ಒಟ್ಟು 21 ಕಡೆಗಳಲ್ಲಿ , 14 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊಟಕ್ಕೆ ಬಂದೆವು ನಾವು ನಿನ್ನ -ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ಪ.ಕತ್ತಲಕ್ಕುತಲಿವೆ ಕಣ್ಣು - ಬಲು -ಬತ್ತಿ ಬರುತಲಿವೆ ಕೈಕಾಲ ಜುಮ್ಮ ||ಹೊತ್ತು ಹೋಗಿಸಬೇಡವಮ್ಮ - ಒಂದು -ತುತ್ತನಾದರು ಮಾಡಿ ಇಕ್ಕುವುದು ಧರ್ಮ 1ಒಡಲೊಳಗುಸಿರಿಲ್ಲವಮ್ಮ - ಗಳಿಗೆ -ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||ನುಡಿಯು ಚಿತ್ತಕೆ ಬರಲಮ್ಮ - ಒಂದು -ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ........... 2ಹೊನ್ನರಾಶಿಗಳನು ಸುರಿಯೆ - ಕೋಟಿ -ಕನ್ನೆ ಧರಿತಿಯ ಧಾರೆಯನೆರೆಯೆ ||ಅನ್ನದಾನಕೆ ಇನ್ನು ಸರಿಯೆ - ನಮ್ಮ -ಚೆನ್ನ ಪುರಂದರವಿಠಲನೊಳ್ ಬೆರೆಯೆ........... 3
--------------
ಪುರಂದರದಾಸರು
ಕಮಲನಾಭ ವೆಂಕಟೇಶ ಭಕ್ತ ಕಲ್ಪಭೂರುಹ ಶ್ರೀಕಮಲಪ್ರಾಣೇಶಾಪವಿಮಲ ವೈಕುಂಠಪುರೀಶಾ ಶಿವಕಮಲಸಂಭವನುತ ಕರ್ಬುರನಾಶಾ ಅ.ಪನಿರುಪಮ ಸುಂದರ ಗಾತ್ರಾನಿತ್ಯಪರಿಪೂರ್ಣ ವೈಭವಪರಮಪವಿತ್ರಾಶರನಿಧಿತನಯಕಳತ್ರಾಶೇಷಪರಿಜನಕೃತಘೋರಪಾಪಾಂಧ ಮಿತ್ರಾ1ಸನಕಸನಂದನ ವಿನುತಾಶಶಿದಿನಕರಶತಕೋಟಿ ದಿವ್ಯ ಸುಚರಿತಾಜನನ ಮರಣ ಕ್ಲೇಶರಹಿತ ಶ್ರೀವನಜಸುದರ್ಶನ ವನಮಾಲ ಧರಿತ2ಜಲಜಮಿತ್ರ ವಂಶ ಭೂಷಾ ಕ್ಷಾರಜಲಧಿಬಂಧನ ಪುಣ್ಯಜನ ಪ್ರಾಣ ಶೋಷಾತುಲಸೀ ರಾಮದಾಸ ಪೋಷಾ ಶ್ರೀತುಲಸೀ ಕಾನನಹಿತ ತುಂಬುರ ತೋಷಾ 3
--------------
ತುಳಸೀರಾಮದಾಸರು
ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||ಶರಣು ನಿನ್ನಯ ಪದಸರಸಿಜಯುಗಗಳಿಗೆ |ಎರವುಮಾಡದೆ ಕಾಯೊಪರಮದಯಾಳು ಪದಾತಾಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ 1ದೋಷರಹಿತ ಯನ್ನಕ್ಲೇಶಹಿಂಗಿಸೊ ಸಂ |ನ್ಯಾಸಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿಮಾಡದೆ ರವಿಭಾಸ ಗುಣಾಢ್ಯ 2ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳುಮಾನನಿನ್ನದು ಕೇಳು ||ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ 3
--------------
ಪ್ರಾಣೇಶದಾಸರು
ಪಾಲಿಸೊಪಾಲನಶೀಲ ಶ್ರೀಲೋಲಪಾಲಿಸೊ ಪಾಲನಶೀಲ ಪ.ಈಶ ಪರೇಶ ನಿರ್ದೋಷ ಸ್ಮಿತಹಾಸ ನಿರಾಶ ಅಘನಾಶ ಘನಶಾಮೆನ್ನಾಶ 1ಮಿತ್ರಜಿತಗಾತ್ರ ಶತಪತ್ರಾಯತ ನೇತ್ರ ಧರಿತ್ರೀಕಳತ್ರ ಶ್ರೀ ಪೋತ್ರಿ ಪವಿತ್ರ 2ಕರುಣಾರಸಾರ್ಣವ ಸ್ವರ್ಣಗಿರಿ ಪೂರ್ಣಶುಭಅರುಣಾಬ್ಜಚರಣ ಪ್ರಸನ್ವೆಂಕಟಭರಣ3
--------------
ಪ್ರಸನ್ನವೆಂಕಟದಾಸರು
ಬಿನ್ನಹಕೆ ಬಾಯಿಲ್ಲ ಎನಗೆ ಅದರಿಂದ |ನಿನ್ನ ಮರೆದೆನೊ ಸ್ವಾಮಿ ಎನ್ನ ಕಾಯಯ್ಯ ಪಅನ್ನಮದ ಅರ್ಥಮದಅಖಿಳವೈಭವದ ಮದ |ಮುನ್ನ ಪ್ರಾಯದ ಮದವುರೂಪಮದವು ||ತನ್ನ ಸತ್ವದ ಮದ ಧರಿತ್ರಿ ವಶವಾದ ಮದ |ಇನ್ನು ಎನಗಿದಿರಿಲ್ಲವೆಂಬ ಮದದಿ 1ಶಶಿವದನೆಯರ ಮೋಹಜನನಿ- ಜನಕರ ಮೋಹ |ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ ||ಪಶು ಮೋಹ ಶಿಶುಮೋಹ ಬಂಧುವರ್ಗದ ಮೋಹ |ಹಸನುಳ್ಳ ವಸ್ತ್ರ ಆಭರಣಗಳ ಮದದಿ 2ಇಷ್ಟ ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |ಅಷ್ಟು ದೊರಕಿದರೆ ಮತ್ತಷ್ಟರಾಸೆ ||ಕಷ್ಟ ಜೀವನದಾಸೆಕಾಣಾಚಿಕೊಂಬಾಸೆನಷ್ಟ ಜೀವನ ಬಿಡಿಸೆಪುರಂದರವಿಠಲ3
--------------
ಪುರಂದರದಾಸರು
ಸಿಂಧುಶಯನನೆ ಬಾರೊ ಇಂದಿರಾರಾಧ್ಯನೆ ಬಾರೊಮಂದಿರಜನಯ್ಯನೆ ಬಾರೊ ಇಂದೆನ್ನ ಮನಮನೆಗೆ ಪ.ಬಾರೊ ಭಕ್ತರ ಪಾಲಕ ವೆಂಕಟರನ್ನ ಬಾರೊ ಅ.ಪ.ರಾತ್ರಿನಾಮನರಿಯೆ ಬಾ ಗೋತ್ರಧರ ಬಾರೊಹೇಮನೇತ್ರನ ಸದೆದು ಧರಿತ್ರಿ ತಂದೆ ಪೋತ್ರಿರೂಪಬಾರೊ1ಹರಿಮೊಗದವ ಬಾರೊ ಹರಿಯನುಜನೆ ಬಾರೊಕರಜರ ಸವರಿದ ಹರಿಕುಲೋತ್ತಮರನ್ನ ಬಾರೊ 2ಚೆನ್ನನಾಗಿ ಮೆರೆದೆ ಬಾ ಚೆನ್ನೆವಾಸ ಜರಿದೆ ಬಾಉನ್ನತ ಹಯವೇರಿ ಪ್ರಸನ್ನವೆಂಕಟಾದ್ರಿವಾಸ ಬಾರೊ 3
--------------
ಪ್ರಸನ್ನವೆಂಕಟದಾಸರು