ಒಟ್ಟು 26 ಕಡೆಗಳಲ್ಲಿ , 10 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನ ದಾನವ ಮಾಡಲು - ಹರಿಯ |ಧ್ಯಾನಕೆ ಸಮವಾದ ದಾನಂಗಳುಂಟೆ ? ಪ.ದಿನಕೊಂದು ಲಕ್ಷ ಗೋದಾನವ ಮಾಡಲು |ಅನುದಿನ ಉದಕದಾನವ ಮಾಡಲು ||ಮನಶುದ್ಧವಾದ ಭೂದಾನವ ಮಾಡಲು |ವನಜನಾಭನ ಧ್ಯಾನಕೆ ಸಮವುಂಟೆ ? 1ಉತ್ತಮವಾದ ವಸ್ತ್ರವ ದಾನಮಾಡಲು |ಮುತ್ತು ಮಾಣಿಕವ ದಾನವ ಮಾಡಲು ||ಅತ್ಯಂತ ವಿದ್ಯಾ ಪ್ರದಾನವ ಮಾಡಲು |ಚಿತ್ತಜಪಿತನ ಧ್ಯಾನಕೆ ಸಮವುಂಟೆ ? 2ಶತಕೋಟಿ ಕನ್ಯಾಪ್ರದಾನವ ಮಾಡಲು |ಶತಶತ ಸುವರ್ಣ ದಾನವ ಮಾಡಲು ||ಮಿತಿಯಿಲ್ಲದೆ ಅನ್ನದಾನವ ಮಾಡಲು |ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? 3ನಾನಾ ತೀರ್ಥದಲಿ ಸ್ನಾನವ ಮಾಡಲು |ಕಾನನದೊಳಗೆ ತಪವ ಮಾಡಲು |ಜಾÕನಿಯಾಗಿ ಕಾಶೀಯಾತ್ರೆಯ ಮಾಡಲು |ಜಾನಕೀಪತಿಯ ಧ್ಯಾನಕೆ ಸಮವುಂಟೆ ? 4ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |ಹರುಷದಿ ವಿಷ್ಣುಪಂಚಕ ಮಾಡಲು ||ಪರಮ ಕಠಿಣ ಚಾಂದ್ರಾಯಣ ಮಾಡಲು |ಪುರಂದರವಿಠಲನ ಧ್ಯಾನಕೆ ಸಮವುಂಟೆ ? 5
--------------
ಪುರಂದರದಾಸರು
ಜೋ ಜೋ ಶ್ರೀ ಕೃಷ್ಣ ಪರಮಾನಂದಜೋ ಜೋ ಗೋಪಿಯ ಕಂದ ಮುಕುಂದ ಪ.ಪಾಲುಗಡಲೊಳು ಪವಡಿಸಿದವನೆ ಒಂದಾಲದೆಲೆಯ ಮೇಲೆ ಮಲಗಿದ ಶಿಶುವೇ ||ಶ್ರೀ ಲತಾಂಗಿಯರ ಚಿತ್ತವಲ್ಲಭನೇಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ 1ಹೊಳೆಯುವ ರನ್ನದ ತೊಟ್ಟಿಲ ಮೇಲೆಢಳಿ ಢಳಿಸುವ ಗುಲಗುಂಜಿಯ ಮಾಲೆ ||ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ 2ಆರ ಕಂದ ನೀನಾರ ನಿಧಾನಿಆರ ರತ್ನವೊ ನೀನಾರ ಮಾಣಿಕವೋ ||ಸೇರಿತು ಎನಗೊಂದು ಚಿಂತಾಮಣಿಯು - ಎಂದುಪೋರನಿನ್ನನು ಪಾಡಿ ತೂಗುವೆನಯ್ಯ - ಜೋ ಜೋ3ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆಮನೆಯ ಕೆಲಸವಾರು ಮಾಡುವರಯ್ಯ ||ಮನಸಿಗೆ ಸುಖನಿದ್ರೆ ತಂದುಕೊ ಬೇಗಫಣಿಶಯನನೆ ನಿನ್ನ ಪಾಡಿ ತೂಗುವೆನು - ಜೋ ಜೋ 4ಅಂಡಜವಾಹನ ಅನಂತ ಮಹಿಮಪುಂಡರೀಕಾಕ್ಷ -ಪರಮ ಪಾವನ ||ಹಿಂಡು ದೈವದಗಂಡ ಉದ್ಧಂಢ ದೇವನಪಾಂಡುರಂಗ ಶ್ರೀ ಪುರಂದರವಿಠಲ - ಜೋ ಜೋ 5
--------------
ಪುರಂದರದಾಸರು
ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
--------------
ಪುರಂದರದಾಸರು
ಧರ್ಮಕ್ಕೆ ಕೈಬಾರದೀಕಾಲ - ಪಾಪ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.ದಂಡದೋಷಕೆ ಉಂಟು ಪುಂಡುಪೋಕರಿಗುಂಟು |ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||ಭಂಡೆಯರಿಗುಂಟು ದಿಂಡೆಯರಿಗುಂಟು - ಬೇಡಿ - |ಕೊಂಡಿವರಿಗಿಲ್ಲವು ಈ ಕಲಿಕಾಲ 1ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |ಹೆತ್ತತಾಯಿಗಿಲ್ಲ ಈ ಕಲಿಕಾಲ ||ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |ಉತ್ತಮರಿಗೆ ಇಲ್ಲವೀ ಕಲಿಕಾಲ 2ಹುಸಿದಿಟವಾಯಿತು ರಸ - ಕಸವಾಯಿತು |ಮಸಿ ಮಾಣಿಕವಾಯಿತೀಕಾಲ ||ವಸುಧೆಯೊಳಗೆ ನಮ್ಮ ಪುರಂದರವಿಠಲನ |ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ 3
--------------
ಪುರಂದರದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ