ಒಟ್ಟು 21 ಕಡೆಗಳಲ್ಲಿ , 16 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣು ಪ ಪರಿಹರಿಸು ಕರುಣಾಳು ಬಿನ್ನಪವ ಕೇಳು ಅ.ಪ. ವಾಸವಾದ್ಯಮರನುತ ವನಜಸಂಭವನ ಸುತ ನೀ ಸಲಹೊ ಕೈಲಾಸವಾಸ ಈಶ ಕ್ಲೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ 1 ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ ಶೋಕಕೊಡುವುದು ದೈತ್ಯಜನಕೆ ನಿತ್ಯ ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು 2 ಪವಮಾನತನಯ ನಿನ್ನವರಲ್ಲಿ ಕೊಡು ವಿನಯ ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ ಪವನ ದ್ವಿತಿಯರೂಪ ಸತತ ಎನ್ನಯಪಾಪ ಅವಲೋಕಿಸದಲೆನ್ನ ಸಲಹೊ ಸುರಮಾನ್ಯ 3 ಶೇಷನಂದನ ಶೇಷಭೂಷಣನೆ ನಿಶೇಷ ದೋಷರಹಿತನ ತೋರು ಕರುಣವನು ಬೀರು ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ ಶೋಷಿಸು ಭವಾಮಯವ ಬೇಡುವೆನು ದಯವ4 ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಜ ಮಮ ದುರ್ಗುಣಗಳೆಣಿಸದಲೆ ಜಗದೆ ಮೇಲೆ ನಿರ್ಗತಾಶನ ಜಗನ್ನಾಥ ವಿಠಲನ ಸ ನ್ಮಾರ್ಗವನೆ ತೋರು ಈ ದೇಹ ನಿನ ತೇರು 5
--------------
ಜಗನ್ನಾಥದಾಸರು
ಶಿವ ಮಹದೇವಗೆ ಶರಣೆಂಬೆನಾ ಮಾಯಾ ಶಿರ ಮಾಲಾಧರನಿಗೆ ಶರಣೆಂಬೆ ನಾ ಪ ಪಾರ್ವತಿ ರಮಣಗೆ ಶರಣೆಂಬೆ ನಾ ಭವತಾಪ ಸಂಹಾರಗೆ ಶರಣೆಂಬೆನಾ ಸರ್ವಕಾಲ ಬಿಡದೆ ಶರಣೆಂಬೆನಾ ಸಾಧು ಸಜ್ಜನರ ಪೊರೆವಗೆ ಶರಣೆಂಬೆನಾ 1 ನಂದಿವಾಹನಗೆ ಶರಣೆಂಬೆನಾ ನಾಗ ಭೂಷಣಗೆ ಶರಣೆಂಬೆನಾ ಸುಂದರ ಮೂರ್ತಿಗೆ ಶರಣೆಂಬೆನಾ ಸುರಮುನಿ ವಂದ್ಯಗೆ ಶರಣೆಂಬೆನಾ 2 ಗಜಚರ್ಮಧಾರಿಗೆ ಶರಣೆಂಬೆನಾ ಕೈಲಾಸ ವಾಸಿಗೆ ಶರಣೆಂಬೆನಾ ಭಯನಾಶ ಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 3 ಲಯಕರ್ತ ಮೂರ್ತಿಗೆ ಶರಣೆಂಬೆನಾ ಕೈಲಾಸವಾಸಿಗೆ ಶರಣೆಂಬೆನಾ ಭಯನಾಶಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 4 ಆಕಾರಶೂನ್ಯ ಪರೇಶಗೆ ಶರಣೆಂಬೆನಾ ಅಖಿಲಾಕಾರ ತಾನೆಂಬಗೆ ಶರಣೆಂಬೆನಾ ಲೋಕದೋಳ್ ಭಕ್ತರ ಪೊರೆವಗೆ ಶರಣೆಂಬೆನಾ ಶ್ರೀಲೋಲ ಹೆನ್ನೆವಿಠ್ಠಲ ಪ್ರಿಯಗೆ ಶರಣೆಂಬೆನಾ 5
--------------
ಹೆನ್ನೆರಂಗದಾಸರು
ಶ್ರೀನಿವಾಸ ಮೂರುತಿಗೆ ಜಯತು ಮಂಗಳಂ ಶೇಷಾಚಲವಾಸನೀಗೆ ಶುಭಮಂಗಳಂ ಪ ರಂಗಮಾಣಿಕದ ದಿವ್ಯ ಕುಂದಣದ ಕಿರೀಟಕ್ಕೆ ಸುಗಂಧವಾದ ಕರ್ಪೂರ ಕಸ್ತೂರಿ ತಿಲಕಕೆ ಕಂದರ್ಪನ ಬಿಲ್ಲಪೋಲ್ವ ಚಂದವಾದ ಪುಬ್ಬುಗಳಿಗೆ ಮಂದಹಾಸದಿಂದ ನೋಳ್ಪ ಅರವಿಂದನಯನಗಳಿಗೆ 1 ನಾಸಿಕಕೆ ಕರ್ಣಕುಂಡಲಕೆ ಸುವಾಸನೆವುಳ್ಳ ಅಧರಕ್ಕೆ ಆಸುಂದರವಾದ ಶ್ರೀವತ್ಸ ಕೌಸ್ತುಭಮಣಿಗೆ ಲಾಸವಾಸಿ ಪಿತನ ಪಡೆದ ನಾಭಿಯ ಕಮಲಕೆ 2 ಶಂಖ ಚಕ್ರ ನಾಗ ಬಾಪುರಿ ತೋರ್ಪಹಸ್ತಪಾದಗಳಿಗ ಲಂಕಾರವಾದ ಪೀತಾಂಬರದ ವಡ್ಯಾಣದಂದಕ್ಕೆ ಅಂದುಗೆ ಗೆಜ್ಜೆಗಳಿಟ್ಟ ಅಂದವಾದ ಪಾದಗಳಿಗೆ ನಖ ಅಂಗುಷ್ಟದ ಬೆಳಕಿಗೆ 3
--------------
ಯದುಗಿರಿಯಮ್ಮ
ಕೈ ಮುಗಿದು ಬೇಡುವೆನು ಕೈಲಾಸವಾಸಾ ||ವಹಿಲದಲಿ ಸಲಹೆನ್ನ ಈಶ ಗಿರಿಜೇಶಾ ಪಅಷ್ಟ ಭಾಗ್ಯವು ನೀನೆ | ಇಷ್ಟಮಿತ್ರನು ನೀನೆ |ಹುಟ್ಟಿಸಿದ ತಾಯ್ತಂದೆ |ವಿದ್ಯೆಗುರುನೀನೆ |ಸೃಷ್ಟಿ ಮೂರಕೆ ನೀನೆ ಅಧ್ಯಕ್ಷನೆನಿಸಿರುವೆ |ರಕ್ಷಿಸೆನ್ನನು ಜಟಾಜೂಟ ನಿಟಿಲಾಕ್ಷ 1ಮಾಯಾಪಾಶದಿ ಸಿಕ್ಕಿ |ಕಾಯಸುಖವನು ಬಯಸಿ |ಆಯತಪ್ಪಿದೆ ಮುಂದುಪಾಯವೇನಿದಕೆ |ಜೀಯನೀನೆಂದೆಂಬ | ನ್ಯಾಯವರಿಯದೆ ಕೆಟ್ಟೆ |ಕಾಯೊ ದಯದಲಿ ಮೃತ್ಯು | ಬಾಯಿಗೊಪ್ಪಿಸದೆ 2ಘೋರತರ ಸಂಸಾರ ಸಾಗರದಿ ಮುಳುಮುಳುಗಿ |ಕ್ರೂರ ನಕ್ರನ ಬಾಯಿಗಾಹಾರವಾದೆ |ದಾರಿಕಾಣದೆ ಬಳಲಿ ಮಾರಹರ ನಿನ್ನಂಘ್ರಿ |ಸೇರಿದೆನು ಗೋವಿಂದದಾಸನನು ಸಲಹೋ 3
--------------
ಗೋವಿಂದದಾಸ
ಗಂಗಾಧರ ಸುಮತಿ ಪಾಲಿಸೋ | ಪಾಂಡು |ರಂಗನ ಚರಣಾಬ್ಜ ಭಜನೆಮಾಡುನಿತ್ಯ ಪವೈಕಾರಿಕಾದಿತ್ಯರೂಪದನುಜರಿಗೆ |ಶೋಕಕೊಡುವದು ನಿರಂತರದಿ ||ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕೀ |ಹೃತ್ಕಮಲಮಾರ್ತಾಂಡಭಕ್ತ ವತ್ಸಲ 1ವಾಸವಾದ್ಯಮರ ವಂದಿತನೆ ಪದ್ಮಜ ಸುತ |ನೀ ಸಲಹುವದೋ ಕೈಲಾಸವಾಸ ||ಕ್ಲೇಶಮೋದವು ಸಮ ತಿಳಿಸೋ ಅಶ್ವತ್ಥಾಮ |ದೋಷರಹಿತನೆ ದಕ್ಷಾಧ್ವ ರನಾಶಕ 2ಪವಮಾನತನಯನಿನ್ನವರಲ್ಲಿ ಕೊಡು ಸ್ನೇಹ |ದಿಙ ವಸನಾದಿಯಲ್ಲಿ ಎನ್ನಿರವ ಬಲ್ಲಿ ||ಅವಲೋಕಿಸದೆ ಎನ್ನನೇಕ ಪಾಪಗಳನ್ನು |ತವಕಉದ್ಧರಿಸೋ ವಿಯತ್ಪತಿ ಜನಕ 3ಸಾಮಜಾಜಿನ ವಸ್ತ್ರ ಭಸ್ಮ ಭೂಷಿತ ದೇವ |ಸೋಮಶೇಖರನೆ ಬಿನ್ನಪವ ಕೇಳು ||ಪ್ರೇಮದಿಂದಲಿ ಭಾಗವತರ ಸಂಗತಿನಿತ್ಯ|ಶ್ರೀ ಮನೋರಮನ ಚರಿತೆ ಪಾಡಿಸುವದಯ್ಯ 4ಶ್ರೀಕಂಠ ನೀ ಪೇಳಿದನ್ಯಶಾಸ್ತ್ರಕೆ ಬುದ್ಧಿ |ಸೋಕದೆಗುರುಮಧ್ವ ಮುನಿಮತವೇ ||ಬೇಕು ಜನುಮ ಜನುಮಕ್ಕೆನಿಸೋ ತ್ರಿಯಂಬಕ |ನಾ ಕೈಯ್ಯ ಮುಗಿವೆ ಪ್ರಾಣೇಶ ವಿಠಲದಾಸ 5
--------------
ಪ್ರಾಣೇಶದಾಸರು
ನಂದನ ಕಂದ ಗೋವಿಂದ ಮುಕುಂದಇಂದಿರಜವಂದಿತ ಇಂದುಕುಲೇಂದ್ರ ಪ.ಗೋರಸಚೋರ ಗೋಪೀರಮಣ ಧೀರಗೋರಜಪೂರಿತಚಾರುಅಲಂಕಾರಗೋರಕ್ಷ ಕ್ರೂರಸಂಹಾರ ಉದಾರವೀರ ಸುಯಮುನಾತೀರ ವಿಹಾರ 1ಶೇಷಶೀರ್ಷನೃತ್ಯ ಹಾಸ ವಿಲಾಸವಾಸವಮದನಾಶ ವ್ರಜಪೋಷ ನಿರಾಶರಾಸಕ್ರೀಡಾಸುಖಾಧೀಶ ರಮೇಶದಾಸಾಕ್ರೂರಾಶ್ರಯ ಕಂಸವಿನಾಶ 2ಪುಣ್ಯಗುಣಾನ್ವಿತ ಸುವರ್ಣವೇಣುಗಾಯನ್ನಚಿನ್ಮಯಪನ್ನಗನಾಗನಿಲಯ ಪೂರ್ಣಮನ್ನಿಸು ನಿನ್ನ ಭೃತ್ಯನ್ನ ಪ್ರಸನ್ವೆಂಕಟ ಧನ್ಯ ಇವ ನನ್ನವನೆನ್ನೆ 3
--------------
ಪ್ರಸನ್ನವೆಂಕಟದಾಸರು