ಒಟ್ಟು 18 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜನಯನಾ ಹೇ ಶ್ರೀನಿವಾಸ ಪ ಸರಸಿಜಭವಪಿತ ಸರಸಿಜಾಕ್ಷಿಧವ ಉರಗಶಯನ ನೀ ಉರಗಭೂಷಣವಂದ್ಯ ಅ.ಪ ಮೂರುಲೋಕದೊಡೆಯನಾದವ ನೀನು ತೋರೋ ನಿನ್ನ ಮಹಿಮೆಯಾ ಗಾರುಗೊಂಡಿಹೆ ಪಾರವಾರದೊಳು ತೋರಿ ನಿನ್ನಯ ಪದ ಸೇರಿಸುತಿರವ 1 ಬಾಲಕನ ಕಲಭಾಷೆಯ ಮಾತೆಯು ಬೇಗ ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ ಕುಲಲಾವರದನಾದಿ ನೀಲಮೇಘಶ್ಯಾಮಾ 2 ದಾನವಾಂತಕ ನೀನು ಶಿರಿವತ್ಸಾಂಕಿತ ದೀನÀಜನರ ಸುರಧೇನು ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು ದೇನುವರರ್ಪಿಸಿದಿ ಪ್ರಾಣೇ±ವಂದಿತ 3
--------------
ಸಿರಿವತ್ಸಾಂಕಿತರು
ರಕ್ಷೀಸಬೇಕೆಮ್ಮನನುದಿನದಲ್ಲಿ |ಪಕ್ಷಿರಾಜನೆ ಹರೀಸ್ಯಂದನಾ ಸ್ವಾಮಿ ಪಇಂದ್ರಲೋಕಕ್ಕೆ ಪೋಗಿ ಕಲಹ ಮಾಡಿಪೀಯೂಷ|ತಂದನುಜರಿಗಿತ್ತ ಧೀರನೆ |ಸಿಂಧೂವಿನೊಳಗಿದ್ದಕೂರ್ಮಗಜಮಂದಿಯಾ |ತಿಂದು ದಕ್ಕಿಸಿಕೊಂಡ ವೀರನೇ 1ಪಾದಪ ಮುರಿದು ವಾಲಖಿಲ್ಲ್ಯೆರ ಪೋಷಿಸಿ |ಮೋದದಿಂದ ವರವು ಪಡಿಯೋ ||ಮಾಧವನಂಘ್ರಿ ಕಮಲದೊಳಗೆ ಇಟ್ಟ |ಹೇ ದಯಾಂಬುಧಿ ನಿನಗೆಣೆ ಯಾರೋ 2ಅರುಣಾನುಜ ಮಾತೆಯ ಬಯಕೆ ಪೂರೈಸೀದ |ಪರಮಸಮರ್ಥ ಭಕ್ತವತ್ಸಲಾ ||ಉರಗಾಶನನೆ ನಿನ್ನ ಪ್ರಾರ್ಥಿಸುವೆನುನಿತ್ಯ|ಹರಿಸೇವೆ ವಿನಹ ಮತ್ತೊಂದೊಲ್ಲೆನೊ 3ಪ್ಲವಗರ ಪಾಲಿಸಿದೆ ರಘುಜಾನ ಒಲಿಸಿದೆ |ತವಕಬಲಿವೈದ ಮುಕುಟ ತಂದೆ ||ದಿವಿಜರಿಗೆ ಸಹಾಯವಾದೆ ವಿಪ್ರರ ಕಾಯ್ದೆ |ಅವರಾರೇನರಿಯರೊ ನಿನ್ನ ಲೀಲೆ 4ಶ್ರೀನಾಥನ ಪಾದಾಬ್ಜದಲ್ಲಿನಿರತಮನ |ತಾನಿರುವಂತಾಗಲಿ ಖೇಚರಾ ||ಮೌನಿ ಕಶ್ಯಪ ಜಾತಾ ಲಾಲಿಸುವದೆನ್ನ ಮಾತಾ |ಪ್ರಾಣೇಶ ವಿಠಲನ ನಿಜದೂತ 5
--------------
ಪ್ರಾಣೇಶದಾಸರು
ಶರಣು ನಿನ್ನ ಚರಣಗಳಿಗೆ ಭಾರತೀಶನೆ |ಕರವಪಿಡಿದು ಸಲಹೋ ಬಿಡದೆ ಭಾರತೀಶನೆ ಪಎಲ್ಲ ಕಡೆಗೆ ವ್ಯಾಪ್ತ ನೀನೆ ಭಾರತೀಶನೆ |ಅಲ್ಲಿ ವಿಷವ ಕುಡಿದೆಯೆಂದು ಭಾರತೀಶನೆ ||ಗೆಲ್ಲಿಸಿದೆಯೊ ಸರ್ವ ಸುರರ ಭಾರತೀಶನೆ |ಬಲ್ಲಿದನು ನಿನಗೆಣೆ ಯಾರೋ ಭಾರತೀಶನೆ1ಅಂಜನಾ ಕುಮಾರನಾಗಿ ಭಾರತೀಶನೆ |ಕಂಜನಾಭನಂಘ್ರಿ ಭಜಿಸಿ ಭಾರತೀಶನೆ ||ಲಿಂಜದುದಧಿದಾಟಿ ಪೋಗಿ ಭಾರತೀಶನೆ |ಸಂಜಿ ಚರರ ಸಂಹರಿಸಿದೆಯೊ ಭಾರತೀಶನೆ2ಕುಂತಿ ಜಠರದಿಂದ ಜನಿಸಿ ಭಾರತೀಶನೆ |ಹಂತ ಕೌರವರನ ತರಿದಿ ಭಾರತೀಶನೆ ||ಕಂತುಪಿತನ ಕರುಣ ಪಡೆದೆ ಭಾರತೀಶನೆ |ಅಂತಗಾಣೆ ನಿನ್ನ ಮಹಿಮೆಗೆ ಭಾರತೀಶನೆ 3ಯತಿಯರೂಪಇಳಿಯೊಳಾಗಿ ಭಾರತೀಶ£ É |ಮತಿಯ ಸರ್ವ ಬುಧಂಗಿತ್ತೆ ಭಾರತೀಶನೆ ||ಸತತ ನಿನ್ನ ಪೂಜಿಪರಿಗೆ ಭಾರತೀಶನೆ |ಗತಿಯ ಕೊಡುವೆ ದೋಷ ಕಳೆದು ಭಾರತೀಶನೆ 4ಘನ್ನ ಪ್ರಾಣೇಶ ವಿಠಲ ನಾಳೆ ಭಾರತೀಶನೆ |ಬಿನ್ನಪವನು ಲಾಲಿಸುವದೋ ಭಾರತೀಶನೆ ||ನಿನ್ನ ದಾಸನೆನಿಸಬೇಕೋ ಭಾರತೀಶನೆ |ಅನ್ಯ ವಿಷಯವೊಂದನೊಲ್ಲೆ ಭಾರತೀಶನೆ 5
--------------
ಪ್ರಾಣೇಶದಾಸರು