ಒಟ್ಟು 22 ಕಡೆಗಳಲ್ಲಿ , 14 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು
ಯಾಕುಪೇಕ್ಷಿಸುವಿ ಕರುಣೈಕನಿಧಿ ನರಸಿಂಹ ವೈರಿ ಪುಂಜನನ ಶ್ರೀಕರನೆ ನೀನೆನಗೆ ಶರಣೆಂದು ನಂಬಿದೆನು ಸಾಕಬೇಕಯ್ಯ ದಾಸರನು ಪ. ಹುಡುಗ ಪ್ರಲ್ಹಾದ ಜಗದೊಡೆಯ ನೀನಹುದೆಂಬ ನುಡಿಯಲಾಲಿಸುತವನ ಪಿತನು ಕಡಿವೆನೆಂದೆದ್ದು ಮುಂದಡಿಯಿಟ್ಟು ಮುಂದರಸಿ ದೃಢ ಮುಷ್ಟಿಯಿಂದ ಖಂಬವನು ಬಡಿಯುತಿರೆ ಶತಕೋಟಿ ಸಿಡಿಲಂತೆ ಗರ್ಜಿಸುತ ಘುಡುಘುಡಿಸಿ ಬಂದು ದೈತ್ಯನನು ಪಿಡಿದೆತ್ತಿ ತೊಡೆಯ ಮೇಲ್ ಕೆಡಹಿ ದಶನಖದಿಂದ ಒಡಲ ಬಗೆದನೆ ನೀಚರನು 1 ನರಸಿಂಹನೆಂಬ ಈರೆರಡು ವರ್ಣವ ಜಪಿಸೆ ದುರಿತ ದೂರೋಡುತಿಹವೆಂದು ಸರಸಿಜೋದ್ಭವ ಶಂಭು ಸುರನಾಥ ಮುಖ್ಯಮುನಿ ವರರು ಕೊಂಡಾಡುತಿಹರಿಂದು ಅರಿತದನು ತ್ವತ್ಪಾದ ಸರಸಿಜವೆ ಶರಣೆಂದು ದೊರೆ ನಿನ್ನ ನಂಬಿಕೊಂಡಿಹೆನು ಅರಿಭಾವ ಸಾಧಿಸುವ ದುರುಳರನು ಪಿಡಿದವರ ಕರುಳ ತೆಗೆದೆತ್ತಿ ಬೀರದನು 2 ಅತಿ ಸೂಕ್ಷ್ಮಯಂದಗ್ನಿ ಗತಿಯನ್ನುಪೇಕ್ಷಿಸಲು ವಿತತವಾಗುವುದು ಕ್ಷಣದೊಳಗೆ ಜತನ ಮಾಡುವರದರ ಗತಿಯನಳಿಸುವುದು ಸ- ಮ್ಮತವಾಗಿರುವುದು ಜಗದೊಳಗೆ ಪತಿತಪಾವನ ಶೇಷಗಿರಿರಾಜ ನೀ ಯೆನಗೆ ಗತಿಯಾಗಿ ಸಲಹುವುದರಿಂದ ವಿತಥಾಭಿಲಾಷೆಯಾತತಾಯಿಗಳ ತ್ವರೆಯಿಂದ ಹತಮಾಡಿಸು ಶ್ರೀ ಮುಕುಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಲೋಲ ಶ್ರೀನರಸಿಂಹ ಬಲಗೋಂಬೆನು ನಿನ್ನ ಪ. ಸಾರರಹಿತವಹ ಘೋರತರ ಸಂಸಾರದಿ ತೊಳಲುತ ಗಾರುಗೊಂಡಿಹೆನೈ ಶ್ರೀಲೋಲ ಅ.ಪ. ಚಿಣ್ಣನು ತಾ ಬಣ್ಣಿಸಿ ಕರೆಯೆ ಮನಕದ ತಂದು ಅನ್ಯದೈವಗಳ ಮರೆದು ತನ್ನನೆ ನೆನೆವ ಚಿಣ್ಣನಿಗಾಗಿ ಕಂಬದಿ ಬಂದು ಘನ್ನ ರೋಷದಿ ದೈತ್ಯನ ಸೆಳೆದು ಕುನ್ನಿಯ ಮುಡಿಯನು ಪಿಡಿದೆತ್ತಿ ಜಡಿದು ತನ್ನ ತೊಡೆಯೊಳಗಿರಿಸಿ ಖಳನುರ ವನ್ನು ಬಗೆದು ಕರುಳನು ಕೊರಳೊಳು ಧರಿಸಿದ 1 ಘೋರರೂಪಕೆ ನಡುಗುತಲಂದು ಸುರಗಣನಿಂದು ಶರಣೆಂದಾಕಂದನ ಕರೆದು ಪರಮಾದರದಿಂ ಶ್ರೀದೇವಿಯನೊಡಗೊಂಡು ಪರತರಾಭಯ ಹಸ್ತವ ನೀಡಿ ಸರಸದಿ ಕರೆದಾದರಗೂಡಿ ತರಳನೆ ಭಕ್ತಾಗ್ರೇ ಸರ ನೆನ್ನಿಸಿ ನೆರೆಸುಖಿಸೆಂದೊದವಿದ 2 ಚಾರು ಚರಿತ ಪ್ರಹ್ಲಾದನ ಆಲಿಸಿ ನಲವಿಂ ಸಾರಿತನ್ನನೇ ನೆನೆವರನೆಂದೆಂದು ಕೋರಿಕೆಗಳ ಸಲ್ಲಿಸಿ ಸಲಹುವನೆಂದು ಸಾರೆಬಂದಿಹೆ ನಿನ್ನೆಡೆಗಿಂದು ಸಾರಸಾಕ್ಷನೆ ನೀ ಕೃಪೆದೋರೆಂದು ಕೋರಿಭಜಿಪೆ ಶ್ರೀಶೇಷಗಿರಿವರ ದಯಾಸಿಂಧು 3
--------------
ನಂಜನಗೂಡು ತಿರುಮಲಾಂಬಾ
ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು
ಕಡಲದಾಟಿದ ಬಲುಧೀರನೆ ಬಂದುಒಡಲ ಹೊಕ್ಕವರಿಗುದಾರನೆ ಪ.ಬಿಡದೆ ಭಕ್ತರ ಕೈಯವಿಡಿದು ರಕ್ಷಿಸುವ ಎನ್ನೊಡೆಯ ಹನುಮರಾಯ ಅಡವಿಯನಿಲಯಅ.ಪ.ದೃಢದಿಂದ ಲಂಕೆಯ ಪೊಕ್ಕನೆ ದೇವಮೃಡನಿಂದ ಪೂಜೆಗೆ ತಕ್ಕನೆಪೊಡವಿಯ ಮಗಳನು ಕಂಡನೆ ಕಿತ್ತುಗಿಡ ವನಗಳ ಫಲ ಉಂಡನೆಅಡಿಗಡಿಗೊದಗಿದ ಕಿಡಿಗೇಡಿ ರಕ್ಕಸರ್ಹೊಡೆದು ಪುರವನೆಲ್ಲ ಕಿಡಿಗಂಜಿಸಿದ ಧೀರ 1ತಡೆಯದೆ ಸುದ್ದಿಯ ತಂದನೆ ಜಗದೊಡೆಯ ರಾಮನ ಮುಂದೆ ನಿಂದನೆಪಿಡಿದೆತ್ತಿ ತರುಗಿರಿ ಪೊತ್ತನೆ ಕಪಿಗಡಣಕ್ಕೆ ಒಬ್ಬನೆ ಕರ್ತನೆಜಡಧಿ ದಾರಿಯಕಟ್ಟಿನಡೆದು ರಾವಣನೆದೆಒಡೆಗುದ್ದಿಕಾಳಗಜಡಿದುಮಾಡಿಸಿದೆ2ಪೆಡಕಿಲಾಸನವಿತ್ತು ದಾತಗೆತುಷ್ಟಿಬಡಿಸಿದೆ ಶ್ರೀರಘುನಾಥಗೆಕಡುವೇಗ ಸಂಜೀವ ಸಲಿಸಿದೆ ನೊಂದುಪುಡಿವಟ್ಟ ಕಟಕವ ನಿಲಿಸಿದೆಬಡವರಾಧಾರಿ ನಿನ್ನಡಿಗೆರಗುವೆ ಲೇಸಕೊಡು ಪ್ರಸನ್ವೆಂಕಟ ಒಡೆಯನನಿಲಯ3
--------------
ಪ್ರಸನ್ನವೆಂಕಟದಾಸರು
ಚಿತ್ತೈಸಿದ ವ್ಯಾಸರಾಯ |ಚಿತ್ತಜನಯ್ಯನ ಬಳಿಗೆ ಪ.ಮುತ್ತಿ ಮುತ್ತೈದೆಯರೆಲ್ಲಎತ್ತೆ ರತುನದಾರತಿಯ ಅಪಹೇಮಪಿಡಿಗಳುಳ್ಳಂತಹ |ಚಾಮರಂಗಳನು ಪಿಡಿದು ||ಕಾಮಿನಿ ಮಣಿಯರು ಕೆಲವರು |ಸ್ವಾಮಿಯೆಂದು ಬೀಸುತಿರೆ 1ಹಾಟಕದ ಬೆತ್ತನೂರು |ಸಾಟಿಯಿಲ್ಲದಲೆ ಪಿಡಿದು ||ನೀಟಾದ ಓಲಗದವರ |ಕೂಟಗಳ ಮಧ್ಯದಲಿ 2ಸಾಧುವಿಪ್ರಜನಂಗಳು |ವೇಧಘೋಷ ಮಾಡುತಿರೆ ||ಮೋದದಿಂದ ಗೋವಿಂದನ |ಸಾಧನ ಮಾರ್ಗವ ಪಿಡಿದು 3ಭೇರಿ ತುತ್ತೂರಿ ಮೃದಂಗ |ಮೌರಿ ಚಾರುವೇದ್ಯಂಗಳು ||ಬಾರಿಬಾರಿಗೆ ಹೊಡೆಯೆ |ನಾರದರು ತಾ ಕೂಡಿಯೆ | 4ಅರವಿಂದಾಸನನಯ್ಯ |ಪುರಂದರವಿಠಲನು||ಸಿರಿಸಹಿತದಿ ಬಂದು |ಕರಪಿಡಿದೆತ್ತಿದ್ದು ಕಂಡೆ 5
--------------
ಪುರಂದರದಾಸರು