ಒಟ್ಟು 20 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕೌತಕ ಕೃಷ್ಣ ತಾನೆ ಕನಸಿನೊಳು |ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |ಮುಂದೆ ಅದರಂದವನು ಎಲ್ಲ ತಾಪೇಳ್ದ ||ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |ತಿಂದ ಮೀಸಲಕೊಡೆನು ಎಂದು ಹೇಳಿದೆನು 1ಮೋಸಹೋದೆನು ನಾನು ದೋಸೆಯನು ಹರಿಗೆ-ಆ-ಪೋಶನವನಿಕ್ಕದೇ ಪೋಷಿಸಿದೆನು ||ಮಿಸಲಾದರು ಅಹುದು ದೋಷವಿಲ್ಲೆಂದೆನುತ |ಆಸುರದ ಮಾತುಗಳ ವಾಸಿತೋರಿಸಿದನು 2ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4ಈ ಮಹಾಮೂರ್ತಿಯನು ಜಾವಪರ್ಯಂತರದಿ |ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||ಆ ಮಹಾ ಹರಿಯು ಪರಧಾಮವನು ಕೈಕೊಂಡು |ಭೂಮಿಪತಿಯಾಗಿರ್ದ ಪುರಂದರವಿಠಲ........................... 5
--------------
ಪುರಂದರದಾಸರು
ನಾಳೆ ಬರುವೆನೆಂದು ಹೇಳಿ ಮಧುರೆಗೆ ಪೋದ ಬ-ಹಳದಿನವಾಯಿತಲ್ಲೊ ಉದ್ಧವ ಪ.ಕೇಳಿದ್ಯಾ ನೀಬಾಹವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಅ.ಪ.ಪಳ್ಳಿವಾಸಿಗಳು ನಾವು ಪರಿಪರಿ ಅಲಂಕರಿಸಿ ಒಲಿಸಿಕೊಂಬುದನರಿಯೆವೊಗೊಲ್ಲ ಸತಿಯರು ಸದಾ ಗೋರಕ್ಷಕರು ಮೈಯ ಹೊಲೆತೊಳೆಯಲರಿಯೆವೊಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯನೆಲ್ಲ ತಿಳುಹಿಸಿಕೊಂಡೆವೊಚಲ್ಲೆಗಂಗಳ ಚಪಲೆಯರು ಮಧುರೆ ನಾರಿಯರ ಒಲಪಿಗೆ ನಾವೆದುರೇನೊ ? 1ಚೊಕ್ಕನಾದನಿತ್ಯತೃಪ್ತನಿಗೆ ಬೆಣ್ಣೆ ಕಳವಿಕ್ಕಿದೆವಲ್ಲವೊಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆ ಸೊಕ್ಕಿನುಕ್ತಿಯ ನುಡಿದೆವೊಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆ ದಕ್ಕಿದನು ಎಂತಿದ್ದೆವೊವಕ್ರಗತಿಯಾಗಿ ಅಕ್ರೂರ ಬಂದ್ಯೆಮ್ಮ ಚಕ್ರಧರನಗಲಿಸಿದನೊ 2ಧೀರಸ್ವರಮಣದೋಷದೂರನ್ನ ಅಲ್ಪ ಬಹುಜಾರನೆಂದರಿತೆವಲ್ಲೊಆರಾರ ಮನಕಿನ್ನು ತೋರದವನ ನಮ್ಮ ಓರಗೆಯವನೆಂದರಿದೆವೊಮುರಾರಿಅಜಪರಿವಾರದೊಡೆಯನ ನಾವು ಪೋರನೆಂದಾಡಿಸಿದೆವೊನಾರಿಯರು ನಾವಲ್ಪ ದಾರಿದ್ರ್ಯ ದಷ್ಟರಿಗೆ ಶ್ರೀರಮಣನೆಂತೊದಗುವನೊ 3ನಿಧಿಯ ಬದಿಲಿದ್ದರು ವಿಧಿಸುವುದನರಿಯದೆ ಮದಡೆಯರಾದೆವೊಮದನನಾಟಕೆ ಮನವಿಕ್ಕಿ ಅವನಿಂದೊಂದು ತತ್ವ ತಿಳಿಯಲಿಲ್ಲೊಚದುರೆಯರು ನಮ್ಮ ಬಿಟ್ಟು ಕದಲನಿವನೆಂತೆಂಬ ಮದದಿ ಮೋಸಹೋದೆವೊಮಧುರೆಯಿಂದೆಮ್ಮ ತಮ್ಮ ಹೃದಯದೊಳಿಪ್ಪನೆಂದುಚದುರ ಪೇಳಿಹನಂತೆಲೊ 4ಮತಿ ತಪ್ಪಿದೆವೊ ನಾವು ಸತಿಯರೆಲ್ಲೊಂದಾಗಿ ರಥವ ನಿಲಿಸದೆ ಹೋದೆವೊಹಿತರಾರು ನಮಗೆಸಾರಥಿನಿನ್ನ ಸಹಾಯ ದೊರೆತರೆತನವ ಮಾಳ್ಪೆವೊಪಥವ ತೋರಿಸೊ ನಮಗೆ ಮುಂದೆಮ್ಮ ಚೆಲ್ವ ಶ್ರೀಪತಿಯು ಬಂದೊದಗುವಂತೆಗತಿಯಾರೊ ಅವನ್ಹೊರತು ಗೋಪಾಲವಿಠಲ ಅಚ್ಯುತನ ಮಹಿಮೆ ಕಾಣೆವೊ 5
--------------
ಗೋಪಾಲದಾಸರು
ನಿನ್ನ ನೋಡಿ ಧನ್ಯನಾದೆನೋ ಓ ಲಕ್ಷ್ಮೀರಮಣಾಮನ್ನಿಸೆನ್ನ ಮರೆಯ ಹೊಕ್ಕೆನೊ ಪನ್ನಗೇಂದ್ರಶಯನ ನಿನ್ನಪಾದನಂಬಿದೆನ್ನ ಮನ್ನಿಸದೆಮರೆವರೇನೋ ಘನ್ನ ಓ ಶ್ರೀ ಕೃಷ್ಣಮೂರ್ತಿ ಪಲಾಲಿಸೆನ್ನ ಮಾತನೊಂದನೂಶ್ರೀಕೃಷ್ಣಮೂರ್ತಿ ಪಾಲಿಸೆನ್ನಪ್ರೀತಿಯಿಂದಿನ್ನೂ ಬಾಲಬುದ್ಧಿಯಿಂದ ಗೈದಹಾಳುಕೃತ್ಯವನ್ನು ಮರೆತು ಕಾಲನೊಶಕೆಕೊಡಿಸದೆನ್ನ ಪಾಲಿಸಯ್ಯ ಲಕ್ಷ್ಮೀರಮಣ 1ಒಡೆಯ ನೀನೆಂದೆಂಬುದರಿಯದೆಓ ಲಕ್ಷ್ಮೀರಮಣ ಮಡುವಧುಮುಕಿದಾನೆಯಂತಾದೆಒಡಲ ಸುಖವೆ ಬಯಸಿಗೈವಪಿಡಿದ ಮಡದಿ ಮಕ್ಕಳೆಂಬಕಡು ಮಮತೆಯಿಂದ ನಿನ್ನಅಡಿಯ ಭಜಿಸದಾದೆ ಕೃಷ್ಣಾ 2ಮೋಸಹೋದೆನಿನಿತು ತಿಳಿಯದೇ ಶ್ರೀಕೃಷ್ಣಮೂರ್ತಿಗಾಸಿಯಾದೆ ಮಾಯಾಕೊಳಗಾದೆಆಸೆ ಪಾಶಗಳಲಿ ಸಿಕ್ಕಿ ಈಸು ಸುಖವನಿನಿತು ಕಾಣೆಕೇಶವಾ ಗೋವಿಂದ ನಿನ್ನದಾಸನೆನಿಸೆ ಲಕ್ಷ್ಮೀರಮಣ 3
--------------
ಗೋವಿಂದದಾಸ