ಒಟ್ಟು 17 ಕಡೆಗಳಲ್ಲಿ , 15 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ್ಖರಾದರು ಇವರು ಲೋಕದೊಳಗೆಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖಗಂಟನೊಬ್ಬನ ಕೈಯಲಿಡುವವನೆ ಮೂರ್ಖನಂಟರಿಗೆ ಸಾಲವನು ಕೊಡುವಾತ ಮೂರ್ಖ - ಜಗಕಂಟಕನಾದವನು ಕಡು ಮೂರ್ಖನಯ್ಯಾ 1ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖಸರ್ಪನಲಿ ಗಾರುಡವ ನಡಸುವನೆ ಮೂರ್ಖಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖಅಪ್ಪ ರಂಗಯ್ಯನನು ನೆನೆಯದವ ಮೂರ್ಖ 2ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ 3ಪಡೆದ ಮಗಳನುಮಾರಿ ಒಡಲಹೊರೆವವ ಮೂರ್ಖಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖಬಡತನವು ಬಂದರೆ ಬಯಸಿಕೊಂಬವ ಮೂರ್ಖದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ 4ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖಹೇಮವನು ಗಳಿಸಿ ಉಣದಿದ್ದವನೆ ಮೂರ್ಖನೇಮದಲಿ ಹಿರಿಯರನು ನೋಡದವ ಮೂರ್ಖ ದುರ್ನಾಮವನು ಕೊಂಬಾತ ಕಡು ಮೂರ್ಖನಯ್ಯ 5ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖಭೂಸೂರರಿಗನ್ನವನು ಕೊಡದವನೆ ಮೂರ್ಖಶೇಷಪತಿ ಕೃಷ್ಣನ ನೆನೆಯದವ ಮೂರ್ಖಹರಿದಾಸನಾಗಿರದವನು ಕಡು ಮೂರ್ಖನಯ್ಯ 6ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖಕೊಂಡೆಯವ ಪೇಳಿ ತಿರುಗುವವ ಮೂರ್ಖಪುಂಡರೀಕಾಕ್ಷ ಶ್ರೀ ಪುರಂದರವಿಠಲನಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ 7
--------------
ಪುರಂದರದಾಸರು
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು