ಒಟ್ಟು 22 ಕಡೆಗಳಲ್ಲಿ , 13 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ ಕರದಲ್ಲಿ ದಂಡ ಕೋಲು ಕಮಂಡಲನೀವ ಪರಿ ಹೇಗೆ ದಾಸಾನುದಾಸನಲ್ಲ ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ 1 ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ ನಿನ್ನ ಬಾಲಬ್ರಹ್ಮಚಾರಿಯೆಂದು ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ ಇನ್ನದಕುಪಾಯವೇನಯ್ಯ ಚೆನ್ನಿಗರಾಯ 2 ಶೃಂಗಾರಗಳನು ತತ್ವಂಗಳನು ಪೇಳುವಡೆ ಗುಂಗುರುಹಿನೊಳಲ್ಪ ಮನುಜನಲ್ಲ ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ 3
--------------
ಬೇಲೂರು ವೈಕುಂಠದಾಸರು
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಎನ್ನಿರೋ ``ಶ್ರೀ ರಾಘವೇಂದ್ರಾಯನ ನಮಃ'' ಎಂಬ ಪ ನಾಮವ ಸ್ಮರಿಸಿ | ಸುಖಿಯಾಗು ಮನವೇ ಅ.ಪ ಸಂಸಾರ ಸಾಗರದಿ ಬೆಂದು ಬಳಲಿರುವೇನಯ್ಯ ಮುಂದೇನು ಗತಿ ಕಾಣೆ ಗಾಡಾಂಧಕಾರದೊಳು ಮುಳುಗಿ ಬೆಂಡಾದೆನೊ ಕರುಣಿಸೈ ಗುರುರಾಘವೇಂದ್ರಾ1 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆಂದು ನಂಬಿದೆನೈ ಪ್ರಭವೆ ಸಂದೇಹವೇಕಿನ್ನು ಕಂದನೆನು ತೆಂದು ಕಾಯೋ ಗುರುವೇ ಶ್ರೀ ರಾಘವೇಂದ್ರ ಪ್ರಭುವೆ2 ಅಂಧತ್ವ ಮೂಕತ್ವ, ಬಧಿರತ್ವ ಎಕಲಾಂಗಿಗಳ ಹಿಂದೆ ಪೊರೆದೆ ನೀನೆಂಬ ವಾರ್ತೆಕೇಳಿ ನಿನ್ನ ಘನ್ನಮಹಿಮಾ ಶ್ರೀ ರಾಘವೇಂದ್ರಾ 3 ಭವರೋಗ ಗಳೆಲ್ಲ ಪರಿಹರಿವುದೊ ಸ್ಮರಣೆ ಮಾತ್ರದಿ ಸಕಲ ಪಾಪಗಳನೋಡಿಸಿ ಪುನೀತರನೆ ಮಾಡುವಿಯೊ ಗುರುವೆ 4 ಬಿಡೆನು ಬಿಡೆನು ನಿನ್ನಡಿಗಳಿಗೆ ಸೇವಿಸಲು ದೃಢ ಭಕುತಿಯನೆ ಕೊಡು ಎನಗೆ ಶ್ರೀ ರಾಘವೇಂದ್ರಾ ಅಪಾರ ಮಹಿಮ ಶ್ರೀ ರಾಘವೇಂದ್ರಾ 5
--------------
ರಾಧಾಬಾಯಿ
ನೀನೆ ಪಾಲಿಸು ಕರುಣಾವಾರಿಧಿದೀನಜನರಾಧಾರ ಹರಿಯೆ ಪನಿನ್ನಾಧೀನವು ತೋರ್ಪುದೆಲ್ಲಮಾನವನ ಸ್ವಾಧೀನವೇನಿದೆನಿನ್ನ ನೆರಳಲಿ ಮೂರು ಜಗವುಭಿನ್ನವಿಲ್ಲದೆ ಬದುಕಿ ಬಾಳ್ವುದು 1ನಿನ್ನ ಸಹಾಯವಿಲ್ಲದೀಭವವನ್ನು ಗೆಲಿಯುವ ಸಾಧ್ಯದಾರಿಗೆನಿನ್ನ ಕೃಪಾಕಟಾಕ್ಷದಿಂದಲೆಮುನ್ನ ಹಿರಿಯರು ಧನ್ಯರಾದರು 2ಮತ್ರ್ಯಲೋಕಕ್ಕೆಳೆದು ತಂದೆನ್ನಮರ್ತುಬಿಡುವುದುಚಿತವೇನಯ್ಯನಿರ್ತಸುಖವಿತ್ತು ರಕ್ಷಿಸಭವಕರ್ತುಶ್ರೀಗುರು ರಾಮ ಪ್ರಭುವೆ3
--------------
ರಾಮದಾಸರು
ಸತ್ಯವೇ ಸ್ನಾನ ಜಪ ನೇಮ - ಹೋಮ - ಅ - |ಸತ್ಯದಲಿ ನಡೆದುಮಾಳ್ಪದುವ್ಯರ್ಥಕರ್ಮಪ.ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು |ಒಪ್ಪದಲಿ ಉಪವಾಸ ವ್ರತವ ಮಾಡಿ ||ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ |ಸರ್ಪಗಳು ಮಾಡದಪರಾಧವೇನಯ್ಯ ? 1ಬಿಡದೆ ಮದ - ಮತ್ಸರಾಹಂಕಾರದೊಳು ಮುಳುಗಿ |ಒಡನೆ ಬೆರಳುಗಳೆಣಿಸಿ ಮೌನದಿಂದ ||ತಡೆಯದಲೆ ಪರಲೋಕ ಸುಖವನೈದುವೆನೆಂಬ |ಬಡ ಬಕವು ಮಾಡಿದಪರಾಧವೇನಯ್ಯ 2ಪರಸತಿಯು ಪರಧನವು ಪರನಿಂದೆ ಪರಹಿಂಸೆ |ಪರಮ ಪಾತಕದ ಕಾರಣವ ತೊರೆದು ||ಧರೆಗಧಿಕಪುರಂದರ ವಿಠಲನ ನೆರೆಭಜಿಸಿ |ವರವನು ಪಡೆಯೆ ಸಾಲೋಕ್ಯವನ್ನೀವ 3
--------------
ಪುರಂದರದಾಸರು
ಹರಿಕಥಾಮೃತ ಸವಿಯ ಹರಿದಾಸರಲ್ಲದೆದುರುಳಮಾನವರದರಪರಿಬಲ್ಲಿರೇನಯ್ಯಪ.ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆಅಣಿಮಾಡಿಕೊಡುವ ಆಕರಬಲ್ಲುದೇನಯ್ಯ1ನವನೀರದಾರ್ಭಟಕೆ ನವಿಲುಗಳು ನಲಿವಂತೆಕಾವು ಕಾವೆಂಬ ಕಾಕವು ಬಲ್ಲುದೆ ? ||ದಿವಸಕರನುದಯಿಸಲು ಅರಳುವಬ್ಜಗಳಂತೆದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ 2ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆಭಲ್ಲೂಕಗಳು ಅದರ ಬಗೆ ಬಲ್ಲುವೆ ?ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನುಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? 3
--------------
ಪುರಂದರದಾಸರು