ಒಟ್ಟು 34 ಕಡೆಗಳಲ್ಲಿ , 16 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಯ ಗಂಗಾಧರಪ್ರಿಯ ರಮಣಿ ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ ಶ್ರೀಲಲಿತೆ ವರದಾಯಕ ಮಹಿತೆ ಬಾಲಗೋಪಾಲ ಸೋದರಿ ಶುಭಚರಿತೆ 1 ದೇವಿ ಭವಾನಿ ಶಿವೆ ಕಾತ್ಯಾಯಿನಿ ಪಾವನಿ ಭಾಮಿನಿ ತ್ರಿಜಗನ್ಮೋಹಿನಿ 2 ಮಂಗಳದಾಯಕಿ ಶಂಕರನಾಯಕಿ ಮಾಂಗಿರಿರಂಗ ಕೃಪಾಂಬರದಾಯಕಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸುಗಣನಾಯಕಾ ವಿನಾಯಕ ಪ ಶೂಲಪಾಶಾಂಕುಶಧೃತ ವರದಾಯಕ ಅ.ಪ ಲಂಬೋದರಾಂಕಿತ ಜಂಭಾರಿವಂದಿತ ಕುಂಭೋದ್ಭವಾನತ ಅಂಬಾಸುತ ಅಂಭೋಜ ಸಖನುತ ಗಂಭೀರ ಗುಣಯುತ ಸಾರ ಸಂತೋಷಿತ 1 ಆತಂಕಪರಿಹಾರ ಮಾತಂಗಮುಖವೀರ ಶೀತಾಂಶುಶೃಂಗಾರ ಶ್ವೇತಾಂಬರ ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ ದಾತಾರ ಮಾಂಗಿರಿನಾಥಾ ಕೃಪಾಧರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ ಚಾಲನೆ ಶ್ರೀಲೋಲನೇ ನೀಂ ಅ.ಪ ರಕ್ಷಕಾಮಣಿ ಸಾಧುಜನ ರಕ್ಷಾಮಣಿ ಅಕ್ಷಯ ಸುಜನರಾಶ್ರಿತÀ ನಿನ್ನ ಭಿಕ್ಷವನಾಂಬೇಡುವೆನೈ ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ 1 ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ ನಂಡಜ ವಾಹನನಹುದೊ ಪಂಡರಿಪುರನಾಯಕ ಚಾ ಮುಂಡಿ ವರದಾಯಕ ನೀಂ [ಶ್ರೀರಾಮ] 2 ಶಾಶ್ವತ ಜನಭಾಷಾ ಭಾಸ್ಕರಕೋಟಿ ತೇಜಾ ಈಶ್ವರ ಮತ್‍ಗುರು ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಪುಲಿಗಿರಿ ಧೊರೆಯ ಪ ಶ್ರೀರಮಣೀ ನಿಜವಲ್ಲಭನ-ಮಾರ ಚತುರ್ಮುಖರಿಗೆ ಪಿತನ ನಾರದ ಶರ್ವ ಪಿತಾಮಹನ-ಮದ- ವಾರಣಮುಖ ಪ್ರಪಿತಾಮಹನ 1 ಕಿರೀಟವ ನಿರಸಿಹನ ಕರದಲ್ಲಿ ಚಕ್ರವ ಪಿಡಿದಿಹನಾ-ನಿಜ-ಕರುಣದಿ ಭಕ್ತರಿಗೊಲಿದಿಹನ2 ಕೊರಳೊಳು ಪೊತ್ತಿಹನ ಬಾಲಕ ಸುಕೃತಾನುಗ್ರಹನ-ನಿಜ ಲೀಲೆಯೊಳಾಸುರ ನಿಗ್ರಹನ 3 ಪಡೆದ ಪಾದಾಂಬುಜನ ವಿಹಂಗ ಗುಣಗಣ ಸಂಗತನ 4 ಭವಭಯ ಮೋಚನನ ವರವ್ಯಾಘ್ರಾಚಲ ನಾಯಕನ-ನಮ್ಮ- ವರದವಿಠಲ ವರದಾಯಕನ5
--------------
ಸರಗೂರು ವೆಂಕಟವರದಾರ್ಯರು
ಬಾರೋ ನಿತ್ಯಾನಂದಲೀಲಾ | ಗೋಪಾಲ ಬಾಲ ಪ ಬಾರೋ ವನಜಮಾಲಾ ಬಾರೋ | ಗಾನಲೋಲಾ ಅ.ಪ ನಿನ್ನ ಕರುಣೆ ಎನ್ನೊಳಿರಲಿ ನಿನ್ನ ಚರಣ ಎನಗೆ ಸಿಗಲಿ ನಿನ್ನ ಧ್ಯಾನ ಮನದೊಳಿರಲಿ ನಿನ್ನ ನಾಮ ರಸನೆಯೊಳಿರಲಿ 1 ಮುರಳೀಧರ ಲೋಕೇಶ ಧರಣೀಧರ ವೆಂಕಟೇಶ ಶರಣಾಗತ ಕ್ಲೇಶನಾಶ ವರದಾಯಕ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಜಿಸಿರೋ ಭಜಿಸಿರೋ ಅಜನ ಪೆತ್ತವನಾ ಭುಜಗಶಯನ ಮದಗಜವ ಪೊರೆದನಾ ಪ ಭಜಕರ ಕೂಗಿಗೆ ನಿಜವ ತೋರುವನಾ ಸುಜನೋದ್ಧಾರನ ವಿಜಯ ರಾಘವನಾ ಅ.ಪ ರಾಗವಿದೂರನ ರಾಗೋಲ್ಲಾಸನ ರಾಗಕೆ ಒಲಿವನಾ ರಾಗವನುಣಿಪನ ರಾಗದಿ ಮುರಳಿಯ ಊದಿ ರಾಜಿಸುವನ ರಾಗದಿ ನಮಗನುರಾಗವನೀವನ1 ಶರಣರ ದುರಿತವ ಪರಿಹರಿಸುವನ ಧರಣಿಯನೀರಡಿ ಅಳೆದವನ ಕರುತುರುಗಳ ಕನಿಕರದಿಂಕಾಯ್ದನ ವರದಾಯಕ ಮಾಂಗಿರಿ ರಂಗಯ್ಯನ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭವ ದಾಂಟಲಿಕಿದುಸಾರಾ ಪ ಅಚ್ಯುತಾನಂತ ಗೋವಿಂದ ಕೇಶವ ಎನ್ನಿ ಸಚ್ಚಿದಾನಂದ ಶ್ರೀ ಕೃಷ್ಣ ನೆನ್ನಿ ಹೆಚ್ಚಿದ ದುರುಳದಾನವರ ಸಂಹರಿಸಿದ ಮುಚುಕುಂದ ವರದಾಯಕ ನೆನ್ನಿ 1 ನೀಲ ಮೇಘ ನಿಭಾಂಗ ರೂಪನು ಎನ್ನಿ ಕಾಳಿಯ ತುಳಿದ ಗೋಪಲ ನೆನ್ನಿ ಪಾಲು ಮೊಸರು ಬೆಣ್ಣೆಗಳ್ಳನಿವನುಎನ್ನಿ ಭೂಲಲನೆಯ ಗಂಡ ನೀತ ನೆನ್ನಿ 2 ಶಂಖ ಚಕ್ರಗದೆ ಪದ್ಮಧರನು ಎನ್ನಿ ಮುರ ವೈರಿಯೆನ್ನಿ ಪಂಕಜ ವದನ ಕಸ್ತೂರಿ ತಿಲಕನೆನ್ನಿ ಡೊಂಕ ತಿದ್ದಿದ ಕುಬುಜೆಯನೀತನೆನ್ನಿ 3 ರಾಣಿಯ ನೊಯ್ದ ರಾವಣನ ಕೊಂದವನೆನ್ನಿ ಬಾಣಾಸುರನ ತೋಳ ತರಿದವನೆನ್ನಿ ವೇಣುನಾದ ಪ್ರಿಯ ಶ್ರೀರಂಗ ನೆನ್ನಿ 4 ನಾಮವೇಗತಿ ಎನ್ನಿ ನಾಮವೇ ಮತಿ ಎನ್ನಿ ನಾಮವೇ ಪರಕೆ ಸಾಧನವು ಎನ್ನಿ ಪ್ರೇಮದಿಂದಲಿ ರಸನೆಯೊಳು ಲಕ್ಷ್ಮೀಶನ ನಾಮ ಸ್ಮರಣೆಯನು ನುಡಿನುಡಿಗೆನ್ನಿ 5
--------------
ಕವಿ ಪರಮದೇವದಾಸರು
ಮಾಮನೋಹರಾ ಮುರಾರಿ ಬಾರೋ ಪ ಕರಿವರದಾಯಕ ಮರಚಮುಸ್ಥಾಪನ | ಶರಣಾಗತ ಸಹಕಾರಿ ಬಾರೋ | ಸರಸಿಜಾಸನ ವಂದಿತಾಂಘ್ರಿ | ದುರಿ | ತಾಚಲ ವಜ್ರಧಾರಿ ಬಾರೋ 1 ಮನೋಜನಿತ ಜನಕರವಿಂದ ಲೋಚನ | ಮುನಿಜನ ಹೃದಯ ವಿಹಾರಿ ಬಾರೊ| ಘನಮಹಿಮ ಸುದಾಮ ರಕ್ಷಕಕ | ದನುಜಾವಳಿ ಮದಹಾರಿ ಬಾರೋ 2 ಕಾಲ ಪಯೋಧರ | ಮಂದರೋದ್ಧಾರಿ ಬಾರೋ | ನಂದನಾತ್ಮಜ ದೇವ ಮಹಿಪತಿ | ನಂದನ ಪ್ರಭು ಉದಾರಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾವಿನಕೆರೆ ಎಲ್ಲಿರುವೆ ಬಾರಂಗ ಬಾ ಮೋಹನಾಂಗ ಎಲ್ಲಿರುವೆ ನೀಲಾಂಗ ಮಾಂಗಿರಿರಂಗ ಪ ಇಲ್ಲಿರುವೆಯಾರಂಗ ಸಲ್ಲಲಿತ ರಂಗ ಮೆಲ್ಲನೇ ರಂಗ ಓ ಮುದ್ದುರಂಗಾ ಅ.ಪ ಅಲ್ಲಿ ನೋಡಿದರಿಲ್ಲ ಇಲ್ಲಿ ಕಾಣಿಸಲಿಲ್ಲ ಬಲ್ಲೆ ನಾನೀ ಚೆಲ್ಲ ವರದಾತನಲ್ಲ ಇಲ್ಲಿ ತಿಳಿಗೊಳವಿಲ್ಲ ಮಲ್ಲಿಗೆಯ ಹೂವಿಲ್ಲ ಇಲ್ಲಿರುವ ಧೃಢವಿಲ್ಲ ನೀ ಬರುವೆ ಅರಿವಿಲ್ಲ 1 ಗಜರಾಜ ಕರೆದನೆ ಅಜಾಮಿಳನು ಕೂಗಿದನೆ ಅಜನು ಬಾರೆಂದನೆ ಲೋಕವಂದಿತನೆ ರಜತಾದ್ರಿ ವಾಸನೆ ಪೂಜಿಸಲು ಕರೆದನೊ ಸುಜನ ವರದಾಯಕನೆ ವಿಜಯ ಪೂರಿತನೇ 2 ವನವನದಿ ಸಂಚರಿಸಿ ದನಿದನಿಯನನುಸರಿಸಿ ಮನದಿ ನೋವನನುಭವಿಸಿ ಕನಸೆಂದು ಭಾವಿಸಿ ಕನವರಿಪ ಯೆನ್ನೊಳಗೆ ಕನಿಕರವ ಸೂಸಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರವಿಸುತನ ಪ್ರಧಾನಿಯೆ ರಾ ಘವ ಕಾರ್ಯ ಧುರಂಧರಾಗಣಿತ ವಿಕ್ರಮಯಂ- ಮವಗುಣಗಳನೆಣಿಸದೆ ಕಾ ಯುವದೈ ನೀಂ ಪುಟಪರ್ತಿ ವೀರ ಹನುಮನೆ 1 ಮಾರುತನ ಕುಮಾರ ಪವಿ ಶ ರೀರ ಕಪಿವರಾಗ್ರಗಣ್ಯ ವರದಾಯಕ ನೀ ನಾರಾಧಕರಿಗೆ ಕೊಡು ದಿ ವ್ಯಾರೋಗ್ಯವ ಪುಟಪರ್ತಿ ವೀರ ಹನುಮನೆ 2 ವೈರಾಗ್ಯವು ಭಕ್ತಿ ಜ್ಞಾನವಂ ಪಾಲಿಸುವೈ ರಾರಿಳೆಯೊಳು ಪುಟಪರ್ತಿ ವೀರ ಹನುಮನೆ 3 ನೆರೆ ಪ್ರಾಣಗಳಿತ್ತೆ ಧೀರನೊಲಿಯುವಲೀ ತರಳನ ಜ್ವರಾದಿಗಳ ಪರಿ ಹರಿಸುತ ಪೊರೆ ಪುಟಪರ್ತಿ ವೀರ ಹನುಮನೆ 4 ರಾವಣನ ಗುದ್ದಿದಾತನೆ ಪಾವನ ಪರಮ ಪವಿತ್ರ ಕೃ ಪಾವನಧಿಯೇ ಪುಟಪರ್ತಿ ವೀರ ಹನುಮನೆ 5 ನರಿತನುದಿನ ಪಠಿಸುವರಿಗೆಯಾರೋಗ್ಯಸುವು ಸ್ಥಿರ ವೈರಾಗ್ಯಾಯುಗಳನು ಶ್ರೀ ಗುರುರಾಮ ವಿಠಲನು ಬಿಡದೆ ಕರುಣಿಸುತ್ತಿರುವಂ 6
--------------
ಗುರುರಾಮವಿಠಲ
ರಾಘವಾ ವರದಾಯಕಾ ಪ ಪ್ರೇಮಸಮಾನ್ವಿತ | ಶ್ಯಾಮನೆ ಬಾರೋ ಅ.ಪ ದೇವದೇವಾನತ | ಶರಣಾ ಭರಣ 1 ಮುನಿಜನ ತೋಷಿತ ಮಾಂಗಿರಿನಾಥ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು
ವರದೇಂದ್ರ ವರದೇಂದ್ರ ವರದಾಯಕ ಗುರು | ವರಗುಣಸಾಂದ್ರ ಪ ಪಾವನ ಚರಿತ ವೃಂದಾವನ ಮಂದಿರ ಕೋವಿದ ಜನ ಸುಸೇವಿತ ಸದಯ1 ಕಾಲಾಷಾಯಾಂಬರ | ಭೂಷಿತ ಎನ್ನಯ ದೋಷಗಳೆಣಿಸದೆ ಪೋಷಿಸು ಸತತ 2 ಕಠಿಣ ಭವಾಂಬುಧಿ ಘಟಜ ಕುಟಿಲಮತ ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3 ನತ ಸುರಕ್ಷಿತಿರುಹ | ಜಿತ ರತಿಪತಿ ಶರ ಮತಿವರ ದಶಮತಿ ದುರಿತವಾರಿಧಿ ವಿಭು 4 ಹೇಮೋದರ ವಿತ ಶಾಮಸುಂದರನ ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
--------------
ಶಾಮಸುಂದರ ವಿಠಲ
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ. ವಾರಿಜಾಕ್ಷ ವರಗುಣಾಕರ ವಾರಿಜಾಕ್ಷಿ ವರದಾಯಕ ಸನ್ನುತ ನಾರದಾದಿ ಮುನಿವಂದಿತ ಪದಯುಗ ಅ.ಪ. ಸುಂದರಾಂಗ ಸುಕಲಾನ್ವಿತ ನಿಭಚರಣ ಕಟಿಶೋಭಿತ ವ್ಯಾಳಸ- ಬಂಧನಾಬ್ಧಿ ಶತಕೋಟಿಸದೃಶ ಕಿರಣ ಚಂದನಾಂಗಾರ್ಚಿತ ಸುಮನೋಹರ ಮಂದಹಾಸ ಮಹಿಮಾಂಬುಧಿಚಂದಿರ 1 ಕಂಬುಗ್ರೀವ ಕಮನೀಯ ಕರಾಂಬುರುಹ ಪಾಶಾಂಕುಶಧರ ವರ ಶಂಬರಾರಿಜಿತುತನಯ ಮಧುರಗೇಹ ಜಂಭಭೇದಿವಂದಿತ ಅತ್ರಿವಂದಿತ ಲಂಬೋದರ ವಿಘ್ನಾಂಬುಧಿ ಕುಂಭಜ 2 ಚಾರುಭಾರ ಕನ್ಯಾಪುರವರ ನಿಲಯ ಮೃಕಂಡುಜದ ಮುನಿವರ ಸಾರಮಂತ್ರಸ್ಥಾಪಿತ ಮಂಗಲ ಕೆರೆಯ ವರಕಪಿತ್ಥಫಲೋರಸಭುಂಜಿತ ಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀರಾಮ ಪಾಹಿಮಾಂ ಸದಾಪೂರ್ಣಕಾಮ ವಾರಿಜಭವವಿನುತನಾಮ ಸಾರಸಾಕ್ಷ ಸಂಗರಭೀಮ ಪ ಮುನಿಕೌಶಿಕ ಮಖಪಾಲಕ ಘನತಾರಕನಾಮ ವನಜಾಂಬಕ ವರದಾಯಕ ಜನಕಾತ್ಮಜ ಪ್ರೇಮ ದನುಜಾಂತಕ ಭವಭಂಜಕ ಇನವಂಶಲಲಾಮ ಜನನಾಯಕ ಫಲದಾಯಕ ಸದಯ ಮಾಂಗಿರಿರಾಮ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್