ಒಟ್ಟು 22 ಕಡೆಗಳಲ್ಲಿ , 5 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಜಗನ್ನಾಥದಾಸರ ಕೀರ್ತನೆ139ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರು ಗುಣಾರ್ಣವ ಜಗಜ್ಜನ್ಮಾದಿಕರ್ತನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಮೂಲಗುರುಅಗುರು ಶ್ರೀ ಹಂಸನಾಮಕ ಶ್ರೀಶಸಲಿಲಜಾಸನಸನಕದೂರ್ವಾಸಾದಿಗಳಪೀಳಿಗೆಯಲಿ ಬಂದ ಮರುದಂಶ ಮಧ್ವನಕಾಲಿಗೆ ಎರಗಿ ಶರಣಾದೆ ನಾ ಸತತ 1ಮಧ್ವಕರಕಂಜಭವಕಂಜನಾಭನೃಹರಿಮಾಧವಅಕ್ಷೋಭ್ಯ ಜಯತೀರ್ಥರಿಗೆ ನಮಿಪೆವಿದ್ಯಾಧಿರಾಜರಿಗೆ ರಾಜೇಂದ್ರತೀರ್ಥರಿಗೆಜಯಧ್ವಜರಿಗೆ ಮನೋ ಪುರುಷೋತ್ತಮರ್ಗೆ 2ಪುರುಷೋತ್ತಮ ಕುವರ ಬ್ರಹ್ಮಣ್ಯ ತೀರ್ಥರಿಗೆಸರಸೀರುಹನಾಭತೀರ್ಥಜರು ಲಕ್ಷ್ಮೀ -ಧರರ ಪರಂಪರೆ ಜಾತ ಸ್ವರ್ಣ ವರ್ಣರಕರಸರೋಜಭವಶ್ರೀ ಪಾದರಾಜರಿಗೆ ಶರಣು3ಸುಪುಣ್ಯ ಲಕ್ಷ್ಮೀ ನಾರಾಯಣ ತೀರ್ಥರಿಗೆಶ್ರೀಪಾದ ರಾಜತ್ವ ಯೋಗ್ಯತಾಲಿಂಗಶ್ರೀ ಭೂ ಸಮೇತ ಶ್ರೀ ರಂಗವಿಠ್ಠಲ ತಾನೆಈ ಪುಣ್ಯ ಶ್ಲೋಕರಲಿ ಬಂದು ನಿಂತಿಹನು 4ದಿನತೇಜಃ ಪುಂಜ ಬ್ರಹ್ಮಣ್ಯ ತೀರ್ಥರವನಜಕರಜರು ವ್ಯಾಸರಾಜಸ್ವಾಮಿಗಳುಘನಮಹಾ ಹರಿಭಕ್ತ ವಾದಿಗಳ ಸಿಂಹರುಆ ನಮಿಪೆ ಈ ಹರಿದಾಸಯತಿಗಳಿಗೆ 5ಪೂರ್ಣ ಪ್ರಜ್ಞಾನಂದ ತೀರ್ಥ ಮಧ್ವಾಚಾರ್ಯಕ್ಷೋಣಿಯ ಸಜ್ಜನರ ಉದ್ಧಾರಕಾಗಿಘನಮೂಲ ಗ್ರಂಥಗಳ ಸಹ ಪ್ರಾಕೃತದಲ್ಲೂಅನಘಲಕ್ಷ್ಮೀಶನ ಸ್ತೋತ್ರ ರಚಿಸಿಹರು6ಪೂರ್ಣಪ್ರಜÕರ ಜ್ಞಾನ ವಂಶಸ್ಥಯತಿಗಳುಕನ್ನಡದಿ ನುಡಿದಿರುವ ಕೀರ್ತನೆ ಪದ್ಯಗಳುಘನತರವು ಆ ರೀತಿಆದ್ಯಹರಿದಾಸರುಗಳುಕನ್ನಡದಿ ನುಡಿದಿಹರುಹರಿಪ್ರೀತಿಗಾಗಿ7ಸರ್ವದಾ ಶರಣಾದೆ ಎನ್ನ ಕಾಯುವ ತಂದೆದೇವ ಋಷಿ ನಾರದಪುರಂದರದಾಸರಲಿಶ್ರೀ ವ್ಯಾಸರಾಜರಲಿ ಉಪದೇಶ ಕೊಂಡಿಹರುನಿರ್ವಾಜ್ಯ ಭಕ್ತಿಮಾನ್ ಕಾರುಣ್ಯಶರಧಿ8ವಿಷ್ಣು ಸರ್ವೋತ್ತಮ ತದಂತರ ರಮಾದೇವಿವನು ರುಹಾಸನ ವಾಣಿ ತದಧೌ ಎಂದುತಾನೆ ನೇರಲ್ಲರಿತು ಲೋಕಕ್ಕೆ ಪೇಳಿದಘನದಯಾನಿಧಿ ಭೃಗುವೇ ವಿಜಯದಾಸಾರ್ಯ9ವಿಜಯದಾಸಾರ್ಯರರಾಜೀವಪದಯುಗಕೆನಿಜ ಭಕ್ತಿ ಪೂರ್ವಕ ಶರಣಾದೆ ಸತತವಿಜಯರಾಯರಗುರುಪುರಂದರದಾಸಾರ್ಯರುವಿಜಯರಾಯರ ಶಿಷ್ಯ ಗೋಪಾಲದಾಸರು 10ಪರಮಭಾಗವತರುಹರಿಭಕ್ತಾಗ್ರಣಿ ಕರುಣಿಹರಿಶಿರಿ ಒಲಿದಿಹ ದಾಸಮಹಂತವರವಾಯು ಗೋಪಾಲದಾಸರೊಳು ಸರ್ವದಾಸುಪ್ರಚುರನಾಗಿಹನು ಶರಣು ಗುರುವರ್ಯ 11ಕ್ಷಿಪ್ರಪ್ರಸಾದರು ವ್ಯಾಪ್ತೋಪಾಸಕರುಶ್ರೀಪತಿ ವೆಂಕಟ ಕೃಷ್ಣನಲಿರತರುಆಪತ್ತುಗಳ ಕಳೆದು ಕಾಮಿತಾರ್ಥಗಳೀವಕೃಪಾಳು ಇವರಲ್ಲಿ ನಾ ಶರಣು ಶರಣಾದೆ 12ಈ ನಮ್ಮ ಗುರುಗಳು ಗೋಪಾಲದಾಸಾರ್ಯರಲಿಘನವಿದ್ವಾಂಸರು ಬ್ಯಾಗವಟ್ಟ ಮನೆಯವರುಶ್ರೀನಿವಾಸಾಚಾರ್ಯ ಶರಣಾಗಿ ಜಗತ್ತಲ್ಲಿಜಗನ್ನಾಥ ದಾಸರು ಎಂದು ಜ್ವಲಿಸಿಹರು 13ಬ್ಯಾಗವಟ್ಟಿ ಗ್ರಾಮ ಮಾನವಿ ಎಂಬುವನಗರದ ಸಮೀಪವು ನವಾಬನಾಡಳಿತಆಗ್ರಾಮ ಶಾನಭೋಗ ನರಸಿಂಹಾಚಾರ್ಯರುಭಾಗವತಧರ್ಮವ ಆಚರಿಸುವವರು14ಹಣದಿಂದ ಶ್ರೀಮಂತರೋ ಬಡವರೋ ಹೇಗೋಗುಣದಿಂದ ಇವರು ಶ್ರೀಮಂತರು ಖರೆಯುಜ್ಞಾನಿವರ್ಯರು ಇವರು ಸುರವೃಂದದವರುಮನುಜ ಲೋಕದಿ ಜನ್ಮ ಹರಿಯ ನಿಯಮನದಿ 15ಜ್ಞಾನ ಭಕ್ತಿ ವೈರಾಗ್ಯ ಸಂಪನ್ನರುಶಾನುಭೋಗಿ ಉದ್ಯೋಗವ ತ್ಯಜಿಸಿಜ್ಞಾನಿತಿಮ್ಮಣ್ಣದಾಸಾರ್ಯರಲಿ ಉಪದೇಶಅನುಗ್ರಹನಾಮಾಂಕಿತ ಹೊಂದಿದರು ಮುದದಿ 16ನರಸಿಂಹಾಚಾರ್ಯ ಲಕ್ಷ್ಮಕ್ಕ ದಂಪತಿಯಪುತ್ರರತ್ನನು ಬುದ್ಧಿರ್ಮಾ ಶ್ರೀನಿವಾಸಸೂರಿವರವರದೇಂದ್ರ ತೀರ್ಥರ ಮುಖದಿಂದಪರಾಪರ ವಿದ್ಯೆಯ ಕಲಿತನು ತೀವ್ರ 17ವರದೆಂದ್ರರಲಿ ಓದಿ ದೊಡ್ಡ ಪಂಡಿತನಾಗಿನರಸಿಂಹದಾಸರು ತಂದೆ ದಿನ ಚರಿಪಹರಿದಾಸ ಪದ್ಧತಿ ಕೀರ್ತನಾರಾಧನಹರುಷದಲಿ ನೋಡಿ ಮುದಪುಳಕ ನಾಗುವನು 18ಗೃಹಸ್ಥ ಆಶ್ರಮ ಧರ್ಮ ಚೆನ್ನಾಗಿ ಆಚರಿಸುತ್ತಅಹರಹ ಸಚ್ಛಾಸ್ತ್ರ ಪಾಠ ಪೇಳುತ್ತಬಹುಕೀರ್ತಿ ಶ್ರೀನಿವಾಸಾಚಾರ್ಯರು ಹೊಂದಿಮಹಿಯಲ್ಲಿ ಪ್ರಖ್ಯಾತರಾಗಿ ಜ್ವಲಿಸಿಹರು 19ವಾರಿಜಾಸನ ಪಿತನು ಪೂರ್ಣಪ್ರಜÕರ ಹೃಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 20- ಪ್ರಥಮೋಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ನಾಮಕಲ್ ಹನುಮಂತ68ಹನುಮಂತನಪಾದವನಜಕೆ ಶರಣುಪಹನುಮಂತನಪಾದವನಜಕ್ಕೆ ಎರಗಲುಅನಿಷ್ಟಗಳಳಿದು ಇಷ್ಟಾರ್ಥಗಳೀವ ಅ ಪಇನಸುತಗೊಲಿದನು ಹನುಮ ಆದುದರಿಂದಇನಕುಲತಿಲಕನು ತಾನೂ ಪಾಲಿಸಿದ1ಅನಿಮಿಷರಲಿ ಇವ ಪ್ರಥಮನಾಗಿಹ - ಭಾವಿವನರುಹಾಸನ ಜಗತ್ ಪ್ರಾಣಜೀವೋತ್ತಮ2ನಾಮಗಿರೀಶ ಶ್ರೀ ಪ್ರಸನ್ನ ಶ್ರೀನಿವಾಸನ್ನನಮಗೆಲ್ಲ ಒಲಿಸಲು ನಾಮಶಿಲದಿ ನಿಂತ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಾಜಸೂಯಾ ಅಗ್ರಪೂಜಾ ಸ್ತೋತ್ರ59ರಾಜನ ಭಾಗ್ಯವಿದು | ಧರ್ಮರಾಜನ ಭಾಗ್ಯವಿದು ಪರಾಜೀವಜಾಂಡದ ಏಕಸ್ವರಾಟ್ ಶ್ರೀಕೃಷ್ಣನರಾಜೀವಅಂಘ್ರಿಸುಯುಗ್ಮವರಾಜಸೂಯದಿ ತಾ ಪೂಜಿಸಿದ ಅ.ಪಚಿತ್ರವಿಚಿತ್ರವು ಸ್ತಂಭತೋರಣಗಳುರತ್ನ ಮಾಣಿಕ್ಯ ಮರುಗದದಿಚಂದ ಹೊಳೆವ ಸಭೆ ರಾಜರು ಸುತಪೋಧನರು ಕುಳಿತಿರೆ ಮಾಧವಗೆಮೊದಲು ಪೂಜೆಯ ಮಾಡಿ ಯಜÕವಾಚರಿಸಿದವಿಧಿಪೂರ್ವಕದಿ ಶ್ರಧ್ಧೆಯಲಿ1ಶಂತನುಸುತ ಗಾಂಗೇಯರು ನೆರೆದಿದ್ದಸಾಧು ಸನ್ಮುನಿಜನ ಮನದಂತೆಇಂದಿರೆಯರಸ ಶ್ರೀ ಕೃಷ್ಣಗೆ ಸಮರುಅಧಿಕರು ಇಲ್ಲದ ಜಗದೀಶವಿಧಿಈಶಾನದಿ ಸರ್ವನಿಯಾಮಕಕೃಷ್ಣನೇ ಪೂಜ್ಯನು ಎಂದರು ದೃಢದಿ 2ಗಂಗಾಜಲವ ಜಾಂಬೂನದ ಕಲಶದಿಮಾದ್ರೇಯನು ತಾ ತಂದೀಯೇಗಂಗಾಜನಕವರಾಂಗಿ ಸುವಕ್ಷ ಐಶಂಗವಾಸನ ಅರಿಶಂಖವ ಪಿಡಿದವನಅಂಘ್ರಿಸುಕಂಜದ್ವಯವ ಯುದಿಷ್ಠಿರಅವನೀಜನಗೈದ ಭಕ್ತಿಯಲಿ 3ಮನುಷ್ಯವತ್ ಲೀಲಾ ದ್ವಿಭುಜನು ಚಿನ್ಮಯಭಜಕಗೆ ಚತುರ್ಭುಜ ಕಾಣಿಸುವಜ್ಞಾನರೂಪದಿಹರಿವನಜಸಂಭವನಲಿಇಹ ಕ್ರಿಯಾರೂಪದಿ ವಾಯುನಲಿವಾಣೀ ಭಾರತಿಯಲಿ ಇಚ್ಚಾಶಕ್ತಿರೂಪದಿ ಪ್ರಚುರನು ಸರ್ವೇಶ 4ರಥನಾಭಿಯಲಿ ಅರಗಳ ತೆರದಿಸಮಸ್ತವು ಪ್ರತಿಷ್ಠಿತ ವಾಯುನಲಿಕ್ಷಿತಿಯಲಿ ಸ್ವಯಮೇವ ವಾಯುವೆಜನಿಸಿ ಜಗದಂತರಾತ್ಮ ಭೀಮನಾಗಿಯುಧಿಷ್ಠಿರನಲಿ ಸಮಾಭಿಷ್ಟನಾಗಿಹ ಸೌಮ್ಯರೂಪದಿ ಕೃಷ್ಣನ ಸೇವಿಸಲು 5ಸೌಮ್ಯರೂಪದಿ ಒಳಗಿದ್ದು ಶ್ರೀ ಕೃಷ್ಣಗೆಅಗ್ರ ಪೂಜಾದಿ ರಾಜಸೂಯತಾ ಮಾಡಿ ಸ್ವಯಂ ತನ್ನ ಅವತಾರಭೀಮಗೆ ಅಣ್ಣನೆಂದೆನಿಸುತಿಪ್ಪಧರ್ಮರಾಜನ ಕೈಯಿಂದ ಮಾಡಿಸಿದನುಭಕ್ತಾನುಕಂಪಿ ಶ್ರೀಹರಿಯ ಪ್ರೀತಿಸಿದ 6ಮನಶುಚಿಯಲಿ ಈ ನುಡಿಗಳ ಪಠಿಸುವಶ್ರವಣವ ಮಾಡುವ ಸುಜನರಿಗೆವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪಾಂಡವ ಪ್ರಿಯ ಶ್ರೀ ರುಕ್ಮಿಣೀಶಮನಶೋಕಾದಿ ತಾಪತ್ರಯ ನೀಗಿಸಿಯೋಗ್ಯವಾಂಛಿತವೀವ ಬಹುದಯದಿ 7
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶನೈಶ್ಚರ ಸ್ತೋತ್ರ96ಪಾಹಿಶ್ರೀನರಸಿಂಹಪ್ರಿಯ ಶನೈಶ್ಚರನೆ ನಮೋ ಸಂತತಪಾಹಿನಮೋ ಗ್ರಹರಾಜಶೌರಿ ಮಹೇಶ್ವರನೇ ಕೃಪಾಕರಪಪೃಥ್ವಿ ತತ್ವಾಭಿಮಾನಿಯೇ ನಮೋ ಕರ್ಮಪನು ಎಂಬಪುಷ್ಕರಮತ್ತು ಅಜಾನಜರು ಋಷಿಗಂಧರ್ವ ಮಹಾಸಮುದಾಯಕೆಮೇದಿನೀ ರಾಜರು ಮನುಷ್ಯರು ಸರ್ವರಿಗೂಗುರುಈಶ್ವರನೀ ದಯದಿ ಹರಿದಾಸರನ್ನ ಸಲಹುತಿಯೋ ಶರಣೆಂಬೆನೋ 1ಸೂರ್ಯಛಾಯಸೂನು ಕಾಲರೂಪಿ ಮಹಾಗ್ರಹ ನಮೋಕಾಯೊ ಜಟಿಲನೇವಜ್ರರೋಮನೇ ದಾನವರಿಗೆ ಭಯಂಕರತ್ರ್ಯಯಂಬಕ ನಾರದರಿಗುಪದೇಶಿಸಿ ಕೊಂಡಾಡಿದ ನಿನ್ನನ್ನುಖ್ಯಾತ ರಘುವಂಶೋತ್ಥ ಅತಿ ವಿಖ್ಯಾತ ದಶರಥ ಕೀರ್ತಿತ 2ಜ್ಞಾನ ಚಕ್ಷುರ್ನಮಸ್ತೇಸ್ತು ಕಶ್ಯಪಾತ್ಮಜಸೂನವೇತುಷ್ಟೋದದಾಸಿ ವೈರಾಜ್ಯಂ ರುಷ್ಟೋ ಹರಸಿ ತಕ್ಷಣಾತ್ನಿನ್ನನು ದಶರಥನು ಸ್ತುತಿಸಿ ನಮಿಸೆ ವರಗಳನಿತ್ತು ನೀಕ್ಷೋಣಿಜನ ಸಂರಕ್ಷಣೆಗೆ ಬಗೆ ಪಾದ್ಮ ಉಕ್ತದಿ ಅರುಹಿದಿ 3ಗಂಗಾ ಮಹಿಮ ರಕ್ಷೋಭುವನಪ್ರಸ್ಥಾನೋಕ್ತವು ತ್ವತ್‍ಕೃತತುಂಗಮಹಿಮ ಶ್ರೀಲಕ್ಷ್ಮೀ ಭೂಮಾನಾರಸಿಂಹನ ಸ್ತೋತ್ರವುರಾಘವಕೃತ ತ್ವತ್‍ಕೃತ ಈ ನುಡಿಗಳ್ ಪಠಿಸಿ ಕೇಳ್ವರ್ಗೆಶೋಕನೀಗಿ ಇಷ್ಟ ಲಭಿಸುವುದು ನೃಹರಿಪ್ರಿಯ ನೀ ಒದುಗುವಿ 4ವನರುಹಾಸನನತಾತಪ್ರಸನ್ನ ಶ್ರೀನಿವಾಸ ನೃಕೇಸರಿಘನ್ನದಯದಿ ಪ್ರಸನ್ನನಾಗಿ ಒಲಿಯೆ ಸಾಧನವಾಗುವಜ್ಞಾನ ಭಕ್ತಿ ವೈರಾಗ್ಯ ಸಂಪತ್ ಅಯುರಾರೋಗ್ಯ ಇತ್ತು ನೀಎನ್ನ ತಪ್ಪುಗಳ ಮನ್ನಿಸಿ ಎನ್ನಪಾಹಿಸತತ ಶನೈಶ್ಚರ5ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಧರ್ಮತೀರ್ಥರ ಚರಿತ್ರೆ128ಶ್ರೀ ಸತ್ಯಧರ್ಮ ತೀರ್ಥರ ಪಾದಯುಗ್ಮದಲಿನಾ ಶರಣು ಎನ್ನ ಪಾಲಿಪರು ಎಡಬಿಡದೆಅಸಮ ಅನುಪಮ ಸರ್ವಗುಣ ಗುಣಾರ್ಣವಅನಘಬಿಸಜಜಾಂಡದ ಒಡೆಯ ಶ್ರೀಶನಿಗೆ ಪ್ರಿಯರು ಪಹಂಸನಾಮಕ ವಿಷ್ಣುವನರುಹಾಸನಸನಕದೂರ್ವಾಸಮೊದಲಾದ ಗುರುವಂಶಜಾತದಶಪ್ರಮತಿಸರಸಿಜನಾಭನರಹರಿ ತೀರ್ಥಬಿಸಜಚರಣಂಗಳಲಿ ಸತತ ನಾ ಶರಣು1ಮಾಧವಅಕ್ಷೋಭ್ಯಜಯ ವಿದ್ಯಾಧಿರಾಜರಾಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸುತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದಾವ್ಯಾಸಾಭಿದ ಗುರುವಿದ್ಯಾಧೀಶರಿಗೆವೇದನಿಧಿಗಳಿಗೆ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವಸತ್ಯಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯಸತ್ಯಬೋಧರಿಗೆಸತ್ಯ ಸಂಧರಿಗೆ ನಾ ಶರಣಾದೆ ಎಂದೂ 4ಸತ್ಯವರತೀರ್ಥರಿಗೆ ಸತ್ಯವರ ಕರಜಾತಸತ್ಯಧರ್ಮರಿಗೆ ನಾ ಮನಸಾ ಆನಮಿಪೆಸತ್ಯಧರ್ಮರ ಮಹಿಮೆ ಬಹು ಬಹು ಬಹಳವುಕಿಂಚಿತ್ತು ಅಂಶಮಾತ್ರ ಸೂಚಿತವು ಇಲ್ಲಿ 5ಉದ್ದಾಮ ಪಂಡಿತರು ನವರತ್ನ ವಂಶಜರುವಿದ್ವತ್ ಶಿರೋಮಣಿ ಅಣ್ಣ ಆಚಾರ್ಯರುವೈದಿಕ ಸದಾಚಾರಿ ತ್ರಿಕರಣದಿ ಶುದ್ದರುನಂದಿನಿಧರ ಮಧ್ವಮಾಧವ ಪ್ರಿಯರು 6ವಿತ್ತಸಂಗ್ರಹದಲ್ಲಿ ಚಿತ್ತವನು ಇಡದಲೆಸತ್ಯಧರ್ಮದಿರತರು ಸಂತತ ಇವರುಸದಾಗಮಿಕಭಾಗವತಮಾಧ್ವ ಸಚ್ಛಾಸ್ತ್ರದಿಮುದದಿಂದಕಾಲಉಪಯೋಗ ಮಾಡುವರು7ಇಂಥಾ ಭಾಗವತರಲ್ಲಿ ಗಂಗಾಧರನೇವೇಬಂದು ಔತಣ ಉಂಡು ಉಡುಗೊರೆಯಕೊಂಡುಸಂತತ ತಾ ಧ್ಯಾನಿಸುವ ರಾಮನ್ನ ಇವರುಮುಂದು ಪೂಜಿಪ ಯೋಗ ಅನುಗ್ರಹ ಮಾಡಿದರು 8ಅಣ್ಣಾಚಾರ್ಯರ ಮನೆಯಲ್ಲಿ ಅಕ್ಕಿಉಣಲಿಕ್ಕೆ ಸಾಲದೆ ಇರುವಾಗ ಬಂದಬ್ರಾಹ್ಮಣ ಓರ್ವನು ಭಸ್ಮಧರ ಅವನುಅನ್ನಬೇಕೆಂದನು ಮಧ್ಯಾಹ್ನಕಾಲ 9ಅನ್ನ ಅನ್ನದ ಅನ್ನಾದನ್ನ ಸ್ಮರಿಸುತ್ತಅಣ್ಣಾಚಾರ್ಯರು ಅಡಿಗೆ ತಾಮಾಡಿಬ್ರಾಹ್ಮಣನಿಗೆ ಬಡಿಸಿ ಧೋತ್ರಗಳ ಕೊಟ್ಟರುಪೂರ್ಣ ಉಂಡು ಪೋದ ವಿಪ್ರನು ತುಷ್ಟಿಯಲ್ಲಿ 10ಹಿಂದೆ ಆಚಾರ್ಯರು ಪೋಗಿ ನೋಡಲು ಶಿವನಮಂದಿರದಿವಿಪ್ರಅಂತರ್ಧಾನನಾದಮಂದಾಕಿನಿಧರನ ಮೂರ್ತಿಯಲಿ ಧೋತ್ರಗಳುಚಂದದಿ ಇದ್ದವು ದಕ್ಷಿಣೆ ಸಮೇತ 11ಸವಣೂರು ರಾಜ್ಯದ ಮಂತ್ರಿ ಖಂಡೇರಾಯದಿವಿಜರ ಲೋಕಯಾತ್ರೆಯು ಮಾಡಲಾಗದೇವರ ನೈವೇದ್ಯಯಕ್ಕಾದರಣೆ ತಪ್ಪಲುಸವಣೂರು ಪ್ರಾಂತವ ಬಿಟ್ಟು ತೆರಳಿದರು 12ದೇವತಾಂಶರು ಇವರು ಮಾನುಷ ಜನ್ಮವಭೂಮಿಯಲ್ಲಿ ಕೊಂಡು ಮಾನುಷ್ಯ ಜನರಂತೆಭವಣೆಗಳ ಹರಿಸ್ಮರಣೆಯಿಂ ತಾಳಿ ತಪ್ಪಸ್ಸಂತೆದಿವ್ಯ ಮಂತ್ರಾಲಯ ಕ್ಷೇತ್ರ ಐದಿದರು 13ಔದಾರ್ಯಗುಣನಿಧಿ ಶ್ರೀ ರಾಘವೇಂದ್ರತೀರ್ಥರ ವೃಂದಾವನ ಸೇವೆ ಮಾಡಿಕೃತಕೃತ್ಯರಾದರು ಅಣ್ಣಾಚಾರ್ಯರುಒದಗಿ ಅನುಗ್ರಹಿಸಿದರು ಗುರುಗಳು ಬೇಗ 14ಶ್ರೀ ರಾಘವೇಂದ್ರ ತೀರ್ಥಾರ್ಯಕರುಣಿಗಳುತೋರಿ ಸ್ವಪ್ನದಿ ಸತ್ಯವರರಲ್ಲಿ ಪೋಗೆದೊರೆಯುವುದು ಇಷ್ಟಾರ್ಥ ಎಂದು ಪೇಳಿದರುಹೊರಟರು ಆಚಾರ್ಯರು ಸತ್ಯವರರಲ್ಲಿ 15ಆ ಸಮಯ ಶ್ರೀ ಸತ್ಯವರ ತೀರ್ಥರ ಮಠದಿಂಶ್ರೀ ಸ್ವಾಮಿ ಮಂಜೂಶ ಕಳವು ಆಗಿವ್ಯಸನದಲಿ ಉಪೋಶಣದಿ ಸತ್ಯವರರಿದ್ದರುಭಾಸವಾಗದೆ ಮೂರ್ತಿಗಳಿರುವ ಸ್ಥಳವು 16ಮಾರ್ಗದಲಿ ಅಣ್ಣಾಚಾರ್ಯರು ಮೂರ್ತಿಗಳಝಗ ಝಗಿಪ ಕಾಂತಿಯ ತಾ ಕಂಡು ಮಠಕ್ಕೆಪೋಗಿ ಶ್ರೀ ಸತ್ಯವರರಲ್ಲಿ ಪೇಳಿದರುಹೇಗೆ ವರ್ಣಿಸುವೆ ಆ ಗುರುಗಳ ಆನಂದ 17ನಿಗಮಘೋಷಂಗಳು ವಿಪ್ರಜನ ಮುಖದಿಂದಮಂಗಳ ಧ್ವನಿ ಮೇಳ ತಾಳವಾದ್ಯಗಳುಕಂಗೊಳಿಸುವ ಮೆರವಣಿಗೆ ಮಠಮಂದಿರಕ್ಕೆಗಂಗಾಜನಕನ ಮೂರ್ತಿಗಳ ತಂದರು 18ಯುಕ್ತಕಾಲದಿ ಅಣ್ಣಾಚಾರ್ಯಸೂರಿಗಳುಸತ್ಯವರರ ಅಮೃತ ಹಸ್ತಾಭಿಷೇಕಯತಿ ಆಶ್ರಮ ಸತ್ಯಧರ್ಮತೀರ್ಥರೆಂದು ನಾಮಾಪ್ರಣವಉಪದೇಶಕೊಂಡರು19ಪ್ರಣವೋಪದೇಶಗುರುಹಸ್ತದಿಂ ಅಭಿಷೇಕಘನಮಹಾವೇದಾಂತ ಪೀಠವು ಲಭಿಸಿಈ ನಮ್ಮ ಸತ್ಯಧರ್ಮರ ದೇಶದಿಗ್ವಿಜಯಜ್ಞಾನೋಪದೇಶ ಹರಿಪೂಜಾ ಮಾಡಿದರು 20ಭಾವುಕರ ಪ್ರಿಯತಮಸನತ್ಸುಜಾತೀಯವುಭಾವದೀಪಿಕ ಶ್ರೀಮದ್ ಭಾಗವತಕೆತತ್ವಸಂಖ್ಯಾನ ಶ್ರೀ ವಿಷ್ಣು ತತ್ವನಿರ್ಣಯಇವು ಎರಡಕ್ಕೂ ಟಿಪ್ಪಣಿ ಬರೆದು ಇಹರು 21ವಾಗ್ವಜ್ರ ಧಾರಾವುದುರ್ವಾದಿಗಿರಿಕುಲಿಶಜಗತಲ್ಲಿ ಹೋದಕಡೆ ಎಲ್ಲೂ ಮರ್ಯಾದೆಬಾಗುವ ಯೋಗ್ಯರಿಗೆ ಸತ್ತತ್ವ ಉಪದೇಶಜಗಕ್ಷೇಮಕರ ಪೂಜಾ ವರವು ದೀನರಿಗೆ 22ಮೂವತ್ತು ಮೇಲ್ಮೂರು ವತ್ಸರವು ಶ್ರೀಮಠಸುವಿತರಣಿಯಿಂದ ಆಡಳಿತ ಮಾಡಿಸುವರ್ಣ ರತ್ನಾಭರಣ ಮಠತೋಟಂಗಳದೇವಪ್ರೀತ್ಯರ್ಥ ಸೇರಿಸಿದರು ಮಠಕೆ 23ಹದಿನೇಳನೂರು ಐವತ್ತೆರಡು ಶಾಲಿಶಕತ್ರಯೋದಶಿಶ್ರಾವಣಕೃಷ್ಣಪಕ್ಷಇಂಥಾ ಸುಪುಣ್ಯ ದಿನದಲ್ಲಿ ಶ್ರೀ ಹರಿಯಪಾದವನೈದಿದರು ಹರಿಯಧ್ಯಾನಿಸುತ 24ಮತ್ತೊಂದು ಅಂಶದಲಿ ವೃಂದಾವನದಲ್ಲಿಬಂದು ಸೇವಿಸುವವರ ವಾಂಛಿತವೀಯುತ್ತನಂದಿನಿಧರ ಮಧ್ವ ಮಾಧವನ ಒಲಿಮೆಯಿಂನಿಂತಿಹರು ಸ್ಮರಿಪರ ಗೋಕಲ್ಪತರುವು 25ಕನ್ನಡಪ್ರದೇಶದಲಿ ಮಹಿಷೂರು ರಾಜ್ಯ ಹೊಳೆಹೊನ್ನೂರು ಕ್ಷೇತ್ರದಲಿ ವೃಂದಾವನಅಹ್ನುಕನ್ಯಾ ಬಿಂದು ರೂಪದಲಿ ವರ್ಷಿಪಳುಜಾಹ್ನವಿಧರ ಉಸುವು ಕಣರೂಪದೊಳಗೆ 26ಒಲಿವ ಶಿವ ಸತ್ಯ ಧರ್ಮರ ನಾವು ಸ್ಮರಿಸಲುಒಲಿವರು ಮಧ್ವಮುನಿ ಶಿವನು ನಮಗೊಲಿಯೆಒಲಿವನುಅಜಪಿತ`ಶ್ರೀ ಪ್ರಸನ್ನ ಶ್ರೀನಿವಾಸನು'ಒಲಿವ ಬೋಧರು ಮಧ್ವಮುನಿ ಒಲಿದರೇವೇ 27 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಪ್ರಿಯ ತೀರ್ಥವಿಜಯ124ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಅಶೇಷಗುಣಗಣಾಧಾರ ವಿಭುನಿರ್ದೋಷಹಂಸ ಶ್ರೀ ಪತಿಯಿಂದುದಿತ ಗುರುಪರಂಪರೆಗೆಬಿಸಜಭವ ಸನಕಾದಿದೂರ್ವಾಸಮೊದಲಾದವಂಶಜರು ಅಚ್ಚುತ ಪ್ರೇಕ್ಷರಿಗೆ ನಮಿಪೆ 1ಪುರುಷೋತ್ತಮ ತೀರ್ಥ ಅಚ್ಚುತ ಪ್ರೇಕ್ಷರಕರಕಮಲ ಜಾತರೂ ಮಹಾಭಾಷ್ಯಕಾರರುವರವಾಯು ಅವತಾರ ಆನಂದ ತೀರ್ಥರಚರಣವನಜದಿ ನಾ ಸರ್ವದಾ ಶರಣು 2ಪದ್ಮನಾಭನರಹರಿಮಾಧವಅಕ್ಷೋಭ್ಯಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತಮೇಧಾ ಪ್ರವೀಣ ಜಯ ತೀರ್ಥಾರ್ಯರಿಗೂವಿದ್ಯಾಧಿರಾಜರಿಗೂ ನಮೋ ನಮೋ ಶರಣು 3ವಿದ್ಯಾಧಿರಾಜರಿಗೆ ಶಿಷ್ಯರು ಈರ್ವರುಮೊದಲನೆಯವರು ರಾಜೇಂದ್ರ ತೀರ್ಥಾರ್ಯನಂತರ ಕವೀಂದ್ರ ತೀರ್ಥಾರ್ಯ ಇವರುಗಳಪಾದಾರವಿಂದಗಳಿಗೆ ನಾ ನಮಿಪೆ 4ವಾಗೀಶತೀರ್ಥರು ಕವೀಂದ್ರ ಹಸ್ತಜರುವಾಗೀಶಕರಜರು ರಾಮಚಂದ್ರಾರ್ಯಈ ಗುರುಗಳಿಗೀರ್ವರು ಶಿಷ್ಯರು ಇಹರುಬಾಗುವೇ ಇವರ್ಗಳಿಗೆ ಸಂತೈಸಲೆಮ್ಮ 5ಮೊದಲನೆಯವರು ವಿಭುದೇಂದ್ರ ತೀರ್ಥಾರ್ಯರುವಿದ್ಯಾನಿಧಿ ತೀರ್ಥಾರ್ಯರು ಅನಂತರವುವಿದ್ಯಾನಿಧಿ ಸುತ ರಘುನಾಥ ತೀರ್ಥರುವಂದಿಸುವೆ ಈ ಸರ್ವಗುರು ವಂಶಕ್ಕೆ 6ರಘುನಾಥ ಕರಕಮಲ ಜಾತ ರಘುವರ್ಯರಿಗೂರಘೂತ್ತಮ ವೇದವ್ಯಾಸ ವಿದ್ಯಾಧೀಶವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥಸತ್ಯಾಭಿನವ ಸತ್ಯಪೂರ್ಣರಿಗೆ ನಮಿಪೆ 7ಸತ್ಯಪೂರ್ಣ ತೀರ್ಥರಿಗೆ ಶಿಷ್ಯರು ಇಬ್ಬರುಸತ್ಯವರ್ಯ ತೀರ್ಥರು ಮೊದಲನೆಯವರುಸತ್ಯವಿಜಯ ತೀರ್ಥರು ಎರಡನೆ ಶಿಷ್ಯರುವಂದನಾದಿ ಮರ್ಯಾದೆ ಮಾಳ್ಪುದು ಜೇಷ್ಠರಿಗೆ 8ಸತ್ಯವರ್ಯ ತೀರ್ಥರೇ ಮುಂದಕ್ಕೆ ಸತ್ಯಪ್ರಿಯರೆಂದು ಕರೆಸಿಕೊಂಡರು ವಿರಾಗಿಕೋವಿದರುಸುಂದರ ದೇಶವು ಗೋದಾವರೀ ಕ್ಷೇತ್ರಕ್ಕೆಸತ್ತತ್ವ ಬೋಧಿಸಲುವಿಜಯಮಾಡಿದರು9ಸತ್ಯ ವಿಜಯರುಗುರುಆಜೆÕಯಿಂ ತಾವೂನೂತತ್ವಬೋಧಸಂಚಾರ ಮಾಡಿದರು ಆಗಸತ್ಯಪೂರ್ಣ ತೀರ್ಥರು ತಾವೇ ಕರ್ನಾಟಕಪ್ರಾಂತ್ಯಕ್ಕೆ ಹೊರಟರು ದಿಗ್ವಿಜಯಕಾಗಿ 10ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರೀಯರುಗೋದಾವರೀ ತೀರವಿಜಯಮಾಡುವಾಗಭೂದೇವ ನರದೇವಪುರಿನಗರಪ್ರಮುಖರುಉತ್ಸಾಹದಿ ಭಕ್ತಿ ಮರ್ಯಾದೆ ಮಾಡಿದರು 11ಬಿಸಾಜಿಪಂತ ನಾರಾಯಣ ನರಳೀಪಂತವಿಶ್ವಾಸದಿ ಇಂಥಾ ಪ್ರಮುಖ ಜನರುಈ ಸಂನ್ಯಾಸ ರತ್ನ ಸತ್ಯಪ್ರಿಯ ಆರ್ಯರಿಗೆಸ್ವಾಗತ ಪೂಜೆ ಮಾಡಿದ್ದು ಖ್ಯಾತ 12ಸಜ್ಜನರು ದೊಡ್ಡವರು ನಾಯಕರು ಗುರುಗಳಪೂಜಿಸುವ ಸಮಯ ಬಂದು ಅಲ್ಲಿ ಮೊದಲನೆಬಾಜೀರಾವ್ ಎಂಬಂಥ ಅರಸನು ಅವನೂ ಸಹನಿಜ ಭಕ್ತಿ ಭಾವದಿಂದಲಿ ಪೂಜಿಸಿದ 13ತಾನು ಪೂಜಿಸಿ ಗ್ರಾಮ ದಾನ ಮಾಡಿದ್ದಲ್ಲದೆಘನಮಹಾತ್ಮ ಸ್ವಾಮಿಗಳ ಪೂಜಿಸಿರೆಂದುತ್ನನ ಮುದ್ರೆ ಪತ್ರ ಬೇರೆ ರಾಜರ್ಗೆ ಕಳುಹೆಂದುತನ್ನ ಸಹ ಬಂದಿದ್ದ ಮಂತ್ರಿಗೆ ಹೇಳಿದನು 14ಗೋದಾವರೀ ತೀರ ಸ್ಥಳಗಳಲಿ ಈ ರೀತಿಸತ್ಯಪ್ರಿಯ ಆರ್ಯರು ಸಂಚರಿಸಲಾಗಸತ್ಯ ಪೂರ್ಣ ತೀರ್ಥರು ದಕ್ಷಿಣದಲ್ಲಿಕ್ಷೇತ್ರಾಟನದಿ ಇರುತಿದ್ದರು ಮುದದಿ 15ಸತ್ಯಪೂರ್ಣರಿರುತ್ತಿದ್ದ ಸಂಚಾರ ಸ್ಥಳದಹತ್ತಿರವೆ ಕೊಂಗು ನಾಡುತೋಂಡದೇಶಸತ್ಯವಿಜಯರು ಅಲ್ಲಿ ಸಂಚರಿಸಿ ಬಂದರುಸತ್ಯ ಪೂರ್ಣರುಹರಿಪಾದಸೇರುವಾಗ16ಸತ್ಯವಿಜಯರ ಕೈಗೆ ಸಂಸ್ಥಾನ ಬರಲುಸತ್ಯಭಿನವ ಸತ್ಯಪೂರ್ಣರ ಪದ್ಧತಿಯಂತೆ ಸಂಸ್ಥಾನ ಆಡಳಿತ ಮಾಡುತ್ತಾಮತ್ತೂತೋಂಡದೇಶ ಸಂಚಾರಕ್ಕೆ ಹತ್ತಿದರು17ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 18 ಪ
--------------
ಪ್ರಸನ್ನ ಶ್ರೀನಿವಾಸದಾಸರು