ಒಟ್ಟು 22 ಕಡೆಗಳಲ್ಲಿ , 14 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವಯನ್ನ ಸಲಹೋ ವಾರಿಜಾಸನ ಈಶವಾಸವಾರ್ಚಿತ ಚರಣ ವನಜೋದರ ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ ಬಿಟ್ಡೆನುತ ಶಾಪಕೊಡಲು ಕೋಪನಾಮಣಿ ಬಲು ಪ್ರಲಾಪಿಸುತ ಮನದಿ ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು ಪಾದ ಸ್ಪರ್ಶಿಸಲಾಕ್ಷಣ ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ 1 ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ ನಾರಗೆಂದು ಕರಿಯೇ ಗತಿ ತೋರಿದಿ ಹಿತದ ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ ನಾಥ ಹರಿ ಮಹೋನ್ನತ ಚರಿತನೆ ಪತಿತ ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು ಗೋವಿಂದ ಶುಭಕರ ಶ್ರೀ ಮುಕುಂದ 2 ಶರಧಿ ಗಂಭೀರ ಹಾಟಕಾಂಬರ ಶೋಭಿತ ಪುರುಷೋತ್ತಮಾನಂತ ಮುರವೈರಿ ಮುರಲೀರವ ವಿನೋದ ಗರುಡಗಮನ `ವರ ಹೆನ್ನೆಪುರನಿಲಯ' ಪರಮಪಾವನ ನೃಹರೆ ಉರಗೇಂದ್ರಶಯನ ಮಂದರಧರ ಕೃಪಾಂಬುಧೆ3
--------------
ಹೆನ್ನೆರಂಗದಾಸರು
ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ. ನಿತ್ಯ ಪೊರೆಯುವ ಸತ್ಯ ತಾರಕ ನಾಮಕೆ ಮತ್ತೊಂದು ಸಾರ ಸಹಸ್ರನಾಮಕೆ ಶ್ರೀರಘುನಾಥನ ನಾಮವೆಂತೆಂದು ಸಾರಿ ಮಹೇಶನು ಸುರನರ ವಂದ್ಯನು ಗಿರಿಜೆಗೆ ಪ್ರೇಮದಿ ಪೇಳಿದನು ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲ ಶೀಲಗಳನ್ನು ಎಂದೂ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ ನೆಲವಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಸದ ಮಲ ಘನ ಕೈವಲ್ಯಾ ಪ ಪರಸವು ಪಾಷಾಣಹುದೇ 1 ಸುರನದಿ ಸಲಿಲದೊಳಲ್ಲಾ 2 ಪೊರೆವನು ಮಹಿಪತಿ ರನ್ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ ಪ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ1 ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ 2 ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ 3
--------------
ಕನಕದಾಸ
ಎನ್ನ ರಕ್ಷಿಸೊ ನೀನು - ದೇವರ ದೇವ ಪಎನ್ನ ರಕ್ಷಿಸೊ ನೀನು ಯಾದವ ಕುಲಮಣಿಮುನ್ನ ದ್ರೌಪದಿಯಭಿಮಾನ ಕಾಯ್ದ ಕೃಷ್ಣ ಅ.ಪ.ಬಾಲನ ಮೊರೆಯನುಕೇಳಿಕೃಪೆಯಿಂದಪಾಲಿಸಿದೆಯೊ ನರಸಿಂಹ ರೂಪದಿಂದ 1ಪಾಷಾಣಚರಣದಿ ಯೋಷಿದ್ರೂಪವ ಗೈದೆದೋಷ ಸಂಹಾರ ನಿರ್ದೋಷಗುಣಪೂರ್ಣನೆ 2ಇನಕುಲಾಂಬುಧಿ ಚಂದ್ರ ಘನಶುಭಗುಣಸಾಂದ್ರಸನಕಾದಿ ಮುನಿವಂದ್ಯಪುರಂದರವಿಠಲ3
--------------
ಪುರಂದರದಾಸರು
ನಿನ್ನ ನಂಬಿದೆ ನೀರಜನಯನಎನ್ನ ಪಾಲಿಸೊಇಂದಿರೆರಮಣಪಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
--------------
ಪುರಂದರದಾಸರು
ಸೇವಕತನದ ರುಚಿಯೇನಳೆದೆಯೋ |ದೇವ ಹನುಮರಾಯ ನೀ ವೈರಾಗ್ಯ ಬೇಡಿ ಪಉದಧಿಯ ದಾಟಿ ಸೀತೆಯ ಕಂಡು ಬಂದಾಗಮದುವೆಯ ಮಾಡೆನ್ನಬಾರದಿತ್ತೆ ||ಪದದಿ ಪಾಷಾಣವ ಪೆಣ್ಣ ಮಾಡಿದನಿಗೆಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ 1ಕ್ಷಣದೊಳು ಸಂಜೀವನ ಗಿರಿ ತಂದಾಗಧನವನು ಬೇಡಲು ಕೊಡದಿಹನೇ ||ವಿನಯದ ವಿಭೀಷಣಗೆ ರಾಜ್ಯಪದವನಿತ್ತವನಿಗೆನಾಶ್ಚರ್ಯವೊ ಹನುಮ ನೀನೊಲ್ಲದೆ 2ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆಉರ್ಪಿಯ ಬೇಡಲು ಕೊಡದಿಹನೇಸರ್ವವ ತೊರೆದು ಶ್ರೀ ಪುರಂದರವಿಠಲನನಿವ್ರ್ಯಾಜ ಭಕುತಿಯ ಬೇಡಿಕೊಂಡೆಯಲ್ಲದೆ 3
--------------
ಪುರಂದರದಾಸರು