ಒಟ್ಟು 18 ಕಡೆಗಳಲ್ಲಿ , 8 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಖ ಪೂರ್ಣ ವಿಠಲನೆ | ಸಲಹ ಬೇಕಿವಳಾ ಪ ವಿಖನ ಸಾಂಡವ ಬಾಹ್ಯ | ಒಳಗೆಲ್ಲಾ ವ್ಯಾಪ್ತ ಅ.ಪ. ನಾರಿಮಣಿ ಪತಿಸೇವೆ | ಸಾರತರದಲಿಗೈದುಭೂರಿಭಕ್ತಿಯಲಿಂದ | ಸಂತಾನಕಾಗೀಶ್ರೀ ರಮಣ ತವಪಾದ | ದಾರಾಧನೆಯಗೈದುಭೋರಿಟ್ಟು ಪ್ರಾರ್ಥಿಪಳು ಕಾರುಣ್ಯ ಮೂರ್ತೇ 1 ಭಕುತರ್ಗಭೀಷ್ಟಗಳ | ನೀ ಕೊಡುವಿ ಎಂತೆಂಬಉಕುತಿಯನೆ ನಾ ಕೇಳಿ | ಅರಿಕೆಯನೆ ಮಾಳ್ವೇಈಕೆಯ ಮನೋರಥವ | ನೀ ಕೊಟ್ಟು ಸಾಧನವವೈಖರಿಯಲಿಂದೆಸಗೊ | ರುಕುಮಿಣೀ ಪತಿಯೇ 2 ಉಚ್ಛನೀಚಾದಿಗಳು | ಸ್ವಚ್ಛ ತಿಳಿಸಿವಳೀಗೆಅಚ್ಛ ಕನ್ನಿಕೆ ರಮಣ | ಅಚ್ಯುತಾನಂತಾಮುಚ್ಚು ಕಾಣಿಕೆಗೊಂಡು | ಇಚ್ಛೆ ಪೂರೈಸುವುದುಸಚ್ಚದಾನಂದಾತ್ಮ | ಚಿತ್ಸುಖಪ್ರದನೇ3 ಹರಿಗುರು ಸದ್ಭಕ್ತಿ | ದುರ್ವಿಷಯ ವೀರಕ್ತಿಹರಿಯ ವಿಷಯಕ ಜ್ಞಾನ | ಕರೋಣಿಸೋ ದೇವಾನಿರುತನಾಮ ಸ್ಮರಣೆ | ಇರಲಿವಳ ಮುಖದಲ್ಲಿಮರುತಾಂತರಾತ್ಮಕನೆ | ಶಿರಿ ರಮಣ ಹರಿಯೇ 4 ಶ್ರೀವತ್ಸಲಾಂಚನನೇ | ಭಾವುಕರ ಪರಿಪಾಲಗೋವತ್ಸದನಿ ನಾವು | ತೀವ್ರ ಬರುವಂತೇಶ್ರೀವರ ಶ್ರೀಗುರೂ | ಗೋವಿಂದ ವಿಠಲನೆನೀವೊಲಿಯ ಬೇಕೆಂದು ಬೇಡ್ವೆ ಗೋಪಾಲ 5
--------------
ಗುರುಗೋವಿಂದವಿಠಲರು
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು