ಒಟ್ಟು 22 ಕಡೆಗಳಲ್ಲಿ , 9 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವಾದಿರಾಜರು ಗುರುವರ ದಯಮಾಡೈ ಹಯಮುಖ ಪದಯುಗ ನಿಜ ಭಕ್ತಾಗ್ರಣೀ ಪ ಚರಣವ ನಂಬಿದೆ ಮುಂದಿನ ಪರಿಸರ ಸರಸರ ಸುರಿಸುತ ವರಗಳ ಕರುಣದಿ ಅ.ಪ ನಿನ್ನನೆ ನಂಬಿದ ಅನ್ಯರವಲ್ಲದ ಚಿಣ್ಣರ ಬಿಡುವರೆ ಘನ್ನಗುಣಾರ್ಣವ ಸಣ್ಣವರೆನ್ನೆದೆ ಮನ್ನಿಸಿ ಕೈಪಿಡಿ ಚಿನ್ಮಯ ನಂದನ ಅನ್ಯರ ಪೋಷಕನೆ 1 ದಾಸರ ದೋಷವಿನಾಶಗೈವುದು ಕ್ಲೇಶವ ಭಾವೀಶ್ವಾಸ ನಿಯಾಮಕಗೆ ವಾಸವ ಗುರುಶಿವ ಶೇಷಸುವಂದಿತ ವಾಸಿಸಿ ಹೃದಯದಿ ಭಾಸಿಸು ಹರಿದಾರಿ 2 ಆರ್ರ್ತಿವಿದೂರ ಪರಾರ್ಥಕೆ ನೆಲಸಿಹ ಖ್ಯಾತ ಕವೀಂದ್ರನೆ ಪ್ರೀತಿಯ ಬೇಡುವೆನು ಮಾತೆಯ ತೆರಮುರವ್ರಾತವ ನೋಡದೆ ನಾಥನೆ ನೀಡಿಸು ಆತ್ಮವಿಕಾಸವನು 3 ವಿಜ್ಞಾನಾಸಿಯ ದಾನವ ಗೈಯುತ ದೀನನ ಮೌಢ್ಯದಿ ಶೂನ್ಯವಗೈಯುತ ಪ್ರಾಜ್ಜನ ಮಾಡೈ ಪ್ರಾಜ್ಞಲಲಾಮನೆ ಆಜ್ಞಾಧಾರಕ ನಿನ್ನ ಜನುಮ ಜನುಮದಲಿ4 ವೇದವ್ಯಾಸರ ಪಾದಾರಾಧಕ ಮೋದಮುನೀಂದ್ರರ ಪ್ರೇಮವ ಪಡೆದಿಹನೆ ವೇದವ್ಯಾಸರ ಸೇವಿಪ ಭಾಗ್ಯವ ಸಾದರದಿಂ ಕೊಡು ಕಾಮಿತ ಕೊಡುವವನೆ5 ಹಿರಿಯರ ಕರುಣದಿ ಕಿರಿಯರ ಸಾಧನೆ ಶರಣನ ಭಾರವು ಸೇರಿದೆ ನಿಮ್ಮಡಿ ಹರಣವ ವಪ್ಪಿಸಿ ಚರಣವ ಪಿಡಿದಿಹೆ ಪೊರೆಯೈ ಮನತರ ಕುರುಡನು ನಾನಿಹೆ 6 ಮಿಥ್ಯಾಮತ ವಿಧ್ವಂಸನೆ ಗೈಯುವ ಸದ್ಗ್ರಂಥಂಗಳದಾತನೆ ಬಾಗುವೆನು ಪಾರ್ಥನಸಖ “ಶ್ರೀಕೃಷ್ಣವಿಠಲ”ನ ಭಕ್ತಿತರಂಗವ ನೀಡುತ ಕಾಯುತ 7
--------------
ಕೃಷ್ಣವಿಠಲದಾಸರು
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆಪರಮಾನಿನಿಯ ಸಂಗ ನರಕದೊಳು ಬಲುಭಂಗಪ.ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮತ್ತೊಬ್ಬಳ ಕುಚಕೆ ಕಮಲವ ಹೋಲಿಸಿಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕತಬ್ಬಿಬ್ಬುಗೊಳುತ ನಿರಯಂಗಳುಂಬೆ 1ಇಂದುಮುಖಿಯಳ ಸಂಗ ಎನಗಿಂದು ಕೈಗೂಡಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನಸಂದುಗಳ ಕಡಿದು ವೈತರಣಿ ಸಲಿಲದಿ ದೇಹಹೊಂದಿಸುವರುಂಟು ಕಾಲನ ಕುಂಟಣಿಗರು 2ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರವಕ್ರನೋಟದಿ ಹಲವು ಸನ್ನೆಯಿಂದತರ್ಕೈಸಬೇಕೆಂಬ ಲಂಪಟದಿ ತಪ್ತಾದಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ 3ಹರಿದಾಸರಾಚಾರ ಕೇಳಲಸಿ ಪಳಿದೊರೆದುಒರಟು ಮಾತಿನ ಸರಕಲಾಯುಗಳಿದೆವಿರತಿಜ್ಞಾನಾನ್ವಿತರ ವೆರಸದಂಧಕನಾದೆತರಣಿಯೊಳು ಹೊಂಬುಳವು ಗರುವಿಸಿದ ತೆರದಿ 4ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊಳಂಬುಜಾಕ್ಷನ ದಾಸನಿಂದೆ ಮಾಡಸಲ್ಲಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತುನಂಬು ಪ್ರಸನ್ವೆಂಕಟೇಶನಂಘ್ರಿಯ 5
--------------
ಪ್ರಸನ್ನವೆಂಕಟದಾಸರು
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
--------------
ಪ್ರಸನ್ನವೆಂಕಟದಾಸರು
ವಾರಿಜನಾಭನ ಕರುಣವೆ ಸ್ಥಿರ ಸಂಸಾರ್ಯೆರವು ಕೇಳಾತ್ಮಜಾರುತದಾಯು ದೂರದ ಮುಕುತಿಯದಾರಿಯ ಪಾಥೇಯ್ಯೆಲ್ಲಾತ್ಮ ಪ.ಧರ್ಮದ ಸರಕಿಲ್ಲದವನೆಂದು ಬೇಗ್ಯಮಧರ್ಮ ಭಟರು ಬಂದರಲ್ಲೊಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವಕರ್ಮಯಾತನೆ ಕೊಟ್ಟರಲ್ಲೊಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅಧರ್ಮಿಗಳಗಲಿಪರಲ್ಲೊಮರ್ಮವರಿತು ತ್ರಾಟಿಸುವಾಗ ಶ್ರೀವಿಶ್ವಕರ್ಮನ ಪೂಜೆ ಹೋಯಿತೆಲ್ಲೊ 1ಹೆಡಗೈಯಕಟ್ಟಿಪರಿಘದೊಳು ಬಡಿವಾಗಮಡದಿ ಮಕ್ಕಳ ಸಹಾಯವೆಲ್ಲೊಒಡೆಯ ದಮ್ಮಯ್ಯ ನಮ್ಮಯ್ಯನೆಂದರೆಕಾಲಹಿಡಿದರೆ ಕೊಡಹಿದರಲ್ಲೊಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗಹಿಡದೇಜಿ ಕೊಂಬುಕಾಳೆಲ್ಲೊಪೊಡವಿಲಿ ಬಂದಾಗ ಹರಿಸೇವೆ ಮಾಡದೆಕಡುಹುಂಟಾದರೆ ತೋರದೆಲ್ಲೊ 2ಕೀವು ರುಧಿರವಿಟ್ಟ ಕುಂಡದಿ ಮುಣುಗುವಾಗ್ಹ್ಯಾವಿನ ಮಾತೇನಾಯಿತಣ್ಣಸಾವುತೀನವ್ವಪ್ಪಾ ಮೊರೆಯ ಕೇಳೆಂದರೆಆವಾಗಬಾಧೆ ಕಾಣಣ್ಣಆವೈವಸ್ವತದಂಡ ಕೊಟ್ಟು ಬೊಗಳೆಂಬಾಗಚಾರ್ವಾಕತನವೆಲ್ಲಣ್ಣಆ ವಾಸುದೇವನ ಭಟಸಂಗ ನಿನಗೀಗ ವೈರ ಆಗೆಲ್ಲಿದಣ್ಣ 3ನಾಲಿಗೊಣಗಿ ನೀರು ಕೂಳೆಂದು ಅಳುವಾಗಹಾಲ ಶಾಲ್ಯೋದನವೆಲ್ಲೊಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವಕಾಲಕೆ ಅಭ್ಯಂಗನವೆಲ್ಲೊಕಾಲನ ದೂತರ್ಗೆ ಕೊಟ್ಟುಳಿವೆನೆಂದರೆಹೂಳಿದ ಧನ ದೂರಾಯಿತಲ್ಲೊಕಾಲಕಾಲಕೆ ದ್ವಿಜಪಂಕ್ತಿಭೋಜನಸುಖವ್ಯಾಳೆ ತಪ್ಪಿತನ್ನವೆಲ್ಲೊ 4ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆಇಷ್ಟನೆಂಟರು ಹೋದರೆತ್ತಮುಷ್ಟಿಕುಠಾರಪ್ರಹಾರನೋಡುನಿನ್ನವರಿಷ್ಟತನವು ನಿಂತಿತೆತ್ತಶಿಷ್ಟರ ನೋಡದೆ ಸತ್ಕಾರ ಮಾಡದೆನಿಷ್ಠುರ ನುಡಿದೆ ಪ್ರಮತ್ತಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎಳ್ಳಷ್ಟು ಪುಣ್ಯವ ಕಾಣೆನೆತ್ತ 5ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗಅಂಗಣದ ಪಶು ಬಹುದೂರಕೆಂಗೆಂಡಗಂಭವಪ್ಪಿಸುವರು ನಿನ್ನ ಪರಾಂಗನೆಭೋಗಿಚದುರಅಂಗ ಶೃಂಗಾರದ ಕೊನಬುಗಾರ ನಿನಗ್ಹಿಂಗುವದೆ ಯಮದ್ವಾರಮಂಗಳ ಮಹಿಮ ಮುಕುಂದ ಮುರಾರಿ ಶ್ರೀರಂಗನ ಭಕುತಿವಿದೂರ 6ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯಇಟ್ಟರಿರದು ವಾಯುವಿರದೆಹುಟ್ಟಿ ಸುಜನ್ಮದಿ ಜಾಣರಾಗದೆಬುಧರಟ್ಟುವರೆ ದಿವಸ ಬರಿದೆಇಟ್ಟಣಿಸಿದ ಭವಗತ ಸುಖದು:ಖವುಂಡುಟ್ಟು ರಾಮನ ಮನವಿರದೆಕಟ್ಟಕಡೆಲಿ ನರಕವನುಂಬೋದುಚಿತಲ್ಲದಿಟ್ಟನಾಗು ಮಾಯೆಯಜರಿದು7ನಿತ್ಯನೈಮಿತ್ಯಕಾಮ್ಯಾದಿ ಸತ್ಕರ್ಮವಮತ್ತೆ ತಿಳಿದು ನಡೆ ಆತ್ಮಹತ್ಯವಸತ್ಯ ಅನ್ಯವಧೂಜನಸಖ್ಯಪರವಿತ್ತದಂಜಿಕೆ ಇರಲ್ಯಾತ್ಮಕರ್ತಮೂರವತಾರಿ ಪೂರ್ಣ ಬೋಧಾಚಾರ್ಯರಭೃತ್ಯನಾಗಿ ಬಾಳೊ ಆತ್ಮಎತ್ತೆತ್ತ ನೋಡಲು ಬೆನ್ನಬಿಡದೆಕಾವಪ್ರತ್ಯಕ್ಷನಾಗಿ ಪರಮಾತ್ಮ 8ಮಂಗಳಾತ್ಮರಿಗೆಅಹರ್ನಿಶಿಶ್ರೀವರಅಂಗಜಜನಕನೆಚ್ಚರಿಕೆಸಂಗಡಿಸಿದ ವಿಷಯಂಗಳಿದ್ದರೇನುತಂಗಳ ಅನ್ನದೋಕರಿಕೆಹಿಂಗದೆ ವರಸಂಗ ಮಾಡಿದರೊಯಿವರುಮಂಗಳಾತ್ಮಕನಿದ್ದ ಪುರಕೆಬಂಗಾರ ಮನೆಯ ಪ್ರಸನ್ವೆಂಕಟೇಶನಡಿಂಗರರಿಗೆ ನರ್ಕಸರ್ಕೆ 9
--------------
ಪ್ರಸನ್ನವೆಂಕಟದಾಸರು