ಒಟ್ಟು 20 ಕಡೆಗಳಲ್ಲಿ , 12 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ ಸಾವೇರಿ ಮೊದಲಾದ ರಾಗವ ಪಾಡುತ1 ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ 2 ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ ಮುಕುಟ ಶಿರಶ್ಚಕ್ರ ಶೋಭಿತಮುಖ 3 ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ 4 ಶ್ರೀ ನರಹರಿಯು ತಾ ನೆನೆಯುವರಿಗೆ ಭವ ಕಾನನದ ಭಯದ ಮನ ಶಂಕಿಸದಿರೆಂದು5
--------------
ಪ್ರದ್ಯುಮ್ನತೀರ್ಥರು
ಲಾಲಿ ನಿತ್ಯಾನಂದ ಲಾವಣ್ಯ ಕಂದ ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ. ಆದಿ ಮಧ್ಯಾಂತ ವಿದೂರನಾಗಿಹನ ವೇದಾಂತ ವೇದ್ಯ ವೈಭವ ಪಕ್ಷಿಗಮನ ತಾಪ ಕಳಿವವನ ಮೋದದಿ ಪಾಡಿ ತೂಗುವೆನು ಮಾಧವನ 1 ಈರಾರು ದಿಗ್ಗಜವೆಂಟು ಕಾಲುಗಳು ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು ಧಾರಾರೂಪ ಭಾಗೀರಥಿ ಸರಪಣಿ ಸೇರಿಸಿ ಡೋಲ ಶೃಂಗಾರ ಗೈಯುವೆನು 2 ನಿರ್ಮಲವಾದೇಳು ಹಲಿಗೆಗಳಿರುವ ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ 3 ಸೂರ್ಯ ಚಂದ್ರಮರೆಂಬ ಧಾರಾದೀಪಗಳು ತಾರಕಿಗಳು ಸುತ್ತಲಿರುವ ಚಿನ್ಹೆಗಳು ಭವ ಜಯ ಜಯವೆಂಬ ಭರವು ನೀರಜಾಲಯೆ ಕೂಡಿ ಪಾಡುವ ಸ್ವರವು 4 ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ ಪಾಟಲಾಧರ ಮುಕುರರಾಭ ಕಪೋಲ ನಳಿನ ಪತ್ರ ನೇತ್ರ ಜ- ಚಾಪ ಧಾಟಿ ಭ್ರೂಯುಗಳ 5 ಪೂರ್ಣ ಮಾಲಾನಂತ ಪೌರ್ಣಮಿಯ ವಿಧು ವರ್ಣ ಮುಖಾಬ್ಜಸುಪರ್ಣವರೋಹ ಕರ್ಣ ಹೀನ ಕಶಿಪೂ ಪರಿಶಯನ ದು- ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ 6 ಕಂಬು ಸುಗ್ರೀವ ವಿಲಂಬಿತ ವನಮಾಲ ಅಂಬುಜ ಚಕ್ರ ಗದಾಕರ ಹಸ್ತ ಕೌಸ್ತುಭ ಜಗ- ನಾಭ 7 ವಿತತ ರೇಖಾತ್ರಯಯುತಮೃದುದರ ಮಧ್ಯ ಗತ ಕಿಂಕಿಣೀ ಜಾಲ ಕಾಂಚಿ ಕಲಾಪ ಪೀವರೋರು ಸಂ- ಮೂರ್ತಿ 8 ಸಿಂಜನ ಜೀರ ರಂಜಿತ ಚರಣ ಕಂಜಾಂಕುಶಕೇತು ರೇಖಾಲಂಕರಣ ಮಂಜುಳ ಮೃದು ಪಾದತಳ ಮುಕ್ತಾಭರಣ ಸಂಜೀವನ ರಾಜ ಸಂಪ್ರೀತಿ ಕರಣ 9 ಔತ್ತಾನಪಾದಿಯನಾಧಾರಗೊಂಡು ನಿತ್ಯ ತೂಗಾಡುವ ತೊಟ್ಟಿಲ ಕಂಡು ಹಿಂಡು ಬಹು ತೋಷಗೊಂಡು ಸತ್ಯಭಾಮೆಯ ಕಾಂತನಾಡುವ ಚೆಂಡು 10 ಪತಿತ ಪಾವನ ಪರಮಾನಂದ ರೂಪ ಸತತ ತಾನೆ ಪರಿಹರಿಸುವ ತಾಪ ವಿತತ ಮಹಿಮ ವೆಂಕಟಾಚಲ ಭೂ ಗತಿಯಾಗಿ ತೋರುವ ತನ್ನ ಪ್ರತಾಪ 11
--------------
ತುಪಾಕಿ ವೆಂಕಟರಮಣಾಚಾರ್ಯ
ವಿದ್ಯಾ ಪ್ರಸನ್ನ ಶ್ರೀ ಯತಿಕುಲ ಗುರುರನ್ನ ಸದ್ವ್ಯೆಷ್ಣವ ಘನ್ನ ಪ. ಸಿದ್ಧಸಾಧನ ಮಧ್ವಮುನಿಯ ಚಿನ್ಹ ಧರಿಸಿದ ಬಹುಮಾನ್ಯ ಅ.ಪ. ವಿದ್ಯಾರತ್ನಾಕರ ಯತಿ ಕರಕಮಲದಿ ಜಾತ ಮುದ್ದು ಕುವರನೀತ ವಿದ್ಯಾವಾರಿಧಿ ಮುನಿಕರ ಸಂಜಾತ ಯತಿವರನಾದಾತ ಮಧ್ವಗ್ರಂಥಗಳ ಮನನ ಮಾಡಿದಾತ ಬಹುಮತಿಯುತನೀತ ಬುದ್ಧಿಕುಶಲದಿ ಬುಧರನು ಪೊರೆವಾತ ಸುಜನರ ಮನದಾತ 1 ವ್ಯಾಸತೀರ್ಥನ ಆಸ್ಥಾನಕೊಡೆಯರಾಗಿ ದುರ್ಗುಣಗಳ ನೀಗಿ ಆಸೆಯಿಂದ ಶ್ರೀ ಕೃಷ್ಣನ ಚನ್ನಾಗಿ ಪೂಜಿಸುತಲಿ ಬಾಗಿ ದಾಸತ್ವದ ಲಕ್ಷಣ ತಿಳಿದವರಾಗಿ ವಿಷಯ ಸಂಗ ತ್ಯಾಗಿ ಪಸನ್ನ ಕೃಷ್ಣನೆಂಬಂಕಿತವನೆ ಇಟ್ಟು ಪದರಚಿಸಿದ ಗುಟ್ಟು 2 `ವಿ' ಎನ್ನಲು ನರವಿಷಯ ಸಂಗದೂರ `ಧ್ಯಾ' ಎನೆ ಧ್ಯಾನವರ `ಪ್ರ' ಎನಲು ಸದ್ಗುಣನು `ನ್ನ' ಎನ್ನಲು ಶ್ರೀ ನರಹರಿ ತಾನೊಲಿವ `ತೀ' ಎನೆ ತೀರ್ವ ಭವ `ರ್ಥಾ' ಎನ್ನಲು ಪುರುಷಾರ್ಥ ಪಡೆದ ಭೋಗಿ `ರು' ಎನೆ ರುಜುಮಾರ್ಗಿ 3 ವಿದ್ಯಾಪ್ರಸನ್ನತೀರ್ಥರು ಎಂದೆನ್ನುತಲಿ ಸ್ಮರಿಪರ ಸಲಹುತಲಿ ಮುದ್ದುಕೃಷ್ಣ ಪಟ್ಟಾಭಿರಾಮನಂಘ್ರಿ ಸಚ್ಚರಿತ ಪ್ರಸಂಗಿ ಸದ್ವಿದ್ಯಗಳಿಗೆ ಗರ್ವರಹಿತ ಭಾವ ಬಹು ಸರಳ ಸ್ವಭಾವ ಹೃದ್ವನಜಸÀ್ಥನ ಕಾಂಬ ಮುನಿವರೇಣ್ಯ ಸದ್ಭಕ್ತ ಶರಣ್ಯ 4 ಮಂದ ಮತಿಯು ನಾನು ಕ್ಷಮಿಸು ತಂದೆ ನೀನು ಕುಂದನೆಣಿಸದೆ ಗುಣಗ್ರಹಿಸುತಲಿನ್ನು ಶ್ರೀ ಹರಿ ನುಡಿಸಿದನು ತಂದೆ ಮುದ್ದುಮೋಹನರ ಕೃಪೆಯಿಂದ ರಚಿತ ಪದದಂದ ಮಂದರಧರ ಗೋಪಾಲಕೃಷ್ಣವಿಠ್ಠಲ ಗರ್ಪಿತ ಗುಣಮಾಲ 5
--------------
ಅಂಬಾಬಾಯಿ
ಹಿಂದೂ ದಾಸ ಇಂದೂ ದಾಸ ಮುಂದೆ ಎಂದೆಂದಿಗೂ ಅರ- ವಿಂದನಾಭ ವಿಠಲನೆ ಗತಿಯೋ ನೀ ಅವನ ದಾಸ ಪ ಬಂಧನದಿ ಬಳಲಿದಿ ಬಂದ ದುಃಖವ ನಾಶಿಸಿ ಹೊಂದಿದಿ ಶ್ರೀ ಹರಿಪಾದ ದಾಸ್ಯವಾ ಮಂದಿರವನ್ನಗಲಿದಿ ಮೂತಿ ಯಾಕೋ ಭವದ ಭೀತಿ1 ಹುಟ್ಟಿದಿ ಹರಿಮತದಿ ಇಟ್ಟ ಹರಿಚಿನ್ಹೆಫಾಲದಿ ಮುಟ್ಟಿ ಭಜಿಸೆಲೋ ದಿಟ್ಟ ಕೃಷ್ಣನ್ನಾ ಇಟ್ಟ ಕಲ್ಲಮೇಲೆ ಪಾದವಿಟ್ಟ ವಿಠ್ಠಲನು ಪೊರೆವಾ 2 ಶಿರಿವರ ನರಸಿಂಹವಿಠ್ಠಲ ಕರುಣದಿ ಪೇಳಿದಾ ನಿನಗೆ ಮರೆಯದೆ ಸೇವಿಸೋ ಹರಿಮೂರ್ತಿಯಾ ಮೂರ್ತಿ ನಿರುತ ಸೇವೆಯ ಕೈಕೊಳ್ಳುವಾ 3
--------------
ನರಸಿಂಹವಿಠಲರು