ಒಟ್ಟು 22 ಕಡೆಗಳಲ್ಲಿ , 16 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ತುಂಡಾದ ಹನುಮನ ನೋಡಿರÉ ಪ. ಮಾರುತಿಯ ಮರ್ಮವಿದರಿಂದರಿಯರೆ ಅ.ಪ. ಮೊದಲ ಕಟ್ಟೆಯ ದಡದಿ ಮೊದಲಿದ್ದ ಹನುಮನ ವಿಧಿವಶದಿ ಖಳರು ಕಿತ್ತೊಗೆಯೆ ಮದದಿ ಮೊದಲು ಕಟ್ಟೆಯು ನಿಲದೆ ಒಡೆದು ಪರಿಯಲು ತುಂಗೆ ಅದರೊಳಡಗಿದ್ದ ಕೆಲಕಾಲವೀ ರಾಯ 1 ದೇವರಿಲ್ಲದ ಭವನ ಕಂಡು ನಿಂದು ತಾವೆ ಸ್ಥಾಪಿಸುವೆವೆಂಬನಿತರೊಳು ಸ್ವಪ್ನದಲಿ ಪಾವಮಾನಿಯು ತನ್ನ ಇರುವು ತೋರಿದನೊ 2 ಬರುತ ಕಟ್ಟೆಯ ದಿಡಗಿನಲ್ಲಿ ನಿಂದು ಕರೆವಡೆ ಬರಲು ಮೂರು ತುಂಡು ಹನುಮರಾಯ ತರುತ ಸ್ಥಾಪಿಸಿ ಬಂಧಿಸಲು ದ್ವಾರವಾರದಲಿ ಕರನ್ಯೂನ ಸಾಕಾರ ಸರಿಯಾದನೀತ 3 ಮೂರು ಯುಗದಲಿ ತಾನು ಮೂರು ರೂಪವ ತಾಳಿ ಮೂರು ಮೂರ್ತಿಯ ಭಜಿಸಿ ಮೂರು ಆಶ್ರಮದಿ ದುರುಳ ಮತಗಳ ಮುರಿದು ಮೂರುದಶ ಏಳು ಗ್ರಂಥಗಳ ಸ್ಥಾಪಿಸಿದ 4 ಮೂರು ಗುಣಬದ್ಧ ಮೂರು ದೇಹದಿ ನೆಲಸಿ ಮೂರು ವಿಧ ಜಪದಿಂದ ಮೂರ್ಗತಿಯನೀವ ಮೂರು ಸ್ಥಾನದಿ ಮೂರು ಕೋಟಿರೂಪವ ಧರಿಸಿ ಮೂರು ಲೋಕದಿ ಮೆರೆವ ಮಾರುತಿಯ ಚರ್ಯ 5 ಮೂರು ನಾಡಿಯ ಮಧ್ಯೆ ಮೂರೈದುದಲ್ಲಿ ತೋರುವೊ ಹರಿರೂಪ ತೋರಿಸುವನು ಮೂರು ಅವಸ್ಥೆಗಳ ವಿೂರಿದ ಜಾಗ್ರತನು ಮೂರು ಕಾಲದಿ ಜೀವರನು ಕಾಯುವನ 6 ಮೂರು ಮಾರ್ಗಗಳಿಂದ ಮಾರುತಿಯ ತೋರುವೊ ದಾರಿಯಿಂದಲಿ ಹರಿಯ ಸಾರಿ ಭಜಿಸೆ ಸೇರಿಸುವ ಗೋಪಾಲಕೃಷ್ಣವಿಠ್ಠಲನ ಪುರವ ತಾರಿಸುವ ಭವವನಧಿ ಮೊದಲಗಟ್ಟೇಶ7
--------------
ಅಂಬಾಬಾಯಿ
ಶರಣು ದೇವರ ದೇವ ಶರಣು ಸುರವರ ಮಾನ್ಯ ಶರಣು ಶತಕೋಟಿ ಲಾವಣ್ಯ | ಲಾವಣ್ಯ ಮೂರುತಿಯೆ ಶರಣೆಂಬೆ ಸ್ವಾಮಿ ಕರುಣೀಸೊ 1 ಆದಿನಾರಾಯಣನು ಭೂದೇವಿ ಮೊರೆ ಕೇಳಿ ಯಾದವರ ಕುಲದಲ್ಲಿ ಜನಿಸೀದ | ಜನಿಸೀದ ಕೃಷ್ಣ ಪಾದಕ್ಕೆ ಶರಣೆಂಬೆ ದಯವಾಗೊ 2 ನಿನ್ನ ವಿಸ್ಮøತಿ ದೋಷ ಜನ್ಮ ಜನ್ಮಕ್ಕೆ ಕೊಡದಿರು ಎನ್ನ ಕುಲ ಬಂಧು ಎಂದೆಂದು |ಎಂದೆಂದು ನಿನಗಾನು ಬಿನ್ನೈಪೆ ಬಿಡದೆ ಸಲಹಯ್ಯ 3 ವಸುದೇವನಂದನನ ಹಸುಗೂಸು ಎನಬೇಡಿ ಶಿಶುವಾಗಿ ಕೊಂದ ಶಕಟನ್ನ | ಶಕಟನ್ನ ವತ್ಸಾಸುರನ ಅಸುವಳಿದು ಪೊರೆದ ಜಗವನ್ನ 4 ವಾತರೂಪಿಲಿ ಬಂದ ಆ ತೃಣಾವರ್ತನ್ನ ಮಡುಹಿ ಮೊಲೆಯುಣಿಸಿದಾ ಪೂತನಿಯ ಕೊಂದ ಪುರುಷೇಶ 5 ನಿನ್ನ ಸ್ಮøತಿಗಿಂತಧಿಕ ಪುಣ್ಯ ಕರ್ಮಗಳಿಲ್ಲ ನಿನ್ನ ವಿಸ್ಮøತಿಗಿಂತ | ಅಧಿಕವಾದ ಮಹಪಾಪಗಳು ಇನ್ನಿಲ್ಲ ಲೋಕತ್ರಯದೊಳು 6 ಅಂಬುಜಾಂಬಕಿಗೊಲಿದ ಜಂಭಾರಿಪುರದಿಂದ ಕೆಂಬಣ್ಣದ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ ರಾಂಬುಜವೆ ನಮ್ಮ ಸಲಹಲಿ 7 ದೇವಕೀಸುತನಾಗಿ ಗೋವುಗಳ ಕಾದದೆ ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೋನೆ 8 ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ ಜಗದಿ ಜೀವರನ ಸೃಜಿಸುವಿ | ಸೃಜಿಸಿ ಜೀವರೊಳಿದ್ದು ಜಗದನ್ಯನೆಂದು ಕರೆಸುವಿ 9 ಕರಣನೀಯಾಮಕನೆ ಕರುಣಾಳು ನೀನೆಂದು ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ ಮರುಳು ಮಾಡುವರೆ ನೀಯೆನ್ನ 10 ಕುವಲಯಾಪೀಡನನು ಲವಮಾತ್ರದಿ ಕೊಂದು ಶಿವನ ಚಾಪವನು ಮುರಿದಿಟ್ಟಿ | ಮುರಿದಿಟ್ಟಿ ಮುಷ್ಟಿಕನ ಬವರದಲಿ ಕೆಡಹಿ ಬಲಿಗೈದೆ 11 ಗಂಧವಿತ್ತಬಲೆಯೊಳ ಕುಂದನೆಣಿಸದೆ ಪರಮ ಸುಂದರಿಯ ಮಾಡಿ ವಶವಾದಿ | ವಶವಾದಿ ನಮ್ಮ ಗೋ ವಿಂದ ನೀನೆಂಥ ಕರುಣಾಳು 12 ವಂಚಿಸಿದ ಹರಿಯೆಂದು ಪರಚಿಂತೆಯಲಿ ಕಂಸ ಮಂಚದ ಮ್ಯಾಲೆ ಕುಳಿತಿದ್ದ | ಕುಳಿತಿದ್ದ ಮದಕರಿಗೆ ಪಂಚಾಸ್ಯನಂತೆ ಎರಗೀದೆ 13 ದುರ್ಧರ್ಷ ಕಂಸನ್ನ ಮಧ್ಯರಂಗದಿ ಕೆಡಹಿ ಜನನೋಡೆ ದುರ್ಮತಿಯ ಮರ್ದಿಸಿದ ಕೃಷ್ಣ ಸಲಹೆಮ್ಮ 14
--------------
ಜಗನ್ನಾಥದಾಸರು
ಸೀತಾಮನೋಹರ ಬಾರೊ | ಸ್ವಾಮಿ ಪ ಸೀತಾಮನೋಹರ ಶ್ರಿತ ಲೋಕೋದ್ಧಾರ ರಘು | ದಾತ ಬಾರೋ ಅ.ಪ ಅಂಬುಜ ಲೋಚನ ಬಾರೋ 1 ನೀನು ಮಾಡಿಸಿದಂತೆ ನಾನು ಮಾಡುವೆನೆಂಬಸು | ಜ್ಞಾನವಪಾಲಿಸೆ ಬಾರೊ 2 ಅಂತಃ ಪ್ರೇರಕನಾಗಿ ನಿಂತು ಜೀವರನೆಲ್ಲ ಸಂತೈಸುತಿಹ ದೇವ ಬಾರೋ 3 ಬಾಗಿ ನಮಿಸುತಿರ್ಪ ಭಾಗವತರ ಭವ- ರೋಗಕ್ಕೆ ವೈದ್ಯ ನೀನೆ ಬಾರೊ 4 ಪರಮ ನಿಷ್ಕಾಮಿಯಾದ ಮರುತಾತ್ಮಜಾಂತರ್ಗತ ಶ್ರೀ ಗುರುರಾಮ ವಿಠಲಬೇಗ ಬಾರೋ ಸ್ವಾಮಿ 5
--------------
ಗುರುರಾಮವಿಠಲ
ಸ್ವಾತಂತ್ರ್ಯವೆನಗುಂಟೆ ಸರ್ವಾಂತರ್ಯಾಮಿ ಪ ನಿಂತು ನೀ ನಡೆಸುವಿಯೊ ಜೀವಾಂತರ್ಯಾಮಿ ಅ.ಪ ಜೀವ ಸ್ವರೂಪದಲಿ ಜೀವನಾಕಾರದೊಳಿದ್ದು ಅನಾದಿಕರ್ಮ ಜೀವರಿಗೆ ಪ್ರೇರಿಸಿ ಜೀವಕೆ ಚೇತನ ಕೊಟ್ಟು ಜೀವಕ್ರಿಯೆಗಳನ- ಭಿವ್ಯಕ್ತಿ ಮಾಡಿ ಸತತ ಪೊರೆಯುವ ಕರುಣಿ 1 ದತ್ತಸ್ವಾತಂತ್ಯ ತನಗಿತ್ತಿಹನು ದೇವನೆಂದು- ನ್ಮತ್ತತನದಿ ತಾ ಕರ್ತನೆಂದೆನಿಸಿ ಸುತ್ತಲಹ ನಿತ್ಯ ಅವಸ್ಥೆಗಳ ಪರಿಹರಕೆ ಶಕ್ತನಾಗನು ಏಕೆ ಆಪತ್ತುಗಳು ಬರಲು 2 ಪೂರ್ಣವಾಗಿ ತಾ ಜಡನಂತಿಹಾ ಕರಣದಲಿ ಶ್ರೀರಮಣ ಸೇರಿ ಚೇತನ ಕೊಟ್ಟು ಕ್ರೀಡೆಗೋಸುಗ ಬಿಡುವ ಸರ್ವ ಜೀವರನಾ 3 ಅನಾದಿಕರ್ಮ ಎನ್ನದೆಂದಿಗು ಸರಿಯೆ ಮುನ್ನ ಪ್ರಳಯದಿ ನಿನ್ನ ಘನ್ನೊಡಲೊಳಿಂಬಿಟ್ಟೆ ಎನ್ನ ಕರ್ಮಗ್ರಂಥಿ ಎನ್ನಿಂದ ಬಿಡಿಸೊ 4 ಅನಿರುದ್ಧ ಲಿಂಗಾ ಅಂಗೋಪಾಂಗದಲಿ ನೀನ್ಹಾಂಗೇ ಮೆರೆವೆ 5 ಹೃಷೀಕಪನೆ ನಿನಗೆ ಇದು ಸಂತೋಷವೇನೊ ಈಷಣತ್ರಯ ಹರಿಸಿ ಪೋಷಿಸೋ ದೇವಾ 6 ತರಣಿ ತರಣಿಕಿರಣನನುಸರಿಸಿ ವೃತ್ತಿಯಹುದೊ ತ್ವರಿತದಲಿ ಸ್ಥೂಲದಲಿ ಕಾರ್ಯಾಭಿವ್ಯಕ್ತಿಯೊ 7 ನಾನತ್ತು ಫಲವೇನೊ ಸ್ಥಿತಿಕಾಲದಿ ನೀನಿಲ್ಲದಿನ್ನಿಲ್ಲ ಪ್ರತಿಬಿಂಬ ಕಾರ್ಯವಹುದೋ 8 ಹೆಚ್ಚು ಮಾತೇನು ಜೀವನಿಚ್ಛೆಯನನುಸರಿಸಿ ಅಚ್ಯುತ ತಾನೆ ಸ್ವೇಚ್ಛಚರಿಸಿ ಎಚ್ಚರಿಸಿ ಸ್ಥೂಲದಿಂದೆಚ್ಚರದಿ ನಡೆವುದೊ 9 ನಿನ್ನ ಸಂಕಲ್ಪವಲ್ಲದಿನ್ನಿಲ್ಲ ಅನ್ಯಥಾಗುವುದುಂಟೆ ಇನ್ನು ಹರಿಸೋದೇವಾ 10 ಶ್ರೀದನಿಂ ದತ್ತಸ್ವಾತಂತ್ರ್ಯ ಸಮ್ಮತವೇನು ಆದರಿಸಿ ಸಲಹಯ್ಯ ಮೋದತೀರ್ಥಾ- ರಾಧ್ಯ ಶ್ರೀ ವೇಂಕಟೇಶಾ11
--------------
ಉರಗಾದ್ರಿವಾಸವಿಠಲದಾಸರು
3 ಆತ್ಮ ನಿವೇದನೆ190ಅಂಜಿಕ್ಯಾಕೆನಗಂಜಿಕೆಕಂಜನಾಭಶ್ರೀನಿವಾಸನ ದಯವಿರಲುಪ.ಅಶನವಸನವನ್ನು ಕುಳಿತಲ್ಲೆ ನಡೆಸುವನಿಶಿದಿನ ನೀಚರಾಧೀನ ಮಾಡದೆಹಸನಾಗಿ ತನ್ನಂಘ್ರಿ ನೆರಳೊಳು ಬಚ್ಚಿಟ್ಟುಕುಶಲದಿ ಸಾಕುವ ದೊರೆಯ ನಂಬಿದ ಬಳಿಕ 1ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿಎಲ್ಲ ವ್ಯವಹಾರವ ಮಾಡುವ ಬಲ ನನಗಿಲ್ಲೆಂದು ಆಯಾಸಬಡಲೀಸದವನಿರೆ 2ಆವಾವ ಕಾಲದಿ ಆವಾವ ದೇಶದಿಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶಸಾವು ಕಳೆದು ಜೀವಕಾಶ್ರಯನಾಗಿರೆ 3
--------------
ಪ್ರಸನ್ನವೆಂಕಟದಾಸರು
ಅಂದುಂಟಿಂದಿಲ್ಲೇಮಾಧವನಿನ್ನ |ಹೊಂದಿದವರ ಭಯ ಕಳೆದು ಪೊರೆವ ದಯೆ ಪಶಂತನು ಭೂಪನರಸಿ ಬಳಲಿ |ಕಂತುಜನಕನೀ ಗತಿಯೆನಲೀ ||ಅಂತರಿಸದೆ ವಿಧವೆರಲಾಕ್ಷಣಸಂತತಿ ನೆಲಸಿದೆ ಮನ್ನಿಸುತಾ ದಯ 1ಕಲಿಯಾಳಿಕೆ ಬಹಳಾಗಿರಲು |ಮಲಿನಯುಕ್ತ ಧರೆಯಾಗಿರಲು ||ತಿಳಿದ ಹದಿನೆಂಟು ಪುರಾಣವ ವಿರಚಿಸಿ |ಸಲಹಿದೆಯುತ್ತಮ ಜೀವರನಾ ದಯೆ 2ತಿಳಿಯದೆ ನಿನ್ನೊಲುಮೆಯವಗೆಂದು |ನಳಿನಾನುಜ ನೀ ಬೇಕೆಂದು ||ಕೊಳಲರಿದರ ಕರದಿತ್ತಾರಣದೊಳು |ಗೆಲಿಸಿದೆ ತೋಂಡನ ಮುದದಿಂದಾ ದಯೆ 3ಪಾದಜಲರಸರ ಬದುಕಿಸಿತು |ಪಾದಪೆಸರೇ ಪತಿತನ ಕಾಯ್ತು ||ಪಾದದಮುಂದು ಕುಬೇರಜರೀರ್ವರ |ಪಾದವೇ ಸದ್ಗತಿಗೈದಿಸಿತಾ ದಯ 4ಆ ಸೈಂಧವನಳಿದರ್ಜುನನ |ಪೋಷಿಸಿದಂತೆ ಮೃತಾತ್ಮಜನಾ ||ಭೂಸರಗಿತ್ತಂತೀ ವಿಪ್ರರ ಪ್ರಾ |ಣೇಶ ವಿಠ್ಠಲ ರಕ್ಷಿಸಬೇಕಾ ದಯೆ 5
--------------
ಪ್ರಾಣೇಶದಾಸರು