ಒಟ್ಟು 19 ಕಡೆಗಳಲ್ಲಿ , 15 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು ತಮ್ಮವಗುಣ ಮರ್ತ್ಯಲಾಭಾ ಲಾಭಾ ಕರ್ತ ಮಾಡುವೆನೆಂದು ಪ ಕಣ್ಣು ಕಿವಿ ನಾಲಿಗಿನ್ನು ನಾಶಿಕಕೊಟ್ಟು ಸನ್ನುತ ಹರಿಕಥೆ ಕೇಳು ಯನ್ನಸ್ತುತಿ ಸುನಿರ್ಮಾಲ್ಲ್ಯುನ್ನತ ತುಳಸಿ ವಾಸನಾಘ್ರಾಣಿಸೆಂದು ಮುನ್ನೆಂದನಲ್ಲದೇ ಆನ್ಯದೈವ ನೋಡೆಂದನೇ ಪಿಶುನರ ಅನ್ಯಾಯವ ಕೇಳೆಂದನೇ ಉದರಕಾಗಿ ಮಾನವ ಹೊಗಳೆಂದನೇ ಭೋಗದ ತನ್ನಗೋಸುಗ ದ್ರವ್ಯ ಆಘ್ರಾಣಿಸೆಂದನೆ 1 ಮಂಡಿತ ಸಿರಸದೋರ್ದಂಡ ಕರಚರಣ ಚಂಡ ಮನಗಳಿಂದಾ ಖಂಡ ನಮಿಸಿ ಸೇವೆ ಪುಂಡಲೀಕದ ಪರಿಗಂಡು ನೃತ್ಯಾದಿಯ ಬೋಧ ಮನನ ಪಂಡುಂಡ ಮಾಡೆಂದ ಮಂಡಿ ಬಿಗಿದರೆಂದನೇ ಜನರಿಗು ದ್ವಂದದಿ ಹೊಡಿಯಂದನೇ ಧನಿಕರ ಕಂಡು ಭ್ರಾಂತಿಗೆ ಬಿದ್ದು ಚಿಂತಿಸುಯಂದನೆ 2 ನಿತ್ಯ ವರಿತು ಸತ್ಯಜ್ಞಾನೌಷದ ಉತ್ತಮ ರಸಾಯನ ಅತ್ತಿತ್ತಲಾಗದೇ ಕೊಂಡು ಇತ್ತ ಭವರೋಗ ವಿಪತ್ತದ ಕಳೆಯೆಂದ ಮತ್ತ ಮಹಿಪತಿ ಸುತ ಹೃತ್ತಾಪಹಾರಿ ಕು ಚಿತ್ತ ನೀನಾಗೆಂದನೇ ಸತ್ಸಂಗ ನಿತ್ಯ ಮಾಡಿರೆಂದನೇ ಬರಿದೆನೀ ಮೃತ್ಯು ದೇವತೆ ಬಾಯ ತುತ್ತಾಗುಯಂದನೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
161ರಂಗ ಒಲಿದ ದಾಸರಾಯರ - ಪಾದಪದುಮಕಂಗಳಿಂದ ನೋಡಿದಾವರ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರಾ - ಏನು ಪೇಳಲಿವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವನಿಂಥಾ ಅ.ಪಪರಮಭಕುತರೆನಿಸಿ ಸತತ-ಹರಿಯ ಮಹಿಮೆತುತಿಸಿಪಾಡುತಾ- ತಮ್ಮ ಮನದಿಹರಿಯ ಮೂರ್ತಿಯನ್ನೇ ನೋಡುತಾ - ಸಾಧುಜನರದುರಿತರಾಶಿ ದೂರಮಾಡುತಾ- ನಿತ್ಯದಲ್ಲಿಹರುಷದಿಂದ ಸ್ತಂಭದೊಳಗೆ -ಇರುವೆವೆಂಬಭಾವಜನಕೆಅರುಹಿ ಜನರ ಈಪ್ಸಿತಾರ್ಥ ಕರೆದು ನೀಡಿ ಮೆರೆವೊರಿಂಥಾ 1ಪರಮತತ್ವ ಸಾರಪುಂಜ - ಹರಿಕಥಾಮೃತಸಾರಹರುಷದಿಂದ ರಚಿಸಿ ಹರಿಯ -ಚರಣಭಜಿಪ ಜನಕೆ ಉಣಿಸಿಪರಮ- ಗೋಪ್ಯ-ಭಾವತಿಳಿಸಿದಾ-ಅರಿಪು ಮಾಡಿರೆಂದು ಪೇಳಿದಾ - ಮೂಢ ಜನಕೆದೊರೆಯದೆಂದು ತಾನು ಪೇಳಿದಾ - ತನ್ನ ಜನಕೆಪರಮಸುಲಭ ತೋರಿ ಮುದದಿಪರಿಪರಿಯಲಿ ಪೊರೆವೊರಿಂಥಾ 2ಧಾತನಾಂಡ - ಮಧ್ಯದಲ್ಲಿ ಜಾತರಾದ ಸ್ವೀಯ ಜನರಮಾತೆ- ಜನಕರಂತೆಅವರಮಾತನಡಸಿಕೊಡುವ ಜಗ -ನ್ನಾಥವಿಠಲನೊಲಿದನೀತಗೆ - ಜಗದಿ ತಾನುನಾಥನಾಮ ಕಾಣೆನೆಂದಿಗೆ - ದಾಸಜನಕೆನಾಥರೆನಿಸಿ ಜಗದಿ ಮಹಾ - ದಾತರಾಗಿ ಸಕಲಭೀಷ್ಠ -ವ್ರಾತಸಲಿಸಿಗುರುಜಗ-ನ್ನಾಥದಾಸವಿಠ್ಠಲ ಪ್ರೀತಿಗೊಳಿಪರಿಂಥಾ 3
--------------
ಗುರುಜಗನ್ನಾಥದಾಸರು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು
ಸಂಜೆಯೊಳಿಂತು ಬರುವರೆ | ಶಬ್ದ ಹೊರುವರೆ | ಜನಕಂಜದಲಿಹರೆ ಪಸಂಧ್ಯಾಕಾಲವು ಗೋವು ಬಾರವೆ,ವತ್ಸಬಳಲವೆ, ಹೀಗೆ ಬರುವುದು ಥರವೆ |ಅಂದಾರು ಅತ್ತಿ ಅತ್ತಿಗೆಯರು, ಇಷ್ಟು ಸಹಿಸಾರು, ಪತಿಗಳು ಸುಮ್ಮನಿರರು ||ಕಂದಗಳೆರೆವ ಸಮಯವಿದು, ಬಿಟ್ಟು ಬರುವುದು, ಚರ್ಯೆ ನೋಡಲ್ಕರಿದು |ಬಂದೊಂಧೆಳಲೆ ಮನೆಯೊಳು ದೀಪ, ಹಚ್ಚದಿರೆ ಪಾಪ, ಮಾಡಬೇಡಿರಿ ಕೋಪ 1ಗಂಡನೇ ದೈವ ಹೆಂಗಸರಿಗೆ, ತಿಳಿಯದೆ, ಹೀಗೆ ಬರುವರೆ ಯನ್ನ ಬಳಿಗೆ |ಬಂಡುಇದೇನಿರೆ ಬತ್ತಲೆ, ಬಂದಿರೆಲ್ಲೆಲೆ, ಆಭರಣವೆಲ್ಲಿವಲ್ಲೆ ||ಕಂಡ ಕಂಡಲ್ಲೆ ಹುಡುಕುವರು, ನಿಮ್ಮನ್ನಾಳ್ವರು, ಕಾಣದಲೆ ಮಿಡುಕುವರು |ತುಂಟಾಟ ಕಲಿಯಬಾರದು ಇಷ್ಟು, ಪೇಳುವಿನೆ ಒಟ್ಟು, ಕೇಳಿರೆ ಮನವಿಟ್ಟು 2ಆಯಿತು ನಾ ಗಂಡನಾದೇನೆ, ತಿಳಿಯದರೇನೆ, ಕಂಡವರು ನಗರೇನೆ |ಕಾಯೋ ಪ್ರಾಣೇಶ ವಿಠಲ ಎಂದು, ಯನ್ನ ಪದರೆಂದು, ನಮಸ್ಕರಿಸಿರೆ ಬಂದು ||ಈಯಾಟ ಸಲ್ಲ, ನಿಮ್ಮನೆಗೀಗ, ಸಾಗಿರೆ ಬೇಗ, ಪತಿಗಳ ಕೂಡಭೋಗ|ಆಯಾಸವಿಲ್ಲದೆ ಮಾಡಿರೆ, ಮಾತು ಕೇಳಿರೆ, ಭ್ರಾಂತರಾಗಬೇಡಿರೆ 3
--------------
ಪ್ರಾಣೇಶದಾಸರು