ಒಟ್ಟು 19 ಕಡೆಗಳಲ್ಲಿ , 14 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು
ಎನ್ನಬಿನ್ನಪಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರುವಿಧ ವಸ್ತುಗಳುವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದುಅರಿದು
--------------
ಗೋಪಾಲದಾಸರು
ಪಂಚಭೇದತಿಳಿವದು ಪ್ರತಿದಿನದಲೀ |ಮುಂಚಿನಜ ಮಧ್ವಮುನಿ ಮತವನುಸರಿಸಿದವರೂ ಪಜೀವೇಶರಿಗೆ ಭೇದ ಜೀವ ಜೀವಕೆ ಭೇದ |ದೇವರಿಗು ಜಡಕು, ಜಡಕೆ ಜಡ ಭೇದಾ ||ಆವಾಗಜೀವರಿಗೆ ಜಡಗಳಿಗೆ ಭೇದುಂಟು |ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ 1ಈಶನಿತ್ಯಅನಾದಿಸ್ವರತಸರ್ವಗ ಸ್ವಪ್ರ- |ಕಾಶ ಸರ್ವಜÕವಿಶ್ವವಿಲಕ್ಷಣಾ ||ಮೇಶ ಅಪರಿಚ್ಛಿನ್ನಮೂರ್ತಿಪ್ರಾಣಿಗಳಿಂದ |ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ 2ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||ಆಮಯವಿದೂರ ಜ್ಞಾನಾನಂದ ಬಲ ಪೂರ್ಣ |ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ 3ಸುಖ ದುಃಖಭೋಗಿಜೀವನು ಅಸ್ವತಂತ್ರ ಬಹು |ಕಕುಲಾತಿಉಳ್ಳವನು ದುರ್ವಿಷಯದೀ ||ಲಕುಮೀಶನಲ್ಲಿ ಭಕ್ತಿ ವಿವರ್ಜಿತನುಪ್ರತಿಕ್ಷ- |ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು 4ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |ಮಾಧವನ ಬಂಧಕ ಶಕುತಿಯೊಳಗಿಹ್ಯಾ ||ತಾ ಧರಿಸಿಹನುಪ್ರಾಕೃತಪ್ರಾಕೃತಾವರಣ |ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ 5ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |ಯಂದು ಭೇದಗಳುಂಟವರ ಲಕ್ಷಣಾ ||ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು 6ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ 7ವಿಧಿಮೊದಲು ತೃಣ ಜೀವಪರಿಯಂತಸಾತ್ವಿಕರು |ಇದರೊಳಗೆ ದೇವ, ಋಷಿ, ಪಿತೃಪ, ನರರೂ ||ಸುಧಿಗೆ ಯೋಗ್ಯ ರಜಾದಿಗೀರ್ವಾಣಗಂಧರ್ವ |ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ 8ಇವರಿಂದ ಭಿನ್ನ ರಾಜಸರು ಗೋ ಭೂ ನರಕ |ತ್ರಿವಿಧಗತಿಉಳ್ಳವರು ಪಂಚಭೇದಾ ||ವಿವರ ತರತಮ ದೇವರ ಮಹತ್ಮಿಯನು ಅರಿಯ |ದವರು ಲಿಂಗಕಳಿಯರುಧಾಮತ್ರಯಪೊಗದವರೂ 9ಸಂಸಾರಿಗಳಿಗೆ ಭಿನ್ನರು ತಮೋಗುಣದವರು |ಕಂಸಾರಿಯಲಿ ದ್ವೇಷವರ ಸ್ವಭಾವಾ ||ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |ಕ್ಷಸರು, ಪಿಶಾಚರವರನುಗರು, ನರಾಧಮರು 10ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||ಜ್ಞಾನಿಭೇದವನರಿಯ ಪಂಚ ಮಹಾಪಾತಕಿ ಪು- |ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ 11ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |ಕುಜನರಿಗನೇಕ ಬಗೆ ಸಹಯವಹನೂ ||ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |ವೃಜನವನ ವಪು ತಾಯಿ ತಂಗಿಯಂಬರನರಿಯ 12ಬವರಬಂಗಾರ ದ್ಯೂತಾ ಪೇಯಅನೃತನಟ |ಯುವತಿಯೀಯಾರು ಸ್ಥಳ ನಿಲಯವವರಿಗೆ ||ನವವಿಧ ದ್ವೇಷಿಗಳಿಗಾಕಾರನೆನಿಸುವನು |ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ 13ಆ ನೀಚನ ಮಲಮೂತ್ರ ವಿಸರ್ಜನದಿಘೋರ|ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||ಕ್ಷೋಣಿಯೊಳವನ ನಿಂದೆ ನಿರುತದಲಿ ಮಾಡುವದೆ |ಶ್ರೀನಾಥನರ್ಚನೆ ಮಹಾಯಜÕವೆನಿಸುವದು 14ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||ಮೂವರಿಗೆ ಪಾಪಮಿಶ್ರಿತಕರ್ಮಪುಣ್ಯ ಬಹು |ನೋವು ಸ್ವರ್ಗ ನರಕ ಸುಮೋಕ್ಷಾದಿಗತಿಉಂಟು 15ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |ನೈಜವಾಯಿತು ಭೇದ ಜೀವ ಜಡಕೇ ||ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ,ನಿತ್ಯ|ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ 16ಪ್ರಾಕೃತವಿಕೃತ ವೈಕೃತತ್ರಯ ಅಸ್ಥಿರ ಜಡವು |ಪ್ರಾಕೃತವಜಾಂಡ ಧೊರ ಆವರಣವೂ ||ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು 17ಸರಸಿಜಭವಾಂಡದೊಳಿಹ ನೆಲಜಲಧಿಗಿರಿಗಳು |ಎರಡೇಳುಭುವನವೈಕೃತ ಜಡವಿದೂ ||ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ 18ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |ಜಾಲಕಾರಣತ ಸುಸ್ಥಿರವೆನಿಪವೂ ||ಮ್ಯಾಲೆ ಅದರಿಂದಾದ ತತ್ವಗಳನಿತ್ಯಮಹ |ಕಾಲವೆಂದಿಗ್ಯುನಿತ್ಯಅಣುಕಾಲಗಳ ನಿತ್ಯಾ19ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |ರಾಗಿರಲು ಜಡ ಜಡಕೆ ಭೇದ ಸಿದ್ಧಾ ||ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ20ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |ದೂ ಕೆಡದೆ ಸುಖಕಾಂತಿ ಯುಕ್ತವಾದಾ ||ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |ಶೋಕಪೂರಿತವಾದನಿತ್ಯನರಕಗಳಿಹವು 21ಈಪಂಚಭೇದಜ್ಞಾನಿಲ್ಲದವ ಶ್ರೀ ಮುದ್ರಿ |ಗೋಪಿಚಂದನ ಧರಿಸಿದರು ಫಲವೇನೂ ||ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ 22ಹರಿಗುರುಗಳ ದಯ ಪಡೆವರಿಗೆರುಚಿತೋರ್ವದಿತ |ರರಿಗೆ ಈ ಕೃತಿಯುಕರ್ಣಕಠೋರವೂ ||ತರಣಿಬರೆ ಸರ್ವರಿಗೆ ಘೂಕಗಾದಂತೆ ಇದು |ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು 23ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |ಸಾನುರಾಗದಲಿಹರಿಸರ್ವೋತ್ತುಮಾ ||ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |ಕಾಣರು ಕು ಸಂಸಾರ ಧಾಮತ್ರ ವೈದುವರು 24ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |ಒಪ್ಪುತಿಹ ಈ ಪಂಚಭೇದವನ್ನೂ ||ತಪ್ಪದಲೆನಿತ್ಯಪಠಿಸುವರ ಪೊರವವನು ಬೊಮ್ಮ- |ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ 25
--------------
ಪ್ರಾಣೇಶದಾಸರು
ಸತತಕಲ್ಯಾಣಅಚ್ಯುತಭಟರಿಗೆರತಿಪತಿಪಿತನಂಘ್ರಿರತ ಮಹಾತ್ಮರಿಗೆ ಪ.ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲಖೇದಮನಕಿಲ್ಲ ಖಿನ್ನತೆಯು ಮುಖಕಿಲ್ಲಶ್ರೀಧವನ ನವ ಭಕುತಿಶೀಲ ಜೀವರಿಗೆ 1ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕುಉರಗಪೂಮಾಲೆಯಕ್ಕು ಉರಿ ತಣ್ಣಗಕ್ಕುಶರಧಿಗೋಷ್ಪದವಕ್ಕು ಶರಘಾತ ಬೆಂಡಕ್ಕುನರಹರಿಯ ನಾಮವನು ನಂಬಿ ತುತಿಪರಿಗೆ 2ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟಆಪತ್ತುಗಳಿಗೋಟ ಆಲಸ್ಯಕೋಟಕೋಪದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟಶ್ರೀ ಪ್ರಸನ್ವೆಂಕಟನ ಭಜಿಪ ಭಕ್ತರಿಗೆ 3
--------------
ಪ್ರಸನ್ನವೆಂಕಟದಾಸರು