ಒಟ್ಟು 49 ಕಡೆಗಳಲ್ಲಿ , 21 ದಾಸರು , 44 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಕ್ಷತ್ರ ರಮಣ ನಯ್ಯನಿಗೊಲಿದು ಶರವನಿತ್ತೆ | ನಕ್ಷತ್ರ ದೊಲ್ಲಭನ ತಮ್ಮನ ಸುತನ ಸುಟ್ಟೆ | ನಕ್ಷತ್ರ ಇಲ್ಲದವನ ವೈರಿಗಮನನ ತಾತ | ನಕ್ಷತ್ರ ಕಾಂತಧರನೇ || ನಕ್ಷತ್ರ ಜಾತ - ನಗ್ರಜನ ಮಸ್ತಕವ ತರಿದೇ | ನಕ್ಷತ್ರ ಸಹಸ್ರ ಉಳ್ಳವನ ದ್ವಾರವನು ಕಾಯ್ದೆ | ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ | ನಕ್ಷತ್ರ ಭೂಷಸಲಹೋ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೆ ಕೃಪಾಳು ಶ್ರೀ ಚನ್ನಕೇಶವನೇ ಜ್ಞಾನಿಗಳನ್ನು ಕಾವ ಸನಕವಂದಿತನೆ ಪ ಶರಣರ ಪೊರೆಯುವ ಪ್ರಣವ ಸ್ವರೂಪನೆ ಸ್ಮರಿಸುವ ದಾಸರ ಮರೆಯ ಬೇಡಯ್ಯ ಅ.ಪ. ದೀನರ ಸಲಹುವ ಭಕ್ರವತ್ಸಲನೇ ಮಾನಿನಿ ದ್ರೌಪದಿ ಮಾನ ಕಾಯ್ದವನೇ ಮೌನದಿಂದಲಿ ನಿಂನ ಧ್ಯಾನ ತತ್ವರನಾದೇ ಪನ್ನಗಶಯನನೇ ಸಲಹೊ ಕರುಣದಲೀ1 ಸನ್ನುತ ಹರಿ ನಿಂನ ಕೀರ್ತನೆ ಪಾಡುವೆ ಜಾನ್ಹಕಿ ರಮಣ ಶ್ರೀ ಕಾಕುತ್ಸ್ಥರಾಮಾ ಹೀನನ ಮಾತನ್ನು ನಲಿಯುತ್ತ ಕೇಳಿ ನೀ ಸಾನುರಾಗದಿ ಕಾಯಾ ಧೇನು ಪಾಲಕನೇ2 ಪಂಕಜನೇತ್ರ ಶ್ರೀ ಪರಮ ಪಾವನನೇ ಲಂಕೇಶನಿಗೆ ಯಮನಾದ ಶ್ರೀಧರನೇ ಶಂಕೆಯಿಲ್ಲದೆ ಕಾಯೊ ದೂರ್ವಾಪುರೇಶನೆ ಅಮಿತ ಸದ್ಗುಣಿಯೇ 3
--------------
ಕರ್ಕಿ ಕೇಶವದಾಸ
ನೇತ್ರಾವತಿಯ ವಾಸಾ | ಪ್ರಮಥ ಪೋಷಾಸೂತ್ರತನಯನೆ ಕಾಯೊ | ಭಕ್ತ ಜನ ಪೋಷಾ ಪ ಲೌಕಿಕ ಕುಕರ್ಮಗಳ | ನಾಚರಿಸಿ ಬಲು ವಿಧಧಿಕಾಕು ಜನರಾ ಸಂಗ | ಬಳಸಿ ಭವದೀ |ಏಕಮೇವನ ಚರಣ | ತೋಕನೆಂದೆನಿಸದಲೆನೂಕಿ ಎನ್ನಾಯುಗಳ | ವ್ಯರ್ಥ ಕಳೆವೇ 1 ಕೃತ ತ್ರೇತ ದ್ವಾಪರದಿ | ವ್ಯಕ್ತನಾಗುತ ನೀನುಚತುರದೊಳಗೇ ಮಂಜು | ನಾಥನೆನಿಸೀ |ಕೃತಿಪತಿಯ ಸಚ್ಚರಣ | ಶತಪತ್ರ ಭಜಿಪರಿಗೆಗತಿ ತೋರಿ ಸನ್ಮುಕುತಿ | ಪಥಕೆ ಕೊಂಡೊಯ್ವೇ 2 ಯತಿವಾದರಾಜರಿಂ | ಹಿತದಿ ಕದರೀಯಿಂದಪೃಥುಕು ನೃಹರಿಯ ಶಿಲೆಯು | ಸ್ಥಿತ ಧರ್ಮಸ್ಥಳದೀಕೃತವು ವೈಷ್ಣವ ಪೂಜೆ | ಚತುರಯುಗ ಮೂರುತಿಯೆವಿತತ ಮಹಿಮನ ತೋರ್ವ | ಮತಿಮಾಡೊ ಶರ್ವಾ3 ವೈಕಾರಿಕಾದಿ | ಸಾಕಾರಿ ಮಹದೇವಕೈಕೊಳುತ ಮನ್ಮಾತ | ನೋಕರಿಸದೇ |ಪ್ರಾಕ್ಕು ಕರ್ಮವ ಕಳೆದು | ನೀ ಕೊಡುವುಧ್ಹರಿ ಭಕುತಿನಾಕಪತಿ ವಂದ್ಯ ಸ | ನ್ನಾಕನದಿ ಧರನೇ 4 ಗುಣ ಪೂರ್ಣನಾದ ಗುರು | ಗೋವಿಂದ ವಿಠಲ ಪದವನಜ ಬೇಡುವೆ ಮನದಿ | ಕರುಣಾನಿಧೇ |ಅನಲಾಕ್ಷ ನಿನ್ನೊಲಿಮೆ | ಇಲ್ಲನಕ ಗತಿಯಿಲ್ಲಬೆನಕ ಪಿತ ಮನಮಾನಿ | ಎನಗೊಲಿಯೊ ಶಿವನೇ5
--------------
ಗುರುಗೋವಿಂದವಿಠಲರು
ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ ಮಂದರಧರನೇ ಬೇಲೂರ ಚೆನ್ನಿಗರಾಯ ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ ಕುಕ್ಷಿಯೊಳೀರೇಳು ಲೋಕವನು ತಾಳ್ದನೇ ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ 1 ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ ¨Àಕ್ತವತ್ಸಲನು ನೀನೇ ಸ್ವಾಮಿ 2 ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ [ಉರಿಸಿ]ಗೆಲಿದ ದೇವರದೇವಾ ಸ್ವಾಮಿ3 ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು ಸಂದೇಹವಿಲ್ಲದಂದದಲಿ ಪಾಲಿಸಿ ನರನಾ ಮುಂದೆ ಸಾರಥಿಯಾಗಿ ರಥವ ನಡಸಿದ ಗೋ ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] 4 ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು ಭೂಸ್ವರ್ಗವೆನಿಪ ವೇಲಾಪುರವಾಸಾ ಕೇಶವ ಶ್ರೀವೈಕುಂಠ ಚೆನ್ನಿಗರಾಯಾ ಶೇಷಶಯನನೇ ಕರುಣಿಸೈ ಸ್ವಾಮೀ 5
--------------
ಬೇಲೂರು ವೈಕುಂಠದಾಸರು
ನೋಡಿರೆ ನೋಡಿರೆ ನಂದನ ಕಂದನ| ಆಡುವ ಆಟದ ಘನ ಮಹಿಮೆಯನು| ರೂಢಿಲಿ ಶಿಶುವೆಂದವರ ನುಡಿ ಮಾಡುವ ಬಲುಕುಂದಾ ಪ ದುರುಳತನವ ಬಲು ಮಾಡಲೈಶೋಧೆಯು| ತರಳನ ಚರಣವ ನೆರೆ ಕಟ್ಟಿದರೆ| ಒರಳವ ನೆಳೆದೊಯ್ದಾ ಭರದಲಿ ಮರಗಳ ನಡ ಮುರಿದಾ 1 ಸಿಕ್ಕಿದ ಗೋವಳನೆನುತಲಿ ಬಾಲೇರು| ಅಕ್ಕರದಲಿ ಹಿಡಿದೆಳೆತರಲವರಾ| ಮಕ್ಕಳ ರೂಪವನು ಆಗುತೆ ಠಕ್ಕಿಸಿ ಹೋಗುವನು2 ತಂದೆ ಮಹಿಪತಿ ನಂದನ ಪ್ರಭುವಿನಾ| ನಂದನ ಲೀಲೆಯ ಹೇಳಲೆನ್ನಳವೇ| ಒಂದಲ್ಲ ಎರಡಲ್ಲ ನೆಲೆಯನು ಇಂದುಧರನೇ ಬಲ್ಲ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪತಿ ಪಾಹಿ | ರುದ್ರದೇವ ಪ ರುದ್ರದೇವ ಅದ್ರಿಜೆ ರಮಣನೆ | ಭದ್ರವ ಕೊಟ್ಟುದ್ದರಿಸೆನ್ನ ಅ.ಪ. ಭುಜಗ ಪಾವನಿ | ಗಂಗಾಧರನೇ 1 ದಿನಮಣಿ ಸೋಮ | ಅನಲೇಕ್ಷಣನೆಮನುಜ ಸಿಂಹಾಂಕಿತ | ಅನಘನ ಸೇವಿಪ2 ರಾಮ ತಾರಕ | ಆ ಮಹ ಮಂತ್ರವಭಾಮಿನಿ ಗಿರಿಜೆಗೆ ಪ್ರೇಮದಿಂದೊರೆದೆ 3 ಕುಸುಮ ಕುಸುಮ 5ಭೃಂಗ 4 ಸುರವರೇಣ್ಯ ಗುರು |5ೂೀವಿಂದ ವಿಠಲನಕರುಣವ ದೊರಕಿಸು | ಹರ ಮಹದೇವ 5
--------------
ಗುರುಗೋವಿಂದವಿಠಲರು
ಪಾಲಿಸು ಪರಮೇಶ | ಪಾಪ ವಿನಾಶ ಪ ಫಾಲನಯನ ತ್ರಿಶೂಲಧರ ಕರು ಣಾಲವಾಲ ವಿಶಾಲ ಮಹಿಮನೆ ಕಾಲಕಾಲ ಕಪಾಲಧರ ಸುರ ಜಾಲನುತ ಪದ ಶೈಲಜಾವರ ಅ.ಪ. ಶಂಕರ ಶಶಿಶೇಖರ | ಸದಾಶಿವ ಸಂಕಟಹರ ಈಶ್ವರ | ವರದಾನ ಶೂರ ಶಂಕೆಯಿಲ್ಲದೆ ತ್ವತದಾಂಬುಜ ಪಂಕ ಕಳೆವ ಅಕ ಳಂಕ ಮತಿಯನು ಕರುಣಿಸುವ ಮೀ ನಾಂಕ ಮದಹರ ಮೃಡಸುರೇಶ್ವರ 1 ಗಜ ಚರ್ಮಾಂಬರಧರನೆ | ಗೌರೀವರನೆ ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ ನಿಜಪದಾಂಬುಜ ಪೂಜೆ ಮಾಡುವ ಸುಜನ ಮನ ಅಂಬುಜ ದಿವಾಕರ ಭಂಜನ ಭುಜಗಭೂಷಣ ನಿಜ ಚರಣ ಪಂಕಜವ ತೋರಿಸಿ..... 2 ಹರಿನೀಲನಿಭಕಂಧರ | ಮುಪ್ಪುರಹರ ಶರಣಜನ ಮಂದಾರ | ಕೈಲಾಸಮಂದಿರ ವರ ವಿನಾಯಕ ಜನಕ ಜಾಹ್ನವಿ ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3
--------------
ವರಾವಾಣಿರಾಮರಾಯದಾಸರು
ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ ಕಾಲಕರ್ಮವಿದೂರಪಾಪನಾಶ ಪ ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ ವರ ಪರಂಜ್ಯೋತಿ ರೂಪಾತ್ಮನೇ ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ ಶರಣು ಜನಸುರಧೇನು ನಿಸ್ಸಂಗನೇ 1 ಉಮೆಯರಸ ಪಂಚವದನ ನಿರ್ಮಲನೆ ವಿಮಲತರ ಗಂಗಾಜೂಟಧರನೇ ಅಮಿತಬಲ ವೃಷಭವಾಹನನೆ ಶಾಶ್ವತನೆ ಕಮಲ ಪಿತ ಸುತ ಹರನೇ ಶಿವರೂಪನೇ 2 ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ ಕರದಿ ಡಮರುಗಧರನೇ ಶೂಲ ಪಾಣಿ ಮೆರೆವ ನಾಗಾಭರಣ ಗಿರಿಜೆವರ ಯೋಗೀಶ ಮೂರ್ತಿ ಶ್ರೀ ಶಂಭು ಶಂಕರನೆ 3
--------------
ಕವಿ ಪರಮದೇವದಾಸರು
ಬಾರೋ ಬಾರೋ ಚನ್ನಕೇಶವನೇ ಬಾರೋ ಬಾರೋ ಮುರಲೀಧರನೇ ಪ ನಿತ್ಯ ನಿರ್ಮಲನೇ ಸನಕಾದಿ ವಂದಿತ ಮಧುಸೂದನನೇ 1 ಭಜಕನ ಪಾಲಿಸೋ ಮುಕ್ತಿದಾಯಕನೇ 2 ದೂರ್ವಾಪುರದಿ ನಿತ್ತ ಯದು ಕುಲಪತಿಯೇ ದೂರ್ವಾಸವಂದಿತ ಆದಿ ಮೂರುತಿಯೇ 3
--------------
ಕರ್ಕಿ ಕೇಶವದಾಸ
ಬಾರೋ ಬಾಲಾ ಬಾ ಅಪ್ಪುವೆ ತಾರೋ ತೋಳನು ತಾಭೂರಿ ದೃಷ್ಟಿಯ ಮಾಲಿಯನ್ಹಾಕಿದಾಪಾರ ಮಹಿಮ ಬಾ ಪ ಐದು ವರುಷ ಬಾ ಎನಗೆ ಬೋಧವ ನೀಡಿದಿ ಬಾಸಾಧು ಸೇವಿತ ಶ್ರೀಧರ ಭೂಧರ ಗೋಧರಧರನೇ ಬಾ 1 ಗೌರ ಮುಖನೆ ಬಾ ಕರುಣಾವಾರಿ ನಿಧಿಯೇ ಬಾಆರ ಮಾತನು ಹಚಿಕೋ ಬ್ಯಾಡೆಲೆ ಸಾರಿದ ಕೃಷ್ಣ 2 ಗೋಪಿ ಬಂಧನ ಹರಣಾ ಬಾಮುಂದೆ ನಿಲ್ಲುತ ಮಾತುಗಳಾಡಿಸಿ ಇಂದಿರೇಶ ಬಾ 3
--------------
ಇಂದಿರೇಶರು
ರಕ್ಷಿಸು ಗುರುನಾಥಾ ಕೇಶವ ನೀನೇ ರಕ್ಷಿಸು ಸಿರಿನಾಥಾ ಪ ಅಕ್ಷಯ ದ್ರೌಪದಿಗಿತ್ತ ಶ್ರೀಕಾಂತನೇ ಶಿಕ್ಷಕ ನೀನೇ ಕನಕ ವಂದಿತನೇ ಅ.ಪ. ತರಳ ಪ್ರಲ್ಹಾದನಿಗೊಲಿದು ಧಾರುಣಿಯಲ್ಲಿ ಮೆರೆದ ಕಶ್ಯಪುವನ್ನು ಕೆಡಹಿದ ಹರಿಯೇ ದುರುಳ ಕಂಸನು ತನ್ನ ಪ್ರಜೆಗಳ ಹಿಂಸಿಸೆ ತರಿದು ಸಜ್ಜನರನ್ನು ಪೊರೆದ ಶ್ರೀಧರನೇ 1 ಭಜಿಸಲು ಕನಕನು ಉಡುಪಿ ಗ್ರಾಮದಲಾಗ ರಜನಿ ಮಧ್ಯದಿ ದಾಸಗೊಲಿದ ಶ್ರೀ ಹರಿಯೇ ಗಜವನ್ನು ರಕ್ಷಿಸಿ ಬಿರುದನು ತೋರಿದ ಭಜಕರ ಲೋಲನೆ ನೆರೆ ನಾರಾಯಣನೇ2 ಕಷ್ಟವ ನೀಗಿ ತಾ ಶಿಷ್ಟರ ಸಲಹಲು ಶ್ರೇಷ್ಠ ಮೂರುತಿ ರಂಗ ಬಹರೂಪವೆತ್ತೀ ಶಿಷ್ಟರ ರಕ್ಷಿಸಿ ಭ್ರಷ್ಟರ ಕೆಡಹಿದ ಸೃಷ್ಟಿಗೀಶನೆ ರಂಗ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಶರಣು ಶಿರೀಶ ಹರೇ ಪ ಭುವನದಲಿ ಶೃತಿ-ಯಡಗೇ| ಯವಿಗಳಾಡಿಸದೇ| ಜವದಲಿ ಬಂದು ನೀ ತಮನನು ಕೊಂದೇ| ಕಾವೋದೋ ಎನ್ನಾ ಮತ್ಸ್ಯರೂಪಾ 1 ಸುರಸುರರು ಕೊಡಿ| ಶರಧಿಯ ಮಥಿಸುದಕಿ| ಕರುಣದಿ ಬೆನ್ನವನಿತ್ತೆ ನೀನಗತಿ| ಕಾವೋದು ಎನ್ನ ಕಮಠೆ ರೂಪಾ 2 ಹಿರಣ್ಯಾಕ್ಷನ ಕೊಂದು| ಧರೆಯನು ದಂತದಲೆ| ಧರಿಸಿದೆ ನೀ ಅನವರತಗಳಿಂದಲೇ| ಕಾವುದೋ ಎನ್ನ ವರಹಾ ರೂಪ 3 ಛಲದಿ ಪ್ರಹ್ಲಾದ ಕರಿಯೇ| ಕುಲಿಶ ಸಮುಗುರುದಲೆ| ಮೆಳೆತನ ಸೀಳಿದೆ ಕರಳ್ಳೊನಮಾಲೆ| ಕಾವುದೋ ಎನ್ನ|ನರಹರಿ ರೂಪ 4 ಚಂಡ ಬಲಿವವರದನೇ| ದಂಡ ಕಾಷ್ಟಕರನೇ| ಕುಂಡಲ ಸುಕಮಂಡಲ ಭೂಷಿತನೇ| ಕಾವುದೋ ಎನ್ನ ವಾಮನ ರೂಪ 5 ಸುಜನರ ಪ್ರತಿ-ಪಾಲಾ ರಾಜಾಕುಲಾಂತಕನೇ| ರಾಜಿಸುತಿಹ ವರ ಪರಶುಧರನೇ| ಕಾವುದೋ ಎನ್ನಾ ಭಾರ್ಗವರೂಪಾ6 ಋಷಿಯ ಮಖ ಕಾಯಿದು ಶಶಿಧರಧನು ಮುರಿದೇ| ದಶಮುಖ ಕುಂಭಕರ್ಣರ ಮರ್ದಿಸಿದೆ| ಕಾವುದೋ ಎನ್ನಾ ರಾಘವ ರೂಪ7 ಎಣೆಗಾಣದ ಮಡುವಿನಲಿ| ಫಣಿವರ ಫಣಿಮ್ಯಾಲ| ಕುಣಿದೆ ಆನಂದದಿ ಕೊಳಲನೂದುತ್ತಲೇ| ಕಾವುದೋ ಎನ್ನಾ ಯಾದವ ರೂಪ8 ಮೂರೆನಿಪ ಪುರದಲಿ| ನಾರೇಶ ದೃತವಳಿದೇ| ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ| ಕಾವುದೋ ಎನ್ನಾ ಬೌದ್ದ ಸ್ವರೂಪಾ9 ಸಲಹಬೇಕೆಂದು ಜಗವಾ| ಇಳೆಯಾ ಭಾರರ ತರಿದೇ| ಸುಲಲಿತ ಕುದುರೆಯ ಏರಿ ಮೆರೆದೆ| ಕಾವಿದೋ ಎನ್ನ ಕಲ್ಕಿಸ್ವರೂಪ 10 ಸಹಕಾರಿ ಭಕ್ತರಿಗೇ| ಮಹಿಮೆ ದೋರಿದೆ ಹೀಗೆ| ಮಹಿಪತಿ ಸುತ ಪ್ರಭು ಸಲಹು ನೀಯೆನಗೆ| ಕಾವುದೋ ಎನ್ನಾ ಅನಂತರೂಪ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವಸ್ತುತಿ ಶಂಕರನೇ ಸೌಖ್ಯದಾತ ಸಂಕಟ ನಿವಾರಣ ಶಿವ ಪ ತನುಮನಕಾಧಾರನಾದ ಘನಪರಾನಂದಾರ್ತ ವಿನಂಯದಿಂದ ನೋಡಲಕ್ಷ ಚಿನುಮಯಾತ್ಮನೇ ನೀ 1 ಚಿದ್ದಿಲಾಸ ಜಗವಿದೆಲ್ಲಾ ಅದ್ವಯಾನಂದಾಖ್ಯನೇ ಸಿದ್ಧನಾಗಿ ತೋರುತಿರುವಬಿದ್ರೂಪಾರ್ತನೇ ನೀ 2 ವಾಗ್ಮನಗೋಚರನೇ ಸಂಗರಹಿತ ಸ್ವಪ್ರಕಾಶ ಮಂಗಳಾತ್ಮ ಜ್ಯೋತಿರ್ಮಯ ಗಂಗಾಧರನೇ ನೀ 3 ಅಂತರಾನಂದಾರ್ತ ಜ್ಞಾನ ಸಂತ ಸಾದು ಸಾಧ್ಯನೇ ಶಾಂತಿ ಪದವನಿತ್ತ ಗುರು ಶಾಂತರೂಪನೇ ನೀ 4
--------------
ಶಾಂತಿಬಾಯಿ
ಶ್ರೀ ಗೌರೀವರೇಂದ್ರನೇ ನಮೋ ನಮೋ ನಮೋ ಯೋಗಮಯನೆ ಭೋಗದಯನೆ ನಾಗಾಭರಣನೆ ಭೋಗೀ ಭೂಷಣ ವ್ಯಾಘ್ರವಸನನೆ ಪ ವಾಸುದೇವ ಪ್ರಿಯನೇ ಸದಾ ಶಿವಾ ಶಿವಾ ಶಶಾಂಕಧರನೇ ಕ್ಲೇಷಹಾರನೇ ದೋಷನಾಶನೇ ಭಾಸುರ ಪ್ರಕಾಶಾ ತೋಷದಾತನೇ 1 ಪಂಚ ಪ್ರಾಣಧಾರನೇ ಪರಾತ್ಪರಾವರಾ ಸಂಚಿತ ಅಘದೋಷಹರಣ ಸರ್ವಸುಖಕರಾ ಪಂಚವದನಾ ಪಂಚಶರಹರಾ 2 ಜ್ಞಾನಮಯ ಸುಚೇತನಾ ಕೃತಾಘನಾವನಾ ಸ್ವಾನುಭವ ಸ್ವಶಾಂತಿದಾತ ಧ್ಯಾನಿಪಾಜನಾ ದೀನೋದ್ಧಾರಕಾ ವಿಜ್ಞಾನಮಯನೇ 3
--------------
ಶಾಂತಿಬಾಯಿ
ಶ್ರೀ ಸಂತಾನ ಗೋಪಾಲಕೃಷ್ಣ 141 ಗೋಪಿ ವಿನುತ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣೀಯೇ 1 ಅಂದು ವೈರಾಟಿಯು ಪಾಹಿ ಪಾಹಿ ಮಹಾ ಯೋಗಿನ್ ದೇವ ದೇವ ಜಗತ್ ಪತೇ ನಾನ್ಯಂ ತತ್ ಅಭಯಂ ಪಸ್ಯೆ ಎಂದು ನಾಥನೇ ನಿನ್ನ ಮೊರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ 2 ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲು ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುದು 3 ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆÀಲುವ ಶಂಖ ಕೌಮೋದಕೀಧರನೇ ಮಾಲಕ್ಷ್ಮೀ ವಕ್ಷನೀ ವರ ಅಭಯ ಪ್ರದನಾಗಿ ಸಲುಹುತಿಯೇ ಭಕ್ತರನ ಗುರುಗ ಶ್ರೀ ಕೃಷ್ಣ 4 ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಂಛಿತ ಪ್ರದನೇ 5 ಪ
--------------
ಪ್ರಸನ್ನ ಶ್ರೀನಿವಾಸದಾಸರು