಬ ಅನುವರವು ಹುಟ್ಟುವ ಕಾರಣ ಅಗಣಿತಾಘಘನ ನಿವಾರಣ ಅರಿನಿಕರ ಸಂಹಾರಣ 1 ಸುಗುಣ ದುರ್ಗುಣಗಳ ಸಮೂಹಕೆ ಸುಲಭವಾಗಿಹುದೀ ಕಥಾ ಸುಜನ ಮೇಲುಪಂಕ್ತಿಯೆನಿಸುತಿಹುದು 2 ತಾಮಸರ ನಿರ್ನಾಮ ವೈದಿಸಿ ತಾಮನವಲಿದ ಸುಜನಕೆ ಸ್ವಾಮಿ ಶ್ರೀಗುರುರಾಮ ವಿಠಲನ ಪ್ರೇಮ ಸಂಪಾದಿಸುವುದಕೆ 3
--------------
ಗುರುರಾಮವಿಠಲ
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು- ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು 1 ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು ಸದಮಲ ಜ್ಞಾನ ವದಗಿಸುವದಕೀಗ 2 ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು 3
--------------
ಗುರುರಾಮವಿಠಲ