ಒಟ್ಟು 21 ಕಡೆಗಳಲ್ಲಿ , 15 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ
ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ ಪನೆರೆಯವರ ಮೈಸಿರಿಯ ನೋಡಿ 'ರಿಯರ ನಡೆಯಮರೆತು ಧನದಲಿ ಮತಿಯನಳಿದೆಯಾಕರಕೊಂಡು ನರತತಿಯ ಕೆಣಕಿುವರ ಸಹನೆಯಪರಿಪಾಕದಿಂ ನೋಡಿ ಬಂದ ಪೀಡನೆಯ 1'ತವರೆಂಬಂತಿರುವ 'ಂಸೆಯನಾಳೋಚಿಸುತ ಜೊತೆಯೊಳಾರೋಗಿಸುತ ಜಾರಿ ನಿಲ್ಲುತಸತಿ ಸುತಾದ್ಯರ ಭೋಗಸಾಧನವ ಕೆಡಿಸುತ್ತಪತಿತರಿಂದರಸುತ್ತ ಪಿಡಿಸಲು[ಕಾ]ಯುತ 2ಪಾದುಕಾರ್ಚನೆಯನ್ನು ಪಾಲಿಸಿದ ಬಗೆಯನುಬೋಧಿಸುತ ಚಿತ್ತವನು ಬೆದರಿಸುವದೆನೀ ದಯಾಸಾಗರನು ನೀಚರುಪಹತಿಯನುಸಾದರದಿ ಬಿಡಿಸಿನ್ನು ಸಾಕು ಮುನಿಸನು 3ಕಾಲ ದೇಶವ ಕಂಡು ಕಾಪಥವ ಕೈಕೊಂಡುಬಾಳಿದರಳು ಕೂತುಂಡು ಭಕ್ತಿ ಮುಂಕೊಂಡುಊಳಿಗವ ಬೆಸಗೊಂಡು ಊರೊಳಗೆ ತಿರುಕೊಂಡುಬಾಲ ಇರಲರಿದಾಡುಬಡಿಯೆ 'ಡುಕೊಂಡು 4ಮಂಗಳಾರ್ತಿಯ ಸೇವೆ ಮಾಣುತಿಹುದೇಗೈವೆಕಂಗಳಿಗೆ ನೀ 'ಭುವ ಕಾಣಿಸಿದೆ ಸುಖವೆತಿಂಗಳೆನಿತಾದರುವೆ ತಿರಿದೂಳಿಗಕೆ ತರುವೆಸಂಗಿನವರೊಳಗಿರುವೆ ಸತತವೆಲೆ ಗುರುವೆ 5ತಪ್ಪಿಗನುಸಾರವಾಗಿ ತಿಳಿಯೆ ಶಿಕ್ಷಿಪೆಯಾಗಿಒಪ್ಪದ ಪದವ ನೀಗಿಪೊಳಿತಾಗಿತೆಪ್ಪಗೂಳಿಗಕಾಗಿ ತಗುಲಿಸುವೆ ನೀನಾಗಿಸುಪ್ರಸನ್ನತೆಯಾಗಿ ಸುಖಬಡುವರಾಗಿ 6ದುರುಳರಹುದಹುದಿವರು ದೂರಿಗೊಳಗಾದವರುಚರಣಾಬ್ಜ ಸೇವಕರು ಚಾರುಮತಿಯವರುದುರಿತ ಶತವಡಿಸಿದರು ದಾಟುವರು ನಿನ್ನವರುಕರುಣಾಬ್ಧಿ ನೀನಿದಿರುಗಾಣೆ ಸುಖಮಯರು7ಸೆರೆಯ ಪರಿಹರಿಸಿನ್ನು ಸುಖಿಸು ಸದ್ಭಕ್ತರನುಗುರು ಸುತರ ಚರಣವನು ಕಂಡು ಬದುಕುವೆನುಬರಿದೆ ಬೇಡುವೆ ನಾನು ಪಾಲಿಸುವ 'ಭು ನೀನುಶರಣಾಗತಪ್ರಿಯನು ಶಾಂತಿದಾಯಕನು 8ಧರೆಯ ಜನರಜ್ಞತೆಯ ದ'ಸಿ ನಿಜ ಸದ್ಗತಿಯಕರೆದೀವ ಗುರುರಾಯ ವಾಸುದೇವಾರ್ಯಕರುಣ ನಾಗನಗರಿಯ ಸ್ಥಿರಗೈದು ಸುವಸತಿಯಒರೆದೆ ಭವ'ಜಯ ವೇದಾಂತಪದ್ಧತಿಯ 9
--------------
ವೆಂಕಟದಾಸರು
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಶ್ರೀನಿವಾಸ ಜಗನ್ನಿವಾಸ ಪ ದೀನ ರಕ್ಷಕ ನಿಖಿಲ ಮಾನವರಮಾನಾಭಿಮಾನ ದೊಡೆಯನು ನೀನೇಯಲ್ಲದಿಲ್ಲಾ ಅ.ಪ. ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣು ಹೊಕ್ಕೆನನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವಸೀಳಿ ರಕ್ಷಿಸಿದೆ ಗಜವಾ-ದೇವ 1 ಹಿಂದೆ ನಾನಾನ್ನಗಿರಿಯಿಂದ ಬಹದಾರಿಯೊಳು ಸಂದುಗೆಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂದು ಜನಕೆಲ್ಲಿನೀ ಬಂದು ಬೆಳಕನು ತೋರಿ ಮಂದೆಗೂಡಿದೆ ಕೃಷ್ಣಾ 2 ಇಂದು ನಿಜ ಸತಿಯುನೊಂದಳುಬ್ಬಸರೋಗದಿಂದ ಗಾಳಿಯದೀಪದಂದಮಾಗಿ/ ನಂದಿಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲೀಗ ಬಂದು ಸಲಹಿದೆ ತಂದೆ 3 ತುರುಗಾಯ್ವರಸುಗಳನು ಮರಳಿಪಡೆದೆ ನರಪೌತ್ರನನು ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕುರು ವರವಿಭೀಷಣ ತಾಪಸರನುಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರಗಿರಿಯೊಳಗೆ ನೆಲಸಿರುವ ವರದ ವಿಠಲ ರಾಯ 5
--------------
ಸರಗೂರು ವೆಂಕಟವರದಾರ್ಯರು