ಒಟ್ಟು 157 ಕಡೆಗಳಲ್ಲಿ , 47 ದಾಸರು , 149 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

101. ಹರಿಹರ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿ | ದುರುಳ ಗುಹಾಸುರನ ಕೊಂದರೆಂದೂ | ಮರಳು ಮಾನವರು ತಿಳಿಯಾದೆ ನುಡಿವರು | ಹರಿಹರರೀರ್ವರು ಏರವಾದರೆ ಅಂದು | ಹರನು ಮೈಮರೆದು ನಿಂದನ್ಯಾತಕೆ | ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ | ಸುರರ ಓಡಿಸಿ ಪ್ರಬಲನಾಗಿರೆ | ಪರಮ ಪುರುಷ ಹರಿ ನರಹರಿರೂಪವನ್ನು | ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ | ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು | ಮೆರದಾನೇನೋ ಅವತಾರ ಮಾಡಿ | ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ | ಚರಿಸೂವ ಪರಬೊಮ್ಮ ಗುಣಪೂರ್ಣ ನೂ | ತುರಗವದನ ಮತ್ಸ್ಯಕೂರ್ಮಸೂಕರ ವೇಷ | ಧರಿಸಿದಾತನು ಕಾಣೋ ಯುಗಯುಗದೀ | ಕರುಣಾಸಿಂಧು ನಮ್ಮ ವಿಜಯವಿಠಲರೇಯಾ | ಹರಿಹರ ರೂಪ ಧರಿಸಿದ ಕಾಣಿರೋ 1 ಮಟ್ಟತಾಳ ದೀಪದ ಉಪಕಾರ ದಿನಪಗೆ ಏನಾಹದು | ಭೂಪತಿಗಾಳಿನ ಅನುಸುಣ್ಯಾತಕೆ | ಕೋಪವನು ತಾಳಿ ಭೃಗುಮುನಿ ಕೈಯಿಂದ | ಶಾಪನ ಕೈಕೊಂಡನಂದು ಭಸ್ಮಾ ಸುರನ | ಆ ಪತ್ತಿಗಾರದೆ ಮೊರೆ ಇಡಲು ಕೇಳಿ | ಶ್ರೀಪತಿ ಮೊಗದಲಿ ಕಾಯದದ್ದು ಕಾಣದೆ | ಗೋಪಾಲ ವಿಜಯವಿಠಲ ಹರಿಹರ | ರೂಪವು ತಾನಾದ ಅನೇಕ ರೂಪನೊ 2 ತ್ರಿವಿಡಿತಾಳ ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ | ಣಾಂತರದಲ್ಲಿ ಪೇಳುತಿವೆ ನೋಡಿಕೊ | ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ | ನಖ ಮೌಳಿ ಅಭೀದಾನು | ವೈರಿ ಅರ್ಧಂಗವನೆ ತಾಳಿ | ನಿಂತಿಪ್ಪ ಶ್ರೀ ಹರಿಯಾ ಕೂಡಾ | ನಂತಾ ಕಲ್ಪರೆ ನಿಗಮಾ ಗೋಚರ ಸರ್ವ | ಸ್ವತಂತ್ರನು ಒಬ್ಬಾರ ಹಂಗಿಗಾನೆ | ಚಿಂತಾಮಣಿಯಾ ಬಳಿಯಾ ನಾಡ ಹರಳನೆ ತಂದು | ಸಂತತವಿಟ್ಟರೆ ಸರಿಯಾಗೋದೆ | ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವುದಕೆ | ಚಿಂತೆಮಾಡಿದನೆಂಬೊ ವಾರ್ತಿಯೇನೂ | ನಿತ್ಯ ಮೇಹಕವನೆ ತೋರಿ | ಅಂತು ಗಾಣದ ನರಕಕ್ಕೆ ಹಾಕೂವ | ದಂತಿ ವರದ ದೇವ ವಿಜಯವಿಠಲ ಜಗ | ದಂತರಿಯಾಮಿಗೆ ಅಸಾಧ್ಯ ಬಂದಿಲ್ಲ 3 ಅಟ್ಟತಾಳ ಹರಗೆ ಈ ಪ್ರತಿಪ ಉಳ್ಳರೆ ಭಸುಮಾ | ಸುರಗಂಜಿ ಹರಿಗೆ ಮೊರೆ ಇಡುವನೇನೊ | ಜರಸಂಧನಿಗೆ ಇತ್ತಾವರ ಮತ್ತೇನಾಯಿತು | ಮರಳಿ ರಾಮನಕೂಡ ಶರಧನು ಪಿಡಿದು ಮೈ | ಮರೆದು ನಿಂದದ್ದು ಸರ್ವ ಜಗ ವೆಲ್ಲ ಬಲ್ಲದು | ಕರಿ ರಾಜಾ ಆ ಮೂಲಾವೆಂದು ಕರೆವಾಗ | ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ | ಸುರರೊಳಗೀತಾ ಗಿಂದಧಿಕ ದೇವರು ಇಲ್ಲಾ | ಹರಿಹರರೂಪಾ ಶ್ರೀ ವಿಜಯವಿಠಲರೇಯಾ | ಚರಿತೆಯ ತೋರುವ ಅವರ ಯೋಗ್ಯತಾದಷ್ಟು 4 ಆದಿತಾಳ ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು | ಪಶುವಾಹನನಾಗಿ ಇಪ್ಪದಿದೆ | ಅಸುರಾರಿಯಲ್ಲದೆ ಅನ್ಯರೂಪಗಳಲ್ಲ | ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ | ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ | ಶಶಿಧರ ಹರಿರೂಪ ದೊ[ಳು]ಕೂಡುವನೆ | ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ | ಕುಶನ ಬಯಸುವನು ಸಮನಾಗಿ ನಿಲ್ಲುವನೆ | ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ | ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ 5 ಜತೆ ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ | ರಂಗ ವಿಜಯವಿಠಲ ಹರಿಹರ ಮೂರುತಿ 6
--------------
ವಿಜಯದಾಸ
3. ಪಾರ್ವತಿ ರಾಜರಾಜೇಶ್ವರಿ ವೀರಮಹೇಶ್ವರಿ ಭೈರವಿ ದುರ್ಗಾಂಬಿಕೆ ಪ ಅಜಸುರ ಮುನಿಜನ ಭಜ ಭೋಜಾರ್ಚಿತೆ ಕುಜನ ಹಾರಿಣೆ ಕೇಳು ಭಜನೆ ಮಾಡುವೆ 1 ಭೂಷಿತೆ ನಿಜವರ ಭಾಷಿತೆ ಕೇಳು 2 ಧಾರುಣಿ ಗೌರಿ ರಮಾ ಸಿಂಹಾಸಿನಿ ಕಾರಣ ದೇಶಿಕ ತುಳಶಿಮಣಿ 3
--------------
ಚನ್ನಪಟ್ಟಣದ ಅಹೋಬಲದಾಸರು
ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದು ಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ ಜ್ಞಾನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿ ಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 ಸಾರ ಗುಹ್ಯ ಜ್ಞಾನಿ ಸಂಗದ ಗೋಷ್ಟಿಜ್ಞಾನಿಗೇ ಪರಿಪಾಟಿಜ್ಞಾನಿಯೆಂದರೆ ಕೋಟಿ ಕೋಟಿ ಪುಣ್ಯ ಜ್ಞಾನಕ್ಕೆ ಸರಿಯಿಲ್ಲಜ್ಞಾನಿಯಾದವ ಬಲ್ಲಜ್ಞಾನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟು ಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಕೊಂಡ ಹೊತ್ತರು ಆತ್ಮಜ್ಞಾನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿ ಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡು ದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ ಜ್ಞಾನ ಸ್ಥಾ(ಸ್ಥ)ಳವ ಶುದ್ಧ ಮಾಡು ಸ್ಥಿರವಾದ ಮನಸಿನ ಸೂತ್ರವಿಡಿದು ಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿ ಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರ ಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆ ಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತ ದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನು ಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿ ವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾ ಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟು ವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ತಿಮಿರ ನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ ಜ್ಞಾನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪ ಪರಮ ಸಾಧು ಹರಹರಾ 31 ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ನರಸಿಂಹ
ಅಭಯವನಿತ್ತು ಕಾಯೊ ರಂಗಯ್ಯ ನಿನ್ನಡಿಗೆರಗುವೆನು ನಾನು ಪ ಭಾಷ್ಯಕಾರರಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಪತಿಯ ಪಾದಾರವಿಂದಕೆ ನಮಸ್ಕರಿಸಿ ಲಕ್ಷ್ಮೀಪತಿ ನಿಮ್ಮ ಕರಗಳ ಸ್ತುತಿಸಿ ಬೇಡುವೆ ನಾನು 1 ಮತ್ಸ್ಯಾವತಾರನಾಗಿ ವಾರಿಧಿಯೊಳಗಿರ್ಪ ದೈತ್ಯನ ಕೊಂದು ಹೆಚ್ಚಿನ ವೇದವ ಅಜನಿಗೆ ತಂದಿತ್ತೆ ಭಕ್ತವತ್ಸಲ ನಿಮ್ಮ ಕರಕಮಲಗಳಿಂದ 2 ದೇವದೈತ್ಯರ ಮಧ್ಯದೀ ವಾರಿಧಿಯನ್ನು ವೇಗದಿಂದಲೆ ಮಥಿಸೇ ಆವಸುರರು ಅಪಹರಿಸಿದ ಅಮೃತವ ಸಾಧುಜನಗಿತ್ತ ಆ ವಿನೋದದ ಕರಗಳಿಂದ 3 ಕ್ರೋಢರೂಪವ ಧರಿಸಿ ಹಿರಣ್ಯಾಕ್ಷನ ಕೋರೆಯಿಂದಲೆ ಕೊಂದು ಧಾರುಣಿಯನು ತಂದು ಆದಿಮಾನವಗಿತ್ತ ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 4 ಕರುಳ ಬಗೆದ ವನಮಾಲೆಯ ಧರಿಸಿದೆ ಶ್ರೀಪರಮಪಾವನ ನಿಮ್ಮ ಕರುಣಹಸ್ತಗಳಿಂದ 5 ತಟ್ಟನೆ ಯಜ್ಞಶಾಲೆಗೆ ಬಂದು ದಾನವ ಪುಟ್ಟ ಕರಗಳಿಂದ ಅರ್ತಿಯಲಿ ಬೇಡಿದ 6 ಅಂದು ಕ್ಷತ್ರಿಯರ ಕುಲವ ಕೊಡಲಿ ಪಿಡಿದುದ್ದಂಡ ದಿಂದಲಿ ಕಡಿದು ತಂದೆಯ ನುಡಿ ಕೇಳಿ ತಾಯಿ ಶಿರವನರಿದೆ ಇಂದಿರಾಪತಿ ನಿಮ್ಮ ಆನಂದ ಕರದಿಂದ 7 ಶಶಿಮುಖಿ ಸೀತೆಗೋಸ್ಕರ ಧನುವನು ಮುರಿದ ಅಸಮಸಾಹಸ ನಿಮ್ಮ ಕುಶಲಹಸ್ತಗಳಿಂದ 8 ಘೋರ ಪ್ರಳಯಸುರನ ಸಂಹರಿಸಿದೆ ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 9 ಮಧುರೆಯೊಳಗೆ ಜನಿಸಿ ಗೋಕುಲಕೈತಂದು ಲೀಲೆಯ ತೋರಿ ಮುದದಿಂದ ಪಾಲಬೆಣ್ಣೆ ಕದ್ದು ಗೋಪಿಯರಲ್ಲಿ ಪಿ ಡಿದೆಳೆದೆ ಉಡುರಾಜನನು ಶ್ರೀಕರದೊಳು 10 ಪತಿವ್ರತೆಯ ವ್ರತವ ಭಂಗವ ಮಾಡಿ ಚಪಳಚಾರನಾಗಿ ಅತಿಶಯವಾದ ರಾಕ್ಷಸರ ಸಂಹರಿಸಿದೆ ಪೃಥವಿ ಪಾಲಿಪ ನಿಮ್ಮ ಚತುರಹಸ್ತಗಳಿಂದ 11 ಕಲ್ಯ್ಕಾವತಾರನಾಗಿ ಕುದುರೆ ಏರಿ ಸಂಹರಿಸುತಲೆ ಬಹು ಮಲಕರಗಳಿಂದ ದೇವ ಪರಮಪುರುಷ 12 ಕಂದ ಧ್ರುವ ತಾನಡವಿಯಲಿ ನಿಂದು ತಪ ಮಾಡಲು ಚಂದದಿ ಮಾಡಲು ಬಂದು ಸೇವೆಯನಿತ್ತು ಮತಿಗಾಗಿ [ಅಂದು] ಶಂಖವನೊತ್ತಿದ ಕರದೊಳು 13 ಕಾಲ ಪಿಡಿಯೆ ಗಜೇಂದ್ರ ನಿಮ್ಮ ಸ್ತುತಿಸೆ ಚಕ್ರ ಬಂದ ಕರುಣಹಸ್ತಗಳಿಂದ 14 ಅಂದು ಸುಧಾಮ ತಾನು ಶ್ರೀಹರಿಯ ಮಂದಿರಕೆ ಬರಲು ಚಂದದಿಂದಲೆ ಆತಿಥ್ಯ ಮಾಡಿ ಅವ ಕೊಂಡ ಕರಗಳಿಂದ 15 ದುರುಳ ದುಶ್ಯಾಸನ ಸಭೆಯೊಳು ದ್ರೌಪದಿಯ ಸೀರೆಯೆಳೆಯು ತಿರುವಾಗ ಹಾ ಕೃಷ್ಣ ದ್ವಾರಕಾವಾಸ ಯೆಂದು ಮೊರೆಯಿಡೆ ಕೇಳಿ ಅಕ್ಷಯವೆನುತ ನೆಚ್ಚವನೆಚ್ಚ ಕರದೊಳು 16 ಗ್ರಾಸವ ಬೇಡಲು ಪರಮಪುರುಷ ನೀನೇ ಗತಿಯೆಂದು ದ್ರೌಪದಿ ಮೊರೆಯಿಡೆ ಅಕ್ಷಯವ ಮಾಡಿದ ಕರದೊಳು * 17 ಮಂದಮತಿಯು ಜ್ಞಾನವೂ ನಿಮ್ಮ ಮಹಿಮೆ ಒಂದು ತಿಳಿಯದು ಇಂದಿರೆ ರಮಣ ಶ್ರೀರಂಗನ ದಯದಿಂದ ವಂದಿಸಿ ಬೇಡಿದೆ ಆನಂದಕರಗಹಳನ್ನು 18 ವೇದಶಾಸ್ತ್ರಗಳನ್ನು ಅರಿಯದ ಪಾಮರಸ್ತ್ರೀಜನ್ಮವು ಕಾಮ ಕ್ರೋಧವು ಲೋಭ ಮೋಹದಿಂದಲೆ ಬಿಡಿಸಿ ನಿಮ್ಮ ಪಾದದೊಳಿರಿಸೆನ್ನ ಶ್ರೀನಿವಾಸನೆ ಅಭಯವನಿತ್ತು ಕಾಯೊ 19
--------------
ಯದುಗಿರಿಯಮ್ಮ
ಆ ಮಹಿಮಗೆ ಮಂಗಳಾರತಿಯ ಎತ್ತಿದರು 1 ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ 2 ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ 3 ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ 4 ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ 5 ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ 6 ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ 7 ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ 8 ಗೋಪಿ ಮುದ್ದಾಡಿದ ಬೆಳಕು ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ 9 ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ 10 ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ 11
--------------
ವಾದಿರಾಜ
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ | ಸಾರು ನೀನು ಎನಗೆ ಸುಮ್ಮನ್ಯಾತÀಕೆ ಯಿದ್ದೀ ಪ ನೀರೊಳು ಮುಣಗೆ ವೇದವ ತಂದಾತನೊ | ಭಾರವನು ಪೊತ್ತು ಸುರರ ಕಾಯಿದಾತನೊ | ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ | ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1 ಗಗನಕೆ ಬೆಳದು ಸುರ ನದಿಯ ಪಡೆದಾತನೊ | ಹಗೆಗಳ ಕೊಂದು ಹರುಷಿತನಾದನೊ | ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ | ಮಗನಮಗನ ತಂದ ಮಹಿಮನೊ 2 ಹರಗೆ ಸಾಯಕವಾಗಿ ಪುರ ಉರಹಿದಾತನೊ | ದುರುಳರನ ಕೊಂದ ದುರ್ಲಭದೇವನೊ | ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ - ಶರಣರಿಗೊಲಿದು ಬಂದ ಸರ್ವೋತ್ತಮನೊ 3
--------------
ವಿಜಯದಾಸ
ಆರುತಿ ಮಾಡಿದೆವೆ ನಾರಿಯಮಣಿಯರು ಪ ಚಾರು ಪುಸ್ತಕದಿಭೂರಿ ಶೋಭಿಪ ಪರಾಶರ ತನುಜಗೆ ಅ.ಪ. ಚಿತ್ರ ಮಂಟಪದೊಳು ಮುತ್ತಿನಂದದಿ ಕೂತುಭಕ್ತ ಪೂಜಿತನಾಗಿ ಭಾಗ್ಯವ ತತ್ವ ಪೇಳಿದವಗೆ 1 ಅಖಿಳ ದುರ್ವಾದಿ ವಿಜಯಗೆ2 ಭಾರತ ಮುಖ ಬಹುಸಾರ ಶಾಸ್ತ್ರವ ಮಾಡಿಧಾರುಣಿಯೊಳು ಮುಕ್ತಿದಾರಿ ತೋರಿದವಗೆ 3 ನಾರದ ಶುಕಪೈ ಸೇರಿ ವೈಶಂಪಾಯನದ್ವಾರಪಾಲಕರಿಂದ ನಿರುತ ಪೂಜಿತಗೆ 4 ವಾಸವೀ ತನುಜಾ ವ್ಯಾಸನ ಸ್ತುತಿಸಿದಾಭಾಷಿ ಭಾಷಿಗೆ ಇಂದಿರೇಶ ಪಾಲಿಸುವನು 5
--------------
ಇಂದಿರೇಶರು
ಆರುತಿ ಮಾಡುವೆ ನಾ ಪ್ರಲ್ಹಾದಗೆ ಪ ಆರುತಿ ಮಾಡುವೆ ಧಾರುಣಿಯೊಳು ರಘುವರನರ್ಚಿಪ ಯತಿವರ ವಂದಿಪಗೆ ಅ.ಪ. ಸಾಲಿಯೊಳಗೆ ಕೂತು ಬಾಲಕರಿಗೆ ಹರಿಲೀಲೆ ಪೇಳಿದ ಭಕ್ತ ಲೋಲನಾದವಗೆ 1 ಪಾದ ಕಂಡವಗೆ 2 ಬಂದು ಭೂಮಿಲಿ ರಾಘವೇಂದ್ರ ನಾಮದಿ ಪೂಜಿಸಿಂದಿರೇಶ ಪುಟ್ಟ ಬೃಂದಾವನದಿ ಕೂತ3
--------------
ಇಂದಿರೇಶರು
ಆರುತಿಯ ತಾರೆ ಸಖಿ | ನೀರಜಾಕ್ಷಿ ವಾರುಣೀಶನಿಗೆ ಪ ವಾರಿಚರಗಿರಿಧಾರ ಹರಿ ಗೋಚರ ಹರಿ | ನರಸಿಂಹಗೆ ಮೂರಡಿ ಧಾರುಣಿ ದಾನವ ಬೇಡಿದವಗೆ 1 ದಾಶರಥಿದಾಸ ಹರಿಕೃಷ್ಣಗೆ ವಸನವರ್ಜಿತ ಕಲ್ಕಿಗೆ ಶ್ರೀಶನಿಗೆ ಸರ್ವೇಶನಿಗೆ ವಾಸುಕಿಗಿರಿ ವಾಸನಿಗೆ 2 ಸಾಮಗಾನ ವಿಲೋಲಗೆ ಶಾಮಸುಂದರವಿಠಲಗೆ | ರಾಮಗೆ ನಿಸ್ಸೀಮಗೆ | ಕಾಮಿತಾರ್ಥಪ್ರದಾತಗೆ 3
--------------
ಶಾಮಸುಂದರ ವಿಠಲ
ಆವನ ಭಯ ತನಭಾವದಿ ಗುರುಪದ ಸೇವಕನಾದÀವಗೆ ಪ ಕೋವಿದ ಕುಲ ಸಂಭಾವಿತ ಗುರುವರ ಕಾವನೆನುತ ಮನೋಭಾವದಲಿರುವವಗೆ ಧಾರುಣಿಪತಿ ತನ್ನ ಸೇರದೆ ಪರಿಪರಿ ಗಾರುಮಾಡಿದರೇನೂ ಕ್ರೂರತನದಲಧಿಕಾರಿ ಜನಂಗಳು ದೂರ ನೋಡಲೇನು ನಾರಿ ತನುಜ ಪರಿವಾರದ ಜನರೂ ಮೋರೆಗಾಣದಿರಲೇನೂ ಘೋರ ಭಯ ಪರಿಹಾರಕ ನಮ್ಮ ಧೀರ ಗುರುಪದ ಸೇರಿದ ನರನಿಗೆ 1 ಕಾಮಿತ ಫಲಪ್ರದ ಈ ಮಹಮಹಿಮನ ನೇಮದಿ ಭಜಿಸುವಗೆ ಆಮುಷ್ಮಿಕ ಸುಖ ಪ್ರೇಮದಿ ನೀಡುವ ಕಾಮಧೇನು ನಂಬಿದಗೆ ಧೀಮಂತರ ಮಹÀಸ್ತೋಮದಿ ನಮಿತನ ನಾಮವ ಜಪಿಸುವಗೆ ಈ ಮಹ ಸಾರ್ವಭೌಮನ ಪದಯುಗ ತಾಮರಸವೆ ಹೃದ್ಯೋಮದಿ ನೆನೆವಗೆ 2 ಭೂತಲ ಮಧ್ಯದಿ ಖ್ಯಾತಿಯ ಪಡೆದ್ಯತಿ ನಾಥನ ಸ್ಮರಿಸುವಗೆ ಭೂತ ಪ್ರೇತಭಯ ಘಾತಿಸಿ ನಿಜಸುಖ ದಾತನ ಮೊರೆಪೊಕ್ಕವಗೆ ಕಾತರ ಪಡುವ ಅನಾಥsÀರ ಪೊರೆವನ ದೂತನಾದ ನರಗೆ ದಾತ ಗುರುಜಗನ್ನಾಥ ವಿಠಲನ ಪ್ರೀತಿಯಪಡೆದ್ಯತಿನಾಥನ ಭಜಿಪಗೆ 3
--------------
ಗುರುಜಗನ್ನಾಥದಾಸರು
ಇಂದಿರೇಶ ದಯದಿಂದಲಿ ತ್ವರಿತದಿ ಬಂದು ಒದಗಿ ಸಲಹೊ ಸುಧೆಯಾನಂದ ಉಣಿಸಿದ ಪ. ಇನ್ನು ನಿರೀಕ್ಷಿಸಲೆನಗೆ ಸಾಧ್ಯವಿಲ್ಲ ಅನ್ಯ ಸಾಧನವಿಲ್ಲ ಮುನ್ನಿನ ಮಾರ್ಗದ ರೀತಿಯ ನೋಡಲು ಮನ್ನಿಪ ಜನರಿಲ್ಲ ಧನ್ಯ ವಿಬುಧ ಗಣ ಮಾನ್ಯ ಮುಕುಂದನೆ ಮಾಧವ 1 ದಾರು ನೀನಲ್ಲದೆ ಮಾರಮಣನೆ ನಿನ್ನ ಸೇರಿದ ಬಳಿಕೀ ಧಾರುಣಿ ಒಳಗೆ ನಿವಾರಣೆಯದೇನೊ ಮೂರು ದೊರೆಗಳಲಿ ವಾರಿಜನಾಭ ನೀ ಪ್ರೇರಕನಾಗಿರೆ ಘೋರವಾವರಿಸುವುದೆ 2 ತಪ್ಪುಗಳೆಲ್ಲವ ಒಪ್ಪಿಕೊಳ್ಳೊಯೆನ್ನಪ್ಪ ನೀ ಕರುಣದಲಿ ಒಪ್ಪಿಸಿ ಪಡದನು ತಪ್ಪದೆ ಮನದೊಳಗಿಪ್ಪ ವ್ಯಸನ ಬಿಡಿಸೊ ಸರ್ಪ ಗಿರೀಂದ್ರನೊಳೊಪ್ಪುವ ಸತ್ಯ ಸಂ- ಕಲ್ಪ ಭಜಕ ನಿಜ ಕಲ್ಪತರುವೆನಿಪ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇದೇ ಇದೇ ಸದ್ವಸ್ತು ನಮ್ಮ ಇದೇ ಇದೇ ಧ್ರುವ ನಿಗಮ ತಂದುಳುಹಿದ ಸುಗಮ ಸುವಸ್ತು ಇದೆ ಜಗವು ಬೆನ್ನಿಲೆ ಪೊತ್ತು ನೆಗದದಿದೆ 1 ಧೀರತನವನುದೋರಿ ಧಾರುಣಿಗೆದ್ದದು ಇದೆ ನರಮೃಗನಾದ ನಿಜವಸ್ತುವಿದೆ 2 ಮೇದಿನಿ ಅಳೆದು ಮೂರುಪಾದವ ಬೇಡಿದದಿದೆ ಸಾಧಿಸಿ ಸಾಸಾರ್ಜುನನ ಮರ್ದಿಸಿದಿದೆ 3 ರಾಕ್ಷಸರನೆಲ್ಲ ಕೊಂದು ಶಿಕ್ಷೆಯುಗೈಸಿದಿದೆ ಪಕ್ಷಪಾಂಡವರಿಗ್ಯಾಗಿ ರಕ್ಷಿಸಿದಿದೆ4 ಬತ್ತಲೆ ಸುಳಿದು ಸತಿಯರ ವೃತವಳಿದುದಿದೆ ಉತ್ತಮ ತೇಜಿನೇರುವ ರಾವುತನಿದೆ 5 ಸಗುಣ ನಿರ್ಗುಣನಾದ ಜಗಜ್ಜೀವನವಿದೆ ಅಗಣಿತಗುಣಗಮ್ಯ ಗೋಚರಿವಿದೆ 6 ವಿಶ್ವತೋಮುಖನಾದ ವಿಶ್ವತೋಬಾಹುವಿದೆ ವಿಶ್ವತೋಚಕ್ಷು ವಿಶ್ವರೂಪವಿದೆ 7 ಮುನಿಗಳ ಪ್ರಿಯವಸ್ತು ಪರಾತ್ಪರವಿದೆ ವಾಸವಾಗಿ ವಿಶ್ವದೊಳು ಭಾಸುವದಿದೆ 8 ಭಾಸ್ಕರ ಕೋಟಿ ಪ್ರಕಾಶ ವಸ್ತುವಿದೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಎಚ್ಚರಾದರು ದೇವಗಣರಿಂದು ನಮ್ಮ ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ. ಶಿಂಶುಮಾರ ಚಕ್ರದಂಶಮಕರ ತಿ- ಗ್ಮಾಂಶು ಸಂಕ್ರಮಿಸುವ ಸಮಯದಲಿ ಕಂಸಮರ್ದನ ಯದು ವಂಶಾಬ್ಧಿ ಚಂದ್ರ- ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1 ಕಂದನ ಸಂಭ್ರಮ ತಂದೆಗೆ ಸುಖಕರ- ವೆಂದು ಪೇಳುವ ಮಾತ ನಿಜವ ದೋರಿ ಮಂದರಧರ ಮನ್ಮಥನ ಕೇತು ಬೆಳಗುವಾ- ನಂದದಿ ರಥವೇರುತ್ತಿಂದು ಬರುವನೆಂದು 2 ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ- ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ ಪಕ್ಷಿವಾಹನನನ್ನು ಈಕ್ಷಿಪ ತವಕದಿ 3 ಪೃಥೆಯ ಕುಮಾರನ ರಥವ ನಡಸುತತಿ- ರಥರನು ಗೆಲಿಸಿ ಸಾಮ್ರಾಜ್ಯವಿತ್ತ ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ- ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4 ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ ಸಿದ್ಧ ಜಪರಿಗೆ ಸಿದ್ಧಿಸುವನೆಂದು ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5 ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ ಸೇರಿ ಸಂತೋಷದಿ ಜಯವೆನಲು ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ- ರ್ಪಾರಿಯನೇರಿ ಸಮೀರೇಡ್ಯಬಹನೆಂದು 6 ಮಾಯಿಜನರ ಮುರಿದೊತ್ತುತ ತತ್ವರ- ಸಾಯನ ಸುಧೆಯ ಸಜ್ಜನರಿಗಿತ್ತು ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ ದಾಯಕ ವೆಂಕಟರಾಯನೀತನೆಯೆಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಎಂತು ವರ್ಣಿಸಲಮ್ಮ ನಾನು ಕಂತುಜನಕನಾನಂತನಗಮ್ಯನನÀಂತವತಾರನಪ. ಸಂತತ ಸಜ್ಜನರಂತರಂಗದಲಿ ನಿಂತಿಹ ಲಕ್ಷ್ಮೀಕಾಂತನ ಮಹಿಮೆಯ ಅ.ಪ. ನೀರೊಳಾಡುತ ಭಾರವ ಹೊರೆವ ಧಾರುಣಿಯ ಪೊರೆವ ಘೋರ ರೂಪದಲಿ ಭೂಮಿಯನಳೆವ ಕ್ರೂರನೃಪರಳಿವ ಆ ರಾವಣನ ಬಲವ ಮುರಿವ ಚೋರ ದಿಗಂಬರವ ಚಾರು ಕುದುರೇಯನೇರಿ ಬರುವ ಸುಕು- ಮಾರ ಜಗದೊಳು ಶೂರ ಜಾರುವ ಕಠಿಣಶರೀರದಿ ಭೂಮಿಯ ಸೇರುವ ಕಂಬವಿದಾರಣ ಮಾಡುವ ಮೀರುವಭುವನಕೆ ತೋರುವ ಪರಶುವ ಜಾರ ವಸನಹೀನ ಧೀರ ಸುಅಶ್ವವನೇರಿ ಮೆರೆವನ 1 ನಿಗಮೋದ್ಧರಿಸುವ ನಗವನು ತರುವ ಜಗತಿಯುದ್ಧರಿಸುವ ಮಗುವ ಪಾಲಿಸುವ ಮಾಯದಿ ಬೆಳೆವ ದುಗುಡ ನೃಪಕುಲವ ಬಗಿದು ಭಾಸ್ಕರ ತನಯನಿಗೊಲಿವ ನೆಗಹಿ ಗೋವರ್ಧನವ ಬಗೆಬಗೆ ಮಾತಾಡಿ ಸುಗುಣ ವಾಜಿಯನೇರಿ ಬಂದ ಸಚ್ಚಿದಾನಂದ ಹುಗಿದು ಸೋಮಕನ ಅದ್ರಿಗೆ ಬೆನ್ನಿತ್ತು ಅಗಿದು ಭೂಮಿಯ ನರಮೃಗನಾಗುತ ಗಗನಕೆ ಬೆಳೆದು ಘಾತಿಸಿ ಕ್ಷತ್ರಿಯರ ರಘುವರ ಯದುಪತಿ ವಿಗತವಸನನಾಗಿ ಜಗಕೆ ಬಲ್ಲಿದ ಹಯವೇರಿ ಬರುವನ 2 ನಳಿನೋದ್ಭವನಿಗಾಗಮವನಿತ್ತ ಗಿರಿಯ ನಿಲಿಸಿತ್ತ ಇಳೆಯ ಕದ್ದೊಯ್ದ ದಾನವನಳಿದ ನರಹರಿ ತಾನಾದ ಬಲಿಮುಖವ ಮುರಿದ ಖಳಭೂಪರಳಿದ ದÀಶಶಿರನÀಳಿದ ಕೊಳಲನೂದಿದ ದುಷ್ಟ ಲಲನೇರ ವ್ರತವಳಿದ ಕಲಿಯ ಮರ್ದಿಸಿದ ಹೊಳೆವ ಬೆನ್ನಲಿ ಗಿರಿತಳವೆತ್ತಿದನ ನೆಲನ ಬಗಿದು ಕಂಬದಲಿ ಬಂದವನ ಬೆಳೆದ ಬೊಮ್ಮಾಂಡಕೆ ಭಾರ್ಗವಾಧಿಪನ ಬುದ್ಧ ಕಲ್ಕಿ ಚೆಲುವ ಹಯವದನನ ಬಲ್ಲಿದನ 3
--------------
ವಾದಿರಾಜ