ಒಟ್ಟು 21 ಕಡೆಗಳಲ್ಲಿ , 10 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವಿನಾಯಕ ಪಿನಾಕಿ ಸುತ ಜಗ ದೇಕನಾಥನ ನಾಭಿಮಂದಿರ ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ ಪರಾಕು ನುಡಿಯುವೆ ನೂಕಿ ವಿಘ್ನವ ಸಾಕು ನಮ್ಮನು ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1 ಕಾಣೆ ನಿನಗೆಣೆ ಮೂರುಲೋಕದಿ ಮಾನ್ಯನಾಗಿಹೆ ಸರ್ವರಿಂದಲು ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ ಧ್ಯಾನ ಮಾಡುವೆ ವಿಶ್ವತೈಜಸ ನನ್ನು ಮಹದಾಕಾಶಮಾನಿಯೆ ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2 ದೈತ್ಯಗಣಗಳಿಗಿತ್ತು ವರವು ನ್ಮತ್ತರನು ಮಾಡುತಲಿ ಶ್ರೀಪುರು ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ ಮಾತರಿಶ್ವನ ದಾಸರಿಗೆ ಹರಿ ಭಕ್ತಿ ವಿಷಯ ವಿರಕ್ತಿ ನೀಡುವೆ ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3 ವಕ್ರ ತುಂಡನೆ ನೀಗಿಸೆನ್ನಯ ವಕ್ರಬುದ್ಧಿ ವಿವೇಕನೀಡುತ ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ ರಕ್ತಗಂಧಪ್ರೀಯ ಸೋಮನ ಸೊಕ್ಕು ಮುರಿದೆಯೊ ಭೂಪ ಭಕ್ತಿಯ ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4 ರಂಗ ಮಂದಿರ ದಕ್ಷಿಣಸ್ಥವಿ ಹಂಗಗಮನನ ರಾಣಿ ರುಕ್ಮಿಣಿ ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು ಗಂಗೆಪಿತನನು ಸೇವಿಸಿದೆ ಮಾ ತಂಗಮುಖ ಮಹಕಾಯ ನಾರೀ ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5 ಮೊದಲು ಪೊಜೆಯ ನಿನಗೆ ವಿಹಿತವು ವಿಧಿ ಭವಾದ್ಯರ ಪೊರೆವ ವಿಶ್ವನು ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ ಮದದಿ ಬಿಡುವರಿಗೆಲ್ಲ ಖೇದವೆ ಒದಗಿ ಬರ್ಪುದು ಬಾಗಿ ಭಜಿಸುವೆ ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6 ವ್ಯಾಪ್ತ ದರ್ಶಿಯೆ ವಂದಿಸುವೆ ಪರ ಮಾಪ್ತ ಹರಿ ಭಕ್ತರಿಗೆ ನೀನಿಹೆ ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ ಆರ್ತನಿಹೆ ಬಹುಮೂಢ ಖರೆವೇ ದೋಕ್ತಮರ್ಮವ ಭಾಸಗೈಸಿ ಕೃ ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7 ಬರೆದೆ ಭಾರತ ವೇದವ್ಯಾಸರ ಕರುಣದಿಂದಲಿ ಭಕ್ತಿಯೋಗಿಯೆ ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ ದುರಳ ಗಣಗಳ ಕಾಟತಪ್ಪಿಸಿ ಹರಿಗೆ ಸಮ್ಮತವಿಲ್ಲ ದೆಡೆಯಲಿ ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8 ಜಯಜಯತು ವಿಶ್ವಂಭರ ಪ್ರೀಯ ಜಯಜಯವು ಮೈನಾಕಿತನಯಗೆ ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ ಜಯಜಯವು ಸದ್ವಿದ್ಯೆಕೋಶಗೆ ಮೀನಾಂಕ ಭ್ರಾತೃವೆ ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9
--------------
ಕೃಷ್ಣವಿಠಲದಾಸರು
ಸರ್ವ ಸ್ವತಂತ್ರನು ಹರಿ ನಿಜವಾದ ದಾರಿ ಪ. ವಿಧಿ ಶೌರಿ ವಿಭೂತಿ ವಿಹಾರಿ 1 ತತ್ವೇಶ ನಿಚಯಸ್ತುತ್ಯ ಮುರಾರಿ ಸತ್ಯಾತ್ಮಕ ನಿರ್ವಿಕಾರಿ 2 ಲಕ್ಷ್ಮೀನಾರಾಯಣ ನಿರ್ಗುಣ ಸುವಿಲಕ್ಷಣ ದೀನೋದ್ಧಾರಿ ಮೋಕ್ಷಾಶ್ರಯ ಕಲಿಕಲುಶನಿವಾರಿಸಾಕ್ಷಿರೂಪ ಗಿರಿಧಾರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಕರ್ತ ನಾನಲ್ಲೆಂದು ಹಿರಿಯರಾಡಿದ ಮಾತು ಅರಿ ಜೀವೋಪಿ ಕರ್ತನೆಂಬ ವಿರೋಧ ಪ ಸಿರಿ ಅರಸ ತತ್ವೇಶರ ಕೈಯೊಳು ಚರಿಪಾಧೀನ ಜೀವನಲ್ಲವೆ ಪರಮ ನಿಷ್ಕ್ರಿಯ ನಾ ಹೀನ ಮನವೆ ಅ.ಪ ಜಲಾಗ್ನಿ ಸ್ತಂಭ ಜಪ ಕಲಿತ ಮಾತ್ರಕೆ ಪ್ರಾಣಿ ನಿಲಬಹುದೆ ಅನಲ ಜ್ವಾಲೆಯೊಳು ಮ್ಯಾಲೆ ಸುಖದಾಸೆಯಿಂದ ಹಲವು ಕರ್ಮಾಚರಿಸಿ ಗೆಲಬಹುದೆ ನಿಲಯ ಹರಿಕರ್ತನೆಂದ ನುಡಿಗೆ 1 ಬಿಡಿಬಾಯ ಮಾತಿಗೆ ಪೊಡವಿಪ ಒಪ್ಪುವುದಾದರೆ ಪಡುವದ್ಯಾಕೆ ತದ್ಧಿತಪಃ ಪ್ರಮಾಣ ಬಿಡುವುಧ್ಯಾಗೆ ಶ್ರುತಿ ಸ್ಮøತಿ ಹರಿ ಆಜ್ಞೆ ಕಾಯ ಏಕವಾಗೋ ತನಕ 2 ಜ್ಞಾನೇಚ್ಛಾಕ್ರಿಯ ಶಕ್ತಿ ಮಿನುಗುವ ಜೀವಕ್ಕೆ ನಿತ್ಯ ಸ್ವಭಾವದಲ್ಲೆ ಜ್ಞಾನಿಗೆ ಕೊಡುವ ಯಥೇಷ್ಟಾಚರಣೆ ಏನೇನು ಕೂಡದು ಶ್ರವಣಾಧಿಕಾರಿಗೆ 3 ನಾನು ನನ್ನದು ಎಂಬ ಜ್ಞಾನ ಅನುಗಾಲ ಇರಲಾಗಿ ನೀನು ನಿನ್ನದು ಎಂಬ ವಂಚನೆಯಲ್ಲವೆ ಹೀನ ಬಿಡದು ಇದರಿಂದ ಅನುಮಾನ ಮಾಡಸಲ್ಲ ತನ್ನ ಕ್ರಿಯ ಅನ್ಯಕ್ರಿಯದಂತಾಗೋತನಕ ಮನವೆ 4 ಜ್ಞಾತಾಜ್ಞಾತ ಕರ್ಮದೊಳು ಜ್ಞಾತಾನುಷ್ಠಾನ ವಿಶೇಷ ಪೀತನಾಹ ಶ್ರೀಶ ತಾನು ಕರ್ಮ ನಿಷ್ಪಲವಲ್ಲವು ಜ್ಞಾತ ವಿಜಯ ರಾಮಚಂದ್ರವಿಠಲ 5
--------------
ವಿಜಯ ರಾಮಚಂದ್ರವಿಠಲ
ಸರ್ವ ಸ್ವತಂತ್ರನುಹರಿನಿಜವಾದ ದಾರಿಪ.ಸರ್ವಜೀವ ಹೃದಯಾಕಾಶವಿಧಿಶರ್ಮಾದಿ ಸುರ ಕೈವಾರಿಸರ್ವ ನಾಮಕಸದೋದಿತಶೌರಿಸರ್ವವಿಭೂತಿವಿಹಾರಿ1ಸತ್ಪಾದಿಗುಣ ಪ್ರವರ್ತನಕಾರಿ ಸುಹೃತ್ತಮ ದುರಿತಾಪಹಾರಿತತ್ವೇಶ ನಿಚಯಸ್ತುತ್ಯ ಮುರಾರಿ ಸತ್ಯಾತ್ಮಕ ನಿರ್ವಿಕಾರಿ 2ಲಕ್ಷ್ಮೀನಾರಾಯಣ ನಿರ್ಗುಣ ಸುವಿಲಕ್ಷಣ ದೀನೋದ್ಧಾರಿಮೋಕ್ಷಾಶ್ರಯ ಕಲಿಕಲುಶನಿವಾರಿಸಾಕ್ಷಿರೂಪ ಗಿರಿಧಾರಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ