ಒಟ್ಟು 25 ಕಡೆಗಳಲ್ಲಿ , 9 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಯಗೊಂಡು ಮೂಲವಿಡಿದು ನಿಜಮೂಲ ಮೂರ್ತಿಯ ಬಲಗೊಳ್ಳಿ 1 ಏರಿ ನೋಡಿ ಅರುಚಕ್ರದಾಟಿ ತೋರುತಿಹ್ಯ ಪೂರ್ಣಾನಂದ ಶ್ರೀ ಗುರುಮೂರ್ತಿಯ ಬಲಗೊಳ್ಳಿ 2 ಸೆರಗವಿಡಿದು ನೋಡಿ ಕರಗಿಮನ ಅರವಿನೊಳು ಬೆರೆದು ಕೂಡಿ ಹರಿ ಪರಬ್ರಹ್ಮನ ಬಲಗೊಳ್ಳಿ 3 ಆಸಿಯನೆ ಜರೆದು ನಿರಾಸಿಯಲ್ಲಿ ಧ್ಯಾಸವಿಡಿದು ಲೇಸಾಗಿ ಕೂಡಿರೊ ವಾಸುದೇವನ ಬಲಗೊಳ್ಳಿ 4 ಮೂರು ಗುಣಕೆ ಮೀರಿ ತೋರಿತಿಹ್ಯ ನಿರ್ಗುಣನ ನೆರೆದು ಕೂಡಿ ನಿಜ ನಿರುಪಮನ ಬಲಗೊಳ್ಳಿ 5 ಸಹಸ್ರದಳಮಂಟಪದೊಳು ಸೋಹ್ಯವರಿತು ಸಾಯಸದಿಂದ ಶ್ರೀಹರಿಯ ಬಲಗೊಳ್ಳಿ 6 ತಾನೆ ತಾನಾಗಿಹ್ಯ ತನುವಿನೊಳು ಆನಂದೋಬ್ರಹ್ಮ- ಙÁ್ಞನದಿಂದ ನೋಡಿ ಙÁ್ಞನಸಾಗರನ ಬಲಗೊಳ್ಳಿ 7 ಮನವಿಡಿದು ಮಾಡಿರೊ ಧ್ಯಾನ ಮೌನ ಅನುದಿನ ಅನುಕೂಲಾಗುವ ಅನಂತ ಗುಣನ ಬಲಗೊಳ್ಳಿ 8 ಕಣ್ದೆರೆದು ನೋಡಿ ತನ್ನೊಳಗೆ ತಾನೆ ತಿಳಿದು ತನುಮನರ್ಪಿಸಿ ಗುರುಮೂರ್ತಿಯ ಬ¯ಗೊಳ್ಳಿ 9 ಗುರು ಕರುಣದೊಲವಿಂದ ಪಡೆದು ಪೂರ್ಣ ಹರಿಯು ಸುಖ ಸೂರ್ಯಾಡಿ ಪರಮ ಅನಂದ ಸುಪಥ 10 ಅರ್ತುಕೂಡಿದ ನೋಡಿ ಅರ್ತಿಯಿಂದ ಮಹಿಪತಿಯ ಬೆರ್ತುಕೂಡಿದ ಮನ ಕರ್ತುಗುರುವಿನ ಬಲಗೊಳ್ಳಿ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬ್ರಹ್ಮಾನಂದದ ಸಭಾ ಮಧ್ಯದಲಿಸುಮ್ಮನೆ ಇರುತಿಹುದೇನಮ್ಮಬ್ರಹ್ಮಾದಿಗಳಿಗೆ ದೂರಾಗಿಹನಿರ್ಮಲ ನಿರುಪಮ ತಾನಮ್ಮ ಪ ಹೇಳಲು ಬಾರದ ಸುಖರೂಪದಲಿಹೊಳೆಯುತ ಅಹುದು ಏನಮ್ಮಮೇಳದ ಲೋಕಕೆ ಕರ್ತೃ ತಾನಾಗಿಹಲೋಲ ಪರಾತ್ಪರ ತಾನಮ್ಮ 1 ಬೋಧದ ರೂಪದಿ ಹಾ.... ಎಂಬಂದದಿಬೆಳಗುತಲಿಹುದದು ಏನಮ್ಮಆದಿ ಅನಾಧಿಯು ಅವ್ಯಕ್ತವೆನಿಪಅಚಲಾನಂದವೆ ತಾನಮ್ಮ 2 ತೃಪ್ತಾನಂದದಿ ತೂಷ್ಣೀ ಭಾವದಿದೀಪ್ತವಾಗಿಹುದದು ಏನಮ್ಮಸಪ್ತಾವರಣದ ಮೀರಿ ಮಿಂಚುವಗುಪ್ತಜ್ಞಪ್ತಿಯು ತಾನಮ್ಮ 3 ಕದಲದೆ ಚೆದುರದೆ ಕೈ ಕಾಲಿಲ್ಲದೆಉಕ್ಕುತಲಿಹುದದು ಏನಮ್ಮಸದಮಲ ಸರ್ವಾತ್ಮತ್ವವೆಯಾಗಿಹಸಾಕ್ಷೀಭೂತವು ತಾನಮ್ಮ4 ತೋರುತಲಡಗದ ಸಹಜಭಾವದಿಥಳಥಳಿಸುತಿಹುದದು ಏನಮ್ಮಕಾರಣ ಕಾರ್ಯವ ಕಳೆದ ಚಿದಾನಂದಕಾಲಾತೀತನು ತಾನಮ್ಮ 5
--------------
ಚಿದಾನಂದ ಅವಧೂತರು
ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ ಕಾಮಕ್ರೋಧಗಳೆಂದು ನಿಷ್ಕಾಮದಿ ನೇಮದಲಿಹಗೆ ನಮಸ್ಕಾರ ಶಮೆದಮೆದಲಿ ಸಮದೃಷ್ಟಿಗೂಡಿಹ ಸ್ವಾಮಿ ಸೇವಿಗೆ ನಮಸ್ಕಾರ 1 ಆಶಿ ತಿಳಿದು ನಿರಾಶೆಯೊಳಿಹ ಉದಾಸಿಗೆ ನಮಸ್ಕಾರ ಸುಮಿಲೊಂತಕಗೆ ನಮಸ್ಕಾರ ಸೂಸಿ ತುಳುಕದೆ ಕಾಸಿನಾಶೆಗೆ ಹರಿದಾಸರಿಗೆ ನಮಸ್ಕಾರ 2 ಹೆಚ್ಚು ಕುಂದನೆ ರಚ್ಚಿಗೆ ತಾರದ ಸ್ವಚ್ಛಲಿಹಗೆ ನಮಸ್ಕಾರ ಕಚ್ಚಿ ಕೈ ಬಾಯಿಲಿ ಹುಚ್ಚಾಗದ ನಿಶ್ಚಲೇಂದ್ರಿಗೆ ನಮಸ್ಕಾರ ಮತ್ಸರಳಿದು ನಿರ್ಮತ್ಸರೊಳಿಹ ಸುನಿಶ್ಚಿತನಿಗೆ ನಮಸ್ಕಾರ ಮೆಚ್ಚಿ ಘನದೊಳು ಇಚ್ಛೆಲಿಹ ಮಹಾ ಎಚ್ಚರಿಗೆ ನಮಸ್ಕಾರ 3 ನಾ ನೀನೆಂಬುವ ನುಡಿ ನೀಗಿನ ಅನುಭವಿನಗೆ ನಮಸ್ಕಾರ ಖೂನ ತಿಳಿದಿಹ ಸ್ವಾನುಭವದ ಸುಙÁ್ಞನಿಗೆ ನಮಸ್ಕಾರ ತಾನೆ ತಾನಾಗಿಹ ಘನದೊಳು ನಿರಾಶನಿಗೆ ನಮಸ್ಕಾರ ಮೌನದಲಿ ನಿಜಸ್ಥಾನದಲಿರುವ ಸುದಾನಿಗೆ ನಮಸ್ಕಾರ 4 ಗರ್ವವಳಿದು ಸರ್ವವೇ ನಿಜ ತಿಳಿದ ನಿಗರ್ವಗೆ ನಮಸ್ಕಾರ ತೋರ್ವ ಕರದೊಳು ಅರ್ವನುಭವನಿರ್ವಾಣಿಗೆ ನಮಸ್ಕಾರ ನಿರ್ವಾಹದ ಸುಪರ್ವಾಣಿಯ ಫಲ ಇರ್ವನಿಗೆ ನಮಸ್ಕಾರ ಸರ್ವಸುಖ ಸುರಿಸಿದ ಮಹಿಪತಿ ಶ್ರೀಗುರುವಿಗೆ ನಮಸ್ಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕನೀತಿ ಮತ್ಸರಿಸುವವರಲ್ಲಿ ಮಾನ್ಯವಿರಲೀ ಪ ಬಚ್ಚಲಿಲ್ಲದ ಮನೆಯು ಸ್ವಚ್ಛತಾನಾಗಿಹುದೆ ಅ.ಪ ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ ಪರಿಶುದ್ಧವಹುದೇನೊ ಆವಾಗಲೂ ಪರಿಪರಿಯಿಂದಲಿ ಪರಿವಾರ ಜನಗಳು ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ 1 ಗುಣತ್ರಯಗಳಿಂದಲಿ ನಿಬಿಡವಾದೀದೇಹ ಗುಣಕಾರ್ಯ ಮಾಡದೇ ಬಿಡದೆಂದಿಗೂ ಅಣಿಯಾಗಿ ದುರ್ಗುಣಗಳೊಕ್ಕಣಿಸಿ ಪೇಳುವಡೆ ಗುಣವ ತಿದ್ದಲು ತಾವು ಋಣಿಯಾಗುವರಯ್ಯ2 ಅಭಿಮಾನವೆಂಬುದು ನಭೋಮಂಡಲವರೆಗಿಹುದು ಶುಭವೆಂತೊ ಡಾಂಭಿಕದ ಹೇ ಮಾನವಾ ತುಂಬಿತುಳುಕುವ ದುರಭಿಮಾನವನೆ ತೊಲಗಿಸಿ ಇಂಬು ತೋರುವರಯ್ಯ ಮನಸ್ಥೈರ್ಯಕೇ3 ಕಕ್ಕುಲತೆ ಪಡದೆ ನಕ್ಕುಸಂತೈಸಿಲಾಲಿಸುವ ತೆರದಿ ಅಕ್ಕರದಿ ತನ್ನ ಅಪರಾಧಗಳನೆಲ್ಲ ಲೆಕ್ಕಿಸದೆ ಪೇಳ್ವರದು ಉಪಕಾರವಯ್ಯ 4 ಮಚ್ಚರದಿ ನಿಂದಿಸೆ ಅಚ್ಚುತನ ಭಕುತರಿಗೆ ನಿಚ್ಚದಲಿ ಸ್ವಚ್ಛಭಕುತಿ ಇಹುದು ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ ಮೆಚ್ಚಿ ಕಾಯುವನಯ್ಯ ಶ್ರೀ ವೇಂಕಟೇಶ 5
--------------
ಉರಗಾದ್ರಿವಾಸವಿಠಲದಾಸರು
ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ಧ್ರುವ ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1 ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ ಸದ್ಗತಿಗಿದೆಮೂಲ ಸಾಧುಜನರ ಸಹಕಾರ ಸಾಧಕರ ಸುಶೀಲ ಬುಧಜನರ ಮಂದಾರ ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2 ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ ತರಣೋಪಾಯಕ ಪೂರ್ಣ ತೋರುದಿದನು ಸಂಧಾನ ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸನ್ಮಾರ್ಗಪಿಡಿದು ಸದ್ವಸ್ತಿಯೊಳು ಬೆರೆದಿಹ ಸದ್ಬ್ರಹ್ಮರಿಗೆ ನಮಸ್ಕಾರ 1 ಸದ್ಗುರು ಕೃಪೆಯಿಂದ ಸದ್ಗತಿಯ ಪಡೆದಿಹ ಸದ್ಭಕ್ತರಿಗೆ ನಮಸ್ಕಾರ 2 ಅಧ್ಯಾತ್ಮವಿದ್ಯ ಸಾದ್ಯ ಮಾಡಿಕೊಂಡಿಹ ಬುದ್ಧಿವಂತರಿಗೆ ನಮಸ್ಕಾರ 3 ಸಿದ್ಧಾಂತ ಅನುಭವದ ಸಾಧನವು ಬಲಿದಿಹ ಶುದ್ಧ ಬುದ್ಧರಿಗೆ ನಮಸ್ಕಾರ 4 ಇದೆ ನಿಜತಿಳಿದಿಹ ಸದ್ಬೋಧದಲ್ಲಿ ಪೂರ್ಣ ಸದ್ಭಾವಿಗಳಿಗೆ ನಮಸ್ಕಾರ 5 ಆದಿತತ್ವದ ನೆಲೆಯು ಭೇದಿಸಿ ಬೆರೆದಿಹ ಬುದ್ದಜನರಿಗೆ ನಮಸ್ಕಾರ 6 ಕ್ರೋಧ ಕಳೆದು ಸದಾ ಶಾಂತಪದಹೊಂದಿದ ಸಾಧುರಿಗೆ ನಮಸ್ಕಾರ 7 ಭಿನ್ನ ಭೇದವನಳಿದು ತನ್ನ ತಾ ತಿಳಿದ ಸುಜ್ಞಾನಿಗಳಿಗೆ ನಮಸ್ಕಾರ 8 ಮೇಲ್ಗಿರಿಯೊಳಗಿಪ್ಪ ಮೂಲಮೂರ್ತಿಯ ತಿಳಿವ ನೆಲೆವಂತರಿಗೆ ನಮಸ್ಕಾರ 9 ಮಾಯಮೋಹವನಳಿದು ಸೋಹ್ಯ ಸೊನ್ನೆಯ ತಿಳಿದ ಮಹಾಮಹಿಮರಿಗೆ ನಮಸ್ಕಾರ 10 ಆರುಮೂರನೆ ಗೆದ್ದು ಏರಿ ತ್ರಿಪುರ ದಾಟಿ ಮೀರಿಹರಿಗೆ ನಮಸ್ಕಾರ 11 ಮನಕರಗಿ ಘನ ಬೆರೆದು ತಾನೆ ತಾನಾಗಿಹ ಮೋನ ಮುಗ್ಧರಿಗೆ ನಮಸ್ಕಾರ 12 ತತ್ವಮಸಿ ಅರ್ಥದಿತ್ಯರ್ಥವನು ತಿಳಿದಿಹ ಮುಕ್ತಜನರಿಗೆ ನಮಸ್ಕಾರ 13 ತಾನರಿತು ಸುಖಿಯಾಗಿ ಇನ್ನೊಬ್ಬರಿಗೆ ಕಣ್ದೆರೆಸುತಿಹರಿಗೆ ನಮಸ್ಕಾರ 14 ತರಳ ಮಹಿಪತಿ ಹೊರೆವ ಅರುಹು ಕುರುಹವನಿತ್ತ ಗುರುಹಿರಿಯರಿಗೆ ನಮಸ್ಕಾರ 15
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಎಲ್ಲರಾಡ್ಯೇನು ಭಾಗವತರಾವೆಂದುಬಲ್ಲವರೆ ಬಲ್ಲರು ಹರಿಯ ಊಳಿಗವ ಪ.ಸಟೆಯನ್ನೀಗಿದ ಭಕ್ತಿ ಮಿಶ್ರವಿಲ್ಲದ ಜ್ಞಾನಜಠರಾನುಕೂಲಕಲ್ಲದ ವಿರಕ್ತಿದಿಟವಾಗಿ ಮಾಡುವ ಮಹಿಮರಿಗಲ್ಲದೆಘಟಿಸದು ಒಣಮಾತಿನ ಕೋವಿದಂಗೆ 1ಡಂಬವಿಲ್ಲದ ದಾನ ಕಳವಳಿಸದ ಪೂಜೆಡೊಂಬಿಯಾಗದ ಜಪಧ್ಯಾನ ಮೌನಕುಂಭಿಣಿಯೊಳು ಮಾನುಭವಗಲ್ಲದೆಭವಸಂಭ್ರಮಕುಬ್ಬುವ ಸುಖಿಪುಂಸಂಗೇನು 2ಹೇಯವಿಲ್ಲದ ಕೀತ್ರ್ನೆ ಹೇವವಿಕ್ಕದವಿದ್ಯೆಬಾಹ್ಯ ತೋರದಹರಿಭೃತ್ಯವೃತ್ತಿದೇಹ ಚಿತ್ತವ ಕದಿಯದ ಧರ್ಮವ್ರತ ಕೃಷ್ಣಸ್ನೇಹಿತಗುಂಟು ಸಂಸಾರಿಗಗಾಧ 3ವಂಚಿಸದ ಬುಧಸೇವೆ ಠೌಳಿಸದ ಮಂತ್ರ ಪ್ರಪಂಚ ಕೂಡದ ತತ್ವ ಚರ್ಚಂಗಳುಮುಂಚುವ ಮುಕುತರಿಗಲ್ಲದೆ ಯಾತನೆಯಸಂಚಕಾರವಿಡಿದ ಸುಖಿ ಪುಂಸಂಗೇನು 4ಯಾಗವ ತಾ ನಿಯೋಗವ ತಾನಾತ್ಯಾಗವ ತಾನಾಗಿಹದು ಸುಲಭಭೋಗವತಿಯ ತಂದೆ ಪ್ರಸನ್ವೆಂಕಟೇಶನಭಾಗವತಾಂಘ್ರಿ ಪರಾಗ ದುರ್ಲಭವು 5
--------------
ಪ್ರಸನ್ನವೆಂಕಟದಾಸರು
ಮರತೆ ಮರತೆ ಪ್ರಪಂಚವ ಎನಗೆ ಈಗಹರಿಯಿತು ಅಜ್ಞಾನದ ಋಣವು ಅಯ್ಯಪಸುರಪತಿಕಲ್ಪವೃಕ್ಷವು ತಾನು ಈಗಸಿರಿಗಿರಿಯನೀಗ ಬಯಸೆನು ನಾನುಪರಮಬಗಳೆ ತಾನಾಗಿಹ ನಾಶವಹಮುರುಕಿ ದೇಹ ಭ್ರಾಂತಿಯಲಿರುವೆನೆ ಕೇಳಕ್ಕಯ್ಯ1ಸತ್ಯವಾದ ಕಾಮಧೇನುವು ಅದು ಈಗಬುತ್ತಿಗೆ ಕೈ ನೀಡುವುದೇ ಕೇಳಕ್ಕಯ್ಯನಿತ್ಯಮಂಗಳೆ ಬಗಳೆಯಾಗಿಹಳು ಸ್ವಪ್ನದಿ ತೆರದಿಮಿಥ್ಯಸಂಸಾರಕೆ ಆಸೆ ಮಾಡುವೆನೆ ಕೇಳಕ್ಕಯ್ಯ2ಚಿಂತೆ ದೂರ ಚಿಂತಾಮಣಿಯನುಕ್ಷುದ್ರ ದೂರ ಕಲ್ಪವೃಕ್ಷವನು ನೆನೆವೆ ಕೇಳಕ್ಕಯ್ಯಚಿಂತಾಯಕ ಚಿದಾನಂದನಾದ ಬಗಳೆ ಇರುವಾಗಎಂತು ಜನನ ಮರಣದ ಚಿಂತೆ ಕೇಳಕ್ಕಯ್ಯ3
--------------
ಚಿದಾನಂದ ಅವಧೂತರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು