ಒಟ್ಟು 27 ಕಡೆಗಳಲ್ಲಿ , 3 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ಶ್ರೀ ಹರಿ ಅಕ್ಕೋರಂಗ ನೋಡೆ ಇಕ್ಕೋ ಕೃಷ್ಣನೋಡೆ ತಕ್ಕಥೈ ಎಂದೀಗೆ ಸಿಕ್ಕಿದ ನಮ್ಮ ಕೈಗೆ ಪ. ಕುರುಳು ಕುಂತಳದಿಂದ ಕಸ್ತುರಿ ತಿಲುಕ ಚಂದ ನೀಲ ವರ್ಣ ನಂದ 1 ಮುಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ ಸೊಗಸು ನೋಡಲೆ ಕಾಂತೆ ಸೆಳೆವ ಮನವ ಶಾಂತೆ 2 ಬಾರೋ ಬಾ ಗೋಪಾಲಕೃಷ್ಣವಿಠ್ಠಲ ಜಾಲ ತೋರುವ ನೋಡೆ ಬಾಲೆ ಸೇರೋಣ ಬಾ ಸುಶೀಲೆ 3
--------------
ಅಂಬಾಬಾಯಿ
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ