ಒಟ್ಟು 21 ಕಡೆಗಳಲ್ಲಿ , 13 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂತರೆನಬಹುದು ಸಜ್ಜನರಿವರನಾ ಪ ಇಂಥ ಗುಣಗಳಿಂದ ಯುಕ್ತರಾಗಿಪ್ಪರ ಅ.ಪ. ಸ್ವಾಂತಸ್ಥಾ ನುತ ಸರ್ವಾಂತರಾತ್ಮಕನೆಂದು ಚಿಂತಿಸುತ ಮನದೊಳು ನಿರಂತರದಲಿ ನಿಂತಲ್ಲಿ ನಿಲ್ಲದೆ ದುರಂತ ಮಹಿಮನ ಗುಣವ ಸಂಸ್ತುತಿಸುತನವರತ ಶಾಂತರಾಗಿಹರಾ 1 ಲೇಸು ಹೊಲ್ಲೆಗಳು ಪ್ರದ್ವೇಷ ಗೇಹಗಳು ಸಂ ತೋಷ ಕ್ಲೇಶಗಳಿಗವಕಾಶ ಕೊಡದೆ ದೋಷ ವರ್ಜಿತ ಹೃಷಿಕೇಶ ಮಾಡುವನೆಂದು ಭೇಶನಂದದಲಿ ಪ್ರಕಾಶಿಸುತಲಿಹರಾ 2 ಮೇದಿನಿ ದಿವಿಜರೊಳು ಸಾಧು ಜನರೊಳು ಧರ್ಮಕರ್ಮಗಳೊಳು ಶ್ರೀದನೊಳು ಗೋವುಗಳೊಳಗೆ ದ್ವೇಷಿಪರಿಗೆ ಅ ನ್ನೋದಕಗಳೀಯದೆ ನಿಷೇಧಗಯ್ಯುತಲಿಹರಾ 3 ಎನ್ನ ಪೋಲುವ ಪತಿತರಜ್ಞಾನಿಗಳು ಜಗದೊ ಳಿನ್ನಿಲ್ಲ ಪತಿತ ಪಾವನನೆನಿಸುವ ಜಾಹ್ನವೀ ಜನಕಗಿಂದಧಿಕರ್ಯಾರಿಲ್ಲೆಂದು ಉನ್ನತೋತ್ಯಂಶದಿಂದ ಸನ್ನುತಿಸುತಿಪ್ಪವರ 4 ಸತ್ಯ ಸಂಕಲ್ಪ ಏನಿತ್ತಿದ್ದೆ ಪರಮ ಸಂ ಪತ್ತು ಎನಗೆನುತ ಸದ್ಭಕ್ತಿಯಿಂದಾ ನಿತ್ಯದಲಿ ಕೀರ್ತಿಸುತ ಪುತ್ರಿಮಿತ್ರಾದಿಗಳು ಭೃತ್ಯಾನುಭೃತ್ಯರೆಂದರ್ತಿಯಲಿ ಸ್ಮರಿಸುವರಾ 5 ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ ಅನುಜ ತನುಜಾಪ್ತ ಪೋದನ ಭೂಷಣಾ ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ ಪರ ಸೌಖ್ಯ ರೂಪನೆಂಬುವರಾ 6 ನಾಗೇಂದ್ರಶಯನ ಭವರೋಗಾಪಹರ್ತ ಪಾ ವಜ್ರ ಅಮೋಘ ಶೌರ್ಯ ತ್ರೈಗುಣ್ಯ ವರ್ಜಿತ ಜಗನ್ನಾಥ ವಿಠಲಗೆ ಕೂಗಿ ಕೈಮುಗಿದು ತಲೆಬಾಗಿ ನಮಿಸುವರಾ 7
--------------
ಜಗನ್ನಾಥದಾಸರು
ಚಿತ್ತಿಟ್ಟು ನಮಿಸುವೆ ನಿಮ್ಮ ಮೂಲಚೈತ್ಯದಲಿಹ ಚೆನ್ನಿಗ ಬಲ ಹನುಮ ಪ.ಮೊದಲೆ ರಾಮರ ಭಟನಾಗಿ ಅಂದುಪದ್ಮದೇವಿಯ ಚರಣಕೆ ತಲೆಬಾಗಿಮುದದಿ ಮುದ್ರಿಕೆಯ ನೀ ಕೊಟ್ಟೆ ಬಲುಮದ ಸೊಕ್ಕಿದಸುರನ ಪುರವನೆ ಸುಟ್ಟೆಚೂಡಾಮಣಿಯ ತಂದಿಟ್ಟೆ ಬಲು ಹರುಷವ ಕೊಟ್ಟೆ 1ಕೊಬ್ಬಿದ ಕುರುಪತಿ ಬಲದಿ ಪೊಕ್ಕುಬೊಬ್ಬೆಯನಿರಿದು ಶೂರರ ಶಿರ ಹರಿದೆಆರ್ಭಟವನು ತೋರಿದೆ ಬಲುದುರ್ಬುದ್ಧ್ಯ ದುಶ್ಯಾಸನನ್ನೋಡಲ್ಬಗಿದೆ ಖಳರ ಹÀಲ್ಲುಮುರಿದೆಮಪುರಕೆ ಕಳುಹಿದೆ 2ಪರಮಪುರುಷ ಹರಿಯೆಂದು ಮಿಕ್ಕಸುರರುಈತನ ದಾಸಾಂಕಿತರಹುದೆಂದುಅರುಹಿದೆಶ್ರುತಿಇತಿಹಾಸಅಹಿಗಿರಿಯ ಪ್ರಸನ್ವೆಂಕಟೇಶನ ದಾಸ ತುಂಗಾತೀರವಾಸನೆ ಸಲಹೊ ಮುಖ್ಯೇಶ 3
--------------
ಪ್ರಸನ್ನವೆಂಕಟದಾಸರು
ಪರಿಪರಿಯಲಿ ವರ್ಣಿಸುವೆ ಕಳಾನಿಧಿಯಾನರಜನರು ಅರಿತವನ ಸ್ಮರಿಸಿರಯ್ಯಾ ಪಕಾಲುಗಳು ಹದಿನೆಂಟು ತೋಳುಗಳುಹತ್ತು ಕಣ್ಣಾಲಿಗಳು ಇಪ್ಪತ್ತ ಒಂದುಸಾಲಾಗಿ ರಂಜಿಸುವ ಶಿರಸಂಗಳೀರೈದುಮೇಲಾದ ಫಣಿಂಗಳಾರ ಹನ್ನೆರಡುನೀಳವಾಗಿಯೆ ಹೊಳೆವ ಕೋರೆದಾಡೆಗಳೆರಡುಗಾಳಿಯನು ಭೇದಿಸುವ ಬಾಲ ನಾಲ್ಕುಪೇಳಲೇನಿದನು ಕೇಳ್ ನಾಲಿಗೆಗಳ್ಹನ್ನೊಂದುಮೂರ್ಲೋಕದೊಡೆಯನ ಪೀಠದಲಿರಂಜಿಸುವ ದೇಹವೇಳು 1ಧರಣಿಯೊಳಗಿನ ಪರಿವಾರದವರಿಗೆಲ್ಲಪರಸ್ಪರನೆ ವೈರತ್ವ ಬೆಳೆಸಿಕೊಂಡಿಹುದೂಉರಗಮೂಷಕನಿಂಗೆ ಕರಿಮುಖಗೆ ಕೇಸರಿಗೆಗಿರಿಜೆ ಭಾಗೀರಥಿಗೆ ಉರಿನಯನ ಚಂದ್ರನಿಗೆಎತ್ತು ವ್ಯಾಘ್ರನ ತೊಗಲಗೆ ಮರೆಯ ಹೊಕ್ಕರೆ ಕಾಯ್ವನರಕೇಸರಿಯ ತೆರದಿ ಕರುಣಾಳು ಭಕ್ತವತ್ಸಲ ದೇವನಾ 2ಬಲಿದಾಗ್ನಿಸಖಸರ್ವ ನಿಳಯದೀವಿಗೆವೈರಿಹಲವು ನಾಸಿಕದ ಸಂಚಾರಿಯಾ ಹಾರದಲಿಬೆಳೆದ ದೇಹದ ಮೇಲೆ ಮಲಗಿ ನಿದ್ರೆಯಗೈವನಳಿನನಿಳಯಳ ರಮಣ ಜಲಜಾಕ್ಷಗೋವಿಂದನನುಜೆಯರಸ ಹಲವುಮಾತೇನು ಕೇಳ್ ತಲೆ ಮೇಲೊಂದುಕೊಂಬಿನ ಋಷಿಯ ಪಿತನ ಚರಣಕೆಕೆೈಂiÀ್ಯು ಮುಗಿದು ತಲೆಬಾಗಿ 3
--------------
ಗೋವಿಂದದಾಸ
ಪೃಕ್ಷದಶ್ವ ಪಾಲಿಪುದೆನ್ನ ಈ ದು |ರ್ವಿಷಯ ತ್ಯಜಿಸಿ ಶ್ರೀ ಕೃಷ್ಣನ್ನ ||ಅಸಮ ಪಾದಾಬ್ಜ ಭಜಿಸುವಂತೆ ಪ್ರತಿದಿನ |ಹಸನಾದ ಜ್ಞಾನ ಪ್ರೇರಿಸೊ ಭಕ್ತ ಸುರತರು ಪಪರಿಸರ ಕೃಷ್ಣೇಶ ಗಂಧ ವಹಸಿರಿವಲ್ಲಭ ಪದಾರವಿಂದಭೃಂಗ|ಪುರುಹೂತಮುಖ ಸುರವೃಂದ ವಂದ್ಯ |ಗಿರಿಜಾ ಪಾಲಕ ಶತಾನಂದ||ಆಹಾ||ಎರಡು ಹತ್ತೊಂದು ಸಾವಿರದಾರುನೂರ್ಜಪಸರುವ ಜೀವರೊಳಗೆ ಇರುಳು ಹಗಲು ಮಾಳ್ಪ 1ನಾಗಾದಿ ದಶರೂಪ ಧರ ತಲೆಬಾಗುವೆ ನಿನಗೆ ಉದಾರ ವಿಕ್ರ-ಮಾಘಕಾನನವೈಶ್ವಾನರ, ಹೇ ಸ-ದಾಗತಿ ಕುಜನ ಕುಠಾರಾ ||ಆಹಾ||ಮಾಗಧರಿಪುಹೊತ್ತು ಹೋಗುತಲಿದೆ ಈಗ |ಭಾಗವತರ ಸಂಗಜಾಗುಮಾಡದಲೀಯೋ 2ದೀನವತ್ಸಲ ಶ್ರೀ ಮಾರುತ ಯಾತುಧಾನ ಸಂಹರನೆ ಹೇಮಾತರಿಶ್ವ|ಪ್ರಾಣೇಶ ವಿಠಲನ ದೂತ ಚತು-ರಾನನ ಪದಯೋಗ್ಯವಾತ||ಆಹಾ||ಕ್ಷೋಣಿಯೊಳೆನ್ನಂಥ ಹೀನರಿಲ್ಲವೊ ಪಾಪ |ಕ್ಷೀಣಿಸಿ ಸಲಹೋ ಸುಶೇಣಾದಿಸೂದನ 3
--------------
ಪ್ರಾಣೇಶದಾಸರು
ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲಕಲ್ಯಾಣಿ ಪಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿನಿಂದುಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ ಬಂದೆ 1ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |ದೇವತೆಗಳಿಗೆಲ್ಲ ಅಧಿಕವಾದೆ ||ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|ದೇವನ ಶಿರದಿಂದ ಧರೆಗಿಳಿದು ಬಂದೆ 2ಜಹ್ನವಿನುದರದಿ ಪೂಕ್ಕ ಕಾರಣದಿಂದ |ಜಾಹ್ನವಿಯೆಂದು ನೀನೆನಿನೆಕೊಂಡೆ ||ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |ವನ್ನು ಪಾವನಮಾಡಿ ಪೊರೆಯಲು ಬಂದೆ 3ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |ಸುಟ್ಟು ಹೋಹುದು ಸಾಸಿರಜನ್ಮ ಪಾಪ 4ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|ದೊಳಗೆ ಸಿಲುಕಿ ಕಡುನೊಂದೆ ನಾನು ||ಹಲವು ಮಾತೇಕೆ ಶ್ರೀ ಪುರಂದರವಿಠಲನ |ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ 5
--------------
ಪುರಂದರದಾಸರು