ಒಟ್ಟು 24 ಕಡೆಗಳಲ್ಲಿ , 16 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ಪ ನಂದನಕಂದ ಮುಕುಂದಮುರಾರೆ ಇಂದಿವರಾಕ್ಷ ಗೋವರ್ದನಧಾರೆ ವೃಂದಾವನ ಸಂಚಾರ ವಿಹಾರೇ ಸಿಂಧುಶಯನ ಕ್ಷೀರಾಬ್ಧಿವಿಹಾರ 1 ಚಕ್ರಧರ ವೇಣುವಿನೋದ ಶಂಕರಾದಿ ವಂದಿತ ದಿವ್ಯಪಾದ ಬಿಂಕದಿಂದ ಕೊಳಲೂದುವನಾದ ಪಂಕಜಾದಿಗಳು ನಲಿವ ಸುಸ್ವಾದ 2 ಮಂದರಧರÀ ಗೋವರ್ಧನ ಧಾರಿ ಮಂದೆ ಗೋವತ್ಸವ ಕಾಯ್ವ ಶೌರಿ ಇಂದಿರೆಯರಸ ಶ್ರೀಹರಿಯೆ ಮುರಾರಿ ನಂದಯಶೋದೆಯ ಮೋಹದ ಶೌರಿ3 ವೃಂದಾವನದೊಳು ನಿಂದ ಗೋವಿಂದ ಮಂದಹಾಸ ಮುಖನಗೆ ಮೊಗದಿಂದ ಸುಂದರ ಗೋಪಿಯರೊಡಗೂಡಿ ಬಂದ ಮಂದರಧರ ಆನಂದ ಮುಕುಂದ 4 ಕಾಮನಪಿತ ಶ್ರೀ ಕಂಜಜನಾಭ ಕಾಮಿತ ಫಲಗಳ ಕರುಣಿಪ ಶ್ರೀಧ ಕಮಲನಾಭ ವಿಠಲ ನಿಮ್ಮ ಪಾದ ಕರುಣದಿ ನೆನೆವರ ಸಲಹುವಮೋದ 5
--------------
ನಿಡಗುರುಕಿ ಜೀವೂಬಾಯಿ
ಶ್ರೀನಿವಾಸಾಷ್ಟಕ ಪಾಹಿಮಾಮರೇಂದ್ರ ವಂದಿತ ಪಾಹಿಮಾಮ ಜರಾವೃತಪಾಹಿಮಾಮಿಭರಾಜ ಪೂಜಿತ ಪಾಹಿ ಪಾಂಡವ ಕಾಮಿತ ಪ ಶ್ರೀನಿವಾಸ ಸರೋಜ ಶೋಭಿತ ಪಾಣಿ ಕಾಂಚನ ಕಂಕಣಜ್ಞಾನ ವೀರ್ಯ ಬಲ ಪ್ರಮೋದ ಮುಖೋರು ಸದ್ಗುಣ ಕಾರಣವೇಣುನಾದ ವಿಮೋಹ ಗೋಕುಲ ಕಾಮಿನೀ ಸುಖ ಸಾಧನಸಾನುರಾಗ ಕಟಾಕ್ಷ ಸುಸ್ಮಿತ ಭಾನು ಕೋಟಿ ಸಮಾನನ 1 ವಕ್ತ್ರ ಸುಮಂದಹಾಸ ವಿಮೋಹನಮಂದರೋದ್ಧರ ಮಾಧವಾವರ ವೃಂದಪಾಲನ ಭಾವನಇಂದ್ರ ಮುಖ್ಯ ಸುರೇಂದ್ರ ಶತ್ರು ಬಲೀಂದ್ರ ದಾನವ ಬೋಧನಸಿಂಧು ಸಂಭವ ಸುಂದರಾಮೃತ ಭೋಜನಾಮರ ಮೋದನ 2 ಕಂಸಕಾಲ ಜರಾಸುತಾದ್ಯ ಸುರಾಂಶ ಸಂಘ ನಿಷೂದನಸಂಶಿತವೃತ ಕಾಮಿನೀ ವರ ಹಿಂಸಿತಾಸುರ ಕಾಮನಹಂಸನಾಶ ಭವಾಂಶ ತೋಷ ಸುಧಾಂಶು ಬಿಂಬ ನಿಕೇತನಕಂಸಚಾಪ ವಿನಾಶನಾಮರ ಸಂಶಯಾಂಕುರ ಮೋಚನ 3 ಕೂರ್ಮ ವರಾಹ ವಾಮನ ವತ್ಸ ಭಾಷಿತ ಪಾಲನಕತ್ಸಿತಾವನಿಪಾಲನ ಶತೃದಚ್ಚುತಾತ್ಮ ಸುಬೋಧನವತ್ಸವಾಟ ಚರೋರು ರಾಕ್ಷಸ ಭತ್ರ್ಸನಾಮೃತ ಸಾಧನಸ್ವೇಚ್ಛಯಾತ್ತ ಸಮಸ್ತ ವಿಗ್ರಹ ಮತ್ ಶರೀರ ಸುಖಾಸನ 4 ಪಂಕಜ ಚಾರು ಸೂನು ದಯಾಕರ 5 ಮಂದಹಾಸ ಮುಖೇಂದು ಮಂಡಲ ಸುಂದರಾಮೃತ ಭಾಷಣನಂದ ಚಿದ್ಭನ ವೃಂದ ಭೂಷಣ ನಂದಗೋಪ ಸುನಂದನಸಿಂಧುತೀರ ವಿಹಾರ ಗೋಕುಲ ಕಾಮಿನಿ ಸುಂದರೀಕರ ಪೂಜನನಂದ ಚಿದ್ಭನ ದೇವ ಭಾಸ್ಕರ ನಂದಿನೀ ರತಿ ಸಾಧನ 6 ಸಾರಥಿ ವೃಷ್ಣಿವಂಶ ಸಮುಜ್ವಲಪ್ರೇಷ್ಠ ಸಂಸದಿ ಸೇವಿತಾಮರ ಸರ್ವದಿವೌಕ ಸಾಮುರು ಮುಷ್ಟಿಕಾದ್ಯ ಸುರಾನಳಮುಷ್ಟಿಧಾನ್ಯದ ಕಷ್ಟ ನಾಶನ ವೃಷ್ಣಿವರ್ಯ ಮಹಾಬಲ ತುಷ್ಟದಾಶ್ರಿತ ಸತ್ಫಲವಿಷ್ಣುರೂಪಮಮೇಷ್ಟ ದೋಹವಶಿಷ್ಠ ಸೇವಿತ ವಿಠ್ಠಲ 7 ವಕ್ತ್ರ ನಿಷೇವಣಬಂಧನಂ ಪರಿಹೃತ್ಯ ಮಾಮವ ಸುಂದರಾಂಬರ ಭೂಷಣ 8
--------------
ಇಂದಿರೇಶರು
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು
ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
--------------
ಪುರಂದರದಾಸರು
ಧನ್ಯ ಧನ್ಯ ನಂದಗೋಕುಲ ಪ.ಆ ನಂದವ್ರಜದ ಪೂರ್ವಪುಣ್ಯವೇನೊಆ ನಂದನಾ ಗೋಪಿಕಂದನಾ ಕಿಶೋರಾನಂದವೇನೊಆನಂದಮುನಿವರದನಾನಂದವೇನೊ ಅ.ಪ.ಗೋವರೆಳೆಯಮ್ರ್ಯಾಳ ನಿವಹದಲ್ಲಿನಿಂತು ರಂಗ ಕೋಹುಕ್ಕಕೋಹೊಹವಳಿ ಹಂಡಿ ಕಾಳಿ ಬಾ ಕೋಹುಕ್ಕ ಕೋಹೊಧವಳಿ ಚಿಂಚಿ ಕಪಿಲೆ ಬಾ ಕೋಹುಕ್ಕ ಕೋಹೊಗೌರಿ ಮೈಲಿ ನೀಲಿ ಬಾಯೆಂದುವಿವರಿಸಿ ಕರೆದು ತೃಣದ ಕವಳವನ್ನೀಡುವಾಆವಿನ್ನಾವ ಸಂಚಿತೊ ಪಾವÀನೆಂತೊ ಪುಲ್ಲಿನಾ 1ಅಮ್ಮೆಶೋದೆ ಕಟ್ಟಿದ ನಿರ್ಮಲ ಕಲ್ಲಿಯ ಬುತ್ತಿಡೋಹಕ್ಕಡೋಹೋತÀಮ್ಮ ಬನ್ನಿರುಣ್ಣ ಬನ್ನಿ ಡೋಹಕ್ಕಡೋಹೊನಮ್ಮ ಬುತ್ತಿ ನಿಮ್ಮ ಬುತ್ತಿ ಡೋಹಕ್ಕಡೋಹೊನಮ್ಮ ನಿಮ್ಮುಪ್ಪಿನಕಾಯಿ ಡೋಹಕ್ಕಡೋಹೊಕಮ್ಮಗಿಹುದೆಂದು ಕೊಡುವ ಒಮ್ಮೆ ಸೆಳೆದು ಮೆಲ್ಲುವಾ ಉತ್ತಮ್ಮರಾವ ಜೀವರೊ ಧರ್ಮದೊದಗೆಂತುಟೊ 2ಮಾಧವಮಂಜುಳ ಶಬ್ದದೂದುವ ಸುವರ್ಣವೇಣುನಾದಸ್ವಾದ ಲುಬ್ಧರಾದರಾ ಗೋಪಕನ್ಯೇರುನಾದಸ್ವಾದ ಲುಬ್ಧವಾದವಾ ಗೋವತ್ಸವುನಾದಸ್ವಾದ ಲುಬ್ಧವಾದವಲ್ಲಿ ವೃಕ್ಷವುಆದರಿಪ ನಾರಿಯರಗಾಧ ತಪವಲ್ಲವೆಪಾದಪ ಪಶುಗಳೆಲ್ಲ ಆ ದೇವರ್ಕಳಲ್ಲವೆ 3ತುರುವ ಮೇಯಿಸಿ ವ್ರಜಕೆ ಮರಳಿಸಿಗೋಪಾಲರೇಯ ಹೈಯಿ ಹೈಯೆಂದುತರುಬಿ ತಡೆಯಿರೆನ್ನುತ ಹೈಯಿ ಹೈಯೆಂಬಸ್ವರದಿ ಕೊಳಲನೂದುತ ಹೈಯಿ ಹೈಯೆಂದುಭರದಿಚೆಂಡು ಚಿಮ್ಮುತ ಹೈಯಿಹೈಯೆಂದುಧರೆಯ ಮೇಲಿಂಬಾಡುವ ಕರದ ದಂಡಿಗೇರುವತರಳರಾವ ಭಾಗ್ಯರೊ ಧರಣಿ ಯಾವ ಮಾನ್ಯಳೊ 4ಒಪ್ಪುವ ಗೋಧೂಳಿ ಮೈಯಲಿಪ್ಪ ಪೊಂದೊಡಿಗೆ ಚೆಲ್ವಶಾಮಲಾಮಲಾಂಗಗುಪ್ಪಾರತ್ಯೆತ್ತಿದರು ಶಾಮಲಾಮಲಾಂಗಗೆಕುಪ್ಪಿರಿವ ಕರುಗಳ ಶಾಮಲಾಮಲಾಂಗದÀರ್ಪಿನಾವ ರಂಬಿಸೆ ಶಾಮಲಾಮಲಾಂಗಕ್ಷಿಪ್ರಪಾಲ್ಗರೆದು ನಂದ ಗೋಪಾಂಗನೆಯರೀವ ನಮ್ಮಪ್ಪ ಪ್ರಸನ್ನವೆಂಕಟಾಧಿಪ್ಪನೆಂದು ಕಾಂಬೆನಾ 5
--------------
ಪ್ರಸನ್ನವೆಂಕಟದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ಪಾಲಿಸೆನ್ನ ಮಂದಬಾಲಿಶನ್ನಪಾಲಗಡಲೊಡೆಯ ಸಿರಿಲೋಲ ಪ.ಅಂಬುರುಹಸಂಭವ ತ್ರಿಯಂಬಕ ಶೇಷಾಂಬರಗದಂಭೋಳಿಸಂಭೃತನುತಾಂಘ್ರಿ 1ಅಷ್ಟಕೃತ್ಯ ಅಷ್ಟವಿಭವ ಅಷ್ಟ ಭೋಗ್ಯಥೇಷ್ಟ ಶಕ್ತಅಷ್ಟಹರಿತ ಶ್ರೇಷ್ಠವರ್ಯ ಶ್ರೇಷ್ಠ 2ದ್ಯುಗ ಶಶಿಭಾಯುಗನಯನ ಜಗಜಠರಘಹರಾಹಿನಗನಿಲಯ ಜಘನಕಟಿಪಾಣಿ 3ಕಿರೀಟ ಕುಂಡಲರಿದರಕೇಯೂರಕೌಸ್ತುಭಸಿರಿವತ್ಸವರಾಂಬರ ಮನೋಹರ ಮೇಖಲಧಾರಿ 4ದ್ರೌಪದಿ ಮುನಿವಧು ಬಾಲಧ್ರುವ ಪ್ರಹ್ಲಾದ ವಿಭೀಷಣೋದ್ಧವಾಕ್ರೂರ ಮುಖ್ಯವಮಾನಹಾರಿ 5ಋಗ್ಯಜುಸಾಮನಿಗಮಧರವಗೋಚರ ಮುನಿಗಣ ಸುಮನಗೇಹನಂತ ಸುಗುಣಾನಂದ ಪೂರ್ಣ 6ಮಧು ಕೈಟಭ ಮದನೇಮಿ ಜಲಂಧರಕಂಬುಸದನಖಳಾಬುಧಿ ಕುಲಾಂತಕ ದ್ವಿಜೋಪಕಾರಿ 7ಋಷಿ ಹನುಮ ರಸಗಾಯನ ತೋಷಭರಿತ ಹಾಸವದನಪ್ರಸನ್ನ ವೆಂಕಟೇಶ ನಮೋ ಸ್ವಾಮಿ 8
--------------
ಪ್ರಸನ್ನವೆಂಕಟದಾಸರು
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿಪಾಲಾಬ್ಧಿಶಯನ ಕೃಪಾಳು ಪರೇಶ ಪ.ಆಲಸ್ಯವಜ್ಞಾನಜಾಲ ಪರಿಹರಿಸುನೀಲನೀರದನಿಭ ಕಾಲನಿಯಾಮಕ ಅ.ಪ.ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-ಧಾರಾಧೇಯಾಪಾರ ಮಹಿಮನೆಸಾರಭೋಕ್ತ್ರವೆಯೆನ್ನಘೋರದುರಿತಭಯದೂರಮಾಡುತ ಭಕ್ತಿ ಸಾರವನೀಯುತ 1ಪಾಪಾತ್ಮಕರೊಳು ಭೂಪಾಲಕನು ನಾಕಾಪಾಡೆನ್ನನು ಗೋಪಾಲ ವಿಠಲಶ್ರೀಪದದಾಸ್ಯವ ನೀಪಾಲಿಸುಭವತಾಪಪ್ರಭಂಜನ ಹೇ ಪರಮಾತ್ಮನೆ 2ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸುಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆಕೃಷ್ಣಗೋವಿಂದನೆ ಬೆಟ್ಟದೊಡೆಯಹರಿ3ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆದೋಷಸಮುದ್ರದೊಳೀಜಾಡುವೆನುಕೇಶವ ತವಪದ ದಾಸಜನರ ಸಹವಾಸವಕೊಡು ಮಹಾಶೇಷಪರಿಯಂಕನೆ4ಛತ್ರಪುರೈಕಛತ್ರಾಧಿಪ ನಿನ್ನಪ್ರಾರ್ಥಿಸುವೆನು ಪರಮಾರ್ಥಹೃದಯದಿಕರ್ತಲಕ್ಷ್ಮೀನಾರಾಯಣ ಗುಣನಿಧಿ ಶ್ರೀವತ್ಸವಕ್ಷಸ್ಥಲ ಕೌಸ್ತುಭಾಭರಣನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀಹರಿ ಸಂಕೀರ್ತನೆ2ಶರಣು ಹೊಕ್ಕೆನೊ ನಿನ್ನ ಜಾತರೂಪಾಂಗದವರದ ಕೈಪಿಡಿಯನ್ನಪರಮೇಷ್ಠಿವಂದಿತ |ಚರಣಸುರ ಶಿರೋರನ್ನ ಸುಖ ಜ್ಞಾನ ಪೂರ್ಣಾಪಉರಗಪರ್ವತನಿಲಯಭಕತರ ಕರೆದು |ವರಗಳ ಕೊಡುವ ವೆಂಕಟ | ಗರುಡವಾಹನಲಕ್ಷ್ಮೀಪತಿ ಮಂದರಧರಾಧರಧಾರ ದೇವ ಅ.ಪ.ಕಾಮಿತಾರ್ಥದ ರಂಗ ಮಧ್ವಮುನಿ ಪೂಜಿತ |ರಾಮ ಭವಭಯಭಂಗದಶರೂಪಿ ಶರಧಿಜಾ |ಪ್ರೇಮ ಸುಜನರ ಸಂಗ ಕೊಡು ಎಂದೆಂದಿಗೂ ||ತಾಮಸರಿಪುಕುರಂಗಾಅಂಕಸಖಸಾಂಗ |ಹೇಮಗರ್ಭನ ನಾಭೀ ಕಮಲದಿ |ನೀ ಮುದದಿ ಪಡೆದೀ ಚರಾಚರ |ನೇಮದಿಂದಲಿ ಸೃಜಿಸ ಪೇಳಿದ |ಸ್ವಾಮಿ ನೀ ಸರ್ವರೊಳು ವ್ಯಾಪಿಸಿ |ಭೂಮಿಯೊಳು ಸಾತ್ವಿಕರು ರಾಜಸ |ತಾಮಸರ ನಿರ್ಮಾಣ ಮಾಡಿ ಸು |ಧಾಮಸಖಿಗತಿ ದುರ್ಗತಿಗಳನು |ಈ ಮರುಳು ಜನರಿಗೀಯುತ |ನೀ ಮಡಿವಂತನು ಎನಿಸುವೆ ಲೇಸುತ್ರಾಮಾ ವರಜ ಬಲು ಸೋಜಿಗವೊ ಇದು |ವ್ಯೋಮನ ದೀಪದ ನೀ ಮಾಡಿದ ಮರ್ಯಾದೆಯೋಮರಳ್ಯೊಬ್ಬರು ಪೇಳುವರುಂಟೇ 1ಪುಂಡರೀಕದಳಾಕ್ಷ ತನ್ಮಾತ್ರಾ ದೂರ |ಪಾಂಡುರಂಗಘ ಕಕ್ಷಗಾಂಗೇಯಗೀತ |ಪಾಂಡುನಂದನ ಪಕ್ಷದರಚಕ್ರಪಾಣಿ |ಪುಂಡ ಕೌರವ ಶಿಕ್ಷ ಶ್ರೀವತ್ಸವಕ್ಷ |ಕುಂಡಲೀಶ ಶಯನ ವಿದುರಸಖ| ಮಾ-ರ್ತಾಂಡ ಕೋಟಿ ಪ್ರಕಾಶಹರಿವು|ದ್ದಂಡ ಮಹಿಮನೆ ಕಂಡ ಕಂಡವ |ರಂಡಲೆಯ ಯನ್ನ ಶರೀರವು ||ಬೆಂಡು ಆಯಿತು ಕಾಣೆ ಕಾಯ್ವರ |ಜಾಂಡೋದರ ನಿನ್ನುಳಿದು ಓರ್ವರ |ದಂಡಿಸದೆ ಬರುತಿಪ್ರ್ಪ ಜನ್ಮವ |ಖಂಡಿಸಿ ನಿನ್ನ ನಾಮವುಳಿಸೊ ||ಮಂಡೋದರೀವಲ್ಲಭಶಕಟ ಪ್ರ |ಚಂಡ ಮುರಾದಿಖಳಕುಲಾಂತಕ |ದಂಡಾತ್ಮಜ ರಕ್ಷಕಹರಿಮೇ |ಷಾಂಡಜ ಸಂಹರ ಕರುಣದಿ ನೋಡೋ2ಧರಣಿಯೊಳಗಿನ ರಾಯರೆಂಬುವರು ವೇಷಕಾ |ಪುರುಷನಿಗೆ ಬಹು ದ್ರವ್ಯವಿತ್ತಿನ್ನು ವೇಷವ |ತರಲಿಗೊಡರೆಲೊ ದೇಹ ಬಹು ತಾಳಿ ಬಂದೆನೊ |ಕರುಣವಿಲ್ಲದೆಜೀಯ| ಸಾಕೆನ್ನೂ ಮಾಯಾ- ||ವರನೆ ಅಟವು ಮಾತ್ರ ಹಣ ಕೊಡ- |ದಿರೊ ನಾ ಬಲ್ಲೆನೊ ಕುಡಿದ ಸ್ತನ - ಪಯ |ಶರಧಿದ್ವಿಗುಣವು ಯನ್ನ ಅಸ್ಥಿಯು |ಗಿರಿಗೆ ದ್ವಿಗುಣವಾಗಿಹ್ಯವೊ ಇಂತಿ |ಕರೆ ಕರೆಯ ನಾನಾರಿಗುಸಿರಲಿ |ಸುರಪತಿಪ್ರಾಣೇಶ ವಿಠ್ಠಲ |ತರುಣಿ ಸುತ ಧನ ಪಶು ಎಂಬುವ ಈ |ಪರಮಮೋಹದ ಮಡುವೋಳ್ಬಿದ್ದು ||ಹರಿನಿನ್ನೊಂದಿನ ಸ್ಮರಿಸಿಲ್ಲವೋ ನೀ |ನರಿಯೆ ನಿಂತ್ಯಲ್ಲವೋ ಪರತರ |ಕರಿವರದಿ ಮ್ಯಾಲೆನರಿದದು ಮಾಡುವ - |ದರಿ ಕರಿಷಂಡ ಮೃಗೇಂದ್ರ ಪರಾಶು || ಶರಣು 3
--------------
ಪ್ರಾಣೇಶದಾಸರು