ಒಟ್ಟು 21 ಕಡೆಗಳಲ್ಲಿ , 15 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರವನು ಹೊರಗೆನಿಂತ ಬಾರಾನ್ಯಾಕವನು ಪ ನೀರಮುಳುಗಿ ಬಂದು ಘೋರಪರ್ವತ ತಂದು ಧಾರುಣಿಯನು ಕದ್ದ ದನುಜನ ಕೊಂದು ನರಹರಿ ರೂಪದಿ ತರಳಗೊಲಿದುಪುಟ್ಟ ಚರಣದಿಂ ಧರಣಿಯನಳೆದ ಮಹಾತ್ಮನೋ 1 ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು ಮಡುಹಿ ಬಂದವನಿವನೇನೋ ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2 ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ ಚಿತ್ತಬಂದಂತೆ ತಾ ತಿರುಗುವನೋ ಉತ್ತಮನಾದ ಶ್ರೀ ಪ್ರಾಣನಾಥವಿಠಲನು ಎತ್ತನೋಡಿದರು ಸುತ್ತುತ್ತಲಿರುವನು 3
--------------
ಬಾಗೇಪಲ್ಲಿ ಶೇಷದಾಸರು
ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|ಗುಮ್ಮನು ಎಳೆದೊಯ್ವನು ಪಎಡದ ಕೈಯಲಿ ಕಪಾಲ-ಗೋಪಾಲಾ-|ಬಲದ ಕೈಯಲಿ ತ್ರಿಶೂಲ ||ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |ಅಲೆದು ಸ್ಮಶಾನವ ತಿರುಗುವನಂತೆ 1ಮೂರು ಕಣ್ಣಿನವನೊ-ಗೋಪಾಲಾ-|ಐದು ತಲೆಗಳವನೊ ||ದಾರಿಯ ಪೋಗುವ ನಾರಿಯನೆಳತಂದು |ಸೇರಿಸಿ ಶಿರದಲ್ಲಿ ಹೊತ್ತನೊ 2ಚಂದ್ರನರ್ಧವ ಪಿಡಿದು-ತಲೆಯ ಮೇಲೆ-ಚೆಂದಕಿಟ್ಟಿರುವನಂತೆ ||ಅಂದಗಾರನಂತೆ [ಅನಲನೇತ್ರನಂತೆ] |ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ 3ನಿನ್ನ ಮಗನ ಮಗನೊ-ಗೋಪಾಲಾ-|ಪನ್ನಗಭೂಷಣನೋ ||ಧನ್ಯನಾಗಿ ಶ್ರೀರಾಮ ನಾಮವನು |ಚೆನ್ನಾಗಿ ಚಿಂತಿಪನೊ 4ಕರಿಯಜಿನ ಪೊತ್ತವನೊ ಗೋಪಾಲಾ-|ನೆರೆದ ಭೂತ ತಂದವನೊ ||ಶರಧಿಶಯನ ನಿನ್ನಚರಣಪಂಕಜಭೃಂಗ|ಪುರಂದರವಿಠಲ ಪನ್ನಂಗ ಶಯನನೆ 5
--------------
ಪುರಂದರದಾಸರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು