ನಿನ್ನನೇ ನಂಬಿಹೆನೋ ಶ್ರೀನಿವಾಸಾಪನ್ನಗ ನಗಧೀಶ ಉದಯಾದ್ರಿ ವಾಸಾ ಪ
ನಿತ್ಯ ನೂತನ ಮಹಿಮ ಎತ್ತ ನೋಡಿದರತ್ತ ಮುಕ್ತ ಜನ ಸೇವ್ಯಾ |ಕೀರ್ತಿ ಭವ್ಯ ವಿಶಾಲ ವರ್ತಿಪುದು ಸದಾಕಾಲಆರ್ತವರಿಗಪವರ್ಗ ಮೋಕ್ಷಮಾರ್ಗಾ 1
ಸೇವ್ಯ ಸೇವಕ ಭಾವ ದಿವ್ಯ ಸುಜ್ಞಾನವನುಪ್ರೀತಿಯಿಂದೆನಗಿತ್ತು ಕಾಯಬೇಕೋ |ಪ್ರೇರ್ಯ ಪ್ರೇರಕ ನೀನೇ ಕಾರ್ಯ ಕಾರಣ ಕರ್ತೃಭಾರ್ಯರಿಂದೊಡಗೂಡಿ ವೀರ್ಯಪ್ರದನಾಗೋ 2
ಸೃಷ್ಠಿ ಸ್ಥತಿ ಸಂಹಾರ ಅಷ್ಟಕರ್ತೃಸ್ವಾಮಿನಷ್ಟ ಗೈಸಜ್ಞಾನ | ಇಷ್ಟ ಮೂರ್ತೇದಿಟ್ಟ ಗುರು ಗೋವಿಂದ | ವಿಠಲನೆ ಮದ್ ಹೃದಯಅಷ್ಟ ಕಮಲದಿ ತೋರೋ | ಶಿಷ್ಟಜನಪಾಲಾ 3