ಒಟ್ಟು 19 ಕಡೆಗಳಲ್ಲಿ , 6 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಪಾದರಾಜ ಪಾಲಿಸೊ ಕೈಪಿಡಿದೀ ಭವದ ಕೂಪಾರದಿಂದ ದಾಟಿಸೋ ಪ ಕಾಪಾಡೆಲೊ ಕರುಣಾ ಪಯೋನಿಧೆ ಭೂಪಚಂದ್ರ ಗಿರಿ ಪಾಪಗಳನ್ನು ಕಳದಿರುವೆ ಮದ್ಗುರುವೆ ಕರಮುಗಿವೆ ಭಜಕರ ಸುರತರುವೇ ಅ.ಪ ಮೇದಿನಿ ಪಾಲಪೂಜಿತ ವಿದ್ವಜ್ಜನವಿನುತ ಮೇದಿನಿ ಜಾತ ಪ್ರದಾತ ಮೋದಮುನಿಯ ಸುಮತೋದಧಿಚಂದಿರ ವಾದಿ ಮದಗಜ ಮೃಗಾಧಿಪ ಕವಿಜನಗೇಯ ಶುಭ ಕಾಯ ಧೃವರಾಯ ಆಶ್ವರ್ಯ ಚರ್ಯ1 ವಿಪ್ರಹತ್ಯಾದಿ ದೋಷಗಳನ್ನು ಕಳೆಯುವ ಮಹಿಮೆಯನು ಕ್ಷಿಪ್ರ ಶಂಖೋದಕ ಸಂಪ್ರೋಕ್ಷಿಸಿ ಬಲು ಕಪ್ಪುವಸನವನು ಸುಪ್ರಕಾಶಿಸಿದ ಮಹಿಮಾ ಶುಭನಾಮ ಜಿತಕಾಮಾ ಯತೆ ಸಾರ್ವಭೌಮ 2 ವಿಭುದೇಂದ್ರ ಸಹಿತ ಛಾತ್ರಾ ನಿಮ್ಮನ್ನು ಕೇಳಲು ಸೂ- ಸರ್ವಾತಿಶಯದಿಸ- ಮುಖಗೀತಾನಾಮದಿ ಪ್ರಖ್ಯಾತ 3 ಮೃಷ್ಟಾನ್ನ ಕೊಡುವೊ ಮಹಿಮೆಯ ಕೃಷ್ಣಗರ್ಪಿಸಿದ ಪಷ್ಠಿಶಾಕಯುತ ಮೃಷ್ಟಾನ್ನ ದ್ವಿಜ ತುಷ್ಟಿಗೈಸುವಿರಿ ನಿರುತ ಗುಣಭರಿತ ಪ್ರಖ್ಯಾತ ಪಾವನ ತರ ಚರಿತ 4 ಜಗದೊಳು ಸನ್ಮಾನ್ಯ ಚರಿಸಿ ಸತ್ಕರ್ಮವ ಘಳಿಸುವ ಪುಣ್ಯ ಶರಣುಜನಕೆ ಸುರತರುವೆಂದೆನಿಸುತ ಧರೆಯೊಳು ಮೆರೆಯುವ ಶಿರಿಕಾರ್ಪರ ಶುಭನಿಲಯ ಸುರಗೇಯ ಗುರುರಾಯ ನರಹರಿಗತಿ ಪ್ರೀಯ 5
--------------
ಕಾರ್ಪರ ನರಹರಿದಾಸರು
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಹರಿ ಗೋವಿಂದ ವಿಠಲ | ಪೊರೆಯ ಬೇಕಿವಳಾ ಪ ನಿರುತ ಹರಿ ಗುರುದಾಸ್ಯ | ಅರ್ಥಿಸುತ್ತಿಹಳಾ ಅ.ಪ. ಸುಪ್ತೀಶತೋರ್ದಪರಿ | ಪ್ರಾಪ್ತಿ ಪ್ರಾಣನ ವಶವುಕ್ಲಪ್ತವಾಯ್ತಿವಳೀಗೆ | ಮುಕ್ತಿ ಸಾಧನಕೆ |ಎತ್ತ ನೋಡಿದರತ್ತ | ಆಪ್ತಮುಖ್ಯ ಪ್ರಾಣಪೊತ್ತಿಹನು ಸರ್ವತ್ರ | ವ್ಯಾಪ್ತಿ ಮೂರುತಿಯೇ 1 ಭವ ಹಾರೀ 2 ಭುವನ ಪಾವನ ನಿನ್ನ | ಸ್ತವನ ವೈಭವ ಕೇಳೆಸರ್ವದಾ ಸರ್ವತ್ರ | ಶ್ರವಣ ಸುಖದಲ್ಲೀನಿರ್ವಿಕಾರದ ತಿರಗಲೀಕೆಯ ಮನಸುಸರ್ವಾಂತರಾತ್ಮಕನೆ | ಸಾರ್ವಭೌಮ 3 ತಾಪ ಭಯಅಧ್ಯಕ್ಷ ಶ್ರೀಹರಿಯೆ ನೀನಾಗಿ ಕಳೆದೂ |ಮಧ್ವಾಂತರಾತ್ಮಕನ | ಹೃದ್ಗುಹದಿ ತೋರೆಂದುಬುದ್ಧಿ ಪೂರ್ವಕ ಬೇಡ್ವೆ | ಪದ್ಮನಾಭಾ 4 ಸಾಧನದ ಜೀವಿಗಳ | ಸಾಧನದ ಪ್ರತಿಭಂಧಸಾದರದಿ ವಾರಿಸುತ | ಮೋದಮನ ನೀಯೋ |ಮೋದಮುನಿ ವಂದ್ಯ ಗುರು | ಗೋವಿಂದ ವಿಠಲನೆನೀದಯದಿ ಪೊರೆ ಇವಳ | ಪ್ರಹ್ಲಾದ ವರದಾ 5
--------------
ಗುರುಗೋವಿಂದವಿಠಲರು
ಗುರುರಾಯಾ ಗುರುರಾಯಾ |ತರಣಿಪ್ರಕಾಶ ಯತಿಪ ವರದೇಂದ್ರ ಪಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||ಯಿಂದ ಕರಪಿಡಿಯೋ |ಮಂದದಯಾಳೋ 1ಆರೆನು ಮನುಜರು | ದೂರುವ ಮಾತನು ||ಆರಿಗುಸಿರಲಿ ನಿ | ವಾರಿಸೋ ಸ್ವಾಮಿ2ನೀನೊಲಿಯಲು ಭಯ | ಕಾಣಿಸಿಕೊಂಬುದೆ ||ಹೀನ ಮತಾಟವಿ ಕೃ | ಶಾನು ಮಹಾತ್ಮ 3ಮೇದಿನಿಪರು ಬೆರ | ಗಾದರು ದಾನಕೆ ||ಮೋದಮುನಿಮತ ಮ | ಹೋದಧಿ ಚಂದ್ರ 4ಕಾಷಾಯ ವಸನಿ |ದೇಶಿಕವರಪ್ರಾ ||ಣೇಶ ವಿಠಲನವ | ರಾ ಸಲಹುವದೋ 5
--------------
ಪ್ರಾಣೇಶದಾಸರು