ಒಟ್ಟು 24 ಕಡೆಗಳಲ್ಲಿ , 1 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವಾದಿರಾಜರ ಪ್ರಾರ್ಥನೆ) ಭಾವಿಭಾರತಿವರನೆ ದಾಸನ ಬೇಗ ಕಾವ ಕಲುಷಹರನೆ ದೇವ ಋಜು ಗಣನಾಥನೀಪರಿ ಸಾವಕಾಶಕೆ ಸಮಯವಲ್ಲಿದು ಪ. ಅರಿಷಡ್ವರ್ಗದಿ ಸಿಲುಕಿ ಕ್ಷಣಕ್ಷಣ ಕರಗಿ ಕುಂದುತ ಬಂದೆನು ನಾನಾ ಪರಿಯ ಕ್ಲೇಶದಿ ನೊಂದೆನು ಮುಂದೇನು ದುರಿತಾರಾಶಿಗಳನ್ನು ಬೇಗದಿ ತರಿದು ಸಜ್ಜನಗುಣವ ಸುಲಭದಿ ಪೊರೆದನೆಂಬೈತಿಹ್ಯ ವಚನದಿ ಭರವಸದಿ ನಂಬಿರುವೆ ನಿನ್ನನು 1 ತುರಗ ವದನ ದೇವನ ವಲಿಸಿ ದೇವ ನರವರ ಸಂಘವನು ಕರದು ತಂಪೇರಿಸಿ ಸರಿಯೆನಿಸಿದನೆ ಹರಿಯೆ ತಾನೆಂದೊದರಿಕೊಂಡಿಹ ನರಕಭಾಜಿಗಳಾದ ಮೈಗಳ- ನರಿದು ವಾದದಿ ಮುರಿದು ಹಲ್ಲನು ಸಿರಿವರನ ಸತ್ಕರಿಸಿ ಪೂಜಿಪ2 ವನಜಾಕ್ಷ ರಾಮಭಕ್ತನಾಗಿಹ ವಿಭೀಷಣಗೆ ಮಾರುತಿಯಿಂದುತ್ತ- ಮುಂದಿನ ಫಲ ನೀಡೆಂದು ಮಣಿದು ಬೇಡುವೆ ನಿನ್ನ ಪದಯುಗ ವನರುಹಗಳನುವಶ್ಯದಾಯಕ ನಿತ್ಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ವ್ಯಾಸರಾಯರ ಪ್ರಾರ್ಥನೆ) ಶ್ರೀಹರಿಗತಿಪ್ರಿಯಗುರುವ್ಯಾಸರಾಯ ಪ. ಶರ್ಕರ ಕ್ಷೀರವ ಕುಡಿಸುವಂದದಿ ಶುಭ ತರ್ಕತಾಂಡವ ನ್ಯಾಯಾಮೃತವನು ಸುರಿದ 1 ಸಾಂದ್ರ ಹೃತ್ತಾಮಸ ತಂದ್ರವೋಡಿಸುವ ಶ್ರೀ ಚಂದ್ರಿಕಾಕರ ಕರುಣಾಂಬುಧಿ ಧೀರಾ 2 ಕುಂಡಲ ಗಿರಿವರ ಪಾಂಡವಧಾರಾ ಬ್ರ ಹ್ಮಾಂಡಕೋಟೀಶನ ಮಂಡಿಸಿ ನಲಿದಂಥ ಗುರು ವ್ಯಾಸರಾಯ3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ಸುಜ್ಞಾನೇಂದ್ರ ಪ್ರಾರ್ಥನೆ) ಪಾದ ಸ್ಮøತಿಯಿಂದಾಯ್ತೆನಗಾನಂದ ಅತಿಶಯ ತೋರಿಲ್ಲಿಗೆ ಬಂದ ಪ. ಮೂರ್ತಿಯನು ಕೀರ್ತಿಯನು ತಾ ಕರುಣಿಸಿಹನು ಕ್ಷಮಿಸುವನಖಿಳಪರಾಧವನು 1 ಗೆಲುವನು ವಾದಿಗಳ ಸ್ತೋತ್ರಗಳ ಸಾದರದಲಿ ತಾ ಮಾಡುತ ನಶ್ವರ ಬೋಧರ ಶಾಸ್ತ್ರದ ಕರ್ಮಗಳ ಪಾದಾನತರಿಗೆ ಪರಮಕರುಣದಿಂದೋದಿಸಿ ತಿಳಿಸುವ ಧರ್ಮಗಳ 2 ಅಜಭವನುತ ದಿಗ್ವಿಜಯ ರಾಘವನ ಪದಪಂಕಜ ಭೃಂಗಾಯತನ ಭಜಿಸಿರೊ ಭಕ್ತಜನಾರ್ದನನ ನಿಜ ಜನರಿಗೆ ಸುರಕಲ್ಪತರುವೋಲಿದಿರಲಿ ತೋರ್ಪ ಶುಭಾಕೃತನ ಸದ್ವಿಜಜನ ಮಂಡಲಮಂಡಿತನ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀಪಾದರಾಯರ ಪ್ರಾರ್ಥನೆ) ಶ್ರೀಪಾದ ಭೂಪ ಶ್ರುತಿಸಲ್ಲಾಪ ಪಂಕಜ ಮಧುಪ ಪ. ವ್ಯಾಸ ಮುನೀಂದ್ರಾರ್ಪಿತ ಶುದ್ಧ ತಂದ್ರ ದಾಸನ್ನ ಮಾಡೆನ್ನ ಸರ್ವಸ್ವತಂತ್ರ 1 ಶುದ್ಧ ವೇದಾಂತಾಂಬುಧಿಯನ್ನು ಕಡೆದೀ ಮಧ್ಯ ನಾಮಾಮೃತ ಮೇಲೆತ್ತಿ ಸುರಿದೀ 2 ಪತಿತ ಪಾವನ ವೆಂಕಟೇಶನ ಬಹುವಿಧ ಸ್ತುತಿಯಿಂದ ಲೋಲಿಸಿದ ಯತಿ ಕುಲದೀಪ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಸಂತತಿ ಪ್ರಯುಕ್ತ ಪ್ರಾರ್ಥನೆ) ಪರಮ ಪಾವನ ರೂಪ ಪಾಲಿಸು ಕುಲದೀಪ ಪರಿಹರಿಸಖಿಳತಾಪ ದುರಿತರಾಶಿಗಳೆಲ್ಲ ತರಿದು ತ್ವತ್ಪದ ಸೇವಾ- ದರವಿತ್ತು ಸಲಹುವ ಕರುಣಿ ವೆಂಕಟಭೂಪ ಪ. ಮಾತಾ ಪಿತರು ನೀನೆ ಮಹದೇವಿಯರಸನೆ ಪಾತಕ ಪರಿಹಾರನೆ ಭೂತ ಭಾವನ ಭುವನೈಕಾಧಿಪತಿ ಜಗ- ನ್ನಾಥದಾಸರು ತೋರ್ದ ರೀತಿಯ ತಿಳಿಸುವೆ 1 ನಿನ್ನ ಪಾದಾಂಬುಜ ಸೇರಿದ ದಾಸರ ಇನ್ನು ನೀ ಬಿಡಲಾರದೆ ಉನ್ನತ ಸುಖಗಳ ತನ್ನಂತೆ ಪಾಲಿಪ ಘನತೆ ತೋರ್ಪ ಪ್ರಸನ್ನ ವರದರಾಜ 2 ಮಾಧವ ಮನೆ ಮೊದಲಾದುದೆಲ್ಲವು ನಿನ್ನ ಪಾದಕರ್ಪಿಸಿದೆನಿಂದು ನೀ ದಯಾಂಬುಧಿಶೇಷ ಭೂಧರಪತಿ ಮಂಗ ಳೋದಯಕರ ಸಂಪದಾದಿ ಪೂರಣಗೈವ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಸರಸ್ವತೀ ಪ್ರಾರ್ಥನೆ) ಏನೇ ಸರಸ್ವತಿಯಮ್ಮಾ ಬಹು ಮಾನದಿ ಪಾಲಿಸು ನಮ್ಮಾ ಆ ನಳಿನಜ ಚತುರಾನನನೊಲಿಸಿದ ಶ್ರೀನಿವಾಸನ ಪರಮಾನುರಾಗದ ಸೊಸೆ ಪ. ಮೂಢತನವನೆಲ್ಲ ಕಳಿಯೆ ದಯ ಮಾಡಿ ನೀ ಮನಸಿಗೆ ಹೊಳಿಯೆ ಬಾಡದ ಪದ್ಮದ ಕಳೆಯೆ ಮನೋ ರೂಢ ಮಲವ ಬೇಗ ತೊಳಿಯೆ ಆಡುವ ಮಾತುಗಳೆಲ್ಲವು ಕೃಷ್ಣನ ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1 ರಾಜಿಕಲೌಕಿಕವಾದ ಬಹು ಸೋಜಿಗಕರಿಪೂರ್ಣಮೋದ ಈ ಜಗದೊಳು ಮುಖ್ಯವಾದ ಸುಗು- ಣೋಜೊಧಾರಣ ಕಲ್ಪಭೂಜ ಮಂದ ವೈರಿಗಳ ಸ- ಮಾಜವ ಗೆಲಿಸುತ ರಾಜಿಸು ಮನದಲಿ 2 ಕರಣಾಭಿಮಾನಿಗಳನ್ನು ಉಪ ಕರಣರ ಮಾಡುವದನ್ನು ಕರುಣೀ ನೀ ಬಲ್ಲಿನ್ನು ಮುನ್ನ ಮನ ವರತು ರಕ್ಷಿಸು ಬೇಗೆನ್ನನು ಸರಸಿಜಾಕ್ಷ ಶೇಷಗಿರಿ ವರಪದಕಂಜ ಸ್ಮರಣೆ ಮಾಡುವಂತೆ ಕರುಣಿಸೆನ್ನನು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಸೂರ್ಯನಾರಾಯಣನ ಪ್ರಾರ್ಥನೆ) ಸೂರ್ಯಬಿಂಬಗತ ನಾರಾಯಣನನು ಸೇರಿರುವೆನು ಸತತ ಸಾರಸಜಾಸನ ಹೈರಣ್ಯವಪುಷನ ಪ . ಸರ್ಗಸ್ಥಿತಿಗತಿ ಕಾರಣವ್ಯಾಹೃತಿ ಗರ್ವವೇದ್ಯ ಚರಣಾ ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ ಭಾರ್ಗವಿ ಮುಖ ಸಂಸರ್ಗಾನನ ಮತಿ ವರ್ಗಕೇತ್ವತೈದ ಮಾರ್ಗವ ತೋರಿಸು 1 ಸೂರಿಗಮ್ಯಪದ ವಾರಿಜಸುರಪರಿವಾರ ನಿನ್ನ ಕರುಣಾ ತೋರು ಭೌತಿಕ ಶರೀರ ದಾಢ್ರ್ಯ ಮೂರಾರು ಭಕುತಿ ನವ ನಾರದಾದಿ ಮುನಿವಂದಿತ ನಿನ್ನಾ- ನೀರಜ ಬಾಂಧವ 2 ಈ ಜಗದೊಳು ಬಹು ಸೋಜಿಗದೋರುವ ರಾಜರಾಜ ನೀನೆ ರಾಜಸೂಯಯುತ ವಾಜಿಮೇಧ ಕೃದ್ರಾಜನ ಮೈದುನನೆ ಓಜೋಬಲ ಬಹು ತೇಜದ ಪನ್ನಗ ರಾಜ ಗಿರೀಂದ್ರ ವಿರಾಚಿತ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಹಯವದನ ಪ್ರಾರ್ಥನೆ) ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ. ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ1 ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ 2 ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ ಶೇಷಾಚಲ ಭೂಷಾಗಮ ಭಾಷಾಮಿತವಾದ 3
--------------
ತುಪಾಕಿ ವೆಂಕಟರಮಣಾಚಾರ್ಯ
ವ್ಯಾಸಕೂಟ-ದಾಸಕೂಟ ನಮನ (ಶ್ರೀ ಜಯತೀರ್ಥರ ಪ್ರಾರ್ಥನೆ) ನಾಕನಾಯಕಟೀಕಾಕೃತ್ಪಾದ ನಾಕನಾಯಕ ಪ. ನಾಕನಾಯಕ ನಿರಾಕೃತ ತಾಮಸ ರಾಕಾ ರಮಣ ಸುಧಾಕರ ಮೂರ್ತೆ 1 ಪೂರ್ಣಮನೀಷಿಮತಾರ್ಣವ ಘೂರ್ಣನ ಪೌರ್ಣಮಿಯ ವಿಧುವರ್ಣಿತ ಕೀರ್ತೆ 2 ಕುಂಡಲೀಂದ್ರ ಗಿರಿ ಮಂಡನ ಧೂಷಕ ಖಂಡನ ದೈಶಿಕ ಪಾಂಡ್ಯಜ ಭೂಪಾ 3
--------------
ತುಪಾಕಿ ವೆಂಕಟರಮಣಾಚಾರ್ಯ