ಒಟ್ಟು 27 ಕಡೆಗಳಲ್ಲಿ , 15 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು
ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ ಸಾರಸಾಕ್ಷನು ಸಾಮಜವರದನು ಭೂರಿಫಲಪ್ರದ ಭೂಮಿಜೆಯುತನು ಅ.ಪ ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು ದುರುಳ ದೈತ್ಯರ ಶಿರವನೆ ತರಿದು ಪರಿಪರಿ ವಿಧದಲಿ ಶರಣರಿಗೊಲಿಯುತ ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ 1 ಸೂರ್ಯಸುತನ ಸೈನ್ಯದವರ ಸುಮನಸರ ಧೈರ್ಯದಿಂ ಸಮರಗೈದವರ ವೀರಾಧಿವೀರರ ಕಾರ್ಯವ ಸಾಧಿಸಿದಾ ವಾನÀರರ ಪಾರವಶ್ಯರನು ಪರಮೇಷ್ಠಿಯಿಂದ ಧಾರೆಯನೆರೆದಮೃತದಿ ಬದುಕಿಸಿದ ಶ್ರೀ 2 ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ ಜನನಿಯರಾಶೀರ್ವಚನವ ಪಡೆದು ಸನುಮತದಿಂ ಪುರಜನರೊಲುಮೆಯೊಳು ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ 3
--------------
ಶಾಮಶರ್ಮರು
ವಂದಿಸುವೆನು ನಾ ನರನಾರಯಣ ಭಕ್ತ ಪ- ರಾಧೀನ ನಾನಾರೂಪಿಯೆ ಪ ಈ ಜಗವನೆ ಎತ್ತಿದೆ ವರಾಹನಾಗಿ ಮೂಜಗವನೆ ಅಳೆದ ವಾಮನಮೂರ್ತಿ ಯಾಜಿಪರನು ಕಾಯೋ ಪ್ರಹ್ಲಾದ ಧ್ರುವರೊಲು ಹೇ ಜಗದೋದ್ಧಾರ ಭಕ್ತವತ್ಸಲ 1 ದೇವ ಶ್ರೀಪತಿಯಾಗಿ ಅಸುರರ ಕೊಂದೆ ದೇವಕಿಸುತನಾಗಿ ಕಂಸನ ವಧಿಸಿದೆ ದೇವಜರ ಮೈದುನನಾಗಿ ದೌರ್ಜನ್ಯ ಮುರಿದೆ ದೇವ ಜಾಜಿಪುರೀಶ ದಾಸೋತ್ತಮನೇ 2
--------------
ನಾರಾಯಣಶರ್ಮರು
ಶ್ರೀಕೇಶವ ನಾಮವ ಭಜಿಸುವವರಿಗೆ ಪ ಬೇಕಾದವರೀ ವ್ರತವನಾಚರಿಸೆ ಆ ಕಾಲಾಂತಗೆ ಅಗಣಿತವಾಗಿಹುದು1 ಭಕ್ತನು ರುಕ್ಮಾಂಗದ ಮಹರಾಯನೂ ಮುಕ್ತಿಗೆ ಮಾಡಿದ ಶುಭಕರದಿನವಿದು 2 ಸುಜನರ ಗೋಷ್ಠಿಯೊಳ್ ರಾತ್ರಿಯೊಳಾ ಭುಜಗ ಶಯನನಂ ಭಜಿಸಲ್ಕೂಡಿದ 3 ಕಲಿಯೋಳು ಕಾಣುವ ಅಸ್ಮದ್ದೇಶಿಕ ರೊಲುಮೆಯ ತುಳಶೀ ರಾಮನು ತೋರಿದ 4
--------------
ಚನ್ನಪಟ್ಟಣದ ಅಹೋಬಲದಾಸರು
ಸುಖದಿ ಜೀವಿಸು ಬಾಲೆ ಸುಗುಣ ಶೀಲೆ ಸುಖದಿ ಜೀವಿಸು ಬಾಲೆ ಪ ಸುಖದಿ ಜೀವಿಸು ಬಾಲೆ | ಸುಕುಮಾರಿ ಗುಣಲೀಲೆ ರುಕುಮಿಣೀಶನ ಭಕುತಳೆನಿಸಿದ ಸಖುದೇವಿಯಂತೆ ಸಕಲ ಭಾಗ್ಯದಿ ಅ.ಪ ಭೂಸುರೋತ್ಮರಿಂದಲಿ | ಗುರುಮಂತ್ರೋಪ ದೇಶವಗೊಳ್ಳುತಲಿ | ಪ್ರತಿದಿವಸ ತಪ್ಪದೆ ಬ್ಯಾಸರಿಯದೆ ಹರುಷದಲಿ | ಸದ್ಭಕ್ತಿ ಪೂರ್ವಕ ದಾಸರ ಪದ ನಿತ್ಯದಲಿ | ನೀ ಪಾಡುತಲಿ ಸುಜನ ವೃಂದಕೆ ದೂಷಿತ ಬಹು ದೋಷಕಂಜುತ ವಾಸುದೇವನ ವಾಸರದಿ ಉಪ ವಾಸವನು ಲೇಸಾಗಿ ಮಾಡುತ 1 ಭಾವ ಭಕುತಿಲಿರುವ | ಗೋ ತುಳಸಿ ವೃಂದಾವನ ಪೂಜಿಸುತ | ವಿನಯದಿ ಅತ್ತಿ ಪತಿ ಪರ ದೇವನು ಎಂದೆನುತ | ಸಲೆ ಸೇವಿಸುತ್ತ ಕಾಲ ಕಪಟ ಮತಿಗಳ ಠಾವಿಗ್ಹೋಗದೆ ಪರರ ಒಡವೆಯ ಬೇವಿನಂದದಿ ಭಾವಿಸುತ ಸಂ ಭಾವಿತಳು ನೀನಾಗಿ ಜಗದೊಳು 2 ಮಂದ ಮತಿಯರ ಕೂಡದೆ | ಎಂದೆಂದಿಗು ಪರ ನಿಂದೆ ಮಾತುಗಳಾಡದೆ ಅವರೊಲುಮೆಯಿಒಂದಲಿ ಪಡಿ ಪ್ರೇಮದಿ | ಸಂದೇಹ ಪಡದೆ ತಂದೆ ತಾಯಿಗೆ ಕುಂದು ತಾರದೆ ನಂದ ಕಂದ ಮುಕುಂದ ಶಾಮ ಸುಂದರನ ಶುಭನಾಮ ಬಿಡದಲೆ ಒಂದೆ ಮನದಲಿ ಧ್ಯಾನಿಸುತ ಚಿರ 3
--------------
ಶಾಮಸುಂದರ ವಿಠಲ
ಹೇ ಪಾಪಿ ಮನಸೇ ನೀ ನಾರಾಯಣೆನೆಲೋ ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ ‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ ನಾಲಿಗೆಯಿಂದ್ಹೊರಡುವನಿತರೊ ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು ನಿವೃತ್ತಿಯಾಗಿ ಮಹ ಪಾವನನೆನಿಪುದು 1 ‘ರಾ’ ಎಂದು ಮುಖದಿಂದ ಹೊರಟ ಕೂಡಲೆ ಸರ್ವ ರವರವನರಕದ ಯಾತನಳಿದು ಭವ ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು ರಾಜಿಪ ಪರಲೋಕ ಸದರವೆನಿಸುವುದೆಲೊ 2 ‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ 3 ‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ ಕರತಲ ಮಾಗಿ ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ ನಿತ್ಯಾನಂದದ ಪದವಿ ಕೈವಶವಹದೆಲೊ 4 ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ ನಿಜಗುಣನನುಪಮಮಹಿಮೆ ನಿಜಮತಿಯಿಂದರಿತು ನಿರ್ಮಲ ಮನಸಿನಿಂ ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ 5
--------------
ರಾಮದಾಸರು
ತೊಲ ತೊಲಗೆಲೊ ಕಲಿಯೆ ನಿಲ್ಲದಿಲ್ಲಿ ಪ.ತೊಲ ತೊಲಗೆಲೊ ಕಲಿಯೆ ಸಲೆಸಲುಗೆಯ ಬಿಡು ಸಲಿಲಜಾಕ್ಷನ ದಾಸರ ಅ.ಪ.ರಮೆರಮಣನ ಸಿರಿರಮಣೀಯ ನಾಮವಿರೆಯಮಗಿಮನಂಜಿಕೆ ಎಮಗುಂಟೆತಮ ತಮ ಮಹೋತ್ತಮ ಕುಲಗಳು ಮಹೋತ್ತ್ತಮತಮರೊಲುಮೆ ಮತ್ತವನ ಆಶ್ರಯವುಂಟು 1ಮನ ಮನೋಸಂಭವನ ಮನೆ ಹೊಕ್ಕರೆ ಸೈರಿಸಘನಜ್ಞಾನಿ ಪೂರ್ಣಗುರು ಜ್ಞಾನಿರಾಯತನು ತನಯಾಂಗನೇರು ತನ್ನವಸರಕಾರಿಲ್ಲಈ ನಯನ ಹರಿನಾರಾಯಣನಲ್ಲಿ ತೊಡಗಿರೆ 2ಬಿಡಬಿಡ ಭಟನೆಂದು ಬೇಡಿದಂತಾಭಯವೀವಪಡಿಪೊಡವಿಲಿ ಕೊಟ್ಟು ಪಿಡಿದ ಎನ್ನಒಡಒಡನೆ ರಕ್ಷಿಪ ಒಡೆಯ ಪ್ರಸನ್ವೆಂಕಟೇಶಅಡಿಯೆಡೆ ಸೇರಿದೆ ಬಾರೊ ಅಡಗಡಗೆಲೆಲೊ 3
--------------
ಪ್ರಸನ್ನವೆಂಕಟದಾಸರು
ನಂಬಬೇಡ ನಾರಿಯರನುಹಂಬಲಿಸಿ ಹಾರಯಿಸಬೇಡಅಂಬುಜಾಕ್ಷಿಯರೊಲುಮೆ ಬಯಲುಡಂಬಕವೆಂದು ತಿಳಿಯಿರೊ ಪ.ನೋಟವೆಲ್ಲ ಪುಸಿಯು - ಸತಿಯರಾಟವೆಲ್ಲ ಸಂಚು - ಸನ್ನೆಕೂಟವೆಲ್ಲ ಗನ್ನ - ಘಾತುಕನೋಟವೆಲ್ಲ ವಂಚನೆವಾತಬದ್ಧ ಹೆಂಗಳಲ್ಲಿಕೋಟಲೆಗೊಂಡು ತಿರುಗಬೇಡಮಾಟಗಾತಿಯರೊಲುಮೆ ಬಯಲುಬೂಟಕವೆಂದು ತಿಳಿಯಿರೊ 1ಸೋತನೆಂದು ವಿಟಗೆ ದೈನ್ಯಮಾತನಾಡಿ ಮರುಳಗೊಳಸಿಕಾತರವ ಹುಟ್ಟಿಸಿ ಆವನಮಾತೆ - ಪಿತರ ತೊಲಗಿಸಿಪ್ರೀತಿ ಬಡಿಸಿ ಹಣವ ಸೆಳೆದುರೀತಿಗೆಡಿಸಿ ಕಡೆಯಲವನಕೋತಿಯಂತೆ ಮಾಡಿ ಬಿಡುವಚಾತಿಕಾರ್ತಿ ಹೆಂಗಳೆಯರ 2ಧರೆಯ ಜನರ ಮೋಹಕೆಳಸಿಭರದಿ ನೆಟ್ಟು ಕೆಡಲುಬೇಡಎರೆಳೆಂಗಳ ಹೆಂಗಳೊಲುಮೆಗುರುಳೆ ನೀರ ಮೇಲಿನಮರೆಯಬೇಡ ಗುರುಮಂತ್ರವಸ್ಥಿರವಿಲ್ಲದ ಜನ್ಮದಲ್ಲಿಕರುಣನಿಧಿ ಪುರಂದರವಿಠಲನಚರಣಸ್ಮರಣೆ ಮಾಡಿರೊ3
--------------
ಪುರಂದರದಾಸರು
ಶ್ರೀಪತಿಯು ನಮಗೆ ಸಂಪದವೀಯಲಿ - ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ಪ.ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟಹರನಿತ್ಯ ನಮಗೆ ಸಹಾಯಕನಾಗಲಿಸರರೊಳುನ್ನತವಾದನಿತ್ಯ ಭೋಗಂಗಳನುಪುರುಹೂತಪೂರ್ಣ ಮಾಡಿಸಲಿ ನಮಗೆ1ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದನೆನೆದ ಕಾರ್ಯಗಳೆಲ್ಲ ನೆರವೇರಿಸಲಿದಿನದಿನದಿ ಅಶ್ವಿನಿಗಳಾ¥ತ್ತುಗಳ ಕಳೆದುಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ 2ನಿರುತ ಸುಜ್ಞಾನವನುಈವ ಮಧ್ವರಾಯ |ಗುರುಗಳಾಶೀರ್ವಾದ ನಮಗಾಗಲಿಪುರಂದರವಿಠಲನ ಕರುಣದಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ 3
--------------
ಪುರಂದರದಾಸರು
ಶ್ರೀಪತಿಯು ನಮಗೆ ಸಂಪದವೀಯಲಿ ವಾ-ಣೇಪತಿಯು ನಮಗೆ ದೀರ್ಘಾಯು ಕೊಡಲಿ ಪಸುರರ ಗಣವನು ಪೊರೆಯ ವಿಷವ ಕಂಠದಲಿಟ್ಟಹರನಿತ್ಯನಮಗೆ ಸಹಾಯಕನಾಗಲಿ ||ನರರೊಳುನ್ನತವಾದ ನಿತ್ಯಾಭೋಗಂಗಳನುಪರಹೂತ ಪೂರ್ಣ ಮಾಡಸಲಿ ನಮಗೆ 1ವಿನೂತಸಿದ್ದಿಪ್ರದನು ವಿಘ್ನೇಶ ದಯದಿಂದನೆನದ ಕಾರ್ಯಗಳೆಲ್ಲ ನೆರವೇರಿಸಲಿ ||ದಿನ ದಿನದಿ ಅಶ್ವಿನಿಗಳಾಪತ್ತುಗಳ ಕಳೆದುಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ 2ನಿರುತ ಸುಜಾÕನವನುಈವಮಧ್ವರಾಯಗುರುಗಳಾಶೀರ್ವಾದ ನಮಗಾಗಲಿ ||ಪುರಂಪರ ವಿಠಲನ ಕರುಣದಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ 3
--------------
ಪುರಂದರದಾಸರು