ಒಟ್ಟು 20 ಕಡೆಗಳಲ್ಲಿ , 17 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು ಹೆಚ್ಚುತಲೆ ವೋಗುತಿದೆ ಪೇಳಲೇನು ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1 ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ ತತ್ತರಿಸಿ ಕಳವಳಗೊಳಿಸುತಲಿದೆ ಉತ್ತಮರಾ ಜ್ಞಾನವೆಂಬುತ್ತಾರವನೆ ಕೊಟ್ಟು ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2 ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು ಎಂದು ದೊರೆವುದೋ ದ್ವಿಜಾಗ್ರಕುಲವು ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3
--------------
ಕದರುಂಡಲಗಿ ಹನುಮಯ್ಯ
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
--------------
ಪುರಂದರದಾಸರು
ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇಪಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
--------------
ಪುರಂದರದಾಸರು
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5
--------------
ಪ್ರಾಣೇಶದಾಸರು
ಬಗಳಾ ಬ್ರಹ್ಮವಾಗಿ ತೋರುತಿದೆ ನೀ ಕಣ್ಮುಚ್ಚಿ ತೆರೆಯೆಬಗಳಾ ಬ್ರಹ್ಮವಾಗಿ ತೋರುತಿದೆ ನೀ ಬಗೆ-ಬಗೆಯ ಜ್ಯೋತಿಯ ಬೆಳಕನು ಕಾಣುತಝಗ ಝಗಿಸುತ ಎರಕದ ಪುತ್ಥಳಿಯಂತೆಪಉಣ್ಣುವಲ್ಲಿ ಉಡುವಲ್ಲಿ ಉಚಿತಂಗಳಲ್ಲಿಮಣಿವಲ್ಲಿ ಏಳುತಿರುವಲ್ಲಿ ಮುಂದಣ ಹೆಜ್ಜೆಯಲಿಘಣ ಘಣ ಘಂಟಾಸ್ವರವನೆ ಕೇಳುತತ್ರಿಣಯನಳಾಗಿ ಒಳಗೆ ಹೊರಗೆ1ತಾಗುವಲ್ಲಿ ತಟ್ಟುವಲ್ಲಿ ತತ್ತರವಾದಲ್ಲಿಹೋಗುವಲ್ಲಿ ನಿಲ್ಲುವಲ್ಲಿ ಶಯನದಲ್ಲಿ ನಿದ್ದೆಯಲ್ಲಿನಾಗಸ್ವರದ ಧ್ವನಿಯಿಂಪನೆ ಕೇಳುತಯೋಗಾನಂದದಿ ಓಲಾಡುತಲಿ2ಇಹಪರವೆರಡದು ಹೋಗಿ ಇರುಳು ಹಗಲನೆನೀಗಿಮಹಾಜೀವವಾಸನೆಗತವಾಗಿ ಮತಿಯಿಲ್ಲವಾಗಿಬಹು ಬೆಳಗಿನ ಬೆಳದಿಂಗಳ ಬಯಲಲಿಮಹಾ ಚಿದಾನಂದ ಬ್ರಹ್ಮಾಸ್ತ್ರವಾಗಿ3
--------------
ಚಿದಾನಂದ ಅವಧೂತರು