ಒಟ್ಟು 35 ಕಡೆಗಳಲ್ಲಿ , 14 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕದವರ ತಳ್ಳಿ ಕಾಲಿಗೆಸುತ್ತಿದ ಬಳ್ಳಿ ಶೋಕಮಯಸಂಕೋಲೆ ಸಾಕು ಹರಿ ಕಡಿ ಕೀಲಿ ಪ ದಮ್ಮನಿದ್ದರೆ ಠೊಣ್ಯನೆಂಬುವರು ತೆಳ್ಳಗಿದ್ದರೆ ಬಡಕನೆಂಬುವರು ರಮ್ಯನುಡಿಯೆ ಬಾಯ್ಬಡಕನೆಂಬುವರು ಸುಮ್ಮನಿದ್ದರೆ ಗುಸುಕನೆಂಬುವರು 1 ಜಮ್ಮಾಸಿ ಉಂಡರೆ ಜೋಗಿಯೆಂಬುವರು ಕಮ್ಮಿ ಉಂಡರೆ ರೋಗಿಯೆಂಬುವರು ದಿಮ್ಮಾಕೆಂಬುವರು ಜಳಜಳವಿದ್ದರೆ ಸಮ್ಮತಬಡರು ಹೊಲಸುಕಂಡರೆ 2 ಮಾಡಿ ಉಂಡರೆ ನೋಡಿ ಸಹಿಸರು ಬೇಡಿ ಉಂಡರೆ ಹೇಡಿಯೆಂಬುವರು ಗಾಢಮುಕ್ತಿಪದ ಕೊಡುವ ಶ್ರೀರಾಮನ ಹಾಡಿ ಪಾಡಿದರೆ ನಿಂದೆ ಮಾಡುವರು3
--------------
ರಾಮದಾಸರು
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ
ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1 ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2 ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3 ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4 ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5 ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6 ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7
--------------
ವ್ಯಾಸರಾಯರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು
ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು
ಎತ್ತೋದೆಯಮ್ಮ ನಂಗನ್ನೆತ್ತಿಕೊ ಅಮ್ಮ ಬಲುಹೊತ್ತು ಹತ್ತು ಬಂದೇನೆ ಇತ್ತೆಅಮ್ಮಿತಿಂದೇನೆಪ.ತುತಿಬಾಯಿ ವಂಗ್ಯಾವೆ ಬಿತಿ ಆವು ವಾಕಿಕ್ಕಿ ಬತ್ತಾವೆಅತಿ ಆವು ಉಪ್ಪುಕಾಯಿ ಅಮ್ಮ ಮಮ್ಮೊಲ್ಲೆಉತ್ತತ್ತಿ ಹನ್ನು ಬೆನ್ನೆ ತಿಂದೇನೆ 1ಕಲ್ಲ ಕಿತ್ನ ಎಂತಾಡೆ ಬಂಗಾಡ ಬುಲ್ಲಿ ಬೆಲ್ಲ ತಿಂತಾಡೆಗಲ್ಲ ಕತ್ತಿಉಮ್ಮುಕೊತ್ತು ಹಲ್ಲು ನತ್ತುತಾಡೆಕೊಲ್ಲಬಾಲದೆ ದೂತ್ತ ಗೊಲ್ಲತೇಲನ 2ಎಕ್ಕೋ ಬಾ ಎಂಬ್ಯಾಡೆ ಬಿಸಿ ನೀಲು ಬುಕಶ್ಶಿ ಮಾಬ್ಯಾಡೆಸಕ್ಕರಿ ಚಿನ್ನಿಪಾಲು ಬತ್ತಲ ತುಂಬ ಕೊಡುಬಕ್ಕು ಮರಿಗಳ ಕೂಡ ಉಂಡೇನೆ 3ನತ್ತೆತ್ರ ತಂದುಕೊಡೆ ಚಂದಮಾಮನಿತ್ತಿತ್ತ ಕಡತಾಡೆಪುತ್ತಮಿಲ್ಲಿ ತುಂಬ ವಲ್ಲೆ ಮುತ್ತು ಕೊತ್ತರೆ ಶನ್ನಬುತ್ತಿ ತುಂಬ ಹನ್ನು ತಂದು ತಿಂದೇನೆ 4ಲಾಲಿಮಾಡಿಸಬ್ಯಾಡೆ ಕಿತ್ತನ್ನ ಮ್ಯಾಲೆ ದೋಗುಲ ಪಾಡೆಬಾಲ ಬವು ಕಂಡ್ಯನಗಂಜಿಕಿ ಬತ್ತದೆದೂಲ ಎನ್ನ ಬಿತ್ತು ನೀ ವೋಗಬ್ಯಾಡೆ 5ಉಗ್ಗು ಕೂಸು ಬಾಯಂಗೆ ಬಚ್ಚನಿಗೆ ಮಗ್ಗಮ್ಮಿ ಕೂಯಂಗೆಕೊಗ್ಗ ಮೀಸಿ ಜೋಗಿಗೆ ಕೋಬ್ಯಾಡೆ ಬಾಗಿಲಹೊಗ್ಗೆ ಹೋಗದಿಲ್ಲ ಜತ್ತಿಗನಾಣೆ 6ಕೂಚಿಗಮ್ಮಿ ಕೋಬ್ಯಾಡೆ ನಂಗಂಗಚ್ಚತಾನೆ ಅಮ್ಮ ನೋಡೆಪೆಚನ್ನ ವೆಂಕತ ಕಿತ್ತಪ್ಪ ಕನ್ನಡೀಲಿನಚುನಗಿ ನಗುತಾನೆ ಕಡತಾಡೆ 7
--------------
ಪ್ರಸನ್ನವೆಂಕಟದಾಸರು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು
ಜಲದನೀಲಗಾತ್ರ ಏತರ ಚೆಲುವ ರುಕ್ಮಿಣಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.ಉದಕದೊಳಗೆ ವಾಸವೇಕೆ ಸದನವಿಲ್ಲವೆ |ಸುದತಿಸುಡುವ ಕಾಡಿಗಿಂತ ಲೇಸು ಅಲ್ಲವೆ1ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ 2ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ 3ಕರುಳ ಕೊರಳ ಸರವು ಏಕೆ ಸರವು ದೊರಕದೆ |ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ 4ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ 5ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ 6ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |ಭೂತಗಣಗಳಾಳುವುದಕೆ ಭೀತಿ ಇಲ್ಲವೆ 7ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ 8ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |............... ಶಾಪ ಹತ್ತಲಿಲ್ಲವೆ 9ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ 10
--------------
ಪುರಂದರದಾಸರು
ಜೋಗಿ ಪಾರ್ಥ ನೀನಾದೆ ಬಹುಭೋಗಿಕುರುರಾಯರ ಮಾಡಿದ ಹೆಸರೆಲ್ಲನೀಗಿ ಪ.ಚಿತ್ರ ಕುಸುಮೆಯರ ಬೆರದಿಇಂಥ ಉತ್ತಮ ಸತಿಯರ ಅತ್ಯಂತ ಮರೆತಿಸತ್ಯ ವಾಕ್ಯಗಳೆಲ್ಲ ತೊರೆದಿಇದಕೆ ಹತ್ತೂರು ನಗಲು ಕೋಪವೆ ಭರದಿ 1ನೀತಿಯಿಲ್ಲವೊ ನಿನ್ನದೊಂದುದೇವ ಜಾತಿಗೆ ಉತ್ತಮನೆಂದು ಖ್ಯಾತಿಯೊನಿಂದುಕಪೋತನ ತಿಂದವನೆಂದುಒಂದು ಮಾತು ಹೇಳಲು ಅತಿ ಕೋಪವೆ ಬಂದು 2ಅತ್ಯಂತ ನಿಷ್ಕರುಣಿ ನೀನುದೇಹ ಕಿತ್ತು ಕೊಟ್ಟನಾಗ ಶಿಬಿರಾಯ ತಾನುತೃಪ್ತನಾಗÀದಿರೊ ನೀನುಇದಕೆ ಅತ್ಯಂತ ನಕ್ಕ ರಮೇಶ ತಾನು 3
--------------
ಗಲಗಲಿಅವ್ವನವರು
ಜೋಗಿಯ ಕಂಡೆಪರಮಯೋಗಿಯ ಕಂಡೆಭೋಗಿಶಯನಗಂಬೂರ ಚರ್ಚಿತಾಂಗ ವೆಂಕಟೇಶಪ.ವೇದವ ಕದ್ದೊಯ್ದವನ ಕೊಂದ ಜೋಗಿಯ ಕಂಡೆಭೂಧರಧರನಾದ ಜೋಗಿಯ ಕಂಡೆಭೇದಿಸಿ ಪಾತಾಳ ಪೊಕ್ಕು ಗರ್ಜಿಪ ಜೋಗಿಯ ಕಂಡೆಆದರದಿ ಕಂದನ ನುಡಿಯನಾಲಿಸಿ ಬಂದ 1ಅಂಗುಟದಿ ಬೊಮ್ಮಾಂಡವ ಸೀಳಿದ ಜೋಗಿಯ ಕಂಡೆಹೆಂಗಳ ತಲೆಯನರಿದ ಜೋಗಿಯ ಕಂಡೆಅಂಗನೆಗೋಸುಗಾರಣ್ಯ ಸಂಚಾರಿ ಜೋಗಿಯ ಕಂಡೆಪೊಂಗೊಳಲನೂದಿ ಮೂಜಗವನು ಮೋಹಿಸುವ 2ಕನ್ಯೇರ ವ್ರತಗೇಡಿ ದಿಗಂಬರ ಜೋಗಿಯ ಕಂಡೆಉನ್ನತ ವಾಜಿಯೇರಿದ್ದ ಜೋಗಿಯ ಕಂಡೆಪನ್ನಗಾದ್ರಿವರದ ಪ್ರಸನ್ನವೆಂಕಟೇಶನೆಂಬತನ್ನ ನಂಬಿದವರನು ಬಿಡದೆ ಪಾಲಿಸುವ 3
--------------
ಪ್ರಸನ್ನವೆಂಕಟದಾಸರು
ಬಾತೆಗೆ ಬಾರದ ವಸ್ತು ಬಹಳಿದ್ದರೇನುಹೋತಿನ ಕೊರಳೊಳಗೆ ಮಾಲೆಯಿದ್ದರೇನು ? ಪ.ತಾನು ಉಣ್ಣದ ದ್ರವ್ಯ ತಾಳೆಯುದ್ದ ಇದ್ದರೇನು?ದಾನವಿಲ್ಲದ ಮನೆಯು ದೊಡ್ಡದಾದರೇನು ?ಹೀನ ಕುಲದವಂಗೆ ಹಿರಿತದ ಬಂದರೇನುಶ್ವಾನನ ಮೊಲೆಯೊಳು ಹಾಲಿದ್ದರೇನು 1ವಾದಿಸುವ ಮಗನು ಒಯ್ಯಾರದಲಿದ್ದರೇನುಕಾದುವಸತಿ ಕೆಲದೊಳಿದ್ದರೇನು ?ಕ್ರೋಧವನು ಅಳಿಯದ ಸೋದರನು ಇದ್ದರೇನುಮಾದಿಗರ ಮನೆಯಲಿ ಮದುವೆ ಆದರೇನು 2ಹೋಗದೂರಿನ ಹಾದಿಕೇಳಿ ಮಾಡುವುದೇನುಮೂಗನ ಕಾಡ ಏಕಾಂತವಿನ್ನೇನು ?ಯೋಗಿ ಶ್ರೀ ಪುರಂದರವಿಠಲನ ನೆನೆಯದವಯೋಗಿಯಾದರೆ ಏನು ಜೋಗಿಯಾದರೆ ಏನು ? 3
--------------
ಪುರಂದರದಾಸರು